Homeಕರ್ನಾಟಕಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಸಭೆ ವಿಫಲ; ಹೋರಾಟ ತೀವ್ರಗೊಳಿಸಲು ನಿರ್ಧಾರ

ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಸಭೆ ವಿಫಲ; ಹೋರಾಟ ತೀವ್ರಗೊಳಿಸಲು ನಿರ್ಧಾರ

- Advertisement -
- Advertisement -

ಒಳ ಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಶೇಕಡ 1ರಷ್ಟು ಮೀಸಲಾತಿ ಕೊಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ (ಆ.23) ನಡೆದ ಸಭೆ ವಿಫಲಗೊಂಡಿದೆ.

ಅಲೆಮಾರಿ ಜನಾಂಗದ ಮುಖಂಡರು, ಹೋರಾಟಗಾರರು ಮತ್ತು ಚಿಂತಕರುಗಳ ಜೊತೆ ಕಾವೇರಿ ನಿವಾಸದಲ್ಲಿ ಸಿಎಂ ಸಭೆ ನಡೆಸಿದ್ದು, ಪ್ರತ್ಯೇಕ ಮೀಸಲಾತಿ ಕಲ್ಪಿಸಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಸಭೆಯಲ್ಲಿ ಬೇಡಿಕೆ ಈಡೇರದ ಹಿನ್ನೆಲೆ ಹೋರಾಟ ಮುಂದುವರಿಸಲು ಅಲೆಮಾರಿ ಸಮುದಾಯದ ಮುಖಂಡರು ಮತ್ತು ಇತರ ಹೋರಾಟಗಾರರು ತೀರ್ಮಾನಿಸಿದ್ದಾರೆ.

ಶೇ. 1ರಷ್ಟು ಒಳ ಮೀಸಲಾತಿ ಪಡೆಯುವವರೆಗೂ, ‘ಎ’ ಗುಂಪಿನಲ್ಲಿ ಸೇರಿಸುವವರೆಗೂ ಹೋರಾಟ ಮುಂದುವರೆಯುತ್ತದೆ. ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಅಲೆಮಾರಿಗಳನ್ನು ಮೀಸಲಾತಿಯಿಂದ ವಂಚಿಸುವ ಅನ್ಯಾಯ ಮಾಡಿದ ಸಚಿವ ಸಂಪುಟದ ಎಲ್ಲಾ ಮಂತ್ರಿಗಳಿಗೆ ಪ್ರತಿಭಟನಾ ಹಕ್ಕೊತ್ತಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಸಿಎಂ ಸಭೆ ಬಳಿಕ ಹೇಳಿಕೆ ನೀಡಿರುವ ಅಲೆಮಾರಿ ಸಮುದಾಯದ ಮುಖಂಡ ಚಾವಡೆ ಲೋಕೇಶ್‌ ಗೋಸಂಗಿ, “ಹೋರಾಟದ ಮಾದರಿ ಬದಲಿಸೋಣ. ನಮ್ಮ ಕಷ್ಟ ಜನರಿಗೆ ಗೊತ್ತಾಗಲಿ. ಅಲೆಮಾರಿಗಳು ವಾಪಸ್‌ ಹೋರಾಟಕ್ಕೆ ಬರುವಾಗ ಟೆಂಟ್‌ಗಳು, ಕೌದಿಗಳನ್ನು ತನ್ನಿ. ಫ್ರೀಡಂ ಪಾರ್ಕ್‌ನಲ್ಲಿ ಟೆಂಟ್‌ ಹಾಕಿ ಇಲ್ಲಿಯೇ ಊಟ ಮಾಡಿಕೊಂಡು ಜೀವನ ಮಾಡೋಣ. ತಂಗಡಗಿಯಂತಹ ಸಚಿವರಿಗೆ ಹಸಿದಿದ್ದರೆ ಅವರಿಗೂ ಊಟ ಹಾಕೋಣ. ನಾವು ನ್ಯಾಯ ಪಡೆದೇ ವಾಪಸ್‌ ಹೋಗೋಣ” ಎಂದು ಸಮುದಾಯಕ್ಕೆ ಕರೆ ಕೊಟ್ಟಿದ್ದಾರೆ.

ಒಳ ಮೀಸಲಾತಿ ಹೋರಾಟಗಾರ ಪ್ರೊ. ಎ.ಎಸ್ ಪ್ರಭಾಕರ್ ಹೇಳಿಕೆ ನೀಡಿ ” ಮುಖ್ಯಮಂತ್ರಿಗಳ ಬಗ್ಗೆ ನಮಗೆ ಭರವಸೆ ಇತ್ತು. ಆದರೆ, ಅವರ ಮಾತಿನಲ್ಲಿ ವಿಷಾದ, ಹತಾಶೆ ಇತ್ತು. ಅವರಂತಹ ಗಟ್ಟಿ ಸೈದ್ಧಾಂತಿಕ ರಾಜಕಾರಣಿ ಇವತ್ತು ಹತಾಶೆಗೆ ಒಳಗಾಗಿದ್ದಾರೆ ಎಂದರೆ ದೊಡ್ಡ ದೊಡ್ಡ ಲಾಬಿಗಳು ಅವರನ್ನು ಮಣಿಸುತ್ತಿವೆ” ಎಂದಿದ್ದಾರೆ.

“ನಾವು ಹೋರಾಟ ಮುಂದುವರೆಸಬೇಕು. ಆದರೆ, ಅಲೆಮಾರಿಗಳು ಶೇ. 90ರಷ್ಟು ಜನರು ಕೂಲಿ ಕಾರ್ಮಿಕರು. ಅವರು ಬೆಂಗಳೂರಿಗೆ ಬರುವುದು ಬಹಳ ಕಷ್ಟ. ಹಾಗಾಗಿ, ನಮ್ಮ ನಮ್ಮ ಜಿಲ್ಲೆಗಳಲ್ಲಿ ಹೋರಾಟ ಮುಂದುವರೆಸೋಣ” ಎಂದು ಸಮುದಾಯಕ್ಕೆ ಕರೆ ಕೊಟ್ಟಿದ್ದಾರೆ.

“ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪಿನ ದೊಡ್ಡ ಬಲವಿದೆ. ಸಂವಿಧಾನದ ಬಲವಿದೆ. ಕೋರ್ಟ್‌ಗೆ ಹೋಗುವುದು ಸೇರಿದಂತೆ ಇನ್ನೂ ಯಾವ ಯಾವ ಸಾಧ್ಯತೆಗಳಿವೆ ಎಂಬುದನ್ನು ಪರಿಶೀಲಿಸುತ್ತೇವೆ. ನಮ್ಮವರು ಯಾರೂ ಕೂಡ ಹತಾಶರಾಗಬಾರದು. 101 ಸಮುದಾಯಗಳು ನಮ್ಮ ಸಹೋದರರು. ಇದೊಂದು ಸಣ್ಣ ದಾಯಾದಿ ಕಲಹ ಅಷ್ಟೇ. ನಾವು ಯಾರನ್ನೂ ದೂಷಿಸಬಾರದು. ಐಕ್ಯತೆ ಬಹಳ ಮುಖ್ಯ. ನಾವು ಅಲೆಮಾರಿಗಳು ಈ ವ್ಯವಸ್ಥೆಯ ಅಂತರಾತ್ಮವನ್ನು ಕಲಕುತ್ತೇವೆ. ನಮ್ಮ ಅನ್ನ ಕಸಿದುಕೊಂಡ ಪ್ರತಿಯೊಬ್ಬರ ಹೃದಯವನ್ನು ಕಾಡುತ್ತೇವೆ” ಎಂದು ಹೇಳಿದ್ದಾರೆ.

ಒಳ ಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್‌ ಹೇಳಿಕೆ ನೀಡಿ “ನಾವು ಸೋತಿದ್ದೇವೆ ಎಂಬುದು ಸುಳ್ಳು. ದಯವಿಟ್ಟು ಯಾರೂ ನಿರಾಶರಾಗಬೇಡಿ. ನಾವು 11ನೇ ತಾರೀಖು ಹೋರಾಟಕ್ಕೆ ಕೂತಾಗ ಕೆಲವರು ಮುಖ್ಯವಾಗಿ ರಾಜಕಾರಣಿಗಳು ಇದು ಆಗುವ ಮಾತಲ್ಲ, ಹೋರಾಟ ಕೈಬಿಡಿ ಎಂದರು. ಮಳೆ, ಗಾಳಿ, ಚಳಿ ಎಂದು ಹೆದರಿಸಿದರು, ಜನ ಬರುವುದಿಲ್ಲ ಎಂದರು. ಆದರೆ, ಕೊನೆಗೆ ಏನಾಯಿತು. ಸರ್ಕಾರದ ಮೇಲೆ ಒತ್ತಡ ತಂದು ಒಳ ಮೀಸಲಾತಿ ಜಾರಿಗೊಳಿಸಿದ್ದೀವಿ. ಆದರೆ, 6%  ನಮಗೆ ಸಮಾಧಾನ ತಂದಿಲ್ಲ. ನಾವು ಸಂತಸಪಟ್ಟಿಲ್ಲ. ನಾವು 35 ವರ್ಷ ಹೋರಾಡಿದ್ದು ಇದಕ್ಕೆ ಮಾತ್ರವೇ? ಅಲೆಮಾರಿಗಳನ್ನು ಮರೆತುಬಿಡಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ.

“ನಾಗಮೋಹನ್‌ ದಾಸ್‌ರವರು ಸಹ ಕಣ್ಣೀರು ಹಾಕುತ್ತಿದ್ದಾರೆ. ನಾನಂದುಕೊಂಡ ಸಮುದಾಯಕ್ಕೆ ನ್ಯಾಯ ಕೊಡಲು ಸಾಧ್ಯವಾಗಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ. ಅವರು ವೇತನ ಪಡೆಯದೇ ಕೆಲಸ ಮಾಡಿದ್ದಾರೆ. ನಾವು ಹೋರಾಟ ಮುಂದುವರೆಸೋಣ. ಹೋರಾಟದ ಟೆಂಟ್‌ ಮುಂದುವರೆಯುತ್ತದೆ. ಪ್ರತಿದಿನ 50 ಜನ ಇದ್ದು ಹೋರಾಟ ಮುಂದುವರೆಸೋಣ. ಬಾಬಾ ಸಾಹೇಬರು ಹೇಳಿದಂತೆ ಮಹಾತ್ಮರು ಬರುವರು, ಮಹಾತ್ಮರು ಹೋಗುವರು. ಮಂತ್ರಿಗಳು ಬಂದು ಹೋಗುವರು ಯಾರೂ ಉದ್ದಾರ ಮಾಡುವುದಿಲ್ಲ. ನಿಮ್ಮ ಉದ್ಧಾರ ನಿಮ್ಮ ಕೈಯಲ್ಲಿದೆ ಎಂದು ಹೇಳಿದ್ದಾರೆ. ಹಾಗಾಗಿ ನಮ್ಮ ಹೋರಾಟವೇ ನಮಗೆ ಹಕ್ಕು ಕೊಡಿಸುತ್ತದೆ” ಎಂದಿದ್ದಾರೆ.

“ಪೂನಾ ಒಪ್ಪಂದ ಆದಾಗ ಬಾಬಾ ಸಾಹೇಬರು ಸೋತರೆ? ಹತಾಶರಾಗಿ ಕೈಬಿಟ್ಟರೆ? ಇಲ್ಲ ಅವರು ಹೋರಾಟ ಮುಂದುವರೆಸಿ ನಮಗೆಲ್ಲ ಮೀಸಲಾತಿ ಕೊಡಲಿಲ್ಲವೇ? ಅದೇ ರೀತಿ ಒಳ ಮೀಸಲಾತಿಗಾಗಿಯೂ ಯಾವ ಸರ್ಕಾರ, ಯಾವ ರಾಜಕಾರಣಿಗಳು ಮಾಡದ್ದನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮೂಲಕ ಜಾರಿ ಮಾಡಿಸಿಕೊಂಡಿದ್ದೀವಿ. 370ಜೆ, ಒಳ ಮೀಸಲಾತಿ ಎಲ್ಲವೂ ಸಂವಿಧಾನದ ಮೂಲಕ ಜಾರಿಯಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪು ಸತ್ತಿಲ್ಲ. ಅದನ್ನು ಇಟ್ಟುಕೊಂಡು ಕಾನೂನು ಹೋರಾಟ ಸಹ ಮಾಡೋಣ. 1% ಮೀಸಲಾತಿ ನಮಗೆ ದಕ್ಕೆ ದಕ್ಕುತ್ತದೆ. ನಮ್ಮ ಪರವಾಗಿ ಪ್ರೊ.ಹರಗೋಪಾಲ್‌ ನಮ್ಮ ಹೋರಾಟಕ್ಕೆ ಬೆಂಬಲ ಘೋಷಿಸಿ ಇಲ್ಲಿಗೆ ಬರುತ್ತಿದ್ದಾರೆ. ಮೀಸಲಾತಿ ನಮ್ಮ ಭಿಕ್ಷೆಯಲ್ಲ, ಹಕ್ಕು ಎಂದು ಸಾರಿದ್ದಾರೆ. ಪ್ರೊ.ಸಾಯಿಬಾಬಾರವರು ಎಷ್ಟು ಹೋರಾಟ ಮಾಡಿದ್ದಾರೆ? ಪಾಪಾ ಅವರನ್ನು ಜೈಲಿಗೆ ಹಾಕಿದರೂ ಹೋರಾಟ ಬಿಡಲಿಲ್ಲ. ಹಾಗಾಗಿ ನಾವು ಹತಾಶರಾಗುವುದು ಬೇಡ. ನಿಮ್ಮ ಕೈಮುಗಿದು ಹೇಳುತ್ತೇನೆ, ನಿರಾಶರಾಗಬೇಡಿ, ಜೊತೆಗೂಡಿ ಹೋರಾಡೋಣ ಬನ್ನಿ” ಎಂದು ಕರೆ ಕೊಟ್ಟಿದ್ದಾರೆ.

ಒಳ ಮೀಸಲಾತಿ ಹೋರಾಟಗಾರ ಸಣ್ಣ ಮಾರಣ್ಣ ಹೇಳಿಕೆ ನೀಡಿ, “ಈ ರಾಜ್ಯದ ದುರ್ಬಲ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. ನಾವು ಅವರನ್ನು ಧೀಮಂತ ನಾಯಕ ಎಂದುಕೊಂಡಿದ್ದೆವು. ಆದರೆ, ಇವತ್ತು ಕೆಲವರ ಬಲಾಢ್ಯರ ಒತ್ತಡಕ್ಕೆ ರಾಜ್ಯದ ಮುಖ್ಯಮಂತ್ರಿ ಮಣಿದಿದ್ದಾರೆ. ಆದರೆ, ನಾವು ಕುಗ್ಗಬಾರದು, ಹೋರಾಟ ಮುಂದುವರೆಸೋಣ” ಎಂದಿದ್ದಾರೆ.

ಇನ್ನೊಬ್ಬರು ಒಳ ಮೀಸಲಾತಿ ಹೋರಾಟಗಾರ ವೀರೇಶ್‌ ಹೇಳಿಕೆ ನೀಡಿ “ನನಗೆ ಮಾತೇ ತೋಚುತ್ತಿಲ್ಲ. ನನ್ನ ಎರಡು ವರ್ಷದ ಅವಧಿಯಲ್ಲಿ ಕುಟುಂಬದಿಂದ ಹೊರಗಿದ್ದು ಒಳ ಮೀಸಲಾತಿಯ ಹೋರಾಟಕ್ಕೆ ಮೀಸಲಿಟ್ಟಿದ್ದೆ. ಈ ಹಿಂದೆಯೇ ನಾಗಮೋಹನ್‌ ದಾಸ್‌ರವರಿಗೆ 3% ಮೀಸಲಾತಿ ಕೊಡಬೇಕೆಂದು ಮನವಿ ಕೊಟ್ಟಿದ್ದೆವು. ಅವರು ಸೂಕ್ತ ದತ್ತಾಂಶದೊಂದಿಗೆ ಉತ್ತಮ ವರ್ಗೀಕರಣ ಮಾಡಿ ವರದಿ ನೀಡಿದ್ದರು. 59 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಮಾಡಿ 1% ಮೀಸಲಾತಿ ನಿಗದಿ ಮಾಡಿದ್ದರು. ಆದರೆ, ಸರ್ಕಾರ ಅಲೆಮಾರಿಗಳಿಗೆ ಅನ್ಯಾಯ ಮಾಡಿ ನಮ್ಮಿಂದ 1% ಕಿತ್ತುಕೊಂಡಿದೆ. ನಮಗೆ ಶಿಕ್ಷಣ, ಉದ್ಯೋಗ, ಮನೆ, ಬಂಡವಾಳ ಇಲ್ಲದೇ ನಮಗೆ ಮರಣಶಾಸನ ಬರೆಯಲಾಗಿದೆ. ಮುಖ್ಯಮಂತ್ರಿಗಳು ಒತ್ತಡಕ್ಕೆ ಮಣಿದು ನಮ್ಮ ಕತ್ತು ಕುಯ್ದಿದ್ದಾರೆ. ನಮ್ಮನ್ನು ಮತ್ತೆ ಜೀತಕ್ಕೆ, ಭಿಕ್ಷೆಗೆ ಕಳಿಸುತ್ತಿದ್ದಾರೆ. ಮಾನವೀಯತೆ, ಮನುಷ್ಯತ್ವ ಸರ್ಕಾರಕ್ಕೆ ಇದ್ದಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. ನಾವು ಹೋರಾಟವನ್ನು ಮುಂದುವರೆಸುತ್ತೇವೆ. ನಾವು ಸುಪ್ರೀಂ ಕೋರ್ಟ್‌ ಕದ ತಟ್ಟಿ ನ್ಯಾಯ ಪಡೆಯೋಣ” ಎಂದು ಬೇಸರ ಹೊರ ಹಾಕಿದ್ದಾರೆ.

“1% ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅಲೆಮಾರಿಗಳಿಗೆ ವಿಶೇಷ ಮಂಡಳಿ ರಚನೆ ಮಾಡಬಹುದು, ಅನುದಾನ ಕೊಡಬಹುದು ಇತ್ಯಾದಿ ಹೇಳಿದ್ದಾರೆ. ಅದಕ್ಕೆ ನಾವು ಒಪ್ಪಿಲ್ಲ. ನಮಗೆ ವರ್ಗೀಕರಣವೇ ಬಹಳ ಮುಖ್ಯ ಎಂದು ಪಟ್ಟು ಹಿಡಿದೆವು. ಕಟ್ಟಕಡೆಯ ಅಲೆಮಾರಿ ಜನರು ನೋವಿನಲ್ಲಿರುವಾಗ ಖುಷಿಯ ಮಾತೆಲ್ಲಿ?” ಎಂದು ಒಳ ಮೀಸಲಾತಿ ಹೋರಾಟಗಾರ ಬಾಲಗುರುಮೂರ್ತಿ ಪ್ರಶ್ನಿಸಿದ್ದಾರೆ.

ಆಗಸ್ಟ್ 19ರಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ನ್ಯಾ.ನಾಗಮೋಹನ್‌ ದಾಸ್ ಅವರ ಒಳ ಮೀಸಲಾತಿ ವರದಿಯನ್ನು ಅಂಗೀಕರಿಸಿರುವ ಸರ್ಕಾರ, ಎಡಗೈ, ಬಲಗೈಗೆ ತಲಾ ಶೇ 6, ಕೊಲಂಬೋ, ಅಲೆಮಾರಿಗಳಿಗೆ ಶೇ. 5 ಮೀಸಲಾತಿ ಘೋಷಿಸಿದೆ. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ 1 ಶೇ. ಮೀಸಲಾತಿ ಪ್ರಸ್ತಾಪಿಸಿದ್ದರೂ, ಸರ್ಕಾರ ಅವರನ್ನು ಕೊಲಂಬೋ ಜೊತೆ ಸೇರಿಸಿ ಅನ್ಯಾಯ ಮಾಡಿದೆ ಎಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಹೋರಾಟ ನಡೆಯುತ್ತಿದೆ.

ದೂರುದಾರನನ್ನು ಬಂಧಿಸಲಾಗಿದೆ, ಹೆಚ್ಚಿನ ಮಾಹಿತಿ ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ: ಪರಮೇಶ್ವರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...