ಜಿಡಿಪಿ
Curtasy: Indian express

ಪ್ರಧಾನಿ ಮೋದಿ ನಮ್ಮ ದೇಶದ ಜಿಡಿಪಿಯನ್ನು ಏರಿಸುವಲ್ಲಿ ಅದ್ಬುತವಾದ ಸಾಧನೆ ಮಾಡಿದ್ದಾರೆ ಎಂದು ಕಾಂ‌ಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಅನ್ನು GDP ಎಂದಿರುವ ರಾಹುಲ್ ಗಾಂಧಿ, ಇಂಧನಗಳ ಬೆಲೆ ಏರಿಕೆಯ ಕುರಿತು ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.

ದೇಶದಲ್ಲಿ ಇಂಧನ ಬೆಲೆಯು ಐತಿಹಾಸಿಕ ಏರಿಕೆಯನ್ನು ಕಂಡಿದ್ದು ದೆಹಲಿಯಲ್ಲಿ ಪೆಟ್ರೋಲ್‌‌ಗೆ 85.70 ರೂ. ಹಾಗೂ ಡೀಸೆಲ್ 75.88 ರೂ. ಆಗಿದೆ. ಮುಂಬೈಯಲ್ಲಿ ಪೆಟ್ರೋಲ್ 92.28 ರೂ. ಆಗಿದ್ದು, ಡೀಸೆಲ್‌ ದರವು 82.66 ರೂ. ಗೆ ಏರಿದೆ.

ಇದನ್ನೂ ಓದಿ: ಇವು ರೈತರನ್ನು ಮುಗಿಸಿಬಿಡುವ ಕಾಯ್ದೆಗಳಾಗಿವೆ: ರಾಹುಲ್ ಗಾಂಧಿ

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಮೋದಿ ನಮ್ಮ ದೇಶದ ಜಿಡಿಪಿಯಲ್ಲಿ ಪ್ರಚಂಡ ಏರಿಕೆಯಾಗುವಂತೆ ಮಾಡಿದ್ದಾರೆ. ಜಿಡಿಪಿ ಅಂದರೆ ಗ್ಯಾಸ್, ಡೀಸೆಲ್, ಪೆಟ್ರೋಲ್‌ ಆಗಿದೆ. ದೇಶದ ಜನತೆ ಹಣದುಬ್ಬರದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಕೇಂದ್ರ ಸರಕಾರ ಮಾತ್ರ ತೆರಿಗೆ ಹಣ ವಸೂಲಿಯಲ್ಲಿ ನಿರತವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇನ್ನೂ ಸಮಯವಿದೆ ಮೋದಿಜಿ…! – ಪ್ರಧಾನಿಯವರಲ್ಲಿ ಮನವಿ ಮಾಡಿದ ರಾಹುಲ್ ಗಾಂಧಿ

 

LEAVE A REPLY

Please enter your comment!
Please enter your name here