Homeಮುಖಪುಟಪ್ರವಾದಿ ನಿಂದನೆ: ಹಿಂಸಾತ್ಮಕ ಪ್ರತಿಭಟನೆ ವಿರೋಧಿಸಿ ಧರಣಿಗೆ ಕರೆ ನೀಡಿದ ಬಜರಂಗದಳ

ಪ್ರವಾದಿ ನಿಂದನೆ: ಹಿಂಸಾತ್ಮಕ ಪ್ರತಿಭಟನೆ ವಿರೋಧಿಸಿ ಧರಣಿಗೆ ಕರೆ ನೀಡಿದ ಬಜರಂಗದಳ

- Advertisement -
- Advertisement -

ಪ್ರವಾದಿ ಮುಹಮ್ಮದ್ ವಿರುದ್ಧದ ಅವಹೇಳನಾಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ದೇಶದ ಕೆಲವು ಭಾಗಗಳಲ್ಲಿ ಇತ್ತೀಚಿಗೆ ನಡೆದ ಹಿಂಸಾಚಾರದ ಘಟನೆಗಳ ವಿರುದ್ಧ ಬಜರಂಗದಳ ಕಾರ್ಯಕರ್ತರು ಈ ವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮಂಗಳವಾರ ಪ್ರಕಟಿಸಿದೆ.

“ಇಸ್ಲಾಮಿಕ್ ಜಿಹಾದಿ ಮೂಲಭೂತವಾದಿಗಳಿಂದ ಹೆಚ್ಚುತ್ತಿರುವ ಉಗ್ರಗಾಮಿ ಘಟನೆಗಳ ವಿರುದ್ಧ ತನ್ನ ಯುವ ಘಟಕದ ಕಾರ್ಯಕರ್ತರು ಗುರುವಾರ ದೇಶಾದ್ಯಂತ ಜಿಲ್ಲಾಡಳಿತ ಕೇಂದ್ರ ಕಚೇರಿಯಲ್ಲಿ ಧರಣಿ ನಡೆಸಲಿದ್ದಾರೆ. ಜೊತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಿದ್ದಾರೆ” ಎಂದು ಆರ್‌ಎಸ್‌ಎಸ್ ಅಂಗಸಂಸ್ಥೆ ವಿಎಚ್‌ಪಿ ತಿಳಿಸಿದೆ.

ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿ ವಜಾಗೊಂಡಿರುವ ಬಿಜೆಪಿ ಪದಾಧಿಕಾರಿಗಳಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಹೇಳಿಕೆಗಳ ವಿರುದ್ಧ ಜೂನ್ 10 ರಂದು ದೆಹಲಿಯ ಜಾಮಾ ಮಸೀದಿಯ ಹೊರಗೆ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು.

ಇದನ್ನೂ ಓದಿ: ಎನ್‌ಸಿಪಿ ನಾಯಕ ಶರದ್ ಪವಾರ್‌ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿಲ್ಲ: ವರದಿ

ಜಾರ್ಖಂಡ್‌ನಲ್ಲಿ, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿ, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಬಳಸಿದ್ದರು.

“ದೇಶದಲ್ಲಿ ಇಸ್ಲಾಮಿಕ್ ಜಿಹಾದಿ ಮೂಲಭೂತವಾದಿಗಳಿಂದ ಹೆಚ್ಚುತ್ತಿರುವ ಉಗ್ರಗಾಮಿ ಘಟನೆಗಳ ವಿರುದ್ಧ ವಿಎಚ್‌ಪಿಯ ಯುವ ಘಟಕ ಬಜರಂಗದಳ ಈಗ ಬೀದಿಗಿಳಿಯಲಿದೆ. ಜಿಹಾದಿ ಮೂಲಭೂತವಾದಿಗಳಿಂದ ಹಿಂದೂಗಳ ಮೇಲಿನ ನಿರಂತರ ದಾಳಿಯ ವಿರುದ್ಧ ಬಜರಂಗದಳ ಕಾರ್ಯಕರ್ತರು ಗುರುವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ” ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೋಮವಾರ (ಜೂನ್.14) ವಿಎಚ್‌ಪಿಯ ದೆಹಲಿ ಘಟಕವು ಜೂನ್ 10 ರ ಹಿಂಸಾಚಾರದ ವಿರುದ್ಧ ಪ್ರತಿಭಟನೆ ವಿರುದ್ಧ ಮಂಗಳವಾರ ರಾತ್ರಿ 8 ಗಂಟೆಗೆ ದೇವಾಲಯಗಳಲ್ಲಿ ಸೇರಲು ಮತ್ತು ಹನುಮಾನ್ ಚಾಲೀಸಾದ ಸಾಮೂಹಿಕ ಪಾರಾಯಣದಲ್ಲಿ ಭಾಗವಹಿಸಲು ನಗರದ ಜನರಿಗೆ ಕರೆ ನೀಡಿತ್ತು.

ಉತ್ತರ ಪ್ರದೇಶದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಾಯಕರ ಮನೆಗಳ ಮೇಲೆ ಯೋಗಿ ಆದಿತ್ಯನಾಥ್ ಸರ್ಕಾರ ಬುಲ್ಡೋಜರ್‌ ದಾಳಿ ನಡೆಸುತ್ತಿದೆ. ಪ್ರಕರಣದಲ್ಲಿ 300ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ವಿರುದ್ಧ ಸಾಮಾಜಿಕ ಕಾರ್ಯಕರ್ತರು, ನಿವೃತ್ತ ಜಡ್ಜ್‌ಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ: ಇತಿಹಾಸವನ್ನು ಯಾರಾದರೂ ಹೇಗೆ ಬದಲಾಯಿಸಬಹುದು?: ಅಮಿತ್ ಶಾ ಹೇಳಿಕೆ ನಿತೀಶ್ ಕುಮಾರ್‌ ಟಾಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾತಿ, ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡಬೇಡಿ: ಬಿಜೆಪಿ, ಕಾಂಗ್ರೆಸ್‌ಗೆ ಚು.ಆಯೋಗ ಸೂಚನೆ

0
ಜಾತಿ, ಸಮುದಾಯ ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಬೇಡಿ, ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಚು.ಆಯೋಗ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಖಡಕ್‌ ಸೂಚನೆಯನ್ನು ನೀಡಿದೆ. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು...