Homeಮುಖಪುಟಬಳಸಿದ ಹಾಲಿನ ಪ್ಯಾಕೆಟ್ ಹಿಂದುರಿಗಿಸಿದರೆ 50 ಪೈಸೆ: ಮಹರಾಷ್ಟ್ರ ಸರ್ಕಾರದ ಮಹತ್ವದ ನಡೆ

ಬಳಸಿದ ಹಾಲಿನ ಪ್ಯಾಕೆಟ್ ಹಿಂದುರಿಗಿಸಿದರೆ 50 ಪೈಸೆ: ಮಹರಾಷ್ಟ್ರ ಸರ್ಕಾರದ ಮಹತ್ವದ ನಡೆ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಮಹರಾಷ್ಟ್ರದಲ್ಲಿ ಹಾಲಿನ ಪ್ಯಾಕೆಟ್ ಕೊಳ್ಳಬೇಕಾದರೆ ನೀವು 50 ಪೈಸೆ ಹೆಚ್ಚಿಗೆ ನೀಡಬೇಕು. ಬಳಸಿದ ನಂತರ ಆ ಪ್ಯಾಕೆಟ್ ಅನ್ನು ನೀವು ಅಂಗಡಿಗೆ ಹಿಂತಿರುಗಿಸಿಕೊಟ್ಟಾಗ ಅದೇ 50 ಪೈಸೆಯನ್ನು ನಿಮಗೆ ವಾಪಸ್ ಕೊಡಲಾಗುತ್ತದೆ ಎಂಬ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ. ಇದು ಪ್ಲಾಸ್ಟಿಕ್ ಮರುಬಳಕೆ ಮತ್ತು ನಿಯಂತ್ರಣದ ವಿಚಾರದಲ್ಲಿ ಮಹತ್ವದ ನಡೆಯಾಗಿದ್ದು ಇದಕ್ಕೆ ಬಿಜೆಪಿ-ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಮದಾಸ್ ಕದಮ್

ಪರಿಸರ ಖಾತೆ ಸಚಿವ ರಾಮದಾಸ್ ಕದಮ್ ರವರ ಪ್ರಕಾರ ಇದರಿಂದ ಹಾಲಿನ ಪ್ಯಾಕೆಟ್ ಮರುಬಳಕೆ ಸಾಧ್ಯವಾಗುವುದರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬಹುದಾಗಿದೆ. ಹಾಗಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಹಾಲಿನ ಪ್ಯಾಕೆಟ್ ಮರುಬಳಕೆ ಮಾಡಲು ಮಹರಾಷ್ಟ್ರ ಸರ್ಕಾರ ಮುಂದಾಗಿದೆ. ಇದರಿಂದ ಧೀರ್ಘಾವದಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವುದು ಸರ್ಕಾರದ ಗುರಿಯಾಗಿದೆ.

ಕಳೆದ ವರ್ಷ ಜೂನ್ 23ರಿಂದಲೇ ಮಹರಾಷ್ಟ್ರ ಸರ್ಕಾರ ಒಮ್ಮೆ ಮಾತ್ರ ಬಳಕೆಯಾಗುವ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. “ಇದು ಮಹರಾಷ್ಟ್ರ ಸರ್ಕಾರದ ಅದ್ಭುತ ನಿರ್ಧಾರ” ಈ ನೀತಿಯಿಂದ ಮರುಬಳಕೆಯ ಜೊತೆ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಬಹದು” ಎಂದು ಧೃವ್ ರಾಠೀ ಪ್ರತಿಕ್ರಿಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...