Homeರಾಜಕೀಯಒಂದು ದಿನವೂ ಅಧಿವೇಶನಕ್ಕೆ ಹಾಜರಾಗದ ರಾಜ್ಯಸಭಾ ಸಂಸದ ಇಳಯರಾಜ!

ಒಂದು ದಿನವೂ ಅಧಿವೇಶನಕ್ಕೆ ಹಾಜರಾಗದ ರಾಜ್ಯಸಭಾ ಸಂಸದ ಇಳಯರಾಜ!

- Advertisement -
- Advertisement -

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ರಾಜ್ಯಸಭಾ ಸಂಸದರಾಗಿ ನಾಮನಿರ್ದೇಶನಗೊಂಡಿದ್ದರೂ, ಒಂದೇ ಒಂದು ದಿನವೂ ಅಧಿವೇಶನಕ್ಕೆ ಹಾಜರಾಗಿಲ್ಲ ಎಂದು ವರದಿಯಾಗಿದೆ. ನಾಮನಿರ್ದೇಶನಗೊಂಡ ನಂತರ ಬಂದ ತಮ್ಮ ಮೊದಲ ಅಧಿವೇಶನವಾದ ಚಳಿಗಾಲದ ಅಧಿವೇಶನದಲ್ಲಿ ಒಂದು ದಿನವೂ ಅವರು ಹಾಜರಾಗಿಲ್ಲ. ಅವರನ್ನು 2022ರ ಜುಲೈ 6 ರಂದು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು.

2022ರ ಜುಲೈನಲ್ಲಿ ನಡೆದ ಅವರ ಪ್ರಮಾಣವಚನ ಸಮಾರಂಭದ ನಂತರ, ಇಳಯರಾಜ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ ಹಾಗೂ 2022ರ ಡಿಸೆಂಬರ್‌ನಲ್ಲಿ ನಡೆದ 13 ದಿನಗಳ ಚಳಿಗಾಲದ ಅಧಿವೇಶನದಲ್ಲಿ ಅವರು ಒಮ್ಮೆಯೂ ಸದನದಲ್ಲಿ ಹಾಜರಿರಲಿಲ್ಲ ಎಂಬುದನ್ನು ರಾಜ್ಯಸಭಾ ವೆಬ್‌ಸೈಟ್‌‌ನಲ್ಲಿ ಇರುವ ಮಾಹಿತಿ ಹೇಳುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದಕ್ಷಿಣ ಭಾರತದ ನಾಲ್ವರು ಖ್ಯಾತ ವ್ಯಕ್ತಿಗಳಾದ ತಮಿಳುನಾಡಿನ ಇಳಯರಾಜ, ಕೇರಳದಿಂದ ಓಟಗಾರ್ತಿ ಪಿಟಿ ಉಷಾ, ತೆಲುಗು ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಮತ್ತು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಜುಲೈ ತಿಂಗಳಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು. ಈ ನಾಲ್ವರಲ್ಲಿ ಪಿ.ಟಿ.ಉಷಾ ಅವರು 13 ದಿನವೂ ಅಧಿವೇಶನದಲ್ಲಿ ಹಾಜರಿದ್ದರೆ, ವೀರೇಂದ್ರ ಹೆಗ್ಗಡೆ ಐದು ದಿನ ಹಾಗೂ ವಿಜಯೇಂದ್ರ ಪ್ರಸಾದ್ ಎರಡು ದಿನ ಹಾಜರಿದ್ದರು.

ಇಳಯರಾಜ ಅವರು 1,400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ 7,000 ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಅವರ ಹೆಚ್ಚು ತಮಿಳು ಭಾಷೆಯಲ್ಲಿ ಕೃತಿಗಳನ್ನು ರಚಿಸಿದ್ದರೂ, ಮಲಯಾಳಂ, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ.

ತಮ್ಮ ಸಂಗೀತ ಸಾಧನೆಗಾಗಿ ಅವರು ಈ ವರೆಗೆ ಐದು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವುಗಳಲ್ಲಿ ಮೂರು ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಮತ್ತು ಎರಡು ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಪಡೆದವುಗಳಾಗಿವೆ. ಇಷ್ಟೆ ಅಲ್ಲದೆ, ಭಾರತ ಸರ್ಕಾರವು ನೀಡುವ ಮೂರನೇ ಮತ್ತು ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: 1.87 ಕೋಟಿ ತೆರಿಗೆ ಬಾಕಿ; ಸಂಗೀತ ನಿರ್ದೇಶಕ ಇಳಯರಾಜಗೆ ಜಿಎಸ್‌ಟಿ ಇಲಾಖೆಯಿಂದ ಶೋಕಾಸ್‌ ನೋಟಿಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...