Homeಕರ್ನಾಟಕಪರ್ಸೆಂಟೇಜ್‌ ಫೈಲ್ಸ್‌: ದಿಂಗಾಲೇಶ್ವರ ಸ್ವಾಮೀಜಿಯವರನ್ನು ‘ಊಸರವಳ್ಳಿ’ ಎಂದ ಬಿ.ಸಿ.ಪಾಟೀಲ್

ಪರ್ಸೆಂಟೇಜ್‌ ಫೈಲ್ಸ್‌: ದಿಂಗಾಲೇಶ್ವರ ಸ್ವಾಮೀಜಿಯವರನ್ನು ‘ಊಸರವಳ್ಳಿ’ ಎಂದ ಬಿ.ಸಿ.ಪಾಟೀಲ್

- Advertisement -
- Advertisement -

“ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ. 30ರಷ್ಟು ಕಮಿಷನ್ ನೀಡಬೇಕಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲಿಗೆ ಬಂದು ನಿಂತಿದೆ” ಎಂದಿರುವ ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್‌, ‘ಊಸರವಳ್ಳಿ’ ಎಂದು ಕರೆದಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿ.ಸಿ.ಪಾಟೀಲ್‌, “ಶ್ರೀಗಳಾಗಿರುವವರು ಕೊಡುವ ಮುಂಚೆಯೇ ವಿರೋಧಿಸಿದ್ದರೆ ಸಮಾಜಕ್ಕೆ ಮಾದರಿಯಾಗುತ್ತಿದ್ದರು. ನಿನ್ನೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ರೀತಿ ಮಾತನಾಡಿದ್ದಾರೆ. ಅದಕ್ಕೆ ಅರ್ಥವಿಲ್ಲ. ಕಾಂಗ್ರೆಸ್ ಭಕ್ತರನ್ನು ಮೆಚ್ಚಲಿಸಲಿಕ್ಕೆ ಮಾತನಾಡಿದ್ದಾರೆ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ದಿಂಗಾಲೇಶ್ವರ ಸ್ವಾಮೀಜಿಯವರು ಊಸರವಳ್ಳಿ ಥರ, ಬಣ್ಣ ಬದಲಿಸುತ್ತಾರೆ” ಎಂದಿರುವ ಪಾಟೀಲ್‌, “ವಿಚಾರಣೆಯಾಗದೆ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ. ಈಶ್ವರಪ್ಪನವರನ್ನು ಬಂಧಿಸಬೇಕು ಅವರು ಎನ್ನುತ್ತಾರೆ. ಎತ್ತು ಈಯಿತ್ತೆಂದರೆ ಕೊಟ್ಟಿಗೆಗೆ ಕಟ್ಟು ಎಂಬಂತಾಗಿದೆ ಕಾಂಗ್ರೆಸ್‌ ಕಥೆ” ಎಂದಿದ್ದಾರೆ.

“ಈ ಹಿಂದೆ ಪೊಲೀಸ್‌ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಾಗ ಸಚಿವ ಜಾರ್ಜ್ ಅವರನ್ನು ಅರೆಸ್ಟ್ ಮಾಡಿದ್ದರಾ? ಇದಕ್ಕೆ ಅರ್ಥವಿಲ್ಲ. ತನಿಖೆ ನಡೆಯುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿರಿ: ಪರ್ಸೆಂಟೇಜ್‌ ಫೈಲ್ಸ್‌: ಗೋವಿನ ಮೇವಿನಲ್ಲೂ ಕಮಿಷನ್‌; ಮಠಕ್ಕೆ ನೀಡಿದ ಅನುದಾನದಲ್ಲೂ ಕಮಿಷನ್‌!

ಸ್ವಾಮೀಜಿ ಹೇಳಿದ್ದೇನು?

ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಭಾನುವಾರ ಆಯೋಜಿಸಿದ್ದ ಕೃಷ್ಣಾ-ಮಹಾದಾಯಿ-ನವಲಿ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿರುವ ದಿಂಗಾಲೇಶ್ವರ ಸ್ವಾಮೀಜಿ, “ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ. 30ರಷ್ಟು ಕಮಿಷನ್ ನೀಡಬೇಕಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲಿಗೆ ಬಂದು ನಿಂತಿದೆ” ಎಂದಿದ್ದರು.

“ಮಠಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಪರ್ಸೆಂಟೇಜ್ ಕಡಿತ ಆದ ನಂತರವೇ ಕಟ್ಟಡದ ಕೆಲಸ ಆರಂಭವಾಗುತ್ತದೆ. ಇಲ್ಲದಿದ್ದರೆ ಆಗೊಲ್ಲ. ಇಷ್ಟು ರೊಕ್ಕ ಕಡಿತ ಮಾಡದಿದ್ದರೆ ನಿಮ್ಮ ಕೆಲಸ ಆಗುವುದಿಲ್ಲ ಎಂದು ಆ ಅಧಿಕಾರಿಗಳು ನಮಗೆ ಹೇಳುತ್ತಾರೆ” ಎಂದು ಸ್ವಾಮೀಜಿ ಬೇಸರದಿಂದ ಹೇಳಿದ್ದಾರೆ.

‘‘ಈಗಂತೂ ನಾಡಿನಲ್ಲಿ ಬುದ್ಧಿಗೇಡಿ ಸರ್ಕಾರಗಳು ಬರುತ್ತಿವೆ” ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಸರ್ಕಾರದ ಮೇಲೆ ಕಮಿಷನ್‌ ಆರೋಪಗಳು ಒಂದಾದಾಗಿ  ಒಂದೊಂದಾಗಿ ಹೊರ ಬೀಳತೊಡಗಿವೆ. ಮಾಜಿ ಸಚಿವ ಈಶ್ವರಪ್ಪನವರು ಮಾತ್ರವಲ್ಲ, ಇತರ ಜನಪ್ರತಿನಿಧಿಗಳ ಮೇಲೂ ಇಂತಹದ್ದೇ ಆರೋಪಗಳು ಬರುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅಷ್ಟೇ ಅಲ್ಲಹೊಸದಾಗಿ ಮದುವೆಯಾದ ಹುಡುಗ ಹುಡುಗಿಯವರಮೊದಲನೇ ರಾತ್ರಿ ಗೂ ಕೂಡ ಕಮಿಷನ್ ಕೇಳುತ್ತಾರೆ ಈ ಜನ

  2. ನಲ್ವತ್ತು ಪರ್ಸೇಂಟ್ ಮನುಷ್ಯತ್ವ ಇರುವವರ ನಡೆ ನುಡಿಗಳು. ಇದೇನ ಅಚ್ಚೇದಿನ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...