ದೇಶಭಕ್ತನ ಮಗನಾಗಿರುವುದಕ್ಕೆ ಹೆಮ್ಮೆಯಿದೆ; ರಾಜೀವ್ ಗಾಂಧಿ ಪುಣ್ಯಸ್ಮರಣೆ ಮಾಡಿದ ರಾಹುಲ್

0
ದೇಶಭಕ್ತನ ಮಗನಾಗಿರುವುದಕ್ಕೆ ಹೆಮ್ಮೆಯಿದೆ, ರಾಜೀವ್ ಗಾಂಧಿ, ಪುಣ್ಯಸ್ಮರಣೆ ಮಾಡಿದ ರಾಹುಲ್ ಗಾಂಧಿ

ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಹತ್ಯೆಯಾಗಿ ಇಂದಿಗೆ 29 ವರ್ಷವಾಗಿರುವುದರಿಂದ, ರಾಹುಲ್ ಗಾಂಧಿಯವರು ತಮ್ಮ ತಂದೆಯನ್ನು ನೆನಪಿಸಿ “ನಿಜವಾದ ದೇಶಭಕ್ತನ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.

“ನಿಜವಾದ ದೇಶಭಕ್ತ, ಉದಾರವಾದಿ ಮತ್ತು ಕರುಣಾಮಯಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಪ್ರಧಾನ ಮಂತ್ರಿಯಾಗಿ ರಾಜೀವ್ ಜಿ ಭಾರತವನ್ನು ಪ್ರಗತಿಯ ಹಾದಿಗೆ ಕೊಂಡೊಯ್ದಿದ್ದರು. ಅವರು ತಮ್ಮ ಮುಂದಾಲೋಚನಾ ದೃಷ್ಟಿಯಿಂದ ದೇಶವನ್ನು ಸಬಲೀಕರಣಗೊಳಿಸಲು ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡರು. ಇಂದು, ಅವರ ಪುಣ್ಯತಿಥಿಯಂದು ನಾನು ಅವರಿಗೆ ಪ್ರೀತಿಯಿಂದ ಮತ್ತು ಕೃತಜ್ಞತೆಯಿಂದ ವಂದಿಸುತ್ತೇನೆ “ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ರಾಜೀವ್ ಗಾಂಧಿಯ ಪುಣ್ಯತಿಥಿಯನ್ನು ನೆನೆದು ಅವರಿಗೆ ಗೌರವಾರ್ಪಣೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಕೂಡಾ ರಾಜೀವ್ ಗಾಂಧಿಯನ್ನು ನೆನಪಿಸಿ, ಇಂದು ಬೆಳಿಗ್ಗೆ ಅವರ ಸಣ್ಣ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.

“ಯುವ ಭಾರತದ ನಾಡಿಮಿಡಿತವನ್ನು ಅನುಭವಿಸಿದ ಮತ್ತು ನಮ್ಮನ್ನು ಉಜ್ವಲ ಭವಿಷ್ಯದತ್ತ ಸಾಗಿಸಿದ ವ್ಯಕ್ತಿ. ಯುವ ಮತ್ತು ವೃದ್ಧರ ಅಗತ್ಯಗಳನ್ನು ಅರ್ಥಮಾಡಿಕೊಂಡ ಹಾಗೂ ಪ್ರತಿಯೊಬ್ಬರಿಂದಲೂ ಪ್ರೀತಿಸಲ್ಪಟ್ಟ ವ್ಯಕ್ತಿ” ಎಂದು ಅದು ಹೇಳಿದೆ.

ರಾಜೀವ್ ಗಾಂಧಿ ಮಹಿಳೆಯರನ್ನು ಸಬಲೀಕರಣಕ್ಕಾಗಿ ಹಾಗೂ ಸಮಾನ ಸಮಾಜವನ್ನು ಪ್ರತಿಪಾದಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ರಾಜೀವ್ ಗಾಂಧಿಯನ್ನು ದೂರದೃಷ್ಟಿ ಮತ್ತು ಕಾಳಜಿಯುಳ್ಳ ಮತ್ತು ಕರುಣಾಳು ಎಂದು ನೆನಪಿಸಿಕೊಂಡಿದ್ದಾರೆ.

“ಭಾರತದ ಕಿರಿಯ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ದೂರದೃಷ್ಟಿಯವರಾಗಿದ್ದರು. ಅವರು ಕಾಳಜಿಯುಳ್ಳವರು, ಪ್ರೀತಿಯುಳ್ಳವರು ಮತ್ತು ಕರುಣಾಮಯಿಯಾಗಿದ್ದರು. ಅವರು ಎಲ್ಲಾ ಭಾರತೀಯರಿಗೆ ಉಜ್ವಲ ಭವಿಷ್ಯದ ಸಂಕಲ್ಪಕ್ಕಾಗಿ ಕೆಲಸ ಮಾಡಿದರು. ಇಂದು ನಾವು ಅವರನ್ನು ನೆನಪಿಸಿಕೊಳ್ಳುತ್ತಿದ್ಢೇವೆ, ಅವರು ಇನ್ನೂ ಅನೇಕ ತಲೆಮಾರುಗಳಿಗೆ ಸ್ಫೂರ್ತಿ ನೀಡಲಿ” ಅವರು ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ತಾಯಿ ಮತ್ತು ಆಗಿನ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ 1984 ರಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡರು. ಅವರು ತಮ್ಮ 40 ನೇ ವಯಸ್ಸಿನಲ್ಲಿ ಭಾರತದ ಕಿರಿಯ ಪ್ರಧಾನಿಯಾದರು.

ರಾಜೀವ್ ಗಾಂಧಿಯನ್ನು 1991 ರಲ್ಲಿ ತಮಿಳುನಾಡಿನ ಶ್ರೀಪೆರುಂಬುದುರ್ ನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಆತ್ಮಾಹುತಿ ಬಾಂಬರ್ ಹತ್ಯೆ ಮಾಡಲಾಯಿತು. ಅವರ ಪುಣ್ಯತಿಥಿಯಂದು ಭಯೋತ್ಪಾದನಾ ವಿರೋಧಿ ದಿನವಾಗಿಯೂ ಆಚರಿಸಲಾಗುತ್ತದೆ.


ಓದಿ: ವಲಸಿಗರೊಂದಿಗೆ ರಾಹುಲ್‌ ಸಂವಾದ ನಾಟಕವೇ? ನಂತರ ಕಾರ್ಮಿಕರೆಲ್ಲಾ ಕಾರಿನಲ್ಲಿ ಹೊರಟರೆ?: ಫ್ಯಾಕ್ಟ್‌ಚೆಕ್‌


ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಲು ಇಲ್ಲಿ ಕ್ಲಿಕ್ ಮಾಡಿ


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here