Homeಮುಖಪುಟಯುವಕರ ಉದ್ಯೋಗ ಕಿತ್ತುಕೊಂಡ, ರೈತರನ್ನು ನಾಶ ಮಾಡಿದ ಬಿಜೆಪಿಯನ್ನು ಸೋಲಿಸಿ: ಅಖಿಲೇಶ್ ಯಾದವ್

ಯುವಕರ ಉದ್ಯೋಗ ಕಿತ್ತುಕೊಂಡ, ರೈತರನ್ನು ನಾಶ ಮಾಡಿದ ಬಿಜೆಪಿಯನ್ನು ಸೋಲಿಸಿ: ಅಖಿಲೇಶ್ ಯಾದವ್

- Advertisement -
- Advertisement -

’ಹಣದುಬ್ಬರ, ಭ್ರಷ್ಟಾಚಾರವನ್ನು ಹೆಚ್ಚಿಸಿದ, ಯುವಕರ ಉದ್ಯೋಗಗಳನ್ನು ಕಿತ್ತುಕೊಂಡ ಮತ್ತು ರೈತರನ್ನು ನಾಶಮಾಡಿದ ಸರ್ಕಾರವನ್ನು ಸೋಲಿಸಬೇಕು’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತದಾರರನ್ನು ಒತ್ತಾಯಿಸಿದ್ದಾರೆ.

’ಭ್ರಷ್ಟಾಚಾರ, ಹಣದುಬ್ಬರ, ಜನರ ಉದ್ಯೋಗ ಕಿತ್ತುಕೊಂಡ, ರೈತರನ್ನು ನಾಶ ಮಾಡಿದ, ಕೂಲಿ ಕಾರ್ಮಿಕರನ್ನು ಮೈಲುಗಟ್ಟಲೆ ನಡೆಯುವಂತೆ ಮಾಡಿದ, ಔಷಧಿ ಕೊಡದೆ ಸತಾಯಿಸಿದ, ಪೊಲೀಸ್ ವ್ಯವಸ್ಥೆಯನ್ನು ಹಾಳು ಮಾಡಿದ ಸರ್ಕಾರವನ್ನು ನೀವು ಅಧಿಕಾರದಿಂದ ಕಿತ್ತೊಗೆಯುವುದಿಲ್ಲವೇ..?’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಡಬಲ್ ಇಂಜಿನ್ ಸರ್ಕಾರದಲ್ಲಿ ಹಣದುಬ್ಬರ, ಭ್ರಷ್ಟಾಚಾರ ದುಪ್ಪಟ್ಟಾಗಿದೆ, ನೀವು ಅವರಿಗೆ ಪಾಠ ಕಲಿಸುವುದಿಲ್ಲವೇ?” ಎಂದು ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಕುಂದಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆ: 2 ಹಂತಗಳ ಮತದಾನದಲ್ಲಿ ಎಸ್‌ಪಿ ಶತಕ ಬಾರಿಸಿದೆ ಎಂದ ಅಖಿಲೇಶ್ ಯಾದವ್

‘ಬಾಹುಬಲಿ’ ಎಂದೇ ಖ್ಯಾತರಾಗಿರುವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರನ್ನು 1993ರಿಂದ ನಿರಂತರವಾಗಿ ಆಯ್ಕೆ ಮಾಡುತ್ತಿರುವ ಕ್ಷೇತ್ರ ಕುಂದಾ. 2018 ರ ರಾಜ್ಯಸಭಾ ಚುನಾವಣೆಯ ನಂತರ ಅಖಿಲೇಶ್ ಯಾದವ್, ರಾಜಾ ಭಯ್ಯಾ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಮಾಜವಾದಿ ಪಾರ್ಟಿ, ಶಾಸಕ ರಾಜಾ ಭಯ್ಯಾ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

“ಗೆಲುವನ್ನು ಭದ್ರಪಡಿಸಿಕೊಳ್ಳಲು ಸರ್ಕಾರ ಎಲ್ಲಾ ತಂತ್ರಗಳನ್ನು ಬಳಸುತ್ತಿದೆ ಎಂದು ನಾನು ಕೇಳಿದ್ದೇನೆ. ಬಹುಶಃ ಬೆದರಿಕೆಗಳು, ಆಮಿಷಗಳನ್ನು ಸಹ ಒಡ್ಡಬಹುದು. ಅದಕ್ಕೆ ಬಲಿಯಾಗಬೇಡಿ” ಎಂದಿರುವ ಅವರು ಜನರ ಮೇಲೆ ನಕಲಿ ಪ್ರಕರಣಗಳನ್ನು ದಾಖಲಿಸಿ ಯಾವುದೇ ಒಳ್ಳೆಯ ಕೆಲಸ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಇದನ್ನೂ ಓದಿ: ಹೆದ್ದಾರಿ ಬಗ್ಗೆ ಸುಳ್ಳು ಮಾಹಿತಿ ಹಂಚಿಕೊಂಡ ತೇಜಸ್ವಿ ಸೂರ್ಯ: ಸೂರ್ಯನ ಕೆಳಗೂ ಕತ್ತಲೆ ಎಂದ ಅಖಿಲೇಶ್ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿರೀಕ್ಷಣಾ ಜಾಮೀನು ಕೋರಿ ಹೆಚ್‌.ಡಿ ರೇವಣ್ಣ ಅರ್ಜಿ: ಎಸ್‌ಐಟಿಗೆ ಕೋರ್ಟ್‌ ನೋಟಿಸ್

0
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೊದಲ ಆರೋಪಿ, ಶಾಸಕ ಹೆಚ್‌.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ನೋಟಿಸ್ ಜಾರಿ ಮಾಡಿದೆ...