Homeಮುಖಪುಟಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ - ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ – ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ಪ್ರತಿಭಟನೆಯ ಕುರಿತಾದ ಸುದ್ದಿಗಳಿಗೆಂದೇ ಮೀಸಲಾದ ’ಟ್ರ್ಯಾಲಿ ನ್ಯೂಸ್’ ಸುದ್ದಿ-ಪತ್ರಿಕೆಯ (ಎರಡು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಬೈ-ವೀಕ್ಲಿ) ಮೊದಲ ಸಂಚಿಕೆ ಪ್ರಕಟವಾಗಿತ್ತು. ಈ ಸಂಚಿಕೆಯ ಮಾಸ್ಟ್‌ಹೆಡ್‌ನಲ್ಲಿ ತಲೆಗೆ ಟರ್ಬಾನ್ ಸುತ್ತಿ, ಧ್ವಜ ಹಿಡಿದ ರೈತನ ಚಿತ್ರಣವಿತ್ತು...

- Advertisement -
- Advertisement -

ರೈತ ಹೋರಾಟದ ಸಾಗರಕ್ಕೆ ಈಗ ಎಲ್ಲ ವಲಯಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಹಲವಾರು ಕಲಾವಿದರು ಈ ಹೋರಾಟಕ್ಕೆ ತಮ್ಮ ಕಲೆಯ ಮೂಲಕ ಚೈತನ್ಯ ತರುತ್ತಿದ್ದಾರೆ. ನಮ್ಮ ಶಿವಮೊಗ್ಗದ ಅರುಣ್‌ಕುಮಾರ್ ಕೂಡ ಇದರಲ್ಲಿ ಒಬ್ಬರು.

ಡಿಸೆಂಬರ್ 18 ರಂದು ದೆಹಲಿ ಗಡಿಗಳಲ್ಲಿ ಮೂರು ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಅಭೂತಪೂರ್ವ ಹೋರಾಟಕ್ಕೆ 23 ದಿನ ತುಂಬಿದಾಗ, ಪ್ರತಿಭಟನೆಯ ಕುರಿತಾದ ಸುದ್ದಿಗಳಿಗೆಂದೇ ಮೀಸಲಾದ ’ಟ್ರ್ಯಾಲಿ ನ್ಯೂಸ್’ ಸುದ್ದಿ-ಪತ್ರಿಕೆಯ (ಎರಡು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಬೈ-ವೀಕ್ಲಿ) ಮೊದಲ ಸಂಚಿಕೆ ಪ್ರಕಟವಾಗಿತ್ತು. ಈ ಸಂಚಿಕೆಯ ಮಾಸ್ಟ್‌ಹೆಡ್‌ನಲ್ಲಿ ತಲೆಗೆ ಟರ್ಬಾನ್ ಸುತ್ತಿ, ಧ್ವಜ ಹಿಡಿದ ರೈತನ ಚಿತ್ರಣವಿತ್ತು.

ಮುಂದಿನ ಸಂಚಿಕೆಗಳಲ್ಲಿ ಹೋರಾಟದ ಸಾಗರಕ್ಕೆ ಸೇರಿದ ವಿವಿಧ ತೊರೆಗಳನ್ನು ಪ್ರತಿನಿಧಿಸುವ ವರ್ಗಗಳನ್ನು ಮಾಸ್ಟ್‌ಹೆಡ್‌ನಲ್ಲಿ ಪ್ರಕಟಿಸುತ್ತ ಬರಲಾಗಿದೆ. ಪ್ರತಿಭಟನೆಯಲ್ಲಿರುವ ಮಹಿಳೆಯರು, ಕೂಲಿಕಾರ್ಮಿಕರನ್ನು ಪ್ರತಿನಿಧಿಸುವ ಕೆಲವು ಕಲಾ ಅಭಿವ್ಯಕ್ತಿಗಳು ಮಾಸ್ಟ್‌ಹೆಡ್‌ಗಳಲ್ಲಿ ಕಾಣಿಸಿಕೊಂಡಿವೆ. ಇತ್ತೀಚಿನ ಸಂಚಿಕೆಯೊಂದರಲ್ಲಿ, ಪೊಲೀಸರ ಜಲಫಿರಂಗಿಯನ್ನು ’ಲಾಕ್’ ಮಾಡಲು ಯುವಕನೊಬ್ಬ ಮಾಡಿದ ಜಿಗಿತವೂ ಇದರಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ರೈತರಿಗಾಗುತ್ತಿರುವ ಅನ್ಯಾಯವನ್ನು ಕೇಳೋರೇ ಇಲ್ಲ – ಡಿ.ಕೆ.ಶಿವಕುಮಾರ್

“ಈ ಕಿಸಾನ್ ಪ್ರತಿಭಟನೆಯ ಧ್ವನಿಯಾಗಿ ಇದನ್ನು ವಿಶ್ವ ದರ್ಜೆಯ ಪತ್ರಿಕೆಯನ್ನಾಗಿ ಪರಿವರ್ತಿಸುವ ಉದ್ದೇಶವಿದೆ. ಮೊದಲ ಸಂಚಿಕೆಯಿಂದಲೂ ಮೊದಲ ಪುಟವನ್ನು ಸೃಜನಶೀಲ ’ಕಲಾಕೃತಿ’ಗೆ ಮೀಸಲಿಡಲಾಗಿದೆ. ಈ ಕೆಚ್ಚೆದೆಯ ಪ್ರತಿಭಟನೆಯ ನೈಜ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಈ ಪ್ರತಿಭಟನೆ ಹೊರಡಿಸುವ ಸಂದೇಶ ಮತ್ತು ಅದರ ಪ್ರಭಾವವನ್ನು ನಾವು ಕಲಾವಿದರು ಅರಿತುಕೊಂಡಿದ್ದೇವೆ” ಎನ್ನುತ್ತಾರೆ ಸುದ್ದಿಪತ್ರದ ಹಿಂದಿನ ಪ್ರಮುಖ ತಂಡದೊಂದಿಗೆ ಕೆಲಸ ಮಾಡುವ ಕಲಾವಿದರಾದ ಸುಮಿರ್ ತಗ್ರಾ ಮತ್ತು ಜಿತನ್ ತುಕ್ರಲ್.

ಪಂಜಾಬ್‌ನ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಇವರಿಬ್ಬರು, ರೈತರೊಂದಿಗೆ ಕೆಲಸ ಮಾಡುವ ಹಿಮಾಚಲ ಪ್ರದೇಶದ ’ಅಕಾಲ್ ಅಕಾಡೆಮಿ ಬರು ಸಾಹಿಬ್’ನೊಂದಿಗೆ ಸಂಬಂಧ ಹೊಂದಿದ್ದಾರೆ. ಇವರು ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ವಿಶ್ವದಾದ್ಯಂತ ಕೃಷಿ ಬಿಕ್ಕಟ್ಟಿನ ತುರ್ತು ಸಮಸ್ಯೆಗಳನ್ನು ಪ್ರತಿಧ್ವನಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಚಳುವಳಿ ವಿವಿಧ ಹಂತಗಳಲ್ಲಿ ವಿಸ್ತರಿಸುವುದನ್ನು ನಾವು ನೋಡಿದ್ದೇವೆ. “ಚಳುವಳಿಯ ಕಾಳಜಿಗಳನ್ನು ಅರ್ಥ ಮಾಡಿಕೊಂಡು ಸಂಬಂಧಿತ ಪರಿಹಾರಗಳನ್ನು, ಅಂದರೆ ಸೃಜನಶೀಲತೆ ಮತ್ತು ಹೋರಾಟದ ಆಯಾಮಗಳನ್ನು ಬಿಂಬಿಸುವುದು ಮುಖ್ಯ” ಎಂದು ಅವರು ಹೇಳುತ್ತಾರೆ.

ಗುರುಗ್ರಾಮ್ ಮೂಲದ ಈ ಜೋಡಿ ಪ್ರಾರಂಭದಿಂದಲೂ ಸುದ್ದಿಪತ್ರವನ್ನು ವಿನ್ಯಾಸಗೊಳಿಸಿ ಪ್ಯಾಕೇಜಿಂಗ್ ಮಾಡುತ್ತಿದೆ. ಚಿತ್ರಗಳು, ವಿಡಿಯೊಗಳು, ಕವನಗಳು, ವಿವರಣೆಗಳು ಮತ್ತು ಇತರ ಸಂಬಂಧಿತ ವಸ್ತುಗಳನ್ನು ಹಂಚಿಕೊಳ್ಳಲು ಜನರಿಗೆ ಅವಕಾಶ ನೀಡುವ ಪ್ರತಿಭಟನೆಯ ಮುಕ್ತ ಮೂಲ ದಾಖಲೆಯಾದ ಕಿಸಾನ್‌ಏಕ್ತಾ.ಇನ್ ಹಿಂದೆ ಕೂಡ ಈ ಇಬ್ಬರಿದ್ದಾರೆ.

ಇದನ್ನೂ ಓದಿ: ಹಿಂದಿ ಹೇರಿಕೆಗೆ ತೀವ್ರ ವಿರೋಧ: ಹಿಂದಿಗುಲಾಮಗಿರಿಬೇಡ ನ್ಯಾಷನಲ್ ಟ್ರೆಂಡಿಂಗ್‌!

“ಈ ಪ್ರತಿಭಟನೆ ಇತರ ಪ್ರತಿಭಟನೆಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಆಳವಾದ ಸಹಾನುಭೂತಿ ಇದೆ. ವಿಭಿನ್ನ ಜಾಥಗಳು (ಗುಂಪುಗಳು) ಇವೆ, ಮತ್ತು ಸ್ತಂಭಗಳ (ಪಿಲ್ಲರ್‌ಗಳು) ಕೆಳಗಿನ ಜಾಗಗಳು ಈಗ ಸಣ್ಣ ಹಳ್ಳಿಗಳಾಗಿ ಹೊರಹೊಮ್ಮಿವೆ. ಭಾಗಿಯಾಗಿರುವ ವೃದ್ಧರ ಸಂಪೂರ್ಣ ಸಮರ್ಪಣಾ ಭಾವ ಮತ್ತು ಲಿಂಗ ಪಾತ್ರಗಳ ಬದಲಾಗುತ್ತಿರುವ ಸ್ವರೂಪಗಳನ್ನೂ ಇಲ್ಲಿ ಕಾಣಬಹುದು. ಕಾನೂನುಗಳು ಜಾರಿಗೆ ಬಂದ ನಂತರ ತಮ್ಮ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಆತಂಕಿತರಾಗಿರುವ ಜನರು ಇವರು” ಎಂದು ಈ ಇಬ್ಬರು ಕಲಾವಿದರು ಹೇಳುತ್ತಾರೆ.

2003 ರಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದು, ದಕ್ಷಿಣ ಏಷ್ಯಾದ ಹೆಸರಾಂತ ಸಮಕಾಲೀನ ಕಲಾವಿದರಲ್ಲಿ ಗುರುತಿಸಲ್ಪಟ್ಟ ಈ ಜೋಡಿ ಪಾಪ್-ಕಿಟ್ಷ್ ಕೃತಿಗಳಿಗೆ ಹೆಸರುವಾಸಿಯಾಗಿದೆ. ಗ್ರಾಹಕೀಕರಣದಿಂದ ವಲಸೆಯವರೆಗಿನ ಸಮಸ್ಯೆಗಳ ಮೇಲೆ ಈ ಜೋಡಿ ತಮ್ಮ ಕಲೆಯನ್ನು ಅಭಿವ್ಯಕ್ತಿ ಮಾಡಿದೆ.

ಒಂದು ದಶಕದಿಂದ ಕೃಷಿ ಬಿಕ್ಕಟ್ಟನ್ನು ಹತ್ತಿರದಿಂದ ಗಮನಿಸುತ್ತ ಬಂದ ಇವರು, ಆಗಾಗ್ಗೆ ಪ್ರತಿಭಟನಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. “ಇದು ಅತ್ಯಂತ ಏಕಪಕ್ಷೀಯ ಕಾನೂನು. ಇದರಲ್ಲಿ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ, ಕಾರ್ಪೊರೇಟ್ ದಾಸ್ತಾನು, ಅಗತ್ಯ ಸರಕುಗಳಂತಹ ಗಂಭೀರ ವಿಷಯಗಳಿವೆ” ಎಂದು ಅವರು ಹೇಳುತ್ತಾರೆ. ಚಳುವಳಿಯ ಡಾಕ್ಯುಮೆಂಟೇಷನ್ ಮತ್ತು ರೈತರೊಂದಿಗಿನ ಸಂದರ್ಶನಗಳು 2018 ರ ಚಲನಚಿತ್ರ ’ಕಿಸಾನ್ ಮುಕ್ತಿ ಮಾರ್ಚ್’ನ ಎರಡನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿವೆ. ಮೊದಲ ಆವೃತ್ತಿ ಕೂಡ ರೈತರ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿತ್ತು. ಸಾಲ ಮನ್ನಾ ಮಾಡುವ ವಿಫಲ ಭರವಸೆಗಳಿಂದ ಹಿಡಿದು ಜಿಎಸ್‌ಟಿಯಿಂದಾಗಿ ಸರಕುಗಳ ಹೆಚ್ಚಿನ ವೆಚ್ಚದವರೆಗಿನ ಸಮಸ್ಯೆಗಳ ಮೇಲೆ ಇದು ಬೆಳಕು ಚೆಲ್ಲಿತ್ತು.

ಶಿವಮೊಗ್ಗದ ಅರುಣ್‌ಕುಮಾರ್…

ಕಲಾವಿದ ಎಚ್.ಜಿ ಅರುಣಕುಮಾರ್ ಸಮಾಜದಲ್ಲಿ ರೈತರು ವಹಿಸುವ ಪಾತ್ರವನ್ನು ಒತ್ತಿಹೇಳಲು ಪುರಾಣಗಳತ್ತ ಮುಖ ಮಾಡಿದ್ದಾರೆ. “ನಾವು ಅನ್ನಪೂರ್ಣಳನ್ನು ಆಹಾರ ಮತ್ತು ಪೋಷಣೆಯ ದೇವತೆಯಾಗಿ ಪೂಜಿಸುವಂತೆಯೇ, ರೈತರು ನಮ್ಮ ಅನ್ನದಾತರು, ಅವರನ್ನು ಆಹಾರ ಪೂರೈಕೆದಾರರು ಎಂದು ಗೌರವಿಸಬೇಕು. ಆಹಾರವು ಮತ್ತೊಂದು ಸರಕಾಗಿ ಮಾರ್ಪಟ್ಟಿದೆ. ನಾವು ಇನ್ನು ಮುಂದೆ ಪ್ರಕೃತಿ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಸದ್ಯ ಗುರುಗ್ರಾಮ್‌ನಲ್ಲಿರುವ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಈ ಕಲಾವಿದ ಹೇಳುತ್ತಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ: ಮಮತಾಗೆ ಮತ್ತೊಂದು ಆಘಾತ!

ಇತ್ತೀಚಿನ ವಾರಗಳಲ್ಲಿ, ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿರುವ ಹಲವಾರು ರೈತರೊಂದಿಗೆ ಅವರು ಸಂವಹನ ನಡೆಸಿದ್ದಾರೆ. ಅವರ ಡಿಜಿಟಲ್ ಪೋಸ್ಟರ್‌ನಲ್ಲಿ ಕೃಷಿ ಬಿಕ್ಕಟ್ಟಿನ ಅಂಶಗಳನ್ನು ಒಟ್ಟುಗೂಡಿಸಿ ಹೋರಾಟದ ಮಹತ್ವವನ್ನು ತಿಳಿಸಿದ್ದಾರೆ. “ರೈತರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಈ ಕೃಷಿ ಸಮಸ್ಯೆಗಳ ಬಗ್ಗೆ ರಾಷ್ಟ್ರವು ಯೋಚಿಸುವ ಸಮಯ ಈಗ ಬಂದಿದೆ. ಈ ಮಸೂದೆ ವಿವಾದಾಸ್ಪದವಾಗಿದೆ” ಎಂದು ಅವರು ಹೇಳುತ್ತಾರೆ.

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರೈತರ ಕುಟುಂಬದಲ್ಲಿ ಬೆಳೆದ 52 ವರ್ಷದ ಅರುಣಕುಮಾರ್, ಮನುಷ್ಯ ಮತ್ತು ಪ್ರಕೃತಿಯ ನಡುವೆ ಒಂದು ಕಾಲದಲ್ಲಿ ಇದ್ದ ಸಾಮರಸ್ಯದ ಸಂಬಂಧವನ್ನು ಕುರಿತು ಮಾತನಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆ ಸಾಮರಸ್ಯ ಹೇಗೆ ನಾಶವಾಗುತ್ತಿದೆ ಎಂಬುದನ್ನು ವಿವರಿಸುತ್ತಾರೆ. ತಳೀಯವಾಗಿ ಮಾರ್ಪಡಿಸಿದ ಬೀಜಗಳ ಪ್ರಭಾವದಿಂದ ಕೃಷಿ ಏಕಸ್ವಾಮ್ಯದವರೆಗೆ; ಅರುಣ್ ತಮ್ಮ ಕೃತಿಯಲ್ಲಿ ಸೆರೆ ಹಿಡಿದಿದ್ದಾರೆ.

“ಬಿಕ್ಕಟ್ಟಿನ ರಕ್ಷಕರು” ಎಂಬ ಭಾವಚಿತ್ರಗಳ ಮೂಲಕ ವೈಯಕ್ತಿಕ ಕಥೆಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಪ್ರಸ್ತುತ ಬಿಕ್ಕಟ್ಟಿನಿಂದ ತೊಂದರೆಗೊಳಗಾದ ಸಣ್ಣ-ಪ್ರಮಾಣದ ರೈತರು, ಅರುಣ್ ಅವರ ಕಲೆ-ಕೃತಿಗಳ ಮುಖ್ಯಪಾತ್ರಗಳಾಗಿದ್ದಾರೆ.

ಬಿಹಾರ್‌ನ ಉಮೇಶ್ ಸಿಂಗ್, ಮಹಾರಾಷ್ಟ್ರದ ಶ್ವೇತಾ ಭತ್ತದ- ಮುಂತಾದ ಕಲಾವಿದರು ತಮ್ಮ ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಯಾವನಾದ್ರು *** ಮಗ ನನ್ನ ಕೇಳಿದ್ದೀರಾ: ರೈತರ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...