HomeಮುಖಪುಟNEET ಪರೀಕ್ಷೆ ತಗೆದುಹಾಕುವ ಮಸೂದೆಗೆ ರಾಜ್ಯಪಾಲರ ಅನುಮತಿ ಬೇಕಿಲ್ಲ: ಸಚಿವ ಸುಬ್ರಮಣಿಯನ್

NEET ಪರೀಕ್ಷೆ ತಗೆದುಹಾಕುವ ಮಸೂದೆಗೆ ರಾಜ್ಯಪಾಲರ ಅನುಮತಿ ಬೇಕಿಲ್ಲ: ಸಚಿವ ಸುಬ್ರಮಣಿಯನ್

- Advertisement -
- Advertisement -

NEET ಪರೀಕ್ಷೆ ವಿರುದ್ಧದ ರಾಜ್ಯದ ಮಸೂದೆಯನ್ನು ಅನುಮೋದಿಸುವಲ್ಲಿ ರಾಜ್ಯಪಾಲ ಆರ್‌ಎನ್ ರವಿ ಅವರು ವಿರೋಧಿಸುವಂತಿಲ್ಲ, ಇದರಲ್ಲಿ ಅವರ ಪಾತ್ರ ಏನೂ ಇಲ್ಲ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಭಾನುವಾರ ಹೇಳಿದ್ದಾರೆ.

ಭಾರತದಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಪದವಿಪೂರ್ವ ಕೋರ್ಸ್‌ಗಳಿಗೆ ಅರ್ಹತಾ ಪರೀಕ್ಷೆಯಾಗಿ NEET ನಡೆಸಲಾಗುತ್ತದೆ. ಇದನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುತ್ತದೆ.

ಸೆಪ್ಟೆಂಬರ್ 2021ರಲ್ಲಿ, ತಮಿಳುನಾಡು ಅಸೆಂಬ್ಲಿಯು ಡಿಎಂಕೆ ಮಂಡಿಸಿದ ಮಸೂದೆಯನ್ನು ಅಂಗೀಕರಿಸಿದ್ದು, ರಾಜ್ಯದ ವಿದ್ಯಾರ್ಥಿಗಳಿಗೆ NEETನಿಂದ ವಿನಾಯಿತಿ ನೀಡುವಂತೆ ಕೋರಿತ್ತು. 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶವನ್ನು ಕೈಗೊಳ್ಳಲಾಗುವುದು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಪಠ್ಯಕ್ರಮವನ್ನು ಆಧರಿಸಿದ ಈ ಪ್ರವೇಶ ಪರೀಕ್ಷೆಯು ರಾಜ್ಯ ಮಂಡಳಿಯ ಪಠ್ಯಕ್ರಮವನ್ನು ಅನುಸರಿಸುವ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡುತ್ತದೆ ಎಂಬ ಆಧಾರದ ಮೇಲೆ ತಮಿಳುನಾಡು ಪರೀಕ್ಷೆಯನ್ನು ವಿರೋಧಿಸುತ್ತಿದೆ.

ರಾಜ್ಯಪಾಲ ರವಿ ಅವರು ಮಸೂದೆಗೆ ಒಪ್ಪಿಗೆ ನೀಡಲಿಲ್ಲ ಮತ್ತು ಕಾಯಿದೆಯು ಕಾನೂನಾಗುವುದನ್ನು ನಿಲ್ಲಿಸಿತು. ಆನಂತರ ಫೆಬ್ರವರಿ 2022ರಲ್ಲಿ ತಮಿಳುನಾಡು ಅಸೆಂಬ್ಲಿಯು ಮತ್ತೊಮ್ಮೆ ಮಸೂದೆಯನ್ನು ಅಂಗೀಕರಿಸಿತು. ಶಿಕ್ಷಣವು ಸಂವಿಧಾನದ ಏಕಕಾಲಿಕ ಪಟ್ಟಿಯಲ್ಲಿ ಒಂದು ವಿಷಯವಾಗಿರುವುದರಿಂದ ಮಸೂದೆಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಲುಪಿಸಲಾಯಿತು.

ನೀಟ್ ಪರೀಕ್ಷೆಯು ಇಡೀ ದೇಶದಲ್ಲಿ ಇರುವುದಾದರೆ ರಾಜ್ಯತದಲ್ಲಿ ಮಾತ್ರ ತಗೆದುಹಾಕುವ ಬಿಲ್‌ಗೆ ನಾನು ಎಂದಿಗೂ ಒಪ್ಪಿಗೆ ನೀಡುವುದಿಲ್ಲ ಎಂದು ರವಿ ಅವರು ಶನಿವಾರ ಹೇಳಿದ್ದರು ಎಂದು ದಿ ಹಿಂದೂ ವರದಿ ಮಾಡಿದೆ.

ಬಿಲ್‌ಗೆ ಒಪ್ಪಿಗೆ ನೀಡುವ ಕುರಿತು ವಿದ್ಯಾರ್ಥಿಯೊಬ್ಬರ ತಂದೆ ರವಿ ಅವರನ್ನು ಕೇಳಿದಾಗ, ”ನಾನು ನಿಮಗೆ ತುಂಬಾ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಾನು ಎಂದಿಗೂ NEET ಗೆ ಕ್ಲಿಯರೆನ್ಸ್ ನೀಡುವುದಿಲ್ಲ [ವಿನಾಯಿತಿ ಮಸೂದೆ]” ಎಂದಿದ್ದಾರೆ.

ರವಿ ಅವರ ಹೇಳಿಕೆಗಳಿಗೆ ಭಾನುವಾರ ಪ್ರತಿಕ್ರಿಯಿಸಿದ ಸುಬ್ರಮಣಿಯನ್, ರಾಷ್ಟ್ರಪತಿಗಳ ಕಚೇರಿ ಈ ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದು, ತಮಿಳುನಾಡು ಸರ್ಕಾರದಿಂದ ಸ್ಪಷ್ಟನೆ ಕೇಳಿದೆ. ಈಗ, ರಾಷ್ಟ್ರಪತಿಗಳು ಮಸೂದೆಗೆ ಒಪ್ಪಿಗೆ ನೀಡುತ್ತಾರೆ ಎಂದು ಭಾವಿಸಿದರೆ, ರಾಜ್ಯಪಾಲರ ಕಚೇರಿಗೆ ಸೂಚನೆ ಸಿಗುತ್ತದೆ, ಅನುಮತಿ ಅಲ್ಲ. ಆದ್ದರಿಂದ, ಮಸೂದೆಯಲ್ಲಿ ರಾಜ್ಯಪಾಲರಿಗೆ ಹೆಚ್ಚಿನ ಪಾತ್ರವಿಲ್ಲ” ಎಂದು ಸುಬ್ರಮಣಿಯನ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು, ದಿ ಹಿಂದೂ ವರದಿ ಮಾಡಿದೆ.

ಇದನ್ನೂ ಓದಿ: ನಿಮ್ಮ ಗುರಿಗೆ ತೊಡಕಾಗಿರುವ NEET ಪರೀಕ್ಷೆಯನ್ನು ತೆಗೆದುಹಾಕುತ್ತೇವೆ: ಅಭ್ಯರ್ಥಿಗಳಿಗೆ ಸ್ಟಾಲಿನ್ ಭರವಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...