Homeಮುಖಪುಟವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳ ನಡುವಿನ ಕಂದರವನ್ನು ಮೀರಿದ ಪ್ರೊ. ರೊದ್ದಂ ನರಸಿಂಹ

ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳ ನಡುವಿನ ಕಂದರವನ್ನು ಮೀರಿದ ಪ್ರೊ. ರೊದ್ದಂ ನರಸಿಂಹ

ಪ್ರೊ ನರಸಿಂಹ ಅವರು ತಮ್ಮ ವ್ಯಕ್ತಿತ್ವವನ್ನು ನೆಲದ ಬೇರುಗಳ ಜೊತೆಗೆ ಉಳಸಿಕೊಂಡಿದ್ದರಿಂದ, ಪ್ರಾಚೀನ ಭಾರತೀಯ ವಿಜ್ಞಾನದ ಸಾಧನೆಗಳ ನೈಜವಾದ ಪ್ರತಿಪಾದನೆಗಳು ಮತ್ತು ಅತಿರಂಜಿತ ಪ್ರತಿಪಾದನೆಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಕಂಡುಹಿಡಿಯಬಲ್ಲವರಾಗಿದ್ದರು.

- Advertisement -
- Advertisement -
ನುಡಿನಮನ

ರೊದ್ದಂ ನರಸಿಂ

(20 ಜುಲೈ 1933, – 14 ಡಿಸೆಂಬರ್ 2020)

ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳ ನಡುವೆ ಇರುವ ಕಂದರವನ್ನು ಮೀರಲು ಕೆಲವೇ ವಿಜ್ಞಾನಿಗಳಿಗೆ ಸಾಧ್ಯ. ಅಂತಹವರಲ್ಲಿ ಪ್ರೊ ರೊದ್ದಂ ನರಸಿಂಹ ಒಬ್ಬರು. ಫ್ಲುಯಿಡ್ ಡೈನಾಮಿಕ್ಸ್‌ನ ವಿಜ್ಞಾನದಲ್ಲಿ ಮುಂಚೂಣಿಯ ಹೆಸರಾಗಿದ್ದ ನರಸಿಂಹ ಅವರಿಗೆ ಮಾನವಿಕ ಶಾಸ್ತ್ರದಲ್ಲಿ ಆಳವಾದ ಆಸಕ್ತಿ ಇತ್ತು. ಆದೇ ಆಸಕ್ತಿ ಅವರನ್ನು ವಿಜ್ಞಾನದ ತತ್ವಶಾಸ್ತ್ರದ ಕಡೆಗೆ ಕೊಂಡೊಯ್ಯಿತು. ವಿಜ್ಞಾನಕ್ಕೆ ವಿವಿಧ ಪರಂಪರೆಗಳಲ್ಲಿ ಇರುವ ವಿಭಿನ್ನ ದೃಷ್ಟಿಕೋನಗಳ ಬಗ್ಗೆ ಅವರು ವಿಶೇಷವಾಗಿ ಆಕರ್ಷಿತರಾಗಿದ್ದರು. ಅವರು ಎಲ್ಲರೊಂದಿಗೆ ಸುಲಭವಾಗಿ ಬೆರೆಯಬಲ್ಲವರಾಗಿದ್ದರು ಹಾಗೂ ಅತ್ಯಂತ ಕ್ಲಿಷ್ಟಕರವಾದ ವಿಷಯಗಳ ಸಾರವನ್ನು ಸರಳವಾದ ಪದಗಳಲ್ಲಿ ಹೇಳಿಕೊಡಬಲ್ಲ ವಿಶಿಷ್ಟ ಸಾಮರ್ಥ್ಯ ಉಳ್ಳವರಾಗಿದ್ದರು. ಅದರಿಂದ, ಅವರೊಂದಿಗೆ ಮಾಡಿದ ಸಹಜ ಮಾತುಕತೆಗಳೂ ಸಹ ವಿಶಿಷ್ಟ ಒಳನೋಟಗಳನ್ನು ಒದಗಿಸುತ್ತಿದ್ದವು. ಕೆಲವೇ ತಿಂಗಳುಗಳ ಹಿಂದೆ ರಸ್ತೆ ಬದಿಯಲ್ಲಿ ನಿಂತು ಮಾಡಿದ ಮಾತುಕತೆಯಲ್ಲಿ ತಿಳಿದಿದ್ದೇನೆಂದರೆ, ಭಾರತದಲ್ಲಿ ಶಿಕ್ಷೆಯ ರೂಪದಲ್ಲಿ ವ್ಯಕ್ತಿಗಳ ಮೂಗನ್ನು ಕತ್ತರಿಸಲಾಗುತ್ತಿತ್ತಂತೆ ಮತ್ತು ಮೂಗು ಕತ್ತರಿಸುವ ಪಾರಂಪರಿಕ ಭಾರತೀಯ ವಿಧಾನವು ಪ್ಲಾಸ್ಟಿಕ್ ಸರ್ಜರಿಯ ಪಾರಂಪರಿಕ ವಿಧಾನದ ಬೆಳವಣಿಗೆಗೆ ಕೊಡುಗೆ ನೀಡಿದ್ದನ್ನು ಹೇಳಿದ್ದರು. ಮೂಗು ಕತ್ತರಿಸಿಕೊಂಡ ವ್ಯಕ್ತಿಗಳನ್ನು ಒಂದು ವರ್ಷದ ಬಳಿಕ ನೋಡಿದಾಗ ಮೂಗು ಅದೇ ಸ್ಥಾನಕ್ಕೆ ಮರಳಿ ಬಂದಿದ್ದನ್ನು ನೋಡಿ ಬ್ರಿಟಿಷರು ಆಶ್ಚರ್ಯಚಕಿತರಾಗಿದ್ದರು ಎಂಬುದರ ಬಗ್ಗೆಯೂ ಹೇಳಿದ್ದರು.

ಪ್ರೊ ನರಸಿಂಹ ಅವರು ತಮ್ಮ ವ್ಯಕ್ತಿತ್ವವನ್ನು ನೆಲದ ಬೇರುಗಳ ಜೊತೆಗೆ ಉಳಸಿಕೊಂಡಿದ್ದರಿಂದ, ಪ್ರಾಚೀನ ಭಾರತೀಯ ವಿಜ್ಞಾನದ ಸಾಧನೆಗಳ ನೈಜವಾದ ಪ್ರತಿಪಾದನೆಗಳು ಮತ್ತು ಅತಿರಂಜಿತ ಪ್ರತಿಪಾದನೆಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಕಂಡುಹಿಡಿಯಬಲ್ಲವರಾಗಿದ್ದರು. ಅವರು ಪ್ರಾಚೀನ ಭಾರತದ ನಿರ್ದಿಷ್ಟ ಪಠ್ಯಗಳನ್ನು ಉಲ್ಲೇಖಿಸಬಲ್ಲವರಾಗಿದ್ದರು; ಉದಾಹರಣೆಗೆ ಕ್ರಿ,ಪೂ ಆರನೇ ಶತಮಾನದ ಸುಲ್ವ ಸೂತ್ರ: ಅದು ಉದ್ದದ ವರ್ಗ (ಸ್ಕ್ವೇರ್ ಆಫ್ ಲೆಂತ್) ಹಾಗೂ ಅಗಲದ ವರ್ಗದ (ಸ್ಕ್ವೇರ್ ಆಫ್ ಬ್ರೆಡ್ತ್) ಮೊತ್ತವು ಕರ್ಣರೇಖೆಯ ವರ್ಗಕ್ಕೆ (ಸ್ಕ್ವೇರ್ ಆಫ್ ಡಯಾಗನಲ್) ಸಮನಾಗಿರುತ್ತೆ ಎಂಬುದರ ಸಾರ, ಮುಂದೆ ಪೈಥಾಗರಸ್ ಥಿಯೋರಮ್ ಆಗಿ ವರ್ಣಿಸಲಾಯಿತು ಎಂದು ವಿವರಿಸಿದ್ದರು. ಅದೇ ಸಮಯದಲ್ಲಿ, ಪ್ರಾಚೀನ ಭಾರತೀಯ ವಿಜ್ಞಾನದ ವೈಭವ-ಆಡಂಬರದ ಕಲ್ಪನೆಗಳು ಒಬ್ಬ ವಿಜ್ಞಾನಿಯಾಗಿ ಅವರ ಕೆಲಸದ ಮೇಲೆ ಪ್ರಭಾವ ಬೀರುವ ಪ್ರಶ್ನೆ ಎಂದೂ ಬರಲಿಲ್ಲ, ಅದರಲ್ಲೂ ವಿಶೇಷವಾಗಿ, ಎನ್‌ಎಎಲ್‌ನಲ್ಲಿ ಲೈಟ್ ಕೊಂಬ್ಯಾಟ್ ಏರ್‌ಕ್ರಾಫ್ಟ್‌ನ ರಚನೆಯಲ್ಲಿ ಅವರ ಒಂದು ಪಾತ್ರವಿತ್ತು, ಅಲ್ಲಿಯೂ ಪ್ರಾಚೀನ ಕಲ್ಪನೆಗಳು ಪ್ರಭಾವ ಬೀರಲಿಲ್ಲ.

ವಿಜ್ಞಾನ ಮತ್ತು ವಿಜ್ಞಾನದ ಆಡಳಿತದಲ್ಲಿ ಅವರ ಸಾಧನೆಗಳಿಗಿಂತ, ಸಮಾಜದ ಎಲ್ಲಾ ಸ್ತರದ ಜನರೊಂದಿಗೆ ಬೆರೆದು, ಅವರು ವಿದ್ಯಾರ್ಥಿಗಳಾಗಿರಲಿ, ಜೊತೆಗೆ ಕೆಲಸ ಮಾಡುವವರಾಗಿರಲಿ, ದೊಡ್ಡ ಸಾಧನೆ ಮಾಡಿದ ವಿಜ್ಞಾನಿಗಳಾಗಿರಲಿ ಅಥವಾ ಯಾವುದೇ ಪರಿಚಯಸ್ಥರಾಗಿರಲಿ, ಅವರೆಲ್ಲರ ಜೊತೆಗೆ ವಿಜ್ಞಾನದ ಬಗ್ಗೆ ಮಾತನಾಡುವ ಅವರ ಸಾಮರ್ಥ್ಯದಿಂದಲೇ ಅವರನ್ನು ನೆನಪಿಸಿಕೊಳ್ಳಲಾಗುವುದು. ಇದನ್ನು ಮಾಡಲು ಸಾಧ್ಯವಾಗಿದ್ದು ಕೇವಲ ವಿಜ್ಞಾನದ ಮೇಲಿದ್ದ ಪಾಂಡಿತ್ಯದಿಂದ ಅಲ್ಲ, ಅದಕ್ಕಿಂತ ಮುಖ್ಯವಾಗಿ, ಕಲಿಯಲು ಮತ್ತು ಕಲಿಸಲು ಅವರಿಗೆ ಜೀವನದುದ್ದಕ್ಕೂ ಇದ್ದ ಬದ್ಧತೆಯ ಕಾರಣದಿಂದ.

ಪ್ರೊ. ನರೇಂದ್ರ ಪಾಣಿ
ಬೆಂಗಳೂರಿನ ಎನ್‌ಐಎಎಸ್ ಸಂಸ್ಥೆಯ ಸಮಾಜ ಶಾಸ್ತ್ರ ವಿಭಾಗದ ಡೀನ್


ಇದನ್ನೂ ಓದಿ: ಹೆಸರಾಂತ ಹಿರಿಯ ವಿಜ್ಞಾನಿ ಪ್ರೊ.ರೊದ್ದಾಂ ನರಸಿಂಹ ನಿಧನ: ಗಣ್ಯರ ಸಂತಾಪ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...