#ಪ್ರಶಾಂತ್ ಭೂಷಣ್; ಟ್ವಿಟರ್ ನಲ್ಲಿ ನಂ 1 ಟ್ರೆಂಡಿಂಗ್: ಸುಪ್ರೀಂ ಹೇಳಿಕೆಯ ವಿರೋಧ ಚರ್ಚೆ

ಪ್ರಸ್ತುತ ಟ್ವಿಟರ್‌ನಲ್ಲಿ #prashantbhushan ಟ್ರೆಂಡ್ ಆಗುತ್ತಿದ್ದು, ಇವರ ಕುರಿತ ನ್ಯಾಯಾಂಗ ನಿಂದನೆ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆಯು ಟ್ವಿಟರ್ ನಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟು ಹಾಕಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್ ಬಗ್ಗೆ ವಕೀಲ ಪ್ರಶಾಂತ್ ಭೂಷಣ್ ಮಾಡಿದ ಎರಡು ಟ್ವೀಟ್‌ಗಳ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ತ ಎಂದು ಸುಪ್ರೀಂ ಕೊರ್ಟ್ ಹೇಳಿದೆ.

ತೀರ್ಪನ್ನು ಓದಿದ ನ್ಯಾಯಮೂರ್ತಿ ಬಿ ಆರ್ ಗವಾಯಿ, “ಪ್ರಶಾಂತ್ ಭೂಷಣ್ ಗಂಭೀರ ನ್ಯಾಯಾಂಗ ನಿಂದನೆ ಮಾಡಿದ್ದಾರೆ” ಎಂದು ಹೇಳಿದರು.

ಇದರ ಕುರಿತು, ಆರ್ಟಿಕಲ್-14 ಎಂಬ ಸುದ್ದಿತಾಣದ ಟ್ವಿಟ್ಟರ್ ಹ್ಯಾಂಡಲ್, ‘ಒಬ್ಬ ಪುಂಡ ಭಯದ ಮೂಲಕ ಶಾಲಾವರಣವನ್ನು ನಿಯಂತ್ರಿಸುತ್ತಾನೆ ಆದರೆ ಅದನ್ನು ತಪ್ಪಾಗಿ ಗೌರವ ಎಂದು ಭಾವಿಸಿರುತ್ತಾನೆ’ #prashanthbhushan ಎಂದು ಹೇಳಿದೆ. ಇದು 117 ಬಾರಿ ರೀಟ್ವೀಟ್ ಆಗಿದೆ.

ಸ್ವರಾಜ್ ಇಂಡಿಯಾದ ಮುಖಂಡ ಯೋಗೇಂದ್ರ ಯಾದವ್ ‘ನಾನು ಮತ್ತೆ ಹೇಳುತ್ತೇನೆ #prashanthbhushan, ಸತ್ಯದ ಪರ ನಿಲ್ಲುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 20 ರಂದು ನ್ಯಾಯಪೀಠ ಅವರ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದೆ.

ಪ್ರಶಾಂತ್ ನ್ಯಾಯಾಂಗದ ವಿರುದ್ಧ ಯಾವುದೇ ದುರುದ್ದೇಶವಿಲ್ಲದೆ ಕೇವಲ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಅವರ ಪರವಾಗಿ ವಾದಿಸಿದ್ದ ದುಶ್ಯಂತ್ ದವೆ ಹೇಳಿದ್ದರು.

ಪ್ರಶಾಂತ್ ನ್ಯಾಯಾಂಗ ನಿಂದನೆ ನೋಟಿಸ್‌ಗೆ ವಿವರವಾದ ಉತ್ತರದ ಅಫಿಡವಿಟ್ ಸಲ್ಲಿಸಿದ್ದು, ನ್ಯಾಯಾಲಯದ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸುವುದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಹೇಳಿದ್ದರು.

ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಇತಿಹಾಸಕಾರ ರಾಮಚಂದ್ರ ಗುಹಾ, “ಭಾರತೀಯ ಪ್ರಜಾಪ್ರಭುತ್ವಕ್ಕೆ ಕರಾಳ ದಿನ” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಜೂನ್ 27ರಂದು ಸುಪ್ರೀಕೋರ್ಟ್ ಕುರಿತು ಹಾಗೂ ಜೂನ್ 29ರಂದು ಸಿಜೆಐ ಎಸ್‌ಎ ಬೋಬ್ಡೆ ಕುರಿತಂತೆ ಟ್ವೀಟ್‌ ಮಾಡಿದ್ದರು. ಇದನ್ನು ಗಮನಿಸಿದ ನ್ಯಾಯಾಲಯ ಜುಲೈ 22ರಂದು ಪ್ರಶಾಂತ್‌ಗೆ ನೋಟಿಸ್ ಜಾರಿ ಮಾಡಿತ್ತು.


ಇದನ್ನೂ ಓದಿ: ಪ್ರಶಾಂತ್ ಭೂಷಣ್ ಪರ ನಿಂತ 8ಕ್ಕೂ ಹೆಚ್ಚು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರು

ಪ್ರಶಾಂತ್ ಭೂಷಣ್ ಸತ್ಯ ಹೇಳಿದ್ದಾರೆ, ಅದಕ್ಕಾಗಿ ತನಿಖೆ: ಭೂಷಣ್ ಪರ ನಿಂತ ಸಾಮಾಜಿಕ ಕಾರ್ಯಕರ್ತರು

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಗಿಸಿ ಹಾಕಿ ಫ್ಯಾಸಿಸಂ ತರಲಾಗಿದೆ : ಪ್ರಶಾಂತ್ ಭೂಷಣ್ ಭಾಷಣದ ಬರಹ ರೂಪ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts