Homeಮುಖಪುಟಲಿಂಗ ಸಂವೇದನೆ ವರದಿಗಾಗಿ ಲಾಡ್ಲಿ ಮೀಡಿಯಾ ಪ್ರಶಸ್ತಿ ಗೆದ್ದ PARI ಪತ್ರಕರ್ತೆ

ಲಿಂಗ ಸಂವೇದನೆ ವರದಿಗಾಗಿ ಲಾಡ್ಲಿ ಮೀಡಿಯಾ ಪ್ರಶಸ್ತಿ ಗೆದ್ದ PARI ಪತ್ರಕರ್ತೆ

ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅವರು 2014 ರಲ್ಲಿ ಸ್ಥಾಪಿಸಿದ ವೆಬ್‌ಸೈಟ್‌ ‘ಪರಿ’ ವರದಿಗಾರಿಕೆಯ ಮೂಲಕ ಗ್ರಾಮೀಣ ಭಾರತದ ಕುರಿತಾದ ದಾಖಲಾತಿಗಳ ಸಂಗ್ರಹವಾಗಿದೆ.

- Advertisement -
- Advertisement -

PARI ವರದಿಗಾರ್ತಿ ಜ್ಯೋತಿ ಶಿನೋಲಿ ಲಿಂಗ ಸಂವೇದನೆಗಾಗಿ ಲಾಡ್ಲಿ ಮೀಡಿಯಾ ಮತ್ತು ಜಾಹೀರಾತು ಪ್ರಶಸ್ತಿ 2020 ಅನ್ನು ಗೆದ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿದ ಪಾರ್ಧಿ ಎಂಬ ಬುಡಕಟ್ಟು ಸಮುದಾಯ ತಮ್ಮದಲ್ಲದ ತಪ್ಪಿಗೆ ಹೇಗೆ ನಿರಂತರ ಕಿರುಕುಳಕ್ಕೆ ಒಳಗಾಗುತ್ತಿದೆ ಎಂಬುದರ ಬಗ್ಗೆ No crime, unending punishment ‘ಅಪರಾಧವಿಲ್ಲದಿದ್ದರೂ, ಕೊನೆಯಿಲ್ಲದ ಶಿಕ್ಷೆ’ (ಆಗಸ್ಟ್ 10, 2018) ಎಂಬ ಅವರ ವರದಿಗೆ ಪ್ರಶಸ್ತಿ ಲಭಿಸಿದೆ.

1871 ರಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯನ್ನು ಒಪ್ಪಿಕೊಳ್ಳದ ಪಾರ್ಧಿ ಬುಡಕಟ್ಟು ಜನಾಂಗದವರು ಸೇರಿ ಸುಮಾರು 200 ಇತರ ಡಿ-ನೋಟಿಫೈಡ್ ಸಮುದಾಯಗಳಿಗೆ ‘ಕ್ರಿಮಿನಲ್ ಬುಡಕಟ್ಟು’ ಎಂದು ಬ್ರಾಂಡ್ ಮಾಡಿದ್ದರು. ಸ್ವಾತಂತ್ರ್ಯಾನಂತರ 1952 ರಲ್ಲಿ ಆ ಅಪರಾಧ ಬುಡಕಟ್ಟು ಕಾಯ್ದೆಯನ್ನು ಭಾರತ ಸರ್ಕಾರ ರದ್ದುಗೊಳಿಸಿದರೂ, ಇಂದಿಗೂ ಆ ಸಮುದಾಯಗಳಿಗೆ ಕಳಂಕ, ತಾರತಮ್ಯ ಮತ್ತು ಕಿರುಕುಳ ಮುಂದುವರೆದಿದೆ. ಆ ಪಾರ್ಧಿ ಸಮುದಾಯದ ನೋವಿಗೆ ಸ್ಪಂದಿಸುತ್ತಿರುವ ಅದೇ ಸಮುದಾಯದ ಸುನೀತಾ ಬೋಸಲೆ ಎಂಬ ಮಹಿಳೆಯ ಹೋರಾಟದ ಬಗ್ಗೆ ಜ್ಯೋತಿ ಶಿನೋಲಿ ವಿಸ್ತೃತ ವರದಿ ಮಾಡಿದ್ದರು.

ಜ್ಯೋತಿ ಶಿನೋಲಿ. Photo Courtesy: Pari

ಜ್ಯೋತಿ ಶಿನೋಲಿ ಅವರು ಪರಿ (ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ) ಪತ್ರಿಕೆಗೆ ತಂದಿರುವ ಮೂರನೇ ಪತ್ರಿಕೋದ್ಯಮ ಪ್ರಶಸ್ತಿ ಇದಾಗಿದೆ. ಅಲ್ಲದೆ ಈ ವರ್ಷದ ಆಗಸ್ಟ್‌ನಲ್ಲಿ ಪರಿ ತಂಡಕ್ಕೆ 2020ನೇ ಸಾಲಿನ ಪತ್ರಿಕೋದ್ಯಮಕ್ಕಾಗಿ ಪ್ರತಿಷ್ಠಿತ ಪ್ರೇಮ್ ಭಾಟಿಯಾ ಪ್ರಶಸ್ತಿ ಲಭಿಸಿತ್ತು. PARI ತಂಡವು “ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ಗ್ರಾಮೀಣ ಭಾರತದ ಮೇಲೆ ಸಾಂಕ್ರಾಮಿಕದ ಪ್ರಭಾವ ಸೇರಿದಂತೆ ಅವರ ವ್ಯಾಪಕ ಕ್ಷೇತ್ರ ವರದಿಗಳಿಗಾಗಿ” ಪ್ರಶಸ್ತಿಯನ್ನು ಸ್ವೀಕರಿಸಿತ್ತು.

ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅವರು 2014 ರಲ್ಲಿ ಸ್ಥಾಪಿಸಿದ ವೆಬ್‌ಸೈಟ್‌ ‘ಪರಿ’ ವರದಿಗಾರಿಕೆಯ ಮೂಲಕ ಗ್ರಾಮೀಣ ಭಾರತದ ಕುರಿತಾದ ದಾಖಲಾತಿಗಳ ಸಂಗ್ರಹವಾಗಿದೆ. “ಪರಿ ಜೀವಂತ ಜರ್ನಲ್ ಮತ್ತು ಆರ್ಕೈವ್ ಆಗಿದೆ” ಎಂಬ ಹೆಸರು ಗಳಿಸಿದೆ.


ಇದನ್ನೂ ಓದಿ: ಪಿ ಸಾಯಿನಾಥ್‌ರವರ ‘ಪರಿ’ಗೆ ಪ್ರತಿಷ್ಠಿತ ಪ್ರೇಮ್ ಭಾಟಿಯಾ ಪ್ರಶಸ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಐರ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿಯಿಂದ ವಿಪಕ್ಷಗಳ ಟೀಕೆ: ರಾಜತಾಂತ್ರಿಕ ಅಧಿಕಾರಿಯ ನಿಲುವಿಗೆ ವ್ಯಾಪಕ ವಿರೋಧ

0
ಐರ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿ ಅಖಿಲೇಶ್ ಮಿಶ್ರಾ ದಿ ಐರಿಶ್ ಟೈಮ್ಸ್‌ನ ಸಂಪಾದಕೀಯಕ್ಕೆ ಪ್ರತಿಕ್ರಿಯೆಯಾಗಿ ಪ್ರತಿಪಕ್ಷಗಳನ್ನು ಟೀಕಿಸಿ, ಮೋದಿಯನ್ನು ಶ್ಲಾಘಿಸಿ ಪೋಸ್ಟ್‌ ಮಾಡಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ. ದಿ ಐರಿಶ್ ಟೈಮ್ಸ್‌ನ ಸಂಪಾದಕೀಯದಲ್ಲಿ ಪ್ರಧಾನಿ ನರೇಂದ್ರ...