HomeUncategorizedಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; 6 ವರ್ಷದ ನಂತರ ಅಪರಾಧಿಗೆ ಮರಣದಂಡನೆ!

ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; 6 ವರ್ಷದ ನಂತರ ಅಪರಾಧಿಗೆ ಮರಣದಂಡನೆ!

2014 ರಲ್ಲಿ ನಡೆದ ಅತ್ಯಾಚಾರಕ್ಕೆ 2020ರಲ್ಲಿ ಶಿಕ್ಷೆಯಾಗಿರುವುದನ್ನು ನೋಡಿದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ವಿಳಂಬಿತ ಕಾರ್ಯವೈಖರಿ ಕಂಡುಬರುತ್ತದೆ.

- Advertisement -
- Advertisement -

2014 ರಲ್ಲಿ ಒಂದೂವರೆ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ರಾಯ್‌ಬರೇಲಿಯ ವ್ಯಕ್ತಿಯೊಬ್ಬನಿಗೆ ಮರಣದಂಡನೆ ವಿಧಿಸಲಾಗಿದೆ.

ಪೋಕ್ಸೊ ವಿಶೇಷ ನ್ಯಾಯಾಧೀಶರಾದ ವಿಜಯ್ ಪಾಲ್ ಅವರು ಜಿತೇಂದ್ರ ಸಿಂಗ್‌ಗೆ ಶುಕ್ರವಾರ ಮರಣದಂಡನೆ ವಿಧಿಸಿದ್ದಾರೆ ಎಂದು ಸರ್ಕಾರದ ವಕೀಲ ವೇದಪಾಲ್ ಸಿಂಗ್ ತಿಳಿಸಿದ್ದಾರೆ.

ಮೇ 3, 2014 ರಂದು, ಮಗುವಿನ ತಂದೆ ನೀಡಿದ ದೂರಿನ ಮೇರೆಗೆ ಸಲೋನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಅವರ ಸಂಬಂಧಿಯೇ ಅತ್ಯಾಚಾರ ಎಸಗಿ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ನಾನು ಬಂಡೆ ಅಲ್ಲ; ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲು: ಡಿ.ಕೆ.ಶಿವಕುಮಾರ್

ಸಾಕ್ಷ್ಯಾಧಾರಗಳನ್ನು ನಾಶಮಾಡಲು ಜಿತೇಂದ್ರ ಸಿಂಗ್ ಮಗುವಿನ ಶವವನ್ನು ಗ್ರಾಮದ ಹೊರಗಿನ ಕೊಳವೆಯ ಬಾವಿಯಲ್ಲಿ ಹೂಳಿದ್ದನು ಎಂದು ವಕೀಲರು ತಿಳಿಸಿದ್ದಾರೆ.

ನ್ಯಾಯಾಲಯವು ಒಟ್ಟಾರೆ 2.20 ಲಕ್ಷ ರೂ.ಗಳ ದಂಡವನ್ನು ವಿಧಿಸಿದ್ದು, ಅದರಲ್ಲಿ ಅರ್ಧವನ್ನು ಮಗುವಿನ ತಂದೆಗೆ ನೀಡುವಂತೆ ಆದೇಶಿಸಿದೆ ಎಂದು ವೇದಪಾಲ್ ಸಿಂಗ್ ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ನಡುವೆ ಇಂತಹ ಘಟನೆಗಳು ಸಮಾಧನಕರವಾಗಿ ಕಂಡರೂ, ಅತ್ಯಾಚಾರಕ್ಕೆ ಶಾಶ್ವತ ಪರಿಹಾರ ಏನು ಎಂಬುದು ಯಾರಿಗೂ ತಿಳಿಯದಾಗಿದೆ. ಮರಣದಂಡನೆ ನೀಡಿರುವ ಘಟನೆಗಳು ದೇಶದಾದ್ಯಂತ ಕಾಣಬಹುದಾದರೂ, ಅಪರಾಧ ನಡೆದ ಮತ್ತು ಅವುಗಳಿಗೆ ಶಿಕ್ಷೆ ವಿಧಿಸಿದ ದಿನಗಳ ನಡುವಿನ ಅಂತರವನ್ನು ಗಮನಿಸಿದಾಗ ತೀರಾ ಹೆಚ್ಚಾಗಿರುವುದು ಕಂಡುಬರುತ್ತದೆ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆ ಮತ್ತು ಸರ್ಕಾರದ ನಿರ್ಲಕ್ಷ್ಯತೆಯನ್ನು ಎತ್ತಿತೋರಿಸುತ್ತದೆ. ಯಾವುದೇ ರಾಜಕಾರಣಿಯೋ ಅಥವಾ ಸಿನಿಮಾದವರೋ ಅಥವಾ ಉದ್ಯಮಪತಿಗಳೋ ಆದರೆ ಅವರ ಪ್ರಕರಣವನ್ನು ಅತಿಬೇಗನೆ ಕೈಗೆತ್ತಿಕೊಂಡು ಇತ್ಯರ್ಥಪಡಿಸುವ ನ್ಯಾಯಾಲಯ ಇಂತಹ ಜನಸಾಮಾನ್ಯರ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯತೆ ವಹಿಸುತ್ತದೆ.

2014 ರಲ್ಲಿ ನಡೆದ ಅತ್ಯಾಚಾರಕ್ಕೆ 2020ರಲ್ಲಿ ಶಿಕ್ಷೆಯಾಗಿರುವುದನ್ನು ನೋಡಿದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ವಿಳಂಬಿತ ಕಾರ್ಯವೈಖರಿ ಕಂಡುಬರುತ್ತದೆ. ಬಹುಶಃ ಅತ್ಯಾಚಾರಗಳು ಹೆಚ್ಚಾಗುತ್ತಿರುವುದಕ್ಕೆ ಇದೂ ಒಂದು ಕಾರಣವಾಗಿರಬಹುದು ಎನ್ನುವುದು ಹಲವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ರಾಜ್ಯದಲ್ಲಿ ನವೆಂಬರ್‌ 17ರಿಂದ ಪದವಿ ಕಾಲೇಜುಗಳ ಆರಂಭ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...