Homeಮುಖಪುಟಸ್ಪಾ ಮ್ಯಾನೇಜರ್‌‌ ಮತ್ತು ಗ್ರಾಹಕನಿಂದ ಉದ್ಯೋಗಿಯ ಮೇಲೆ ಸಾಮೂಹಿಕ ಅತ್ಯಾಚಾರ

ಸ್ಪಾ ಮ್ಯಾನೇಜರ್‌‌ ಮತ್ತು ಗ್ರಾಹಕನಿಂದ ಉದ್ಯೋಗಿಯ ಮೇಲೆ ಸಾಮೂಹಿಕ ಅತ್ಯಾಚಾರ

- Advertisement -
- Advertisement -

ದೆಹಲಿಯ ಪಿತಾಂಪುರದಲ್ಲಿರುವ ಸ್ಪಾವೊಂದರ ಮ್ಯಾನೇಜರ್ ಮತ್ತು ಗ್ರಾಹಕ 22 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವತಿ ಶನಿವಾರ ದೆಹಲಿಯ ಮಹಿಳಾ ಆಯೋಗವನ್ನು (ಡಿಸಿಡಬ್ಲ್ಯು) ಸಂಪರ್ಕಿಸಿದ್ದು, ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಘಟನೆಯ ಕುರಿತು ದೆಹಲಿ ಪೊಲೀಸ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಗೆ ನೋಟಿಸ್ ನೀಡಿದ್ದಾರೆ.

ತಾನು ಮಸಾಜಿಯಾಗಿ ಕೆಲಸ ಮಾಡುತ್ತಿದ್ದ ಪಿತಾಂಪುರದ ‘ದಿ ಓಷನ್ ಸ್ಪಾ’ದಲ್ಲಿ ಈ ಘಟನೆ ನಡೆದಿದೆ ಎಂದು ಡಿಸಿಡಬ್ಲ್ಯೂಗೆ ಯುವತಿ ತಿಳಿಸಿದ್ದಾರೆ. “ಸ್ಪಾ ಮ್ಯಾನೇಜರ್ ನನ್ನನ್ನು ಗ್ರಾಹಕನಿಗೆ ಪರಿಚಯಿಸಿ, ನನಗೆ ಅಮಲು ಬೆರೆಸಿದ ಪಾನೀಯವನ್ನು ಕೊಟ್ಟಿದ್ದಾರೆ. ಇದರ ನಂತರ ಇಬ್ಬರು ದುಷ್ಕರ್ಮಿಗಳು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ” ಎಂದು ಸಂತ್ರಸ್ತೆ ಯುವತಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ದುರ್ಘಟನೆ ಕುರಿತು ತಿಳಿಸಿಲು ಯತ್ನಿಸಿದಾಗ, ಈ ಬಗ್ಗೆ ಎಲ್ಲೂ ಹೇಳದಂತೆ ತನಗೆ ದುಡ್ಡು ನೀಡಲು  ಸ್ಪಾ ಮಾಲೀಕರು ಪ್ರಯತ್ನಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಹಿಳೆಗೆ ಹಲ್ಲೆ ನಡೆಸಿ, ಅಶ್ಲೀಲವಾಗಿ ನಿಂದಿಸಿದ ಬಿಜೆಪಿ ಮುಖಂಡನ ಮೇಲೆ ಎಫ್‌ಐಆರ್‌‌; ಆರೋಪಿ ಪರಾರಿ

ಮಹಿಳಾ ಆಯೋಗವು ಈ ಪ್ರಕರಣವನ್ನು ತಕ್ಷಣವೇ ಕೈಗೆತ್ತಿಕೊಂಡಿದ್ದು ದೆಹಲಿ ಮುನ್ಸಿಪಲ್ ಕಾಪೋರೇಷನ್‌ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ್ದು, ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಕೇಳಿದೆ.

ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ದೆಹಲಿ ಪೊಲೀಸರಿಗೆ ಕಳುಹಿಸಿರುವ ನೋಟಿಸ್‌ನಲ್ಲಿ, ಎಫ್‌ಐಆರ್‌ನ ಪ್ರತಿಯನ್ನು ಮತ್ತು ಈ ಪ್ರಕರಣದ ಕುರಿತು ಬಂಧಿಸಿರುವ ಆರೋಪಿಗಳ ವಿವರಗಳನ್ನು ಕೋರಿದ್ದಾರೆ.

ಇಷ್ಟೆ ಅಲ್ಲದೆ, ವಿವಾದಿತ ಸ್ಪಾಗೆ ಮಾನ್ಯವಾದ ಪರವಾನಗಿ ಇದೆಯೇ ಎಂದು ಆಯೋಗವು ಅಧಿಕಾರಿಗಳಿಂದ ಕೇಳಿದೆ. ಮಾನ್ಯ ಪರವಾನಗಿ ಇಲ್ಲದೆ ಸ್ಪಾ ನಡೆಸುತ್ತಿದ್ದಲ್ಲಿ ಲೋಪಕ್ಕೆ ಕಾರಣರಾದ ವ್ಯಕ್ತಿಗಳ ಬಗ್ಗೆಯೂ ಆಯೋಗ ಅಧಿಕಾರಿಗಳ ಪ್ರಶ್ನಿಸಿದೆ. ಮಹಿಳಾ ಆಯೋಗವೂ ಆಗಸ್ಟ್ 8 ರೊಳಗೆ ವಿವರಗಳನ್ನು ನೀಡುವಂತೆ ಕೇಳಿದೆ.

ಇದನ್ನೂ ಓದಿ: ಕೋಮು ಧ್ರುವೀಕರಣ ತಡೆಗೆ ಮಾಡಬೇಕಿರುವುದೇನು? ದಕ್ಷಿಣ ಕನ್ನಡದ ಮುಸ್ಲಿಂ ದನಿಗಳ ಕಾಳಜಿಯ ನುಡಿಗಳು

ಈ ಬಗ್ಗೆ ಮಾತನಾಡಿದ ಸ್ವಾತಿ ಮಲಿವಾಲ್, “ದೆಹಲಿಯಾದ್ಯಂತ ಸ್ಪಾಗಳ ನೆಪದಲ್ಲಿ ಸೆಕ್ಸ್ ರಾಕೆಟ್ ನಡೆಸಲಾಗುತ್ತಿದೆ. ಆರೋಪಿಗಳು ಹುಡುಗಿಯರ ಬಾಯಿ ಮುಚ್ಚಿಸಲು ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡುವುದರಿಂದ ಈ ಹೆಚ್ಚಿನ ಪ್ರಕರಣಗಳು ವರದಿಯಾಗುವುದಿಲ್ಲ. ಪ್ರಸ್ತುತ ಪ್ರಕರಣದಲ್ಲಿ ಮಹಿಳೆಯರಿಗೆ ಮಾತ್ರ ಮಸಾಜ್ ಮಾಡಲು ಹೇಳಲಾಗುವುದು ಎಂದು ಯುವತಿಗೆ ಭರವಸೆ ನೀಡಿ ಅವರನ್ನು ಕೆಲಸಕ್ಕೆ ನೇಮಿಸಿಕೊಂಡಿದೆ” ಎಂದು ತಿಳಿಸಿದ್ದಾರೆ.

ಅಕ್ರಮ ಸ್ಪಾ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲು ಏಕೆ ವಿಫಲರಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...