Homeಮುಖಪುಟರೈತ ಪ್ರತಿಭಟನೆ ಕುರಿತು ಸುಪ್ರೀಂ ಮಧ್ಯಸ್ಥಿಕೆ: ‘ಜಮ್ಮು ಕಾಶ್ಮೀರದ ಕುರಿತೇಕೆ ಸಾಧ್ಯವಿಲ್ಲ?’ - ಓಮರ್...

ರೈತ ಪ್ರತಿಭಟನೆ ಕುರಿತು ಸುಪ್ರೀಂ ಮಧ್ಯಸ್ಥಿಕೆ: ‘ಜಮ್ಮು ಕಾಶ್ಮೀರದ ಕುರಿತೇಕೆ ಸಾಧ್ಯವಿಲ್ಲ?’ – ಓಮರ್ ಅಬ್ದುಲ್ಲಾ

ಸುಪ್ರೀಂಕೋರ್ಟ್ ‘ಕೃಷಿ ಕಾಯ್ದೆಗಳನ್ನು ತರುವುದಕ್ಕೆ ಮುಂಚೆ ಯಾವುದೇ ಸಮಾಲೋಚನೆಯನ್ನು ಒಳಗೊಂಡಿಲ್ಲ' ಎಂಬ ಪದಗಳನ್ನು ಬಳಸಿದೆ. ಜಮ್ಮು-ಕಾಶ್ಮೀರದ ವಿಷಯವನ್ನೂ ಇದೇ ಬಗೆಯಲ್ಲಿ ಪರಿಶೀಲನೆ ಮಾಡಬೇಕು.

- Advertisement -
- Advertisement -

ಕೃಷಿ ಕಾನೂನುಗಳ ರದ್ದತಿಗೆ ಒತ್ತಾಯಿಸಿ ಹೋರಾಡುತ್ತಿರುವ ರೈತರ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಿದೆ. ಇದು ಜಮ್ಮು ಕಾಶ್ಮೀರದ ಕುರಿತೇಕೆ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ

“ನನ್ನ ಪ್ರಶ್ನೆಯ ಮೂಲದಲ್ಲಿ ಸುಪ್ರೀಂಕೋರ್ಟ್ ಕೆಲಸ ಮಾಡುತ್ತಿಲ್ಲ ಎಂಬ ಭಾವನೆ ಇಲ್ಲವೇ ಇಲ್ಲ. ರೈತ ಪ್ರತಿಭಟನೆಯೊಂದಿಗೆ ಏನು ನಡೆಯುತ್ತಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಅರಿತುಕೊಂಡು, ಈ ಅಮೋಘ ಹೋರಾಟದ ವಿಷಯಗಳಲ್ಲಿ ಹೆಜ್ಜೆ ಹಾಕುತ್ತಿರುವುದನ್ನು ನಾವು ನೋಡಿದ್ದೇವೆ” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಆಯೋಜಿಸಿದ ಐಡಿಯಾ ಎಕ್ಸ್‌ಚೇಂಜ್ ಕಾರ್ಯಕ್ರಮದ ಸಂದರ್ಭದಲ್ಲಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ 370 ಮತ್ತು 35ಎ ವಿಧಿಗಳನ್ನು ರದ್ದುಪಡಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ನೂರಾರು ಅರ್ಜಿಗಳನ್ನು ಆಲಿಸಲು ಮತ್ತು ತೀರ್ಮಾನಿಸಲು ಸುಪ್ರೀಂ ತಕ್ಷಣವೇ ಹೆಜ್ಜೆ ಹಾಕುವ ಅಗತ್ಯವಿದೆ ಎಂದು ಹೇಳಿರುವ ಅವರು, ಕೃಷಿ ಕಾನೂನುಗಳ ವಿಷಯದಲ್ಲಿ ಇತ್ತೀಚಿನ ಸುಪ್ರೀಂಕೋರ್ಟ್ ನಿಲುವು ಒಂದು ಹಂತದಲ್ಲಿ ಸ್ವಾಗತಾರ್ಹ ಕ್ರಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರೈತ ಪ್ರತಿಭಟನೆಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ‘ಕೃಷಿ ಕಾಯ್ದೆಗಳನ್ನು ತರುವುದಕ್ಕೆ ಮುಂಚೆ ಯಾವುದೇ ಸಮಾಲೋಚನೆಯನ್ನು ಒಳಗೊಂಡಿಲ್ಲ’ ಎಂಬ ಪದಗಳನ್ನು ಬಳಸಿದೆ. ಜಮ್ಮು-ಕಾಶ್ಮೀರದ ವಿಷಯವನ್ನೂ ಇದೇ ಬಗೆಯಲ್ಲಿ ಪರಿಶೀಲನೆ ಮಾಡಬೇಕು. ಆಗ ಆಗಸ್ಟ್ 5, 2019 ರಂದು (370ನೆ ವಿಧಿ ರದ್ದು ಜಾರಿಯಾದ ದಿನ) ಏನಾಗುತ್ತದೆ ಎಂಬುದಕ್ಕೆ ಮುಂಚಿತವಾಗಿ ಜಮ್ಮು-ಕಾಶ್ಮೀರದ ಜೊತೆ ಯಾವುದೇ ಸಮಾಲೋಚನೆಗಳು ನಡೆಯಲೇ ಇಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಜಮ್ಮು-ಕಾಶ್ಮೀರ ರಾಜ್ಯದ ಮೇಲೆ ಹೇರಿಕೆಯಾದ ಮತ್ತು ಅದರ ಸವಲತ್ತುಗಳನ್ನು ಕಿತ್ತುಕೊಂಡ ವಿಷಯಗಳಲ್ಲಿ ನಮ್ಮ ಮಾತುಗಳನ್ನು ಕೇಳಲು ಪ್ರಾರಂಭಿಸಬೇಕು ಎಂದು ಅಬ್ದುಲ್ಲಾ ಒತ್ತಾಯಿಸಿದ್ದಾರೆ.

ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಅರ್ಜಿಗಳ ಕುರಿತು 2019 ರ ಆಗಸ್ಟ್ 29 ರಂದು ನೋಟಿಸ್ ನೀಡಿತ್ತು ಮತ್ತು ಅದನ್ನು ನ್ಯಾಯಮೂರ್ತಿ ಎನ್.ವಿ.ರಮಣ ಅವರ ಅಧ್ಯಕ್ಷತೆಯ ಐದು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತ್ತು. ಐದು ನ್ಯಾಯಾಧೀಶರ ಪೀಠವು 2019 ರ ಅಕ್ಟೋಬರ್ 1ರಂದು ಈ ವಿಷಯವನ್ನು ಕೈಗೆತ್ತಿಕೊಂಡಿತು. ಆದರೆ ಕೆಲವರು ಇದನ್ನು ಏಳು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಬೇಕು ಎಂಬ ಅಂಶವನ್ನು ಎತ್ತಿದರು. ಈ ಮನವಿಯನ್ನು ಮಾರ್ಚ್ 2, 2020 ರಂದು ತಿರಸ್ಕರಿಸಲಾಯಿತು. ಆದರೆ ಕೋವಿಡ್ -19 ಮತ್ತು ನಂತರದ ರಾಷ್ಟ್ರೀಯ ಲಾಕ್‌ಡೌನ್ ಕಾರಣದಿಂದಾಗಿ, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯವೂ ಸೇರಿ, ಸಾಂವಿಧಾನಿಕ ಪ್ರಶ್ನೆಗಳನ್ನು ಒಳಗೊಂಡ ಪ್ರತಿಯೊಂದು ಪ್ರಮುಖ ಪ್ರಕರಣಗಳ ವಿಚಾರಣೆ ಬಾಕಿ ಉಳಿದಿವೆ ಎಂಬುದನ್ನು ಇಲ್ಲಿ ಗಮನಿಸಬೇಕು.


ಇದನ್ನೂ ಓದಿ: ಜಮ್ಮು ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಗುಪ್ಕರ್ ಒಕ್ಕೂಟಕ್ಕೆ ಸ್ಪಷ್ಟ ಮುನ್ನಡೆ, ಬಿಜೆಪಿಗೆ ಹಿನ್ನಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಶಿವಸೇನೆಯನ್ನು ವಿಭಜಿಸಿ, ಇಲ್ಲವೇ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರ್ಕಾರ ಬೆದರಿಕೆ...

0
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ...