Homeಅಂತರಾಷ್ಟ್ರೀಯಅಮೆರಿಕಾದ ಗ್ರೀನ್ ಕಾರ್ಡ್‌ ನಿರೀಕ್ಷಿಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ: ವರದಿ

ಅಮೆರಿಕಾದ ಗ್ರೀನ್ ಕಾರ್ಡ್‌ ನಿರೀಕ್ಷಿಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ: ವರದಿ

- Advertisement -
- Advertisement -

ಅಮೆರಿಕಾದ ನೆಲೆಸಲು ಗ್ರೀನ್ ಕಾರ್ಡ್‌ಗಳಿಗಾಗಿ 10 ಲಕ್ಷಕ್ಕೂ ಹೆಚ್ಚು ಭಾರತೀಯರು ಸರದಿಯಲ್ಲಿ ಕಾಯುತ್ತಿದ್ದಾರೆ  ಮತ್ತು ಅವರಲ್ಲಿ 4ಲಕ್ಷ ಜನರು ಗ್ರೀನ್ ಕಾರ್ಡ್‌ ಸಿಗುವ ಮೊದಲೇ ಸಾಯಬಹುದು ಎಂದು  ಅಮೆರಿಕಾದ ಕೇಟೊ ಇನ್‌ಸ್ಟಿಟ್ಯೂಟ್‌ನ ವರದಿಯೊಂದು ಹೇಳಿದೆ.

ಗ್ರೀನ್ ಕಾರ್ಡ್ ಎಂಬುವುದು ಅಮೆರಿಕಾದಲ್ಲಿ ವಲಸಿಗರಿಗೆ ಶಾಶ್ವತವಾಗಿ ನೆಲೆಸಲು ನಿವಾಸವನ್ನು ನೀಡುವ ದಾಖಲೆಯಾಗಿದೆ.

ಕ್ಯಾಟೊ ಇನ್‌ಸ್ಟಿಟ್ಯೂಟ್‌ನ ಡೇವಿಡ್ ಜೆ ಬಿಯರ್ ಅವರ ಅಧ್ಯಯನವು,  ಭಾರತದ ಹೊಸ ಅರ್ಜಿದಾರರು ಜೀವಮಾನ ಪೂರ್ತಿ ಕಾಯಬೇಕಾಗುತ್ತದೆ ಮತ್ತು 4,00,000ಕ್ಕಿಂತ ಹೆಚ್ಚು ಜನರು ಹಸಿರು ಕಾರ್ಡ್ ಸ್ವೀಕರಿಸುವ ಮೊದಲು ಸಾಯುತ್ತಾರೆ ಎಂದು ಹೇಳುತ್ತದೆ.

ಭಾರತದಿಂದ ಹೊಸ ಅರ್ಜಿದಾರರು ಗ್ರೀನ್ ಕಾರ್ಡ್‌ಗಾಗಿ ಸುಮಾರು 134 ವರ್ಷಗಳಿಂದಲೂ ಹೆಚ್ಚು ವರ್ಷ ಕಾಯಬೇಕು. ಸುಮಾರು 4,24,000 ಉದ್ಯೋಗ ಆಧಾರಿತ ಅರ್ಜಿದಾರರು ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಾ ಸಾಯುತ್ತಾರೆ ಎಂದು ಅಧ್ಯಯನ ಹೇಳುತ್ತದೆ.

ಎಸ್‌ಟಿಇಎಂ ಹುದ್ದೆಗಳಿಗಾಗಿ ಅಮೆರಿಕಾದ ಸಂಸ್ಥೆಗಳು ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯರು ಮತ್ತು ಚೀನೀಯರನ್ನು ನೇಮಿಸುತ್ತಿದೆಯಾದರೂ ಪ್ರತಿ ವರ್ಷ ಮಂಜೂರು ಮಾಡಲಾಗುವ ಒಟ್ಟು ಗ್ರೀನ್‌ ಕಾರ್ಡ್‌ಗಳ ಪೈಕಿ ಶೇ.7ರಷ್ಟು ಮಾತ್ರ ಒಂದು ದೇಶಕ್ಕೆ ಸಿಗಲಿದೆ.

ಈ ಬೃಹತ್‌ ಸಂಖ್ಯೆಯ ಬಾಕಿ ಅರ್ಜಿಗಳು ಹಾಗೂ ಗ್ರೀನ್‌ ಕಾರ್ಡ್‌ಗೆ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ ಇದರಿಂದಾಗಿ ಕಾನೂನುಬದ್ಧವಾಗಿ ಅಮೆರಿಕಾಗೆ ವಲಸೆ ಹೋಗುವುದು ಬಹುತೇಕ ಕಷ್ಟವಾಗಿದೆ. ಅರ್ಜಿ ಸ್ವೀಕೃತವಾದರೂ ಅದು ಮಂಜೂರಾಗಲು ದಶಕಗಳ ಕಾಲ ಕಾಯಬೇಕಾಗಿದೆ.

ಇದನ್ನು ಓದಿ: ವಿಶೇಷ ಅಧಿವೇಶನ: ಚೀನಾ ಗಡಿ ಸಂಘರ್ಷ ಸೇರಿ 9 ಅಂಶಗಳ ಚರ್ಚೆಗೆ ಆಗ್ರಹಿಸಿ ಸೋನಿಯಾ ಗಾಂಧಿ ಪತ್ರ 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...