Homeಮುಖಪುಟ2024ರ ಆಸ್ಕರ್‌ ಪ್ರಶಸ್ತಿ ಪ್ರಧಾನ: 7 ಪ್ರಶಸ್ತಿಗಳನ್ನು ಗೆದ್ದುಕೊಂಡ ‘ಓಪನ್‌ ಹೈಮರ್’ ಚಿತ್ರತಂಡ

2024ರ ಆಸ್ಕರ್‌ ಪ್ರಶಸ್ತಿ ಪ್ರಧಾನ: 7 ಪ್ರಶಸ್ತಿಗಳನ್ನು ಗೆದ್ದುಕೊಂಡ ‘ಓಪನ್‌ ಹೈಮರ್’ ಚಿತ್ರತಂಡ

- Advertisement -
- Advertisement -

96ನೇ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭ ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದೆ. ಬ್ರಿಟಿಷ್-ಅಮೆರಿಕನ್ ಚಲನಚಿತ್ರ ನಿರ್ಮಾಪಕ ಕ್ರಿಸ್ಟೋಫರ್ ನೋಲನ್ ಭಾನುವಾರ ತಮ್ಮ ಮೊದಲ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ‘ಓಪನ್‌ ಹೈಮರ್’ ಸಿನಿಮಾವು 96ನೇ ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್‌ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿದೆ. ಓಪನ್‌ಹೈಮರ್’ ಚಿತ್ರದ ನಟನೆಗಾಗಿ ರಾಬರ್ಟ್ ಡೌನಿ ಜ್ಯೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ಅದೇ ರೀತಿ ‘ದಿ ಹೋಲ್ಡೋವರ್ಸ್’ ಚಿತ್ರಕ್ಕಾಗಿ ಡೇವಿನ್ ಜಾಯ್ ರಾಂಡೋಲ್ಫ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಕ್ರಿಸ್ಟೋಫರ್ ನೋಲನ್ ಅವರ ಜೀವನಾಧಾರಿತ ಓಪನ್‌ಹೈಮರ್ ಸಿನಿಮಾಕ್ಕೆ ಈ ಬಾರಿ ಅತ್ಯುತ್ತಮ ಸಿನಿಮಾ ಸೇರಿದಂತೆ ಒಟ್ಟು ಏಳು ಆಸ್ಕರ್‌ಗಳು ದೊರಕಿವೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಮೂಲ ಸಿನಿಮಾ ಸೇರಿದಂತೆ ಒಟ್ಟು ಏಳು ವಿಭಾಗದಲ್ಲಿ ಓಪನ್‌ಹೈಮರ್‌ ಪ್ರಶಸ್ತಿ ಗೆದ್ದುಕೊಂಡಿದೆ. ಕ್ರಿಸ್ಟಫರ್ ನೋಲನ್ ಅವರ ಲೇಟೆಸ್ಟ್ ಸಿನಿಮಾ ಓಪನ್​ಹೈಮರ್ ವಿಶ್ವಾದ್ಯಂತ ರಿಲೀಸ್ ಆಗಿದ್ದು ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ಕೇಳಿ ಬಂದಿತ್ತು. ಅಟೊಮಿಕ್ ಬಾಂಬ್ ಕಂಡುಹಿಡಿದ ಭೌತಶಾಸ್ತ್ರಜ್ಞ ಜೆ. ರಾಬರ್ಟ್ ಓಪನ್​ಹೈಮರ್ ಅವರ ಜೀವನವನ್ನು ಈ ಸಿನಿಮಾ ತೋರಿಸುತ್ತದೆ. ಇವರು ಲಾಸ್ ಆಲಮೋಸ್ ಪ್ರಯೋಗಾಲಯದ ನಿರ್ದೇಕರೂ ಆಗಿದ್ದರು. ಇಲ್ಲಿಯೇ ಬಾಂಬ್​​ಗಳ ಕುರಿತು ಪ್ರಯೋಗವೂ ನಡೆದಿತ್ತು.

ಆಸ್ಕರ್‌ ಪ್ರಶಸ್ತಿ ಗೆದ್ದ ಚಲನಚಿತ್ರ ಹಾಗೂ ಕಲಾವಿದರ ಮಾಹಿತಿ…

1 ಅತ್ಯುತ್ತಮ ಚಿತ್ರ: ಓಪನ್‌ ಹೈಮರ್

2 ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್

3 ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್

4 ಅತ್ಯುತ್ತಮ ನಟ: ಸಿಲಿಯನ್ ಮರ್ಫಿ

4 ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ‘ದಿ ಝೋನ್ ಆಫ್ ಇಂಟರೆಸ್ಟ್’

5 ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನಿ ಜೂನಿಯರ್ (ಓಪೆನ್‌ ಹೈಮರ್)

6 ಅತ್ಯುತ್ತಮ ಪೋಷಕ ನಟಿ: ಡೇವಿನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡವರ್ಸ್)

7 ಅತ್ಯುತ್ತಮ ಹಾಡು: ಬಾರ್ಬಿ (ವಾಟ್ ವಾಸ್ ಐ ಮೇಡ್ ಫಾರ್)

8 ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ‘ಗಾಡ್ಜಿಲ್ಲಾ ಮೈನಸ್ ಒನ್’

9 ಅತ್ಯುತ್ತಮ ಧ್ವನಿ ವಿನ್ಯಾಸ: ‘ದಿ ಝೋನ್ ಆಫ್ ಇಂಟರೆಸ್ಟ್’

10 ಅತ್ಯುತ್ತಮ ಸಂಕಲನ: ‘ಓಪನ್‌ ಹೈಮರ್’

11 ಅತ್ಯುತ್ತಮ ಛಾಯಾಗ್ರಹಣ: ‘ಓಪನ್‌ ಹೈಮರ್’

12 ಅತ್ಯುತ್ತಮ ಮೂಲ ಚಿತ್ರಕಥೆ: ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ ಅವರ ‘ಅನ್ಯಾಟಮಿ ಆಫ್ ಎ ಫಾಲ್’

13 ಅತ್ಯುತ್ತಮ ಸಾಕ್ಷ್ಯಚಿತ್ರ: ಜಾನ್ ಮತ್ತು ಯೊಕೊ ಅವರ ‘ವಾರ್ ಇಸ್ ಓವರ್’

14 ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕ್ ಅವರ ‘ದಿ ಬಾಯ್ ಅಂಡ್ ದಿ ಹೆರಾನ್’

15 ಅತ್ಯುತ್ತಮ ಮೇಕಪ್‌ ಮತ್ತು ಕೇಶ ವಿನ್ಯಾಸ: ‘ಪೂರ್‌ ಥಿಂಗ್ಸ್‌’ (Poor Things)

16 ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ‘ದಿ ಲಾಸ್ಟ್ ರಿಪೇರಿ ಶಾಪ್’

ಪ್ರಶಸ್ತಿ ನೀಡಲು ವೇದಿಕೆಗೆ ಬೆತ್ತಲಾಗಿ ಬಂದ ನಟ:

ಆಸ್ಕರ್‌ ಕಾರ್ಯಕ್ರಮ ಪ್ರತಿವರ್ಷ ಒಂದಲ್ಲ ಒಂದು ಕಾರಣಕ್ಕೆ ಚರ್ಚಾ ವಿಚಾರವಾಗುತ್ತದೆ. ಈ ವರ್ಷ ಆಸ್ಕರ್‌ ವೇದಿಕೆಗೆ ನಟನೊಬ್ಬ ಬೆತ್ತಲಾಗಿ ಬಂದಿರುವುದು ವೈರಲ್‌ ಆಗಿದೆ. WWE ಸೂಪರ್‌ ಸ್ಟಾರ್‌, ಅಮೆರಿಕಾದ ನಟ ಜಾನ್‌ ಸೇನಾ ಆಸ್ಕರ್‌ ವೇದಿಕೆಗೆ ಬೆತ್ತಲಾಗಿ ಬಂದು ಅಚ್ಚರಿ ಮೂಡಿಸಿದ್ದಾರೆ.

ಜಾನ್‌ ಸೇನಾ ಅವರು ವಸ್ತ್ರ ವಿನ್ಯಾಸ ಪ್ರಶಸ್ತಿ ನೀಡಲು ವೇದಿಕೆ ಬಂದಿದ್ದರು. ಈ ವೇಳೆ ಅವರು ಖಾಸಗಿ ಭಾಗಕ್ಕೆ ಸ್ಟೋರಿ ಬೋರ್ಡ್‌ನ್ನು ಅಡ್ಡ ಹಿಡಿದು ಬೆತ್ತಲಾಗಿ ವೇದಿಕೆಗೆ ಬಂದಿದ್ದಾರೆ. ಜಾನ್‌ ಸೇನಾ ಈ ರೀತಿಯಾಗಿ ಬರುವುದು ಕಾರ್ಯಕ್ರಮದ ಒಂದು ಭಾಗವಾಗಿತ್ತು. ಇದಕ್ಕಾಗಿ ಪೂರ್ವ ತಯಾರಿಯನ್ನು ನಡೆಸಲಾಗಿತ್ತು. ಬೆತ್ತಲಾಗಿ ವೇದಿಕೆಗೆ ಬಂದ ಜಾನ್‌ ಸೇನಾ ಅವರ ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ನಾನಾ ಚರ್ಚೆಗಳು ಆರಂಭವಾಗಿದೆ.

ಸಿನಿಮಾ ರಂಗದ ಅತ್ಯುತ್ತಮ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಎಂದರೆ ಆಸ್ಕರ್. ಸಿನಿಮಾ ಕ್ಷೇತ್ರದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಗೌರವ ಸಮರ್ಪಿಸುವುದು ಈ ಪ್ರಶಸ್ತಿಯ ಪ್ರಮುಖ ಧ್ಯೇಯವಾಗಿದೆ. ಆಸ್ಕರ್ ಪುರಸ್ಕಾರದ ಮೂದಲ ಸಮಾರಂಭವು ಮೇ-16, 1929ರಂದು ಹಾಲಿವುಡ್ ರೂಸ್ವೆಲ್ಟ್ ಹೋಟಲ್ನಲ್ಲಿ 270 ಪ್ರೇಕ್ಷಕರ ಸಮ್ಮುಖದಲ್ಲಿ ನಡೆದಿದೆ. ಆಸ್ಕರ್ ಸಮಯ ಕಳೆದಂತೆ ತನ್ನ ಚಾಪನ್ನು ವಿಶ್ವದೆಲ್ಲೆಡೆ ಪಸರಿಸಿದೆ, ಪ್ರಶಸ್ತಿಯನ್ನು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಮತ್ತು ನಟಿ, ಅತ್ಯತ್ತಮ ಚಿತ್ರಕಥೆ, ಅತ್ಯುತ್ತಮ ಆನಿಮೇಟಿಡ್, ಅತ್ಯುತ್ತಮ ಕಿರುಚಿತ್ರ, ಹೀಗೆ ಪ್ರಸ್ತುತ 24 ವಿಭಾಗಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಇದನ್ನು ಓದಿ: ತಾಳ್ಮೆ ಕಳೆದುಕೊಂಡ ಬಿಜೆಪಿ ಕಾರ್ಯಕರ್ತರು: ಕೇಂದ್ರ ಸಚಿವ ಗಿರಿರಾಜ್ ಸಿಂಗ್‌ ವಿರುದ್ಧವೇ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...