Homeಚಳವಳಿಟ್ರಾಕ್ಟರ್‌‌ ರ್‍ಯಾಲಿಯನ್ನು ಶಾಂತಿಯುತವಾಗಿ ನಡೆಸಿಯೆ ತೀರುತ್ತೇವೆ: ಹೋರಾಟ ನಿರತ ರೈತರು

ಟ್ರಾಕ್ಟರ್‌‌ ರ್‍ಯಾಲಿಯನ್ನು ಶಾಂತಿಯುತವಾಗಿ ನಡೆಸಿಯೆ ತೀರುತ್ತೇವೆ: ಹೋರಾಟ ನಿರತ ರೈತರು

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನನ್ನು ವಿರೋಧಿಸಿ ರೈತರು ದೆಹಲಿಯ ಪ್ರಮುಖ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 26 ಗಣರಾಜ್ಯೋತ್ಸವದಂದು ಟ್ರಾಕ್ಟರ್‌ ರ್‍ಯಾಲಿ ನಡೆಸಲು ಉದ್ದೇಶಿಸಿರುವ ರೈತರು, ಅದನ್ನು ಶಾಂತಿಯುತವಾಗಿಯೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

“ರೈತರು ಗಣರಾಜ್ಯೋತ್ಸವವನ್ನು ಭಾರಿ ಸಂಭ್ರನದಿಂದ ಆಚರಿಸಲಿದ್ದಾರೆ. ಟ್ರ್ಯಾಕ್ಟರ್ ಪೆರೇಡ್ ಔಟರ್ ರಿಂಗ್ ರಸ್ತೆಯ ವೃತ್ತದಲ್ಲಿ ಚಲಿಸಲಿದ್ದು, ಇದು ಜನಕ್ಪುರಿ, ಮುನೀರ್ಕಾ, ನೆಹರು ಪ್ಲೇಸ್, ಟಿಕ್ರಿ ಮುಂತಾದ ಪ್ರದೇಶಗಳ ಸುತ್ತಲೂ ಹೋಗುತ್ತದೆ. ದೆಹಲಿ ಮತ್ತು ಹರಿಯಾಣ ಪೊಲೀಸರು ನಮಗೆ ಯಾವುದೇ ತೊಂದರೆ ಅಥವಾ ನಿರ್ಬಂಧಗಳನ್ನು ಉಂಟುಮಾಡುವುದಿಲ್ಲ ಎಂದು ನಾವು ಭಾವಿಸುತ್ತೇವೆ. ನಮ್ಮ ಅತಿದೊಡ್ಡ ಅಸ್ತ್ರ ಅಹಿಂಸೆ ಯಾಕೆಂದರೆ ಇದು ಬಹಳ ಶಾಂತಿಯುತ ಪ್ರತಿಭಟನೆಯಾಗಿದೆ” ಎಂದು ಸಂಯುಕ್ತ್‌ ಕಿಸಾನ್ ಮೋರ್ಚಾದ ನಾಯಕ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ತೀವ್ರಗೊಳ್ಳುತ್ತಿರುವ ರೈತ ಹೋರಾಟ: ಹರಿಯಾಣದ 60 ಗ್ರಾಮಗಳಲ್ಲಿ ಬಿಜೆಪಿಗೆ ಪ್ರವೇಶ ನಿಷೇಧ

ಪ್ರತಿಭಟನಾಕಾರರು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವುದಿಲ್ಲ, ಧ್ವೇಷ ಭಾಷಣಗಳಲ್ಲಿ ಅಥವಾ ಹಿಂಸಾಚಾರದಲ್ಲಿ ಪಾಲ್ಗೊಳ್ಳುವುದಿಲ್ಲ. ರ್‍ಯಾಲಿಯ ಸಮಯದಲ್ಲಿ ಯಾವುದೇ ಸರ್ಕಾರಿ ಕಟ್ಟಡ ಹಾಗೂ ಪ್ರದೇಶವನ್ನು ವಶಪಡಿಸುವುದಾಗಲಿ, ದಾಳಿ ಮಾಡುವುದಾಗಲಿ ಮಾಡುವುದಿಲ್ಲ. ರ್‍ಯಾಲಿಯು ದೆಹಲಿ ಒಂದು ಗಡಿಯಿಂದ ಪ್ರಾರಂಭವಾಗಿ ಅದೇ ಗಡಿಗಳಿಗೆ ಬಂದು ತಲುಪುತ್ತದೆ ಎಂದು ಅವರು ಹೇಳಿದ್ದಾರೆ.

“ರಾಜ್‌ಪತ್‌ನಲ್ಲಿ ನಡೆಯುವ ರಿಪಬ್ಲಿಕ್-ಡೇ ಮೆರವಣಿಗೆಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಅವು ರಾಷ್ಟ್ರೀಯ ಗೌರವದ ಸಂಕೇತಗಳಾಗಿವೆ. ಅವುಗಳಿಗೆ ನಾವು ಹಾನಿ ಮಾಡುವುದಿಲ್ಲ. ನಮ್ಮ ರ್‍ಯಾಲಿಯಲ್ಲಿ ಪ್ರತಿಯೊಂದು ವಾಹನವು ರಾಷ್ಟ್ರಧ್ವಜವನ್ನು ಹೊಂದಿರುತ್ತದೆಯೆ ಹೊರತು ಯಾವುದೇ ರಾಜಕೀಯ ಪಕ್ಷದ ಧ್ವಜಗಳನ್ನು ಇರುವುದಿಲ್ಲ” ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.

ತಮ್ಮ ಮುಂದಿನ ನಡೆಯನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಆದೇಶದ ನಂತರ ರೈತರು ಸೋಮವಾರ ಸಭೆ ನಡೆಸಲಿದ್ದಾರೆ. ಜನವರಿ 19 ರಂದು ಸರ್ಕಾರದೊಂದಿಗೆ ಹತ್ತನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸಲು ರೈತ ಒಕ್ಕೂಟಗಳು ಸಿದ್ಧರಿದ್ದು, ಅಲ್ಲಿ ಅವರು ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೃದು ಧೋರಣೆ ತಳೆಯಿರಿ ಎಂದ ಕೇಂದ್ರ: ರೈತರೊಂದಿಗಿನ 9ನೇ ಸುತ್ತಿನ ಮಾತುಕತೆ ವಿಫಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...