Homeಕರ್ನಾಟಕಹಿಂಗೆ ಸಹಿಸ್ಕೊಂಡರೆ, ನಾವು ಸತ್ತ ಜನ ಎಂದು ಪ್ರೂವ್‌ ಮಾಡದ್ಹಂಗೆ - ಮೆಟ್ರೋ ದರ ಏರಿಕೆ...

ಹಿಂಗೆ ಸಹಿಸ್ಕೊಂಡರೆ, ನಾವು ಸತ್ತ ಜನ ಎಂದು ಪ್ರೂವ್‌ ಮಾಡದ್ಹಂಗೆ – ಮೆಟ್ರೋ ದರ ಏರಿಕೆ ವಿರುದ್ಧ ಆಕ್ರೋಶ

- Advertisement -
- Advertisement -

ಬೆಂಗಳೂರು ‘ನಮ್ಮ ಮೆಟ್ರೋ’ ರೈಲು ಪ್ರಯಾಣಿಕರ ದರ ಗರಿಷ್ಠ 50%ರಷ್ಟು ಏರಿಕೆಯಾಗಿದ್ದು ಸರ್ಕಾರಗಳ ವಿರುದ್ಧ ಸಾರ್ವಜನಿಕರು ಸೇರಿದಂತೆ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು ಎಂಟು ವರ್ಷಗಳ ನಂತರ ದರ ನಿಗದಿ ಸಮಿತಿಯ (ಎಫ್‌ಎಫ್‌ಸಿ) ಶಿಫಾರಸುಗಳ ಆಧಾರದ ಮೇಲೆ ನಮ್ಮ ಮೆಟ್ರೋವನ್ನು ನಿರ್ವಹಿಸುವ ಬಿಎಂಆರ್‌ಸಿಎಲ್ ದರಗಳನ್ನು ಪರಿಷ್ಕರಿಸಿದೆ. ದರ ಪರಿಷ್ಕರಣೆಯ ನಂತರ 60 ರೂ.ಗಳ ಹಿಂದಿನ ದರವೂ ಈಗ 90 ರೂ.ಗೆ ತಲುಪಿದೆ. ಹಿಂಗೆ ಸಹಿಸ್ಕೊಂಡರೆ

ಬೆಂಗಳೂರು ನಮ್ಮ ಮೆಟ್ರೋ ರೈಲು ಸೇವೆಯು ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಉದ್ಯಮವಾಗಿದ್ದು, “ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್” (BMRCL) ಇದನ್ನು ನಿರ್ವಹಿಸುತ್ತದೆ. ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ, ದರ ನಿಗದಿ ಸಮಿತಿ (FFC) ಯ ಶಿಫಾರಸುಗಳ ಆಧಾರದ ಮೇಲೆ BMRCL ಮಂಡಳಿಯು ಪರಿಷ್ಕೃತ ದರ ರಚನೆಯನ್ನು ಅನುಮೋದಿಸಿದೆ.

ಫೆಬ್ರವರಿ 9, 2025 ರಿಂದ, ಗರಿಷ್ಠ ದರವನ್ನು ₹60 ರಿಂದ ₹90ಕ್ಕೆ ಹೆಚ್ಚಿಸಲಾಗಿದೆ. ಈ ದರ ಹೆಚ್ಚಳವು ಬಿಎಂಆರ್‌ಸಿಎಲ್‌ಗೆ ಹೆಚ್ಚುವರಿ ಆದಾಯವನ್ನು ಗಳಿಸುವ ನಿರೀಕ್ಷೆಯಿದ್ದು, ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ನಡುವೆ, ಮೆಟ್ರೋ ದರ ಏರಿಕೆ ವಿರುದ್ಧ ಹೋರಾಟಗಾರರು ಸೇರಿದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಉಭಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ಸಾಮಾಜಿಕ ಹೋರಾಟಗಾರ ನಾಗೇಗೌಡ ಕೀಲಾರ ಅವರು, “ಮೆಟ್ರೊ ದರ ಏರಿಕೆ ವಿರುದ್ಧ ಬೆಂಗಳೂರು ನಾಗರಿಕರು ಬೆಂಗಳೂರು ನಗರಾಬಿವೃದ್ಧಿ ಸಚಿವ ಡಿಕೆ ಶಿವಕುಮಾರ್, ಬೆಂಗಳೂರಿನ 4 ಜನ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಡಾ.ಮಂಜುನಾಥ್ ಮತ್ತು ಶೋಭ, ಜೊತೆಗೆ ಬೆಂಗಳೂರಿನ 28 MLA ಗಳನ್ನು ಹೊಣೆ ಮಾಡಬೇಕು” ಎಂದು ಹೇಳಿದ್ದಾರೆ.

“ಇವರುಗಳ ಕೈಯಲ್ಲಿ ದರ ಏರಿಕೆ ನಿಲ್ಲಿಸಲು ಆಗಲಿಲ್ಲ ಅಂದರೆ ರಾಜೀನಾಮೆ ನೀಡುವಂತೆ ಒತ್ತಾಯಿಸುವುದರ ಜೊತೆಗೆ ಇನ್ನೆರಡು ದಿನಗಳಲ್ಲಿ ರಾಜೀನಾಮೆ ಕೊಡಿಸಬೇಕು. ಅದರಲ್ಲೂ ನಾಲ್ಕು ಜನ ಸಂಸದರು ರಾಜೀನಾಮೆ ಪತ್ರವನ್ನು ತಕ್ಶಣವೇ ಲೋಕಸಬಾ ಸ್ಪಿಕರ್‌ಗೆ ಕಳಿಸಬೇಕು. ಸಂಘಟಿತರಾಗಿ ಬೆಂಗಳೂರಿನ ನಾಗರಿಕರಿಗೆ ಇಷ್ಟು ಮಾಡಿಸಲು ಆಗಲಿಲ್ಲ ಅಂದರೆ ಈ ಜನ್ಮದಲ್ಲಿ ಇವರ ಬೆಲೆ ಏರಿಕೆ ಲೂಟಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ” ಎಂದು  ಅವರು ಹೇಳಿದ್ದಾರೆ.

“ನಮ್ಮ ಹಕ್ಕೋತ್ತಾಯ ಈಗ ಇರುವ ಟಿಕೆಟ್ ಬೆಲೆಯನ್ನು ಮುಂದುವರೆಸಿ ಅನ್ನುವುದು ಆಗಿರಬೇಕು. 5-10% ದರ ಏರಿಕೆಗೂ ಒಪ್ಪಬಾರದು. ದರ ಏರಿಕೆ ಅನಿವಾರ್ಯ ಇಲ್ಲ ಮೆಟ್ರೊ ನಷ್ಟ ಅನುಭವಿಸುತ್ತೆ ಅಂದರೆ ಆ ನಷ್ಟವನ್ನು ಒಕ್ಕೂಟ ಸರ್ಕಾರ ಬರಿಸಲಿ” ಕೀಲಾರ ನಾಗೇಗೌಡ ಅವರು ಹೇಳಿದ್ದಾರೆ.

ಪತ್ರಕರ್ತೆ ಮಮತಾ ಎಂ. ಅವರು, “ಮೆಟ್ರೋ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶದಲ್ಲೇ ಅತಿ ಹೆಚ್ಚು ದರ ಪಾವತಿ ಮಾಡಬೇಕಾದ ಸ್ಥಿತಿ. ಆದರೆ, ಆಶ್ಚರ್ಯದ ವಿಷಯವೆಂದರೆ ಈ ಬಗ್ಗೆ ಎಲ್ಲೂ ಪ್ರತಿಭಟನೆ, ಆಕ್ಷೇಪದ ದನಿ ಇಲ್ಲದಿರುವುದು. ಕೆಎಸ್‌ಆರ್‌ಟಿಸಿಯಲ್ಲಿ ಹತ್ತು, ಹದಿನೈದು ಪರ್ಸೆಂಟ್‌ ಟಿಕೆಟ್‌ ದರ ಏರಿಕೆಯಾದಾಗ ಕೇಳಿಬರುವ ಆಕ್ಷೇಪ ಕೂಡ ಇಲ್ಲಿ ಕಾಣಿಸುತ್ತಿಲ್ಲ. ಇದು ನಗರ ಪ್ರದೇಶಗಳ ಸಮಸ್ಯೆಯೇ? ಅಥವಾ ಜನರ ಬಳಿ ಹಣ ಇಷ್ಟೊಂದು ಹೆಚ್ಚಿದೆಯೇ?…. ಪ್ರತಿಭಟಿಸುವ ಕ್ಷಿಣ ದನಿ ಕೂಡ ಸಾರ್ವಜನಿಕರಿಂದ ಇಲ್ಲವಲ್ಲ…ವಿರೋಧದ ದನಿಗಳು ಕಡಿಮೆಯಾದಷ್ಟು ಬಂಡವಾಳಶಾಹಿಗಳು, ಸರ್ಕಾರಗಳ ದರ್ಪ ಹೆಚ್ಚಾಗುತ್ತದೆ ಎಂಬುದನ್ನು ನಮ್ಮ ಸಮಾಜ ಎಂದಿಗೂ ಮರೆಯಬಾರದು” ಎಂದು ಅವರು ಹೇಳಿದ್ದಾರೆ.

“ಬೀದಿಗಿಳಿದು ಹೋರಾಡಲು ಆಗದಿದ್ದರೇ ಕನಿಷ್ಟ ಸಾಮಾಜಿಕ ಜಾಲತಾಣಗಳಲ್ಲಿಯಾದರೂ ಈ ಬಗ್ಗೆ ವಿರೋಧ ಕೇಳಿಬರಲಿ. ಸರ್ಕಾರ ಯಾವುದಾದರೂ ಆಗಿರಲಿ ನಮ್ಮ ಮೇಲಾಗುವ ದೌರ್ಜನ್ಯಗಳನ್ನು ಒಕ್ಕೂರಲಿನಿಂದ ಪ್ರತಿಭಟಿಸಬೇಕಿರುವುದು ನಮ್ಮ ಕರ್ತವ್ಯ” ಎಂದು ಮಮತಾ ಅವರು ಹೇಳಿದ್ದಾರೆ.

ಸಾಮಾಜಿಕ ಹೋರಾಟಗಾರ ರಾಜಶೇಖರ್ ಅಕ್ಕಿ ಅವರು, “ನನ್ನ ಮನೆಯು ಕಚೇರಿಯಿಂದ ಸುಮಾರು ಹತ್ತು ಕಿಲೋಮೀಟರ್‌ ದೂರದಲ್ಲಿದೆ. ಈಗ ಮೆಟ್ರೊ ಬಳಿಸಿದರೆ 92 ರೂ. ಆಗುತ್ತೆ, ಸ್ಕೂಟರ್‌ ಬಳಸಿದರೆ ಗರಿಷ್ಟ 50 ರೂ. ʼಏಯ್‌ ಜನರೇ, ಮೆಟ್ರೋ ಬಿಡಿ. ಸ್ಕೂಟರ್‌, ಕಾರ್‌ ಬಳಸಿ,ʼ ಎಂದು ಸರಕಾರ ನಮಗೆ ಹೇಳ್ತಿದೆ. ಇದನ್ನು ಹಿಂಗೆ ಸಹಿಸ್ಕೊಂಡರೆ, ನಾವು ಸತ್ತ ಜನ ಎಂದು ಪ್ರೂವ್‌ ಮಾಡದ್ಹಂಗೆ.” ಎಂದು ಹೇಳಿದ್ದಾರೆ.

ಪತ್ರಕರ್ತ ಮುತ್ತರಾಜು ಅವರು, “ದೇಶದಲ್ಲಿಯೇ ದುಬಾರಿ ಯಾವ ಕಾರಣಕ್ಕೆ? ಜನಸಾಮಾನ್ಯರಿಂದ ಸುಲಿಯುವ ಸರ್ಕಾರ ಜನವಿರೋಧಿ ಸರ್ಕಾರವೇ ಆಗಿರುತ್ತದೆ. ಈ ಜನ ವಿರೋಧಿ ಸರ್ಕಾರ ಕೂಡಲೇ ಮೆಟ್ರೊ ದರ ಹೆಚ್ಚಳವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸೋಣ.. ಇದರ ವಿರುದ್ದ ಪ್ರತಿಭಟಿಸೋಣ” ಎಂದು ಹೇಳಿದ್ದಾರೆ.

ವರುಣ್ ಅವರು, “ಮೆಟ್ರೋ ದರ ಹೇರಿಕೆ ಮಾಡಿದ್ದು ಯಾರು? ಮೊದಲಿಗೆ ನಮ್ಮ ಮೆಟ್ರೋ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಾಜೆಕ್ಟ್. ಇದಕ್ಕೆ M.D. (Managing Director) ಅವರನ್ನು ನೇಮಕ ಮಾಡೋದು ರಾಜ್ಯ ಸರ್ಕಾರ ಮತ್ತು MD ರಿಪೋರ್ಟ್ ಮಾಡಿಕೊಳ್ಳಬೇಕಿರೋದು ರಾಜ್ಯದ ಮುಖ್ಯಮಂತ್ರಿ ಅವರಿಗೆ. ಕೆಲ ತಿಂಗಳ ಹಿಂದೆ ರಾಜ್ಯ ಸರ್ಕಾರ ಟಿಕೆಟ್ ದರ ಏರಿಸಬೇಕು ಅಂತ ಕೇಂದ್ರದ ಅಧೀನದಲ್ಲಿರುವ ಮೆಟ್ರೋ ಸಮಿತಿಗೆ ಶಿಫಾರಸ್ಸು ಮಾಡಿದೆ. ಅದಕ್ಕೆ ಈಗ ಕೇಂದ್ರ ಒಪ್ಪಿ ಸಮಿತಿಗೆ ಕಳುಹಿಸಿದೆ ಮತ್ತು ಸಮಿತಿ ಹೊಸ ದರವನ್ನು ಜಾರಿಗೆ ತಂದಿದೆ. ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸೋದು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಈ ಜನ ವಿರೋಧಿ ಹೊಸ ದರದ ವಿರುದ್ಧ ಮಾತಾಡಿ.” ಎಂದು ಹೇಳಿದ್ದಾರೆ.

“ಹೋರಾಟಗಾರ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಅವರು, “ಸಾರ್ವಜನಿಕ ಸೇವೆಗಳನ್ನು ಹೆಚ್ಚು ಹೆಚ್ಚು ಬಳಸಿ ಅಂಥ ಪುಕ್ಸಟ್ಟೆ ಭಾಷಣ ಹೊಡೆಯುವ ಅಯೋಗ್ಯರು ಈ ರೀತಿ ದರ ಏರಿಸಿದರೆ ಬಡವರ ಓಡಾಡೋದು ಹೇಗೆ..? ರಾಜ್ಯ ಸರ್ಕಾರನೋ, ಕೇಂದ್ರ ಸರ್ಕಾರನೋ ಯಾವಾನಾದರೂ ಆಗಲಿ ದರ ಇಳಿಸಲೇಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂಓದಿ:  ಎಎಪಿ-ಕಾಂಗ್ರೆಸ್ ಪರಸ್ಪರ ಕಿತ್ತಾಟ ಮುಂದುವರಿಸುವುದಾದರೆ ಇಂಡಿಯಾ ಒಕ್ಕೂಟದ ಅಗತ್ಯವೇನಿದೆ? ಶಿವಸೇನೆ (ಯುಬಿಟಿ) ಕಿಡಿ

ಎಎಪಿ-ಕಾಂಗ್ರೆಸ್ ಪರಸ್ಪರ ಕಿತ್ತಾಟ ಮುಂದುವರಿಸುವುದಾದರೆ ಇಂಡಿಯಾ ಒಕ್ಕೂಟದ ಅಗತ್ಯವೇನಿದೆ? ಶಿವಸೇನೆ (ಯುಬಿಟಿ) ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೆಂಗ್ವಿನ್ ಇಂಡಿಯಾ ಹಿಂದೆ ಸರಿದ ನಂತರ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್’ ಅನ್ನು ಪ್ರಕಟಿಸಲಿರುವ ‘ಹಾರ್ಪರ್‌ಕಾಲಿನ್ಸ್’ 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ ಇಂಡಿಯಾ ಮೂಲಕ ಪ್ರಕಟವಾಗಲಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ...

ಜೈಲಿನಲ್ಲಿ ಕಂಬಿ ಎಣಿಸುತ್ತಿರುವ 25 ಕ್ರಿಮಿನಲ್‌ಗಳು, ದೆಹಲಿಯ ಜಂತರ್-ಮಂತರ್‌ಗೆ ಬರುಲು ಹೇಗೆ ಸಾಧ? ತನಿಖಾ ವರದಿಯಲ್ಲಿ ಬಯಲಾಯ್ತು ಪೊಲೀಸರ ಕುತಂತ್ರ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಬಳಸಿದ್ದ ‘ಅಟೋಮೇಟೆಡ್ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (AFRS - ಮುಖಚರ್ಯೆ ಗುರುತಿಸುವ ತಂತ್ರಜ್ಞಾನ) ಗಂಭೀರ...

ಪಶ್ಚಿಮ ಬಂಗಾಳ: ವರ್ಷದಲ್ಲಿ 1,000 ಆರ್‌ಎಸ್‌ಎಸ್‌ ಶಾಲೆ: ಶಿಕ್ಷಣ ವ್ಯವಸ್ಥೆಯನ್ನೇ ‘ರಾಷ್ಟ್ರೀಯತಾವಾದಿ’ಗೊಳಿಸುವುದಾಗಿ ಘೋಷಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶೈಕ್ಷಣಿಕ ವಿಭಾಗವಾಗಿರುವ ವಿದ್ಯಾ ಭಾರತಿಯ ಶಾಲೆಗಳ ಸಂಖ್ಯೆಯನ್ನು ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಪುರಸಭೆ...

SIR ನ್ಯಾಯಸಮ್ಮತವಾಗಿಲ್ಲ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ಆತಂಕ

ಭಾರತೀಯ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಶಾಸನಾತ್ಮಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ನ್ಯಾಯಸಮ್ಮತವಾಗಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ತೀವ್ರ...

ಜಂತರ್ ಮಂತರ್ ಹಲ್ಲೆ: ‘ತಲೆಬುರುಡೆ ಒಡೆದೆ, ಜೈಲಿಗೆ ಹೋಗಲಿಲ್ಲ; ಕಪಿಲ್ ಮಿಶ್ರಾ ನನ್ನ ಅಣ್ಣ’: ಬಿಜೆಪಿ ಬೆಂಬಲದ ಬಗ್ಗೆ ದಾಳಿ ಆರೋಪಿ ಬಹಿರಂಗ ಹೇಳಿಕೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರಿಯ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದೆ. ಪ್ರಕರಣದ ಆರೋಪಿಯಾಗಿರುವ ಸ್ವತಃ ಬಲಪಂಥೀಯ ಹಾಗೂ ಹಿಂದೂತ್ವ ಕಾರ್ಯಕರ್ತ...

ದೆಹಲಿ: ‘ಖಾನ್’ ಎಂಬ ಹೆಸರಿನ ಕಾರಣಕ್ಕೆ ಪತ್ರಕರ್ತೆಯರ ಮೇಲೆ ಹಲ್ಲೆ ಆರೋಪ, FIR ದಾಖಲಿಸುವಂತೆ ಸಾಕೇತ್ ಠಾಣೆಯಲ್ಲಿ ಧರಣಿ

ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ತೆರಳಿದ್ದ '4PM ನ್ಯೂಸ್ ನೆಟ್‌ವರ್ಕ್'ನ ಮುಸ್ಲಿಂ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದಿಲ್ಲಿ...

ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರಿಂದ ಬಂಧನ-ಹಲ್ಲೆ: ಇಬ್ಬರು ಪತ್ರಕರ್ತೆಯರ ಆರೋಪ

ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. '4 ಪಿಎಮ್ ನ್ಯೂಸ್ ನೆಟ್‌ವರ್ಕ್' (4 PM News...

ತ್ರಿಪುರಾ: ‘ದನ ಕಳ್ಳ’ ಎಂದು, ಖರೀದಿಸಿದ ದನಗಳೊಂದಿಗೆ ಹಿಂತಿರುಗುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪು ಹಲ್ಲೆ: 46 ವರ್ಷದ ಜಲೀಲುರ್ ರೆಹಮಾನ್ ಸಾವು

ಅಗರ್ತಲಾ: ಖರೀದಿಸಿದ ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ದನ ವ್ಯಾಪಾರಿಯೊಬ್ಬರನ್ನು ‘ದನ ಕಳ್ಳ’ ಎಂದು ಆರೋಪಿಸಿ ಗುಂಪೊಂದು ಥಳಿಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತ್ರಿಪುರಾದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ...

ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಸೂಕ್ಷ್ಮತೆಯಿಲ್ಲದ ನಡವಳಿಕೆ: ಗೀತಾಂಜಲಿ ಅಂಗಮೋ

ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ...

ಬಸವರಾಜ ಕನ್ನಾಳೆ ಸಿಂಡಿಕೇಟ್ ಸದಸ್ಯತ್ವ ರದ್ದಾಗುತ್ತಾ? ರಾಜಭವನದ ಮೌನಕ್ಕೆ ಮೂಡಿದ ಅನುಮಾನ

ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ತನಿಖಾ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಅವರಿಂದ...