Homeಕರ್ನಾಟಕಏಪ್ರಿಲ್ 10ರಿಂದ ಮೇ 15ವರೆಗೆ ಶಾಲೆಗಳಿಗೆ ಬೇಸಿಗೆ ರಜೆ

ಏಪ್ರಿಲ್ 10ರಿಂದ ಮೇ 15ವರೆಗೆ ಶಾಲೆಗಳಿಗೆ ಬೇಸಿಗೆ ರಜೆ

- Advertisement -
- Advertisement -

ಬೆಂಗಳೂರು: 2021–22ನೇ ಸಾಲಿನ ಶೈಕ್ಷಣಿಕ ವರ್ಷ ಏಪ್ರಿಲ್ 9ಕ್ಕೆ ಮುಕ್ತಾಯಗೊಳ್ಳಲಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮೇ 10ರಿಂದ 15ರವರೆಗೆ ಬೇಸಿಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮೇ 16ರಿಂದ ಮುಂದಿನ ಶೈಕ್ಷಣಿಕ ವರ್ಷ (2022–23) ಆರಂಭವಾಗಲಿದೆ.

ಅಲ್ಲದೆ, ಕೋವಿಡ್ ಕಾರಣ 2019–20, 2020–21 ಮತ್ತು 2021–22 ಈ ಮೂರೂ ಶೈಕಣಿಕ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದೆ ವಿದ್ಯಾರ್ಥಿಗಳಿಗೆ ಆಗಿರುವ ಕಲಿಕಾ ಕೊರತೆಯನ್ನು ಸರಿದೂಗಿಸಲು ಮುಂದಿನ ಶೈಕ್ಷಣಿಕ ವರ್ಷದಲ್ಲಿ ‘ಕಲಿಕಾ ಚೇತರಿಕೆ’ (ಸೇತುಬಂಧ) ಕಾರ್ಯಕ್ರಮ ಆಯೋಜಿಸಲು ಕೂಡಾ ಇಲಾಖೆ ನಿರ್ಧರಿಸಿದೆ. ಈ ಕಾರ್ಯಕ್ರಮ ಮೇ 16ರಿಂದ ಆರಂಭವಾಗಲಿದೆ.

ಪ್ರಸಕ್ತ ವರ್ಷ ಏಪ್ರಿಲ್ 9ರಂದು ಶೈಕ್ಷಣಿಕ ವರ್ಷ ಕೊನೆಗೊಳ್ಳಲಿರುವುದರಿಂದ ಪ್ರಾಥಮಿಕ ಶಾಲೆಗಳಲ್ಲಿ (1–5, 1–7 ಮತ್ತು 8ನೇ ತರಗತಿ ಇರುವ ಶಾಲೆಗಳು) ಮಾರ್ಚ್ 24ರಿಂದ ಏಪ್ರಿಲ್ 4ರವರೆಗೆ ವಾರ್ಷಿಕ ಪರೀಕ್ಷೆ ನಡೆಸಿ, ಏ. 9ರಂದು ಫಲಿತಾಂಶ ಪ್ರಕಟಿಸಬೇಕು. 8–9 ತರಗತಿಗಳಿರುವ ಪ್ರೌಢಶಾಲೆಗಳಲ್ಲಿ ಮಾರ್ಚ್ 21ರಿಂದ ಮಾರ್ಚ್26ರವರೆಗೆ ವಿಷಯವಾರು ಪರೀಕ್ಷೆ, ಮಾರ್ಚ್ 29ರಂದು ಭಾಗ–2 ( ದೈಹಿಕ ಶಿಕ್ಷಣ, ಇತರ) ಪರೀಕ್ಷೆ ನಡೆಸಿ, ಏಪ್ರಿಲ್ 7ರಂದು ಫಲಿತಾಂಶ ಪ್ರಕಟಿಸಬೇಕು ಎಂದು ಇಲಾಖೆ ಸೂಚಿಸಿದೆ.

ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮೇ 29ರಿಂದ ಆರಂಭವಾಗಿ ಏಪ್ರಿಲ್ 10ಕ್ಕೆ ಮುಕ್ತಾಯವಾಗುತ್ತದೆ.


ಇದನ್ನೂ ಓದಿರಿ: ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ಸೂಕ್ತ ಕ್ರಮ: ಬಸವರಾಜ ಬೊಮ್ಮಾಯಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...