Homeಮುಖಪುಟಧಾರ್ಮಿಕ ವಿಭಜನೆಯು ಭಾರತದ ಐಟಿ ನಾಯಕತ್ವವನ್ನು ನಾಶಪಡಿಸುತ್ತದೆ: ಮಜುಂದಾರ್ ಶಾ

ಧಾರ್ಮಿಕ ವಿಭಜನೆಯು ಭಾರತದ ಐಟಿ ನಾಯಕತ್ವವನ್ನು ನಾಶಪಡಿಸುತ್ತದೆ: ಮಜುಂದಾರ್ ಶಾ

ಉದ್ಯಮಿ ಸುರೇಶ್‌ ಕುಮಾರ್‌ ಜೈನ್‌, "ಉದ್ಯಮ ಕ್ಷೇತ್ರಕ್ಕೆ ಧರ್ಮವನ್ನು ಯಾವುದೇ ಕಾರಣಕ್ಕೂ ತರಬಾರದು. ಯಾವುದೇ ಧರ್ಮ, ಯಾವುದೇ ಜಾತಿಯಾಗಿದ್ದರೂ ಉದ್ಯಮ ಮಾಡಲು ಈ ಸಂವಿಧಾನದಲ್ಲಿ ಹಕ್ಕಿದೆ" ಎನ್ನುತ್ತಾರೆ.

- Advertisement -
- Advertisement -

“ಧಾರ್ಮಿಕ ವಿಭಜನೆಯು ಭಾರತದ ಐಟಿಬಿಟಿ ನಾಯಕತ್ವವನ್ನು ನಾಶಪಡಿಸುತ್ತದೆ” ಎಂದು ಖ್ಯಾತ ಉದ್ಯಮಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಬಯೋಕಾನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಕಿರಣ್ ಮಜುಂದಾರ್ ಶಾ ಎಚ್ಚರಿಸಿದ್ದಾರೆ.

ಕರ್ನಾಟಕದಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ಆತಂಕ ವ್ಯಕ್ತಪಡಿಸಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕಿವಿಮಾತು ಹೇಳಿದ್ದಾರೆ.

ಹಿಂದೂ ದೇವಾಲಯದ ಆವರಣ ಹಾಗೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿರುವ ಕುರಿತು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಮಾಡಿರುವ ವರದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ಕರ್ನಾಟಕ ಸರ್ಕಾರವನ್ನು ಎಚ್ಚರಿಸಿದ್ದಾರೆ.

“ಕರ್ನಾಟಕ ರಾಜ್ಯವು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಅಭಿವೃದ್ಧಿಯನ್ನು ರೂಪಿಸುತ್ತದೆ. ಕೋಮುವಾದ ಪ್ರೇರಿತ ಹೊರಗಿಡುವಿಕೆಗೆ ಅವಕಾಶ ನೀಡಬಾರದು. ಐಟಿಬಿಟಿ ಕ್ಷೇತ್ರವೇನಾದರೂ ಕೋಮುವಾದೀಕರಣಗೊಂಡರೆ ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ” ಎಂದು ಕಿರಣ್ ಮಜುಂದಾರ್ ಹೇಳಿದ್ದಾರೆ. 

ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಟ್ಯಾಗ್ ಮಾಡಿರುವ ಅವರು, “ದಯವಿಟ್ಟು ಈ ಬೆಳೆಯುತ್ತಿರುವ ಧಾರ್ಮಿಕ ವಿಭಜನೆಯನ್ನು ಪರಿಹರಿಸಿ” ಎಂದು ಒತ್ತಾಯಿಸಿದ್ದಾರೆ.

 

ಮುಸ್ಲಿಂ ಸಮುದಾಯದ ವ್ಯಾಪಾರವನ್ನು ಬಹಿಷ್ಕರಿಸುವಂತೆ ದ್ವೇಷ ಹರಡುತ್ತಿರುವುದು ಹೆಚ್ಚಾಗುತ್ತಿದ್ದು, ಎಲ್ಲ ಜಾತಿಗಳ ವರ್ತಕ ಸಮುದಾಯ ಕಟುವಾಗಿ ಟೀಕಿಸುತ್ತಿದೆ. ಹಲಾಲ್ ಹೆಸರಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡಿಸುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮೈಸೂರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್‌ ಕುಮಾರ್‌ ಜೈನ್‌, “ಉದ್ಯಮ ಕ್ಷೇತ್ರಕ್ಕೆ ಧರ್ಮವನ್ನು ಯಾವುದೇ ಕಾರಣಕ್ಕೂ ತರಬಾರದು. ಯಾವುದೇ ಧರ್ಮ, ಯಾವುದೇ ಜಾತಿಯಾಗಿದ್ದರೂ ಉದ್ಯಮ ಮಾಡಲು ಈ ಸಂವಿಧಾನದಲ್ಲಿ ಹಕ್ಕಿದೆ. ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಅಲ್ಲಿ ಜೈನರೊಬ್ಬರೇ ವ್ಯಾಪಾರ ಮಾಡಬೇಕು, ಬೇರೆಯವರು ಬರಬಾರದು ಎನ್ನಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಹಲಾಲ್‌‌ ಮಾಂಸ ವಿಷಕಾರಿಯೆ? ಬಜರಂಗದಳದ ಈ ಪೋಸ್ಟರ್‌‌‌ನಲ್ಲಿರುವ ಸುಳ್ಳುಗಳೇನು?

“ನಾವು ಹಿಂದೂಗಳಲ್ಲ, ಜೈನರು. ಹಿಂದೂ, ಮುಸ್ಲಿಂ, ಸಿಖ್‌, ಜೈನ್‌- ಇಲ್ಲರೂ ವಿಭಿನ್ನ ಜನಾಂಗಗಳು. ನಮಗೆ ನಾವೇ ಸೀಮಿತ ಮಾಡಿಕೊಳ್ಳಲು ಆಗುವುದಿಲ್ಲ. ಎಲ್ಲರೂ ಸಹಬಾಳ್ವೆ ಮಾಡಬೇಕು. ನನ್ನ ಕೌಶಲವನ್ನು ನಾನು ತೋರಿಸಬೇಕು. ಅವರ ಕೌಶಲವನ್ನು ಅವರು ತೋರಿಸಬೇಕು. ಒಬ್ಬರಿಗೊಬ್ಬರು ಕೌಶಲವನ್ನು ವಿನಿಮಯ ಮಾಡಿಕೊಳ್ಳಬೇಕು. ಹೀಗಾಗಿ ಇಂದು ಆಗುತ್ತಿರುವ ಬೆಳವಣಿಗೆಗಳನ್ನು ನಾನು ವಿರೋಧಿಸುತ್ತೇನೆ” ಎಂದು ತಿಳಿಸಿದರು.

ಉದ್ಯಮಿ ಸುರೇಶ್‌ಕುಮಾರ್‌ ಜೈನ್‌

ಹಲಾಲ್‌ ಸಂಬಂಧ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಹಲಾಲ್‌ ಈ ಕಾಲದಲ್ಲ. ಪ್ರಾಚೀನ ಕಾಲದಿಂದಲೂ ಮುಸ್ಲಿಮರು ಹಲಾಲ್ ಮಾಡುತ್ತಿದ್ದಾರೆ. ಈಗ ಹಿಂದೂ ಮುಸ್ಲಿಂ ಗಲಾಟೆ ಶುರುವಾಗಿದೆ, ಹಿಜಾಬ್ ವಿವಾದವಾಗಿದೆ ಎಂಬ ಕಾರಣಕ್ಕೆ ಹಲಾಲ್‌ ಬ್ರಾಂಡ್ ಸೃಷ್ಟಿಯಾಗಿಲ್ಲ. ಮುಸ್ಲಿಮರು ಹಲಾಲ್‌ ಮಾಡಿದ ಆಹಾರವನ್ನು ತಿನ್ನಬೇಕೆಂಬ ಪದ್ಧತಿ ಇದೆ. ಇತರ ಸಮುದಾಯಗಳಲ್ಲಿ ಹಲಾಲ್ ಮಾಡಿದನ್ನೇ ತಿನ್ನಬೇಕೆಂಬ ಸಂಪ್ರದಾಯ ಇಲ್ಲ. ಹಿಂದೂಗಳ ವ್ಯಾಪಾರ ಹಾಳು ಮಾಡಲೆಂದು ಹಲಾಲ್‌ ಮಾಡಿದ್ದಲ್ಲ. ಅದು ಅವರ ಧಾರ್ಮಿಕರ ಆಚರಣೆ. ಹಲಾಲ್‌ ವಿಚಾರವನ್ನು ಮುನ್ನೆಲೆಗೆ ತಂದು ವ್ಯಾಪಾರಕ್ಕೆ ವಿರೋಧಿಸುತ್ತಿರುವುದು ತೀವ್ರ ವಿಷಾದನೀಯ” ಎಂದರು.

“ಹಿಂದೂ ಮುಸ್ಲಿಂ ಗಲಾಟೆಗಳು ಕಾಂಗ್ರೆಸ್ ಸರ್ಕಾರ ಇದ್ದಾಗಲೂ ನಡೆಯುತ್ತಿದ್ದವು. ಆದರೆ ಈ ಪ್ರಕಾರವಾದ ಪ್ರಚೋದನೆಗಳು ಆಗುತ್ತಿರಲಿಲ್ಲ. ಶಾಂತಿ ಸಭೆಗಳನ್ನು ನಡೆಸಿ ಇತ್ಯರ್ಥ ಮಾಡಲಾಗುತ್ತಿತ್ತು. ವೈಯಕ್ತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕೋ, ಮತ್ಯಾವುದಕ್ಕೋ ಆಗ ಗಲಾಟೆಗಳು ಆಗುತ್ತಿದ್ದವೇ ಹೊರತು ಈ ಮಾದರಿಯಲ್ಲಿ ನಡೆಯುತ್ತಿರಲಿಲ್ಲ. ಆದರೆ ಇಂದು ನೇರವಾಗಿಯೇ ಎರಡು ಸಮುದಾಯಗಳ ನಡುವೆ ಗೋಡೆ ಕಟ್ಟಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ನಾನು ಜೈನನಾಗಿ ಹೇಳುತ್ತೇನೆ. ಈ ಹಿಂದೆ ಯಾವ ಯಾವ ಸಮುದಾಯಗಳು ಪ್ರಾಬಲ್ಯವನ್ನು ಹೊಂದಿದ್ದವೋ ಅವರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ನಾವು ಮತಾಂತರ ಆಗಲಿಲ್ಲವೆಂದು ಸುಮಾರು ಎಂಟು ಸಾವಿರ ಜೈನರನ್ನು ಮಧುರೈನಲ್ಲಿ ಕೊಂದಿರುವ ಕುರಿತು ಸಾಕ್ಷ್ಯಾಧಾರಗಳಿವೆ. ಅನೇಕ ಜೈನ ದೇವಾಲಯಗಳು ವೈಷ್ಣವ, ವೀರಶೈವ ದೇವಾಲಯಗಳಾಗಿ ಬದಲಾಗಿವೆ. ರಾಜಪ್ರಭುತ್ವ ಇದ್ದ ಕಾಲದಲ್ಲಿ ಒಂದು ಜನಾಂಗದ ಮೇಲೆ ಮತ್ತೊಂದು ಜನಾಂಗ ಒತ್ತಡ ಹೇರುವುದು ಸಾಮಾನ್ಯವಾಗಿತ್ತು. ಆದರೆ ಪ್ರಜಾಪ್ರಭುತ್ವದ ಕಾಲದಲ್ಲಿ ಆ ರೀತಿಯ ಒತ್ತಡ, ಹೇರಿಕೆ ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.

“ಜೈನ ವಿಗ್ರಹಗಳಿಗೆ ವಿಭೂತಿ ಬಳಿದಿರುವುದನ್ನು ನೋಡಿದ್ದೇವೆ. ಮೈಮೇಲೆ ಉಡುದಾರ, ಬಟ್ಟೆಯೇ ಇರಬಾರದು ಎಂದು ಜೈನ ಮುನಿಗಳು ಹೇಳಿರಬೇಕಾದರೆ ನಮಗೆ ಜನಿವಾರ ಹೇಗೆ ಬೇಕಾಗಿತ್ತು? ಒಂದು ಕಾಲಘಟ್ಟದಲ್ಲಿ ಜನಿವಾರ ಹಾಕಲು ಶುರುಮಾಡಿದರು. ಆನಂತರ ಮುಂದುವರಿತು. ಲಿಂಗಾಯತರು ಹೆಚ್ಚಿರುವ ಊರಲ್ಲಿ ಬಸವ ಜಯಂತಿಯನ್ನು ಜೈನರೂ ಸೇರಿಕೊಂಡೇ ಮಾಡಿರುತ್ತೇವೆ. ಅಂದರೆ ಆಯಾ ಪರಿಸರಕ್ಕೆ ಹೊಂದಿಕೊಂಡು ಸಮಾಜ ಮುಂದುವರಿಯುತ್ತಿದೆ. ಸಹಬಾಳ್ವೆ ಮುಖ್ಯ. ವೈಯಕ್ತಿಕವಾಗಿ ಹೇಳುವುದಾದರೆ ನನ್ನ ಫ್ಯಾಕ್ಟರಿಯಲ್ಲಿ ಸಾಬರೊಂದಿಗೆ ಮೊದಲು ವ್ಯಾಪಾರ ಮಾಡಿದ ಬಳಿಕವೇ ಬೇರೆಯವರೊಂದಿಗೆ ವ್ಯವಹರಿಸುತ್ತೇನೆ. ಇದನ್ನು ನಾನು ರೂಢಿ ಮಾಡಿಕೊಂಡು ಬಂದಿದ್ದೇನೆ. ಅದನ್ನು ಕಿತ್ತುಕೊಳ್ಳುವ ಹಕ್ಕುವ ಯಾರಿಗೂ ಇಲ್ಲ. ಈ ಉದ್ಯಮ ರಾಜಕಾರಣಕ್ಕೆ ಜಾತಿ ರಾಜಕಾರಣ ತರುತ್ತಿರುವುದು ನೋವುಂಟು ಮಾಡಿದೆ” ಎಂದು ವಿಷಾದಿಸಿದರು.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪಿಯುಸಿಎಲ್ ಅಧ್ಯಕ್ಷರಾದ ಅರವಿಂದ್ ನಾರಾಯಣ್‌, ನಾಜಿ ಜರ್ಮನಿಯೊಂದಿಗೆ ಕರ್ನಾಟಕದ ಪರಿಸ್ಥಿತಿಯನ್ನು ಹೋಲಿಸಿದ್ದಾರೆ. “ಹಿಟ್ಲರ್‌ನ ನಾಜಿ ಜರ್ಮನಿಯಲ್ಲಿ ಏನಾಯಿತು? ಮೊದಲು ಯಹೂದಿಗಳ ವಿರುದ್ಧ ದ್ವೇಷದ ಭಾಷಣ ಮಾಡಲಾಯಿತು. ನಂತರ ಯಹೂದಿಗಳಿಂದ ಯಾವುದೇ ವ್ಯಾಪಾರ ವಹಿವಾಟು ಮಾಡದಂತೆ ನಿರ್ಬಂಧಿಸಲಾಯಿತು. ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರದ ಬಳಿಕ ನರಮೇಧದ ನಡೆಯಿತು. ಇತಿಹಾಸದಿಂದ ನಾವು ಪಾಠ ಕಲಿಬೇಕು. ಜೆನೊಸೈಡ್‌ನ ಲಕ್ಷಣಗಳ ಕುರಿತು ಎಚ್ಚರ ವಹಿಸಬೇಕು. ಸರ್ಕಾರ ಈ ರೀತಿಯ ಬೆಳವಣಿಗೆಗಳಿಗೆ ಪ್ರೋತ್ಸಾಹ ನೀಡಬಾರದು” ಎನ್ನುತ್ತಾರೆ ಅರವಿಂದ್‌.


ಇದನ್ನೂ ಓದಿರಿ: Explainer: ಹಲಾಲ್ ಹಾಗೆಂದರೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಉದ್ಯಮಿಗಳು. ಪ್ರಗತಿಪರರು. ಹಾಗೂ ಇನ್ನಿತರ ಸಂಘಟನೆಗಳು ಮುಖ್ಯಮಂತ್ರಿಗಳಿಗೆ ಬೇಟಿಯಾಗಿ ಆಗುವ ಅನಾಹುತಗಳ ಬಗ್ಗೆ ವಿವರಿಸಿ ಹೇಳಿ… ಹಾಗೂ ಅವರು ಹಾಕಿಕೊಂಡಿರುವ ಆರೆಸೆಸ್ ಮುಖವಾಡ ಖಳಚಿ ಬನ್ನಿ…

  2. ಸಾಂವಿಧಾನಿಕ ಹಕ್ಕನ್ನು ಯಾರೂ ಕಸಿದುಕೊಳ್ಳಲು ಪ್ರಯತ್ನಿಸಬಾರದು ಜಾತ್ಯತೀತ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ತುಂಬಾ ಉತ್ತಮವಾದ ಸಾಮಾಜಿಕ ನಡವಳಿಕೆ ಎನಿಸುತ್ತದೆ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...