Homeಮುಖಪುಟಮೆಡಿಕಲ್ ಸೀಟ್ ಆಕಾಂಕ್ಷಿ ಆತ್ಮಹತ್ಯೆ: ನೀಟ್ ಪರೀಕ್ಷೆ ಬಗ್ಗೆ ಪ್ರತಿಭಟಿಸಿ ಮಗನ ಹಾದಿ ಹಿಡಿದ ತಂದೆ

ಮೆಡಿಕಲ್ ಸೀಟ್ ಆಕಾಂಕ್ಷಿ ಆತ್ಮಹತ್ಯೆ: ನೀಟ್ ಪರೀಕ್ಷೆ ಬಗ್ಗೆ ಪ್ರತಿಭಟಿಸಿ ಮಗನ ಹಾದಿ ಹಿಡಿದ ತಂದೆ

- Advertisement -
- Advertisement -

19 ವರ್ಷದ ಮೆಡಿಕಲ್ ಸೀಟ್  ಆಕಾಂಕ್ಷಿ ವಿದ್ಯಾರ್ಥಿ ನೀಟ್ ನಲ್ಲಿ ಎರಡು ಬಾರಿ ಅನುತ್ತೀರ್ಣಗೊಂಡ ಬಳಿಕ ಚೆನ್ನೈನ ಕ್ರೋಮ್‌ಪೇಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಗದೀಶ್ವರನ್ ಎಂಬ ಯುವಕ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ. ಘಟನೆ ಆ.12ರದು ನಡೆದಿದೆ. ಜಗದೀಶ್ವರನ್ ಎರಡು ಬಾರಿಯ ಪ್ರಯತ್ನದಲ್ಲಿ ನೀಟ್ ನಲ್ಲಿ( ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಉತ್ತಮ ಅಂಕಗಳನ್ನು  ಗಳಿಸಲು ವಿಫಲನಾಗಿದ್ದಾನೆ.ಇದರಿಂದ ಆತ ಮಾನಸಿಕವಾಗಿ ಒತ್ತಡಕ್ಕೆ ಮತ್ತು ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗಿದೆ.

ಆದರೆ ಪೊಲೀಸರಿಗೆ ಯಾವುದೇ ಆತ್ಮಹತ್ಯೆ ಪತ್ರ ಲಭ್ಯವಾಗಿಲ್ಲ.ಜಗದೀಶ್ವರನ್ ತಂದೆ ಸೆಲ್ವಶೇಖರ್ ನೀಟ್ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಬಳಿಕ ಅವರು ಕೂಡ ಮಗನ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿನ ಮೊದಲು ಸೆಲ್ವಶೇಖರ್ ಮಾತನಾಡಿ. ನೀಟ್ ನ್ನು ತಮಿಳುನಾಡಿನಲ್ಲಿ ಕಿತ್ತೊಗೆಯಲು ನಾನು ಪ್ರತಿಭಟನೆ ಮಾಡಲು ಸಿದ್ದ ಎಂದು ಹೇಳಿದ್ದರು.

ಈ ಕುರಿತು ತಮಿಳು ನಾಡು ಸಿಎಂ ಆಘಾತವನ್ನು ವ್ಯಕ್ತಪಡಿಸಿದ್ದು, ಈ ರೀತ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದರು. ತಮಿಳುನಾಡಿನಲ್ಲಿ  ನೀಟ್ ಬ್ಯಾನ್ ಮಾಡಲು ಅನುಮತಿ ಕೊಟ್ಟಿಲ್ಲ ಎಂದು ಸಿಎಂ ಸ್ಟ್ಯಾಲಿನ್ ರಾಜ್ಯಪಾಲ ರವಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ನಾವು  ಈ ಕುರಿತು ರಾಜ್ಯಪಾಲರಿಗೆ ಮನವಿ ಕಳುಹಿಸಿದ್ದೇವೆ. ವಿಧಾನಸಭೆಯಲ್ಲಿ ಮತ್ತೊಮ್ಮೆ ನಿರ್ಣಯ ಅಂಗೀಕರಿಸಿದ ಬಳಿಕ ರಾಜ್ಯಪಾಲರಿಗೆ ವಾಪಸ್ ಕಳುಹಿಸಿದ್ದೇವೆ. ಅವರು ಒಪ್ಪಿಗೆ ನೀಡಬೇಕಾಗಿತ್ತು, ಆದರೆ ಅವರು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದರು, ಎಂಕೆ ಸ್ಟಾಲಿನ್ ಹೇಳಿದರು.

ಇದನ್ನು ಓದಿ:NEET ಪರೀಕ್ಷೆ ತಗೆದುಹಾಕುವ ಮಸೂದೆಗೆ ರಾಜ್ಯಪಾಲರ ಅನುಮತಿ ಬೇಕಿಲ್ಲ: ಸಚಿವ ಸುಬ್ರಮಣಿಯನ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...