ಲೈಂಗಿಕ ದೌರ್ಜನ್ಯ ಆರೋಪ: ಕೊಯಮತ್ತೂರಿನಲ್ಲಿ ಐಎಎಫ್ ಅಧಿಕಾರಿ ಬಂಧನ

ಭಾರತೀಯ ವಾಯುಪಡೆಯ 26 ವರ್ಷದ ಫ್ಲೈಟ್ ಲೆಫ್ಟಿನೆಂಟ್‌ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 27 ವರ್ಷದ ಮಹಿಳಾ ಅಧಿಕಾರಿಯೊಬ್ಬರು ದೂರು ನೀಡಿದ ಬಳಿಕ ಐಎಎಫ್ ಅಧಿಕಾರಿ ಅನ್ನು ಪೊಲೀಸರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಿದ್ದಾರೆ.

ಎರಡು ವಾರಗಳ ಹಿಂದೆ ತಾನು ನೀಡಿದ ದೂರಿನ ಬಗ್ಗೆ ಐಎಎಫ್ ತೆಗೆದುಕೊಂಡ ಕ್ರಮದಿಂದ ತೃಪ್ತಿ ಹೊಂದಿರದ ಕಾರಣ ತಾನು ಪೋಲಿಸ್‌ ಬಳಿ ಹೋಗಬೇಕಾಯಿತು ಎಂದು ಸಂತ್ರಸ್ತೆ ಹೇಳಿದ್ದಾರೆ.

ಕೊಯಮತ್ತೂರಿನ ರೆಡ್‌ಫೀಲ್ಡ್ಸ್‌ನಲ್ಲಿರುವ ವಾಯುಪಡೆ ಆಡಳಿತದ ಏರ್ ಫೋರ್ಸ್ ಕಾಲೇಜಿನಲ್ಲಿ ತನ್ನ ಕೊಠಡಿಯೊಳಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದ್ದಾರೆ. ಆಕೆ ಏರ್ ಫೋರ್ಸ್ ತರಬೇತಿಗಾಗಿ ಹೋಗಿದ್ದರು.

ಇದನ್ನೂ ಓದಿ: ಭಾರತ್ ಬಂದ್: ರೈತರ ಕರೆಗೆ ಸಂಪೂರ್ಣ ಬೆಂಬಲ ಸೂಚಿಸಿದ ಪಕ್ಷಗಳ ಪಟ್ಟಿ ಇಲ್ಲಿದೆ

ಸಂತ್ರಸ್ತೆಯ ಹೇಳಿಕೆಯ ಪ್ರಕಾರ,  ತರಬೇತಿ ಸಮಯದಲ್ಲಿ ಆಟವಾಡುತ್ತಿದ್ದಾಗ ಗಾಯ ಮಾಡಿಕೊಂಡಿದ್ದರು, ತಮ್ಮ ಕೋಣೆಯಲ್ಲಿ ಮಲಗುವ ಮುನ್ನ ಕೆಲವು ಔಷಧಿಗಳನ್ನು ತೆಗೆದುಕೊಂಡಿದ್ದರು. ನಿದ್ದೆಯಿಂದ ಎಚ್ಚೆತ್ತ ಬಳಿಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತಿಳಿಯಿತು ಎಂದಿದ್ದಾರೆ.

ವಾಯುಪಡೆಯು ತನ್ನ ದೂರನ್ನು ನಿರ್ವಹಿಸಿದ ಕ್ರಮದ ಬಗ್ಗೆ ಅತೃಪ್ತಿ ಇದೆ ಎಂದು ಮಹಿಳಾ ಅಧಿಕಾರಿ ತಿಳಿಸಿದ ಬಳಿಕ ನಾವು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಯಮತ್ತೂರು ನಗರದ ಗಾಂಧಿಪುರಂ ಪೊಲೀಸ್ ಠಾಣೆಯ ಮಹಿಳಾ ತಂಡವು ಪ್ರಾಥಮಿಕ ತನಿಖೆಯನ್ನು ನಡೆಸಿದೆ.  ಜಿಲ್ಲಾ ನ್ಯಾಯಾಧೀಶರಿಗೆ ಶರಣಾಗಿದ್ದ ಬಂಧಿತ ಅಧಿಕಾರಿ ಛತ್ತೀಸ್‌ಗಢ ಮೂಲದವರಾಗಿದ್ದು, ಆರೋಪಿಯನ್ನು ಉಡುಮಲಪೇಟೆ ಜೈಲಿಗೆ ಕಳುಹಿಸಲಾಗಿದೆ.

ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತನಿಖೆ ನಡೆಸುವ ಅಧಿಕಾರ ಪೊಲೀಸರಿಗೆ ಇಲ್ಲ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ. ಇಂತಹ ಪ್ರಕರಣಗಳನ್ನು ರಕ್ಷಣಾ ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆ ನಡೆಸಬಹುದು ಎಂದು ವಕೀಲರು ಹೇಳಿದ್ದಾರೆ.

ಇತ್ತಿಚೆಗಷ್ಟೇ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಮೂವರು ಕಾಮುಕರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಆರೋಪಿಸಿದ್ದು, ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.


ಇದನ್ನೂ ಓದಿ: ಮಧ್ಯಪ್ರದೇಶ: ಮಹಿಳಾ ಕಾನ್‌ಸ್ಟೇಬಲ್ ಮೇಲೆ ಅತ್ಯಾಚಾರ-ಇಬ್ಬರ ಬಂಧನ

LEAVE A REPLY

Please enter your comment!
Please enter your name here