Homeಅಂತರಾಷ್ಟ್ರೀಯಟ್ವಿಟರ್ ಒಪ್ಪಂದಕ್ಕೆ ತಾತ್ಕಾಲಿಕ ತಡೆ: ಇಲಾನ್ ಮಸ್ಕ್‌‌ ಘೋಷಣೆ

ಟ್ವಿಟರ್ ಒಪ್ಪಂದಕ್ಕೆ ತಾತ್ಕಾಲಿಕ ತಡೆ: ಇಲಾನ್ ಮಸ್ಕ್‌‌ ಘೋಷಣೆ

- Advertisement -
- Advertisement -

ಸ್ಪ್ಯಾಮ್‌ ಮತ್ತು ನಕಲಿ ಖಾತೆಗಳಲ್ಲಿ ಬಾಕಿ ಉಳಿದಿರುವ ವಿವರಗಳನ್ನು ಉಲ್ಲೇಖಿಸಿ, ಟ್ವಿಟರ್‌‌‌‌‌ ಕಂಪೆನಿ ಜೊತೆಗೆ ಮಾಡಿದ್ದ ತನ್ನ 44 ಬಿಲಿಯನ್ ಡಾಲರ್‌ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಇಲಾನ್ ಮಸ್ಕ್ ಶುಕ್ರವಾರ ಹೇಳಿದ್ದಾರೆ.

“ಸ್ಪ್ಯಾಮ್ ಹಾಗೂ ನಕಲಿ ಖಾತೆಗಳು ವಾಸ್ತವವಾಗಿ 5% ಕ್ಕಿಂತ ಕಡಿಮೆ ಬಳಕೆದಾರರನ್ನು ಪ್ರತಿನಿಧಿಸುತ್ತವೆ ಎಂಬ ಲೆಕ್ಕಾಚಾರವನ್ನು ಬೆಂಬಲಿಸುವ ಟ್ವಿಟರ್ ಒಪ್ಪಂದವು ಬಾಕಿ ಉಳಿದಿರುವ ವಿವರಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ” ಎಂದು ಇಲಾನ್‌‌ ಮಸ್ಕ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ನಡುವೆ ಸಾಮಾಜಿಕ ಮಾಧ್ಯಮ ಕಂಪನಿಯ ಷೇರುಗಳು ಪ್ರಿಮಾರ್ಕೆಟ್ ವಹಿವಾಟಿನಲ್ಲಿ 20% ನಷ್ಟು ಕುಸಿದವು. ಇಲಾನ್ ಮಸ್ಕ್‌ ಅವರು ಹೇಳಿಕೆಯ ಬಗ್ಗೆ ಟ್ವಿಟರ್‌ ತಕ್ಷಣವೇ ಪ್ರತಿಕ್ರಿಯಿಸಲಿಲ್ಲ.

ಇದನ್ನೂ ಓದಿ: ‘ಟ್ವಿಟರ್ ಬ್ರಾಂಡ್ ಖರೀದಿಸಿದ ಮಸ್ಕ್’ ವಿದ್ಯಮಾನ ಮತ್ತು ಆತಂಕಗಳು

ಮೊದಲ ತ್ರೈಮಾಸಿಕದಲ್ಲಿ ಟ್ವಿಟರ್‌ನಿಂದ ಹಣಗಳಿಸಬಹುದಾದ ದೈನಂದಿನ ಸಕ್ರಿಯ ಬಳಕೆದಾರರಲ್ಲಿ ನಕಲಿ ಅಥವಾ ಸ್ಪ್ಯಾಮ್ ಖಾತೆಗಳು 5% ಕ್ಕಿಂತ ಕಡಿಮೆ ಇದೆ ಎಂದು ಕಂಪನಿಯು ಈ ತಿಂಗಳ ಆರಂಭದಲ್ಲಿ ಅಂದಾಜಿಸಿತ್ತು.

ಜಾಹೀರಾತುದಾರರು ಟ್ವಿಟರ್‌ನಲ್ಲಿ ಖರ್ಚು ಮಾಡುವುದನ್ನು ಮುಂದುವರಿಸುತ್ತಾರೆಯೇ ಎಂಬುದನ್ನೂ ಒಳಗೊಂಡಂತೆ ಇಲಾನ್‌ ಮಸ್ಕ್‌ನೊಂದಿಗಿನ ಒಪ್ಪಂದ ಮುಚ್ಚುವವರೆಗೆ ಕಂಪೆನಿಯು ಹಲವಾರು ಅಪಾಯಗಳನ್ನು ಎದುರಿಸುತ್ತಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಜಗತ್ತಿನ ಅತಿ ದೊಡ್ಡ ಶ್ರೀಮಂತ ಇಲಾನ್ ಮಸ್ಕ್‌ನ ಫ್ರೀ ಸ್ಪೀಚ್ ವಾದದ ಹುಳುಕು

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಇಲಾನ್‌ ಮಸ್ಕ್, ಟ್ವಿಟರ್‌ನಿಂದ “ಸ್ಪ್ಯಾಮ್ ಬಾಟ್‌”ಗಳನ್ನು ತೆಗೆದುಹಾಕುವುದು ತನ್ನ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಅವರು ಟ್ವಿಟರ್‌ ಅನ್ನು 44 ಬಿಲಿಯನ್ ಡಾಲರ್ (ಸುಮಾರು ₹3.36 ಲಕ್ಷ ಕೋಟಿ)ಗೆ ಖರೀದಿಗೆ ಒಪ್ಪಂಡ ಮಾಡಿಕೊಂಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...