Homeಮುಖಪುಟ'ಪ್ರಶಸ್ತಿಗಳಿಗಿಂತ ದುಃಖವು ಹೆಚ್ಚು ಭಾರವಾಗಿದೆ…'; ಪದ್ಮಶ್ರೀ ಮರಳಿಸಿದ ಬಜರಂಗ್ ಪುನಿಯಾ

‘ಪ್ರಶಸ್ತಿಗಳಿಗಿಂತ ದುಃಖವು ಹೆಚ್ಚು ಭಾರವಾಗಿದೆ…’; ಪದ್ಮಶ್ರೀ ಮರಳಿಸಿದ ಬಜರಂಗ್ ಪುನಿಯಾ

- Advertisement -
- Advertisement -

ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್ಐ‌) ಸಂಸ್ಥೆಗೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಆಯ್ಕೆಯಾದ ನಂತರ ಕೇಂದ್ರ ಸರ್ಕಾರದ ವಿರುದ್ಧ ದೇಶದ ಅಥ್ಲೀಟ್‌ಗಳ ಅಸಮಾಧಾನ ಹೆಚ್ಚಾಗಿದ್ದು, ಇಂದು ಪ್ರಧಾನಿ ಮೋದಿ ಅವರಿಗೆ ಒಲಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಪತ್ರ ಬರೆದು, ‘ನಾನು ಪ್ರಶಸ್ತಿಗಳನ್ನು ಪಡೆದಾಗ ಮೋಡದಲ್ಲಿ ತೇಲುತ್ತಿದ್ದೆ. ಆದರೆ ಇಂದು ದುಃಖವು ಹೆಚ್ಚು ಭಾರವಾಗಿದೆ. ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಬ್ರಿಜ್ ಭೂಷಣ್ ಅವರಿಂದ ಮಹಿಳಾ ಅಥ್ಲೀಟ್‌ಗಳಿಗೆ ಅನ್ಯಾಯವಾಗಿದೆ ಎಂಬ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿರುವ ಪುನಿಯಾ, ‘ಪ್ರೀತಿಯ ಪ್ರಧಾನಿಯವರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ. ನೀವು ಅನೇಕ ಕೆಲಸಗಳಲ್ಲಿ ನಿರತರಾಗಿದ್ದೀರಿ. ಆದರೆ, ದೇಶದ ಕುಸ್ತಿಪಟುಗಳತ್ತ ನಿಮ್ಮ ಗಮನವನ್ನು ಸೆಳೆಯಲು ನಾನು ಈ ಪತ್ರ ಬರೆಯುತ್ತಿದ್ದೇನೆ. ದೇಶದ ಮಹಿಳಾ ಕುಸ್ತಿಪಟುಗಳು ಜನವರಿಯಲ್ಲಿ ಆರಂಭಿಸಿದ್ದ ಪ್ರತಿಭಟನೆ ಕುರಿತು ನೀವು ತಿಳಿದಿರಬೇಕು. ಇದೇ ವರ್ಷ ಬ್ರಿಶ್ ಭೂಷಣ್ ಸಿಂಗ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ನಾನು ಕೂಡ ಅವರ ಪ್ರತಿಭಟನೆಗೆ ಸೇರಿಕೊಂಡಿದ್ದೆ. ಸರ್ಕಾರವು ಕಠಿಣ ಕ್ರಮದ ಭರವಸೆ ನೀಡಿದ ನಂತರ ನಾವು ನಮ್ಮ ಹೋರಾಟವನ್ನು ವಾಪಸ್ ಪಡೆದೆವು’ ಎಂದು ಹೇಳಿದ್ದಾರೆ.

‘ಪ್ರತಿಭಟನೆ ವಾಪಸ್ ಪಡೆದ ಮೂರು ತಿಂಗಳ ನಂತರವೂ ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿರಲಿಲ್ಲ. ನಾವು ಮತ್ತೆ ಏಪ್ರಿಲ್‌ನಲ್ಲಿ ಬೀದಿಗಿಳಿದಿದ್ದರಿಂದ ಪೊಲೀಸರು ಅವರ ವಿರುದ್ಧ ಕೇವಲ ಒಂದೇಒಂದು ಎಫ್ಐಆರ್ ದಾಖಲಿಸಿದ್ದಾರೆ. ಜನವರಿಯಲ್ಲಿ 19 ದೂರುದಾರರಿದ್ದರು, ಆದರೆ, ಏಪ್ರಿಲ್ ವೇಳೆಗೆ ಅವರ ಸಂಖ್ಯೆ 7ಕ್ಕೆ ಇಳಿದಿದೆ. ಇದರರ್ಥ ಬ್ರಿಜ್ ಭೂಷಣ್ ಅವರು 12 ಮಹಿಳಾ ಕುಸ್ತಿಪಟುಗಳ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದಾರೆ’ ಎಂದು ಪುನಿಯಾ ಬೇಸರ ವ್ಯಕ್ತಪಡಿಸಿದ್ದಾರೆ.

‘ನಮ್ಮ ಪ್ರತಿಭಟನೆ 40 ದಿನಗಳ ಕಾಲ ನಡೆಯಿತು. ಆ ದಿನಗಳಲ್ಲಿ ನಮ್ಮ ಮೇಲೆ ಹೆಚ್ಚಿನ ಒತ್ತಡವಿತ್ತು. ನಾವು ಗಂಗಾ ನದಿಯಲ್ಲಿ ನಮ್ಮ ಪದಕಗಳನ್ನು ಮುಳುಗಿಸಲು ಹೋದಾಗ ನಮ್ಮನ್ನು ರೈತ ಮುಖಂಡರು ತಡೆದರು. ಆ ಸಮಯದಲ್ಲಿ ನಿಮ್ಮ ಸಂಪುಟದ ಜವಾಬ್ದಾರಿಯುತ ಮಂತ್ರಿಯೊಬ್ಬರು ಕರೆ ಮಾಡಿ, ನಮಗೆ ನ್ಯಾಯದ ಭರವಸೆ ನೀಡಿದ್ದರು. ಈ ಮಧ್ಯೆ, ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ. ಅವರೂ ಸಹ ನಮಗೆ ನ್ಯಾಯದ ಭರವಸೆ ನೀಡಿದರು. ಆದ್ದರಿಂದ ನಾವು ನಮ್ಮ ಪ್ರತಿಭಟನೆಯನ್ನು ನಿಲ್ಲಿಸಿದ್ದೇವೆ’ ಎಂದು ವಿವರಿಸಿದ್ದಾರೆ.

‘ಆದರೆ, ಡಿಸೆಂಬರ್ 21 ರಂದು ನಡೆದ ಡಬ್ಲ್ಯುಎಫ್ಐ ಚುನಾವಣೆಯಲ್ಲಿ ಫೆಡರೇಶನ್ ಮತ್ತೊಮ್ಮೆ ಬ್ರಿಜ್ ಭೂಷಣ್ ಅಧೀನಕ್ಕೆ ಬಂದಿದೆ. ಅವರು ಎಂದಿನಂತೆ ಫೆಡರೇಶನ್ ಮೇಲೆ ಮೇಲುಗೈ ಸಾಧಿಸುತ್ತಾರೆ ಎಂದು ಹೇಳಿದ್ದಾರೆ. ತೀವ್ರ ಒತ್ತಡಕ್ಕೆ ಒಳಗಾದ ಸಾಕ್ಷಿ ಮಲಿಕ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು’ ಎಂದು ಹೇಳಿದ್ದಾರೆ.

‘ನಾವೆಲ್ಲರೂ ನಿನ್ನೆ ರಾತ್ರಿಯಿಡೀ ಕಣ್ಣೀರಿನಲ್ಲಿ ಕಳೆದಿದ್ದೇವೆ. ನಮಗೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ಅರ್ಥವಾಗಲಿಲ್ಲ. ಸರ್ಕಾರ ನಮಗೆ ಸಾಕಷ್ಟು ನೀಡಿದೆ; 2019 ರಲ್ಲಿ ನನಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ನಾನು ಅರ್ಜುನ, ಖೇಲ್ ರತ್ನ ಪ್ರಶಸ್ತಿಯನ್ನು ಸಹ ಸ್ವೀಕರಿಸಿದ್ದೇನೆ. ನಾನು ಈ ಪ್ರಶಸ್ತಿಗಳನ್ನು ಪಡೆದಾಗ ನಾನು ಮೋಡದಲ್ಲಿ ತೇಲುತ್ತಿದ್ದೆ. ಆದರೆ ಇಂದು ದುಃಖವು ಹೆಚ್ಚು ಭಾರವಾಗಿದೆ. ಮುಖ್ಯವಾಗಿ, ಮಹಿಳಾ ಕುಸ್ತಿಪಟು ತನ್ನ ಭದ್ರತೆ ಕಾರಣಕ್ಕೆ ಕ್ರೀಡೆಯನ್ನು ತೊರೆದಿರುವುದೂ ಒಂದು ಕಾರಣ’ ಎಂದು ಬಜರಂಗ್ ಬರೆದಿದ್ದಾರೆ.

ಇದನ್ನೂ ಓದಿ; ‘ನಾನು ವಿಡಿಯೋ ಮಾಡಿದ್ದರ ಬಗ್ಗೆ ಮಾತನಾಡುತ್ತಿರುವ ಮಾಧ್ಯಮಗಳು ನಿರುದ್ಯೋಗದ ಕುರಿತು ಚರ್ಚಿಸುತ್ತಿಲ್ಲ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...