ರಾಜಸ್ಥಾನ ಬಿಕ್ಕಟ್ಟು: ಬಿಜೆಪಿಯ ಆವಿಶ್ವಾಸ ಗೊತ್ತುವಳಿಗೆ ಸೋಲು; ಗೆಹ್ಲೋಟ್ ಗೆ ಗೆಲುವು
PC:TheTribune

ಸಚಿನ್ ಪೈಲಟ್ ಗುರುವಾರ ಅಶೋಕ್ ಗೆಹ್ಲೋಟ್ ನಿವಾಸಕ್ಕೆ ಭೇಟಿ ನೀಡಿದರು. ಇಬ್ಬರು ನಾಯಕರು ಪರಸ್ಪರ ಕೈಕುಲುಕಿದರು. ನಂತರ ರಾಜಸ್ಥಾನದ ಮುಖ್ಯಮಂತ್ರಿ “ಅಪ್ನೆ ತೋಹ್ ಅಪ್ನೆ ಹೈ ಹೋತೆ ಹೆ” (ನಮ್ಮದು ನಮ್ಮದೇ) ಎಂದು ಹೇಳಿದ್ದಾರೆ.

ಗೆಹ್ಲೋಟ್ ಮತ್ತು ಪೈಲಟ್  ನಡುವಿನ ಒಂದು ತಿಂಗಳ ಸಂಘರ್ಷ ಮುಗಿದ ನಂತರ ಇದೇ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಸಭೆಯ ನಂತರ, ‘ಪಕ್ಷದ ಶಾಸಕರು ಅಹಿತಕರ ಘಟನೆಯನ್ನು ಮರೆತು ರಾಜಸ್ಥಾನದ ಜನರಿಗೆ ಸೇವೆ ಸಲ್ಲಿಸಲು ಒಗ್ಗಟ್ಟನ್ನು ಇನ್ನೂ ಬಲಪಡಿಸಬೇಕು’ ಎಂದು ಗೆಹ್ಲೋಟ್ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸಲಿದ್ದಾರೆ. ಅಸಮಾಧಾನಗೊಂಡ 19 ಶಾಸಕರು ಹಿಂದಿರುಗಿದ ನಂತರ ಸರ್ಕಾರದ ಉಳಿವು ಸಾದ್ಯತೆ ಹೆಚ್ಚಾಗಿದೆ. ಪ್ರತಿಯೊಬ್ಬ ಶಾಸಕರ ಕುಂದುಕೊರತೆಗಳನ್ನು ಪರಿಹರಿಸಲಾಗುವುದು ಮತ್ತು ಅವರೆಲ್ಲರನ್ನೂ ಪ್ರತ್ಯೇಕವಾಗಿ ಭೇಟಿಯಾಗಲು ಸಿದ್ಧ ಎಂದು ಗೆಹ್ಲೋಟ್ ಹೇಳಿದರು.

ಭೇಟಿಯ ನಂತರ ಇಬ್ಬರೂ ಒಟ್ಟಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು.

ಗೆಹ್ಲೋಟ್ ಸರ್ಕಾರದ ಪತನಕ್ಕೆ ಸಂಚು ರೂಪಿಸಿದ ಆರೋಪ ಹೊತ್ತಿದ್ದ ಇಬ್ಬರು ಹಿರಿಯ ಶಾಸಕರಾದ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವವೇಂದ್ರ ಸಿಂಗ್ ಅವರ ಅಮಾನತು ಆದೇಶವನ್ನು ಕಾಂಗ್ರೆಸ್ ರದ್ದುಪಡಿಸಿದೆ.


ಇದನ್ನೂ ಓದಿ: ರಾಹುಲ್ ಭೇಟಿಯಾದ ಸಚಿನ್ ಪೈಲಟ್: ರಾಜಸ್ಥಾನದಲ್ಲಿ ಗರಿಗೆದರಿಕೆ ರಾಜಕೀಯ! 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts