Homeಮುಖಪುಟಎಲ್ಲಾ ಬ್ಯಾಂಕುಗಳು ಖಾಸಗೀಕರಣಗೊಳ್ಳುವುದಿಲ್ಲ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಎಲ್ಲಾ ಬ್ಯಾಂಕುಗಳು ಖಾಸಗೀಕರಣಗೊಳ್ಳುವುದಿಲ್ಲ – ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

- Advertisement -
- Advertisement -

“ಖಾಸಗೀಕರಣಗೊಳ್ಳುವ ಬ್ಯಾಂಕುಗಳಲ್ಲಿ ನೌಕರರ ಹಿತಾಸಕ್ತಿಗಳನ್ನು ಕಾಪಾಡಲಾಗುತ್ತದೆ” ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬ್ಯಾಂಕುಗಳನ್ನು ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬ್ಯಾಂಕ್ ನೌಕರರು ಎರಡು ದಿನಗಳ ಕಾಲ ಮುಷ್ಕರ ಹಮ್ಮಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಧ್ಯಗಳೊಟ್ಟಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, “ಎಲ್ಲಾ ಬ್ಯಾಂಕುಗಳನ್ನೂ ಖಾಸಗೀಕರಣಗೊಳಿಸುವುದಿಲ್ಲ. ಅದಾಗ್ಯೂ ಖಾಸಗೀಕರಣಗೊಳ್ಳುವ ಬ್ಯಾಂಕುಗಳು, ಪ್ರತಿಯೊಬ್ಬ ಸಿಬ್ಬಂದಿ ಸದಸ್ಯರ ಹಿತಾಸಕ್ತಿ ಕಾಪಾಡುತ್ತದೆ” ಎಂದು ಆಶ್ವಾಸನೆ ನೀಡಿದ್ದಾರೆ.

ಬ್ಯಾಂಕ್ ನೌಕರರ ಯೂನಿಯನ್‌ಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಮಾ.4, 9 ಮತ್ತು 10ರಂದು ನಡೆದಿದ್ದ ಸಂಧಾನ ಮಾತುಕತೆಗಳು ವಿಫಲಗೊಂಡಿದ್ದವು. ಹಾಗಾಗಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮಾ.15 ಮತ್ತು 16ರಂದು ಮುಷ್ಕರ ನಡೆಸಲಿದ್ದಾರೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ)ವು ಹೇಳಿತ್ತು.

ಇದನ್ನೂ ಓದಿ: ಅರ್ನಾಬ್ ವಾಟ್ಸಾಪ್ ಚಾಟ್: ಕೇಂದ್ರಕ್ಕೆ ಯಾವುದೇ ಮಾಹಿತಿಯಿಲ್ಲ ಎಂದ ಸಚಿವ ಜಿ.ಕಿಶನ್ ರೆಡ್ಡಿ

ಇಷ್ಟು ದಿನ ಬ್ಯಾಂಕುಗಳ ವಿಲೀನದಲ್ಲಿ ತೊಡಗಿದ್ದ ಕೇಂದ್ರ ಸರ್ಕಾರ ಈಗ ಸರ್ಕಾರಿ ಬ್ಯಾಂಕುಗಳ ಖಾಸಗೀಕರಣ ಮಾಡಲು ಮುಂದಾಗಿದೆ. ಈ ಕುರಿತು ನೀತಿ ಆಯೋಗವು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದು, ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಯೋಜನೆ ಸಿದ್ದವಾಗುತ್ತಿದೆ ಎನ್ನಲಾಗುತ್ತಿದೆ. ಜೊತೆಗೆ ರೈಲ್ವೇ ವಿಭಾಗವನ್ನು ಖಾಸಗೀಕರಣಗೊಳಿಸುವ ಯೋಜನೆಯನ್ನೂ ಕೇಂದ್ರ ಸರ್ಕಾರ ಆರಂಭಿಸಿತ್ತು.

ಅದರೆ ಇಂದು ರೈಲ್ವೇ ಖಾಸಗೀಕರಣದ ಕುರಿತು ಹೇಳಿಕೆ ನೀಡಿರುವ ರೈಲ್ವೆ ಸಚಿವ ಪೀಯೂಷ್‌ ಗೋಯಲ್, “ಯಾವುದೇ ಕಾರಣಕ್ಕೂ ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ. ರೈಲ್ವೆಯು ಪ್ರತಿಯೊಬ್ಬ ಭಾರತೀಯನ ಸ್ವತ್ತು. ಅದು ಹಾಗೆಯೇ ಇರಲಿದೆ. ಭಾರತ ಸರ್ಕಾರದ ಒಡೆತನದಲ್ಲಿಯೇ ಇರಲಿದೆ. 2019–20ನೇ ಹಣಕಾಸು ವರ್ಷದಲ್ಲಿ ರೈಲ್ವೆಗೆ ₹ 1.5 ಲಕ್ಷ ಕೋಟಿ ಅನುದಾನ ಒದಗಿಸಲಾಗಿತ್ತು. 2021–22ನೇ ಹಣಕಾಸು ವರ್ಷದಲ್ಲಿ ₹ 2.15 ಲಕ್ಷ ಕೋಟಿ ಅನುದಾನ ತೆಗೆದಿರಿಸಲಾಗಿದೆ. ರೈಲು ಅಪಘಾತಗಳಿಂದಾಗಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪ್ರಯಾಣಿಕರ ಸಾವು ಸಂಭವಿಸಿಲ್ಲ. ಇನ್ನೊಂದೆಡೆ, ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಪ್ರಬಂಧ; ನನಗೆ ದೆವ್ವ ಬಿಡಿಸಿದ ಕಥೆ: ಪ್ರತಾಪ್ ಹುಣಸೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಎಣಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

0
ಇವಿಎಂ ಮತ್ತು ವಿವಿಪ್ಯಾಟ್‌ಗಳ ಎಲ್ಲಾ (ಶೇ.100) ಮತಗಳನ್ನು ತಾಳೆ ಮಾಡಿ ನೋಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ...