Homeಕರ್ನಾಟಕಸದಾಶಿವ ಆಯೋಗದ ವರದಿ ಬೇಡ, ಸಂಪುಟ ಉಪಸಮಿತಿ ಸ್ವಯಂ ಅಧ್ಯಯನ ಮಾಡಲಿ: ಅನಂತ್ ನಾಯ್ಕ್‌ ಹೇಳುವುದೇನು?

ಸದಾಶಿವ ಆಯೋಗದ ವರದಿ ಬೇಡ, ಸಂಪುಟ ಉಪಸಮಿತಿ ಸ್ವಯಂ ಅಧ್ಯಯನ ಮಾಡಲಿ: ಅನಂತ್ ನಾಯ್ಕ್‌ ಹೇಳುವುದೇನು?

ಸದಾಶಿವ ಆಯೋಗದ ವರದಿ ಅವೈಜ್ಞಾನಿಕ ಎಂದು ಲಂಬಾಣಿ, ಬೋವಿ ಮುಖಂಡರು ಮುಂಚೂಣಿಯಲ್ಲಿರುವ ‘ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟ’ ವಿರೋಧಿಸಿದೆ.

- Advertisement -
- Advertisement -

“ಜಸ್ಟೀಸ್ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಒಪ್ಪಬಾರದು, ಒಳಮೀಸಲಾತಿ ವಿಚಾರವಾಗಿ ರಚಿತವಾಗಿರುವ ಸಚಿವ ಸಂಪುಟದ ಉಪಸಮಿತಿಯೇ ಸ್ವಯಂ ಅಧ್ಯಯನ ನಡೆಸಿ ಒಳಮೀಸಲಾತಿ ಜಾರಿಗೊಳಿಸಬೇಕು” ಎಂದು ಲಂಬಾಣಿ, ಬೋವಿ ಮುಖಂಡರು ಮುಂಚೂಣಿಯಲ್ಲಿರುವ ‘ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟ’ ಆಗ್ರಹಿಸಿದೆ.

ಎ.ಜೆ.ಸದಾಶಿವ ಆಯೋಗದ ಕುರಿತು ವಿಚಾರವಾದಿಗಳಾದ ಅನಂತ ನಾಯ್ಕ್‌, ಬಿ.ಟಿ.ಲಲಿತಾ ನಾಯ್ಕ್‌ ಮತ್ತಿತರ ಮುಖಂಡರಿರುವ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ಅನೇಕ ಮುಖಂಡರ ಸಹಿ ಇರುವ ಒಕ್ಕೂಟದ ಪತ್ರವು, ಬಿಡುಗಡೆಯೇ ಆಗದಿರುವ ಸದಾಶಿವ ಆಯೋಗದ ವರದಿಯ ಕುರಿತು ಅನೇಕ ಟೀಕೆಗಳನ್ನು ಮಾಡಿದೆ.

“ಪರಿಶಿಷ್ಟ ಜಾತಿಗಳ ವರ್ಗೀಕರಣ ಕುರಿತು ಪರಿಶೀಲನೆ ಮತ್ತು ಶಿಫಾರಸ್ಸು ಮಾಡುವ ಸಲುವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ. ಮಾಧುಸ್ವಾಮಿರವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ನೇಮಿಸಿರುವುದು ಸರಿಯಷ್ಟೇ. ಸಚಿವ ಸಂಪುಟದ ಉಪ ಸಮಿತಿಯು ಸ್ವಯಂ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳಮೀಸಲಾತಿ) ಮಾಡುವುದಾದರೆ ಅದಕ್ಕೆ ನಮ್ಮ ತಕರಾರು ಇರುವುದಿಲ್ಲ. ಆದರೆ ಒಳಮೀಸಲಾತಿಗೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸುವುದಾದರೆ (ಒಳಮೀಸಲಾತಿ) ಅದಕ್ಕೆ, ನಮ್ಮ ಆಕ್ಷೇಪಣೆ ಇರುತ್ತದೆ” ಎಂದು ಒಕ್ಕೂಟ ಮುಖಂಡರು ತಿಳಿಸಿದ್ದಾರೆ.

“ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ನಾನಾ ಕಾರಣಗಳಿಗಾಗಿ ದೋಷಪೂರಿತವಾದ ವರದಿಯಾಗಿದೆ. ಸೋರಿಕೆ ಆಗಿರುವ ಈ ವರದಿಯಲ್ಲಿನ ಅಂಶಗಳನ್ನು ವಿರೋಧಿಸಿ ಪರಿಶಿಷ್ಟ ಜಾತಿಗೆ ಸೇರಿರುವ ಶೇ. 70ರಷ್ಟು ಸಮುದಾಯಗಳು ಹಿಂದಿನ 12 ವರ್ಷಗಳಿಂದ ಹೋರಾಟ, ಚಳವಳಿಗಳನ್ನು ನಡೆಸುತ್ತಾ ಬಂದಿವೆ. ಇಲ್ಲಿಯವರೆಗೆ ಸದರಿ ವರದಿಯ ಸತ್ಯಾಸತ್ಯತೆಯನ್ನು ಅರಿಯಲು ಸಾರ್ವಜನಿಕ ಚರ್ಚೆಗೆ ಒಳಪಡಿಸಿರುವುದಿಲ್ಲ. ಶಾಸನ ಸಭೆಗಳಲ್ಲೂ ಚರ್ಚೆ ಆಗಿರುವುದಿಲ್ಲ. ಹೀಗಾಗಿ ಪರಿಶಿಷ್ಟ ಜಾತಿಯ ಸಹೋದರೆ ವೈಮನಸ್ಸು ಉಂಟಾಗಲು ಕಾರಣವಾಗುತ್ತಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳ ಆಕ್ಷೇಪಣೆಗಳನ್ನು ಪಡೆಯದೆ ಏಕಮುಖವಾಗಿ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಕ್ಕೆ, ನಮ್ಮ ಬಲವಾದ ವಿರೋಧವಿದೆ” ಎಂದು ಒಕ್ಕೂಟ ತಿಳಿಸಿದೆ.

“ಸೋರಿಕೆ ಆಗಿರುವ ವರದಿಯನ್ವಯ ನ್ಯಾಯಮೂರ್ತಿ ಸದಾಶಿವ ಆಯೋಗವು ಸ್ವತಃ ಆಯೋಗ ರಚನೆಯ ಮೂಲ ಉದ್ದೇಶಗಳಿಗೆ ತಿಲಾಂಜಲಿ ಕೊಟ್ಟು ಅದಕ್ಕೆ ವ್ಯತಿರಿಕ್ತವಾದ ವರದಿಯನ್ನು ತಯಾರಿಸಿ ಸಲ್ಲಿಸಿದೆ. ಪ್ರತಿ ಜಾತಿ ಜನಾಂಗಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿಯ ಪ್ರಾರಂಭದಿಂದ ಒದಗಿಸಲಾದ ಪ್ರಯೋಜನದ ಪ್ರಮಾಣ ಎಷ್ಟು? ಕಡಿಮೆ ಪ್ರಮಾಣದ ಪ್ರಯೋಜನ ಪಡೆದಿರುವ ಜಾತಿಗಳಿಗೆ ನ್ಯಾಯ ಒದಗಿಸಲು ಏನು ಕ್ರಮಗೊಳ್ಳಬೇಕು? ಎಂಬುದರ ಕುರಿತು ಅಧ್ಯಯನ ನಡೆಸಲು ಈ ಆಯೋಗವನ್ನು ರಚಿಸಲಾಗಿತ್ತು. ಆದರೆ ಈ ಆಯೋಗವು ಅಸ್ಪಷ್ಟ ಮಾಹಿತಿ, ನಿಖರವಲ್ಲದ ಅಂಕಿಅಂಶಗಳು, ಅಸಂವಿಧಾನಿಕ ಪ್ರಸ್ತಾವನೆಗಳನ್ನು ಒಳಗೊಂಡ ಶಿಫಾರಸ್ಸುಗಳನ್ನು ಮಾಡಿರುವುದು ಕಂಡುಬಂದಿದೆ” ಎಂದು ಟೀಕೆ ಮಾಡಿದೆ.

ಒಕ್ಕೂಟದ ಆಕ್ಷೇಪವೇನು?

* ಆಯೋಗವು ತನ್ನ ವರದಿಯನ್ನು ಸರ್ಕಾರಿ ದಾಖಲೆಗಳಲ್ಲಿರುವ ವಾಸ್ತವಾಂಶಗಳನ್ನು, ಸಂಗ್ರಹಿಸಿ ವರದಿ ರೂಪಿಸಿರುವುದಿಲ್ಲ. ಆಯಾ ಜಾತಿಗಳಿಗೆ ಹಿಂದಿನಿಂದಲೂ ಆಗಿರುವ ಅನ್ಯಾಯಗಳ ಕುರಿತ ಮಾಹಿತಿಯನ್ನು ಅದರಲ್ಲಿ ಸೇರಿಸಿಲ್ಲ. ಪರಿಶಿಷ್ಟ ಜಾತಿಗಳಲ್ಲಿರುವ ಸಮುದಾಯಗಳ ಜೀವನ ವಿಧಾನ, ಉದ್ಯೋಗ, ಆರ್ಥಿಕತೆ, ಶಿಕ್ಷಣ ಮುಂತಾದ ಅಂಶಗಳ ಕುರಿತು ಸತ್ಯಾಂಶಗಳನ್ನು ಮರೆಮಾಚಿದೆ.

ಇದನ್ನೂ ಓದಿರಿ: ಒಳಮೀಸಲಾತಿ ಜಾರಿಯಾಗಲೇಬೇಕು, ಸಂವಿಧಾನ ವಿರೋಧಿಗಳ ಬಗ್ಗೆ ಮಾದಿಗರಿಗೆ ಎಚ್ಚರವಿದೆ: ಹೋರಾಟಗಾರರ ಮನದ ಮಾತು

ಪರಿಶಿಷ್ಟ ಜಾತಿಯಲ್ಲಿ ಗುರುತಿಸಲ್ಪಟ್ಟಿರುವ ಅಲೆಮಾರಿ, ವಿಮುಕ್ತ ಅಲೆಮಾರಿ ಸಮುದಾಯಗಳು, ದೇವದಾಸಿ, ಸಫಾಯಿ ಕರ್ಮಾಚಾರಿ, ಇತ್ಯಾದಿ ಅವಕಾಶ ವಂಚಿತ(ನಿರ್ಲಕ್ಷಿತ) ಸಮುದಾಯಗಳನ್ನು ಪ್ರತ್ಯೇಕ ಗುಂಪು ಮಾಡಿ ಕಾರ್ಯಸಾಧುವಲ್ಲದ ರೀತಿಯ ವರ್ಗೀಕರಣ (ಒಳಮೀಸಲಾತಿ) ಭಾಗವನ್ನು ಈ ಸಮುದಾಯಗಳಿಗೆ ನಿಗದಿಪಡಿಸಿದೆ.

* ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಕೆನೆಪದರದ (ಕ್ರಿಮಿ ಲೇಯರ್) ಪದ್ಧತಿಯನ್ನು ಜಾರಿಗೊಳಿಸಲು ಆಯೋಗವು ಶಿಫಾರಸ್ಸು ಮಾಡಿದೆ. ಈ ಜಾತಿಗಳ ಅಧಿಕಾರಿ / ನೌಕರರುಗಳ ಮಕ್ಕಳಿಗೆ ಮೀಸಲಾತಿಯಿಂದ ವಂಚಿಸುವ ಶಿಫಾರಸು ಈ ವರದಿಯಲ್ಲಿದೆ.

* ಜಾತಿಗಳ ವರ್ಗೀಕರಣ ಮಾಡುವಾಗಲೂ ಈ ಆಯೋಗವು ಯಾವುದೇ ಕುಲಶಾಸ್ತ್ರ ಅಥವಾ ಗೋಚರ ವಿವರಗಳನ್ನು ಪರಿಶೀಲಿಸಿರುವುದಿಲ್ಲ.ಯಾರೋ ಒಬ್ಬಿಬ್ಬರು ಹೇಳಿದ ಮಾತನ್ನೇ ಆಧರಿಸಿ ಒಂದು ಗುಂಪಿನ ಜಾತಿಯನ್ನು ಇನ್ನೊಂದು ಸೇರಿಸಿ ಜಾತಿ ಜಾತಿಗಳಲ್ಲಿ ವೈಮನಸ್ಸು ಉಂಟಾಗುವಂತೆ ಮಾಡಿದೆ.

* ಆಯಾ ಜಾತಿಗಳು ಹಿಂದುಳಿದಿರುವಿಕೆ ಮತ್ತು ಅವಕಾಶ ವಂಚಿತವಾಗಿರುವ ಬಗ್ಗೆ ಕಾರಣಗಳನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ. ತಳ ಸಮುದಾಯಗಳು ಮುಂದೆಯೂ ಸರಿಯಾದಂಥಹ ಮೀಸಲಾತಿಯನ್ನು ಪಡೆಯಲು ಸಾಧ್ಯವಾಗದೆ ಇರುವ ರೀತಿಯಲ್ಲಿ ಗುಂಪುಗಳನ್ನು ರಚಿಸಲಾಗಿದೆ. ಜಾತಿಗಳ ವರ್ಗೀಕರಣ ಮಾಡುವಾಗಲೂ ಈ ಆಯೋಗವು ಎಡವಿದೆ.

* ಭಾರತ ಸರ್ಕಾರದ 2011ರ ಜನಗಣತಿಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಟ್ಟು ಜನಸಂಖ್ಯೆ 104 ಲಕ್ಷಗಳಿದ್ದು, ಈ ವರದಿಯಲ್ಲಿನ ಜನಸಂಖ್ಯೆ 96.64 ಇದೆ. ಇದರಲ್ಲೂ 6 ಲಕ್ಷ ಜನರ ಜಾತಿಯ ಬಗ್ಗೆ, ಮಾಹಿತಿ ಇರುವುದಿಲ್ಲ. ಆ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನವೂ ಆಗಿಲ್ಲ. 14 ಲಕ್ಷ ಪರಿಶಿಷ್ಟ ಜಾತಿ ಜನರನ್ನು ಹೊರಗಿಟ್ಟು ಈ ಆಯೋಗವು ತನ್ನ ವರದಿಯನ್ನು ತಯಾರಿಸಿದೆ.

* ಪರಿಶಿಷ್ಟ ಜಾತಿಗಳಲ್ಲಿರುವ ವಿವಿಧ ಜಾತಿ ಜನಾಂಗಗಳಿಗೆ ಮೀಸಲಾತಿ ಪಾಲನ್ನು ಆಯಾ ಜಾತಿಗಳ ಜನಸಂಖ್ಯೆಯ ಅನುಪಾತಕ್ಕನುಗುಣವಾಗಿ ನಿಗದಿ ಮಾಡಿರುವುದಿಲ್ಲ. ಶಿಫಾರಸ್ಸಿಗೆ ಮಾನದಂಡಗಳು ಮತ್ತು ಸಕಾರಣಗಳನ್ನು ತಿಳಿಸಿರುವುದಿಲ್ಲ.

ಇದನ್ನೂ ಓದಿರಿ: ರಾಜ್ಯ ಸರ್ಕಾರದ ಅಸಡ್ಡೆಗೆ ಆಕ್ರೋಶಗೊಂಡ ಒಳಮೀಸಲಾತಿ ಕೂಗು

* ಸಂವಿಧಾನದ ವಿಧಿ 341(2)ನ್ನು ಅನುಷ್ಠಾನಗೊಳಿಸಿದ ತರುವಾಯ ಆಯೋಗದ ವರದಿಯನ್ನು ಜಾರಿ ಮಾಡಲು ಶಿಫಾರಸು ಮಾಡಿದೆ. ಈ ವಿಧಿಯು ಪರಿಶಿಷ್ಟ ಜಾತಿಯ ಪಟ್ಟಿಗೆ ಜಾತಿಗಳನ್ನು ಸೇರಿಸುವ / ತೆಗೆದುಹಾಕುವ ಅವಕಾಶ ಕಲ್ಪಿಸುವ ವಿಧಿ ಆಗಿದೆ. ಆಯೋಗದ ವರದಿಯಲ್ಲಿ ಕೆಲವು ಜಾತಿಗಳು ವಿಶೇಷವಾಗಿ ಭೋವಿ, ಬಂಜಾರ (ಲಂಬಾಣಿ), ಕೊರಚ, ಕೊರಮ ಮುಂತಾದ ಜಾತಿಗಳ ಕುರಿತು ಹೇಳಿರುವ ಕೆಲವು ಅಂಶಗಳು ಇವರನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡುವ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಅನಗತ್ಯವಾಗಿ ಸಂವಿಧಾನದ 341(2) ವಿಧಿಯ ಪ್ರಸ್ತಾಪವನ್ನು ಮಾಡುವ ಮೂಲಕ ಆಯೋಗವು ತನ್ನ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ.

ಒಳಮೀಸಲಾತಿ: ಅನಂತ ನಾಯ್ಕ್‌ ಹೇಳುವುದೇನು?

‘ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟ’ದ ಮುಖಂಡರಾದ ಅನಂತ್‌ ನಾಯ್ಕ್‌ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದಾರೆ. ಒಕ್ಕೂಟದ ಪತ್ರದಲ್ಲಿರುವ ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

No photo description available.
ಅನಂತ ನಾಯ್ಕ್‌

ಪ್ರಶ್ನೆ: “ನ್ಯಾಯಮೂರ್ತಿಯೊಬ್ಬರು ಕೊಟ್ಟಿರುವ ವರದಿಗಿಂತ ರಾಜಕಾರಣಿಗಳೇ ತುಂಬಿಕೊಂಡಿರುವ ಸಮಿತಿ ನೀಡುವ ವರದಿಯನ್ನು ಒಕ್ಕೂಟ ಒಪ್ಪಿಕೊಳ್ಳುತ್ತದೆ ಎಂಬ ಸಂದೇಶವನ್ನು ಹೊರಹೋಗುತ್ತಿದೆಯಲ್ಲವೇ?”

ಅನಂತ್‌ ನಾಯ್ಕ್‌: ಸೋರಿಕೆಯಾಗಿರುವ ವರದಿಯ ಪ್ರಕಾರ ಜಸ್ಟೀಸ್‌ ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಲೋಪದೋಷಗಳಿವೆ ಎಂದು ಹೇಳಿದ್ದೇನೆ. ಆ ಕಾರಣಕ್ಕೆ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು ಎಂದು ಹೇಳುತ್ತಿದ್ದೇನೆ. ಸದನ ಸಮಿತಿ ಅಧ್ಯಯನ ಮಾಡಬೇಕು. ಇದರ ಅರ್ಥವೇನೆಂದರೆ- ಅಗತ್ಯವಿದ್ದರೆ ಹೊಸ ಸಮಿತಿಯನ್ನು ಮಾಡಲಿ ಎಂಬುದಾಗಿದೆ. ಒಬ್ಬ ವ್ಯಕ್ತಿ ಕೊಟ್ಟ ತಕ್ಷಣ ಒಪ್ಪಿಕೊಳ್ಳಬೇಕೆಂದೂ ಇಲ್ಲ. ಪ್ರಕ್ರಿಯೆಗಳು ನಡೆಯಬೇಕು. ಮೀಸಲಾತಿಯನ್ನು ವರ್ಗೀಕರಿಸುವ ಮನಸ್ಥಿತಿ ಇದ್ದರೆ ಸಂಪುಟ ಸಮಿತಿ ತೀರ್ಮಾನ ಮಾಡಲಿ.

ಪ್ರಶ್ನೆ: ಹೊಸ ಸಮಿತಿ ರಚನೆ ಮಾಡಿ ಎಂಬುದು, ಈಗಾಗಲೇ ಮೂವತ್ತು ವರ್ಷಗಳಿಂದ ನಡೆಯುತ್ತಿರುವ ಹೋರಾಟವನ್ನು ಮುಂದಕ್ಕೆ ತಳ್ಳುವ ಮಾತುಗಳಾಗಿ ಕಾಣುತ್ತಿವೆಯಲ್ಲವೇ?

ಅನಂತ್ ನಾಯ್ಕ್‌: ಯಾವುದೇ ನ್ಯಾಯಮೂರ್ತಿಗಳು ಪ್ರಶ್ನಾತೀತರಲ್ಲ. ಎಲ್ಲರನ್ನೂ ಪ್ರಶ್ನೆ ಮಾಡುವ, ವಿಮರ್ಶೆ ಒಳಪಡಿಸುವ ಅವಕಾಶವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನ ನೀಡಿದೆ. ವರದಿ ಸಂಪೂರ್ಣವಾಗಿ ಸರಿಯಾಗಿದೆ ಎಂಬ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ. ಅದು ಸಾರ್ವಜನಿಕವಾಗಿ ಬಿಡುಗಡೆಯಾಗಿ ಸತ್ಯಾಸತ್ಯತೆಗಳು ತಿಳಿಯಬೇಕು. ವರದಿ ಬಿಡುಗಡೆಯಾದ ನಂತರದಲ್ಲಿ ನನ್ನ ಆರೋಪಗಳು ತಪ್ಪಿದ್ದರೆ ಅದನ್ನು ಹಿಂಪಡೆಯಬೇಕಾಗುತ್ತದೆ.

ಮಾದಿಗ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಮೂವತ್ತು ವರ್ಷಗಳಿಂದ ಪ್ರಭುತ್ವಗಳು ಬೀದಿಯಲ್ಲಿ ನಿಲ್ಲಿಸಿವೆ. ಅವರ ಸಮಸ್ಯೆಗೆ ಪ್ರಾಮಾಣಿಕವಾದ ಉತ್ತರವನ್ನು ಕಂಡುಕೊಳ್ಳಲು ಪ್ರಭುತ್ವಕ್ಕೆ ಸಾಧ್ಯವಾಗದೆ, “ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಿಂದ ಮಾತ್ರವೇ ನಿಮ್ಮ ಉದ್ಧಾರ” ಎಂದು ನಂಬಿಸಲಾಗುತ್ತಿದೆ. ಮಾದಿಗ ಸಮುದಾಯದ ಶ್ರೇಯೋಭಿವೃದ್ಧಿಗೆ ಯಾವುದೇ ಕಾರ್ಯಕ್ರಮಗಳನ್ನು ಪ್ರಭುತ್ವಗಳು ಹಾಕಿಕೊಂಡಿಲ್ಲ. ಮೀಸಲಾತಿ ವರ್ಗೀಕರಣಕ್ಕೆ, ಕಟ್ಟಕಡೆಯ ವ್ಯಕ್ತಿಗೂ ಪ್ರಾತಿನಿಧ್ಯವನ್ನು ನೀಡಬೇಕೆಂಬ ಆಗ್ರಹಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಾಗುತ್ತದೆ. ಒಳಮೀಸಲಾತಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ, ಹರಿಯಾಣ, ಪಂಜಾಜ್ ರಾಜ್ಯಗಳು ಈಗಾಗಲೇ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿವೆ. ಸಂಘ ಪರಿವಾರದ ಈ ಸರ್ಕಾರಕ್ಕೆ ದಮನಿತ ಸಮುದಾಯಗಳ ಬಗ್ಗೆ ಕಾಳಜಿ ಇದ್ದರೆ ಕ್ರಮ ಜರುಗಿಸಬೇಕಾಲ್ಲವೇ? ಇಲ್ಲಿ ಸಹೋದರ ಜಾತಿಗಳು ಕಿತ್ತಾಡುವುದಕ್ಕೆ ಸದಾಶಿವ ಆಯೋಗದ ಮೂಲಕ ಅವಕಾಶ ನೀಡದೆ ಕೇಂದ್ರ ಸರ್ಕಾರವೇ ಒಂದು ಕಾನೂನುನನ್ನು ಮಾಡಬಹುದಲ್ಲವೇ? ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವ ನೀತಿ ರೂಪಿಸಬಹುದಲ್ಲವೇ? ಸದಾಶಿವ ಆಯೋಗದ ವರದಿಯನ್ನು ಮುನ್ನೆಲೆಗೆ ತಂದರೆ ಒಂದಿಷ್ಟು ಸಮುದಾಯಗಳು ವಿರೋಧ ಮಾಡುತ್ತವೆ, ಒಂದಿಷ್ಟು ಸಮುದಾಯಗಳು ಪರವಾಗಿ ಮಾತನಾಡುತ್ತವೆ- ನಾವು ಆಟ ಆಡಿಕೊಂಡು ಇರಬಹುದು ಎಂಬುದು ಇವರ ಉದ್ದೇಶವಾಗಿದೆ.

ಪ್ರಶ್ನೆ: ಸಂವಿಧಾನದ ವಿಧಿ 341(2)ನ್ನು ಅನುಷ್ಠಾನಗೊಳಿಸಿದ ತರುವಾಯ ಆಯೋಗದ ವರದಿಯನ್ನು ಜಾರಿ ಮಾಡಲು ಶಿಫಾರಸು ಮಾಡಿದೆ. ಈ ವಿಧಿಯು ಪರಿಶಿಷ್ಟ ಜಾತಿಯ ಪಟ್ಟಿಗೆ ಜಾತಿಗಳನ್ನು ಸೇರಿಸುವ / ತೆಗೆದುಹಾಕುವ ಅವಕಾಶ ಕಲ್ಪಿಸುವ ವಿಧಿ ಆಗಿದೆ ಎಂದು ಹೇಳಿರುವ ಒಕ್ಕೂಟವು, ಪರಿಶಿಷ್ಟ ಜಾತಿಯೊಳಗಿನ ಸ್ಪಶ್ಯ ಜಾತಿಗಳ ವಿಚಾರವಾಗಿ ಮಾತನಾಡುತ್ತಿದೆ ಎಂಬುದು ಸ್ಪಷ್ಟ. ಸ್ಪೃಶ್ಯ ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡಬೇಕೆಂಬ ಚರ್ಚೆಯನ್ನು ನೀವು ಒಪ್ಪುವುದಿಲ್ಲ ಎಂಬುದು ಇಲ್ಲಿ ವ್ಯಕ್ತವಾಗುತ್ತಿದೆಯಲ್ಲ?

ಇದನ್ನೂ ಓದಿರಿ: ಭೀಮಸೇನೆಯ ಬಲಪ್ರದರ್ಶನ: ಒಳಮೀಸಲಾತಿ ಹೋರಾಟದ ಚಿತ್ರಗಳನ್ನು ನೋಡಿರಿ

ಅನಂತ್: ಸ್ಪಶ್ಯ, ಅಸ್ಪಶ್ಯ ಎಂಬುದು ನಮಗೆ ಗೊತ್ತಿಲ್ಲ. ಯಾರು ಸ್ಪಶ್ಯರು, ಯಾರು ಅಸ್ಪಶ್ಯರು ಎಂಬುದಕ್ಕೆ ಕಾನೂನಾತ್ಮಕ ದಾಖಲೆಗಳು ನಿಮ್ಮ ಬಳಿ ಇವೆಯೇ? ಯಾರನ್ನಾದರೂ ಯಾಕೆ ಕೈಬಿಡಬೇಕು? ಪರಿಶಿಷ್ಟ ಜಾತಿಯಿಂದ ಯಾರನ್ನೇ ಆಗಲಿ ಕೈಬಿಡಬೇಕೆಂಬುದಕ್ಕೆ ನಮ್ಮ ಸಮ್ಮತಿ ಇಲ್ಲ.

ಪ್ರಶ್ನೆ: ಬೇರೆ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಇರದ ಸಮುದಾಯಗಳೆಲ್ಲ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಲ್ಲಿವೆ ಎಂಬ ಆಕ್ಷೇಪಗಳಿವೆಯಲ್ಲ?

ಅನಂತ್‌: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿ ಮಿಲ್ಲರ್‌ ಆಯೋಗದ ವರದಿಯನ್ನು ಮಾಡಿದಾಗಲೇ ಇಲ್ಲಿನ ಹಲವು ಜಾತಿಗಳು ಪರಿಶಿಷ್ಟ ಜಾತಿಯೊಳಗೆ ಸೇರಿವೆ. ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಮಾಡಿದಾಗ- ಆದಿ ಕರ್ನಾಟಕ, ಆದಿ ದ್ರಾವಿಡ, ಲಂಬಾಣಿ, ಬೋವಿ, ಕೊರಚ, ಕೊರಮ- ಜಾತಿಗಳನ್ನು ಸೇರಿಸಲಾಯಿತು. ಏಕೀಕರಣದ ನಂತರದಲ್ಲಿ ಈ ಪಟ್ಟಿ 101ಕ್ಕೆ ಏರಿಕೆಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...