ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ 42ನೇ ಐಪಿಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯಗಳಿಸಿತು. ಆದರೆ ಅದಕ್ಕಿಂತಲೂ ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ತೋರಿದ ಕ್ರೀಡಾಸ್ಫೂರ್ತಿಗೆ ಅಭಿಮಾನಿಗಳು ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ.
ಪಂದ್ಯದ 6ನೇ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಕೊನೆಯ ಬಾಲ್ ಮಾಡಿದರು. ಬ್ಯಾಟಿಂಗ್‌ನಲ್ಲಿದ್ದ ಕ್ರಿಸ್ ಗೇಲ್ ಬಲವಾಗಿ ಹೊಡೆದ ಬಾಲ್ ನಾನ್ ಸ್ಟ್ರೈಕರ್ ಎಂಡ್‌ನಲ್ಲಿದ್ದ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಕೈಗೆ ಬಡಿಯಿತು. ಗಾಯಗೊಂಡ ರಾಹುಲ್ ಒಂದು ಕ್ಷಣ ವಿಚಲಿತರಾದರು. ಅಷ್ಟರಲ್ಲಿ ಕೃನಾಲ್ ಬಾಲ್ ಅನ್ನು ವಿಕೆಟ್‌ಗೆ ಮುಟ್ಟಿಸಿ ರನ್ ಔಟ್ ಮನವಿ ಮಾಡಿದರು. ಅಂಪೈರ್ ಮೂರನೇ ಅಂಪೈರ್‌ಗೆ ರೆಫರ್ ಮಾಡಿದರು. ಆದರೆ ರಾಹುಲ್ ಗಾಯಗೊಂಡಿದ್ದನ್ನು ಗಮನಿಸಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡಲೇ ರನ್ ಔಟ್ ಮನವಿ ರದ್ದುಗೊಳಿಸಿದರು. ಕೃನಾಲ್ ಪಾಂಡ್ಯ ಸಹ ಅದಕ್ಕೆ ಸಹಮತ ವ್ಯಕ್ತಪಡಿಸಿ ರನ್ ಔಟ್ ಮನವಿ ಹಿಂಪಡೆದರು. ಈ ರೀತಿ ಕ್ರೀಡಾಸ್ಫೂರ್ತಿ ಮೆರೆದ ರೋಹಿತ್ ಶರ್ಮಾ ಮತ್ತು ಕೃನಾಲ್ ಪಾಂಡ್ಯರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
— Simran (@CowCorner9) September 28, 2021
ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಲ್ ರಾಹುಲ್ ಥಂಬ್ಸ್ ಅಪ್ ಮಾಡುವ ಮೂಲಕ ಕೃತಜ್ಞತೆ ತೋರಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Sportsmanship at it's best ❤️
Brilliant spirit of the game from Krunal Pandya & Rohit Sharma.
Didn't appeal for the run out.
Rahul thanks Rohit for it ?@klrahul11 • #Respect pic.twitter.com/G2guMA7Roa— Juman (@cool_rahulfan) September 28, 2021
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 136 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಂತರ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ 6 ವಿಕೆಟ್‌ಗಳ ಜಯ ಪಡೆಯಿತು.
ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡವನ್ನು ‘ದಂಡುಪಾಳ್ಯದ ದಂಡಪಿಂಡ’ಗಳು ಎಂದ ದಿಗ್ವಿಜಯ ನ್ಯೂಸ್?: ಆಕ್ರೋಶ