Homeಮುಖಪುಟಮೋದಿ ಜನರ ಕಷ್ಟಗಳನ್ನು ಕೇಳದೆ, ಅಪ್ರಸ್ತುತ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ: ಪ್ರಿಯಾಂಕ ಗಾಂಧಿ

ಮೋದಿ ಜನರ ಕಷ್ಟಗಳನ್ನು ಕೇಳದೆ, ಅಪ್ರಸ್ತುತ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ: ಪ್ರಿಯಾಂಕ ಗಾಂಧಿ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಜನರ ಕಷ್ಟಗಳನ್ನು ಕೇಳುತ್ತಿಲ್ಲ, ಅಪ್ರಸ್ತುತ ವಿಷಯಗಳನ್ನು ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ಧಾಳಿ ನಡೆಸಿದ್ದಾರೆ.

ಅಮೇಥಿಯ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಪರ ಮೊಹಿಯಾ ಕೇಸರಿಯಾದಲ್ಲಿ ಆಯೋಜಿಸಿದ್ದ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಪ್ರಧಾನಿ ಜನರನ್ನು ಪ್ರೀತಿಸುತ್ತಿಲ್ಲ ಮತ್ತು ಯಾವುದೇ ರೈತರ ಮನೆಗೆ ಭೇಟಿ ನೀಡಿಲ್ಲ. ನಿನ್ನೆ ವಾರಣಾಸಿಯಲ್ಲಿ ರೋಡ್ ಶೋ ನಡೆಸಿದ್ದರು. ಎತ್ತರದ ವಾಹನದ ಮೇಲೆ ನಿಂತು ಭದ್ರತಾ ಸಿಬ್ಬಂದಿ ನಡುವೆ ನಿಂತು ಕೈ ಬೀಸಿದರು. ನಿಮ್ಮ ದುಃಖ ಏನೆಂದು ಅವರಿಗೆ ಹೇಗೆ ತಿಳಿಯುತ್ತದೆ? ಅವರು ಯಾವಾಗಲು ಉದ್ಯಮಿಗಳ ಜೊತೆ ಇರುತ್ತಾರೆ ಎಂದು ಹೇಳಿದ್ದಾರೆ.

ಮೋದಿ ಎಂದಿಗೂ ಜನರ ಕಷ್ಟಗಳನ್ನು ಕೇಳುವುದಿಲ್ಲ. ರಾಹುಲ್ ಗಾಂಧಿ ದೇಶವಾಸಿಗಳ ಸಮಸ್ಯೆಗಳನ್ನು ಆಲಿಸಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 4,000 ಕಿಲೋಮೀಟರ್ ಪಾದಯಾತ್ರೆ ನಡೆಸಿದರು. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿಯಂತಹ ವ್ಯಕ್ತಿ ದೇಶದ ಜನರನ್ನು ಪ್ರೀತಿಸುವುದಿಲ್ಲ. ಚುನಾವಣಾ ಪ್ರಚಾರದ ವೇಳೆ ಬಂದಿದ್ದರೆ 10 ವರ್ಷದಲ್ಲಿ ಏನು ಮಾಡಿದ್ದಾರೆ ಎನ್ನುವುದನ್ನಾದರೂ ಹೇಳಬೇಕು. ಅವರು ನಿಮ್ಮೊಂದಿಗೆ ಅಪ್ರಸ್ತುತ ವಿಷಯಗಳನ್ನು ಮಾತನಾಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಎಮ್ಮೆಗಳು, ಮಂಗಳಸೂತ್ರಗಳು ಮತ್ತು ದೇವಸ್ಥಾನಗಳು ಮತ್ತು ಮಸೀದಿಗಳ ಬಗ್ಗೆ ಕೇಳಲು ಬಯಸುವುದಿಲ್ಲ ಎಂದು ಜನರು ಧ್ವನಿ ಎತ್ತಬೇಕು. ಜನರಿಗಿರುವ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಮಾತನಾಡುವಂತೆ ಪ್ರಧಾನಿಗೆ ತಿಳಿಸುವಂತೆ ಅವರು ಕೇಳಿಕೊಂಡಿದ್ದಾರೆ.

ನೀವು ಜಾಗೃತರಾದರೆ, ಅವರು ಅಸಹಾಯಕರಾಗುತ್ತಾರೆ. ದೇಶದಲ್ಲಿ ಅದ್ಭುತ ರಾಜಕೀಯ ನಡೆಯುತ್ತಿದೆ. ಪ್ರಧಾನಿ ಮತ್ತು ಅಮೇಥಿ ಸಂಸದೆ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿ ನಾಯಕರು ಸಾರ್ವಜನಿಕರ ಜೊತೆ ನಮಗೆ ಯಾವುದೇ ಹೊಣೆಗಾರಿಕೆ ಇಲ್ಲ ಎಂದು ಭಾವಿಸುತ್ತಾರೆ. ಅವರು ಧರ್ಮದ ಆಧಾರದ ಮೇಲೆ ಮತವನ್ನು ಪಡೆಯುವುದಾಗಿ ಭಾವಿಸುತ್ತಾರೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಶ್ಲಾಘಿಸಿದ ಪ್ರಿಯಾಂಕಾ ಗಾಂಧಿ, ರಾಜೀವ್ ಗಾಂಧಿ ಮಾತ್ರವಲ್ಲ, ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಕೂಡ ಸಭ್ಯ ಮನುಷ್ಯರಾಗಿದ್ದರು. ಅವರಿಗೆ ಜನರ ಬಗ್ಗೆ ಗೌರವವಿತ್ತು. ಜನರ ಕಡೆಗೆ ಸ್ವಲ್ಪ ಉತ್ತರದಾಯಿತ್ವವಿದೆ ಮತ್ತು ಕೆಲವು ಕೆಲಸಗಳನ್ನು ಮಾಡಬೇಕಾಗಿದೆ ಎಂದು ಅವರು ಅರ್ಥಮಾಡಿಕೊಂಡಿದ್ದರು. ಮೋದಿ ಅವರು ರೈತರಿಗೆ ಏನು ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲೊಂದು ಇಲ್ಲೊಂದು ಮಾತನಾಡುತ್ತಾ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೋದಿ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ ಪ್ರಿಯಾಂಕಾ ಗಾಂಧಿ, ಅವರು ಚುನಾವಣಾ ಬಾಂಡ್‌ಗಳ ಅತಿದೊಡ್ಡ ಭ್ರಷ್ಟಾಚಾರ ಯೋಜನೆಯನ್ನು ತಂದರು, ಇದರಲ್ಲಿ ದೇಣಿಗೆ ನೀಡುವ ವ್ಯಕ್ತಿಯ ಹೆಸರು ರಹಸ್ಯವಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಇದನ್ನು ಓದಿ: ಗಾಝಾದಲ್ಲಿ ಭಾರತೀಯ ಸೇನಾ ನಿವೃತ್ತ ಅಧಿಕಾರಿಯನ್ನು ಹತ್ಯೆ ಮಾಡಿದ ಇಸ್ರೇಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...