Homeದಿಟನಾಗರಫ್ಯಾಕ್ಟ್‌ಚೆಕ್: Sir ಎಂಬುದರ ಪೂರ್ಣ ರೂಪ Slave I Remember (ನಾನು ಗುಲಾಮ ಮರೆಯದಿರಿ) ಎಂಬುದೆ?...

ಫ್ಯಾಕ್ಟ್‌ಚೆಕ್: Sir ಎಂಬುದರ ಪೂರ್ಣ ರೂಪ Slave I Remember (ನಾನು ಗುಲಾಮ ಮರೆಯದಿರಿ) ಎಂಬುದೆ? ನಿಜವೇನು

- Advertisement -
- Advertisement -

Sir ಎಂಬುದರ ಪೂರ್ಣ ರೂಪ Slave I Remember (ನಾನು ಗುಲಾಮ ಮರೆಯದಿರಿ) ಎಂಬರ್ಥವಿದೆ ಮತ್ತು Slave I Remain ಗುಲಾಮನಾಗಿಯೇ ಇರುತ್ತೇನೆ ಎಂದು ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬ್ರೀಟಿಷರು ತಮ್ಮ ಆಡಳಿತದ ಕಾಲದಲ್ಲಿ ಭಾರತೀಯರನ್ನು ಹೀಯಾಳಿಸುವ ಸಲುವಾಗಿ ಹೀಗೆ ಬಳಸುವಂತೆ ಮಾಡಿದರೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

Sir ಎಂಬುದರ ಪೂರ್ಣ ರೂಪ Slave I Remember ಎಂಬುದೇ ಅಥವಾ Slave I Remain ಎಂಬುದೇ ಎಂದು ಅಂತರ್ಜಾಲದಲ್ಲಿ ಹುಡುಕಿದಾಗಿ ಅದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕೇಂಬ್ರಿಡ್ಜ್ ಡಿಕ್ಷನರಿಯ ಪ್ರಕಾರ sir ಎಂಬುದು ನಾಮಪದವಾಗಿದ್ದು ಇದನ್ನು ‘ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುವ ಔಪಚಾರಿಕ ಮತ್ತು ಸಭ್ಯ ವಿಧಾನವಾಗಿ ಬಳಸಲಾಗುತ್ತದೆ, ವಿಶೇಷವಾಗಿ ನಿಮಗೆ ಸೇವೆಯನ್ನು ಒದಗಿಸುತ್ತಿರುವ ಅಥವಾ ಅಧಿಕಾರದ ಸ್ಥಾನದಲ್ಲಿರುವವರಿಗೆ ಇದನ್ನು ಬಳಸಲಾಗುತ್ತದೆ’. ಅದರ ಕುರಿತ ಹೆಚ್ಚಿನ ಸರ್ ಬಗ್ಗೆ ಹೆಚ್ಚಿನ ವ್ಯಾಖ್ಯಾನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಇಂಗ್ಲಿಷ್ ಪದಗಳ ಮೂಲವನ್ನು ವಿವರಿಸುವ etymonline.com ಎಂಬ ವೆಬ್‌ಸೈಟ್ ಪ್ರಕಾರ Sir ಪದವು ಹಳೆಯ ಫ್ರೆಂಚ್ ಪದ Sireನಿಂದ ಹುಟ್ಟಿಕೊಂಡಿದೆ. Sire ಎಂಬ ಲ್ಯಾಟಿನ್ ಪದ ಸೀನಿಯರ್ ನಿಂದ ಹುಟ್ಟಿಕೊಂಡಿದೆ. ಅದು ಯಾವುದೇ ಪದದ ಸಂಕ್ಷಿಪ್ತ ರೂಪವಲ್ಲ ಎಂದು ಆ ವೆಬ್‌ಸೈಟ್ ತಿಳಿಸಿದೆ.

ನೈಟ್‌ಹುಡ್ ಪದವಿ ಪಡೆದವನ್ನು ಸೂಚಿಸಲು ಅವರ ಹೆಸರಿನ ಮುಂದೆ Sire ಅನ್ನುಸೇರಿಲಾಗುತ್ತಿತ್ತು. ಇದರರ್ಥ ಹಿರಿಯರು ಅಥವಾ ದೊಡ್ಡವರು ಎಂಬುದೆ ಹೊರತು ಮೇಲಿನ ಪೋಸ್ಟ್‌ನಲ್ಲಿ ವಿವರಿಸಿದಂತೆ Slave I Remember ಎಂಬುದರ ಸಂಕ್ಷಿಪ್ತ ರೂಪವಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ Sir ಎಂಬುದರ ಪೂರ್ಣ ರೂಪ Slave I Remember ಎಂಬುದಲ್ಲ. ಅದು ಹಳೆದ ಫ್ರೆಂಚ್ ಪದ Sire ನಿಂದ ಉತ್ಪತ್ತಿಯಾಗಿದೆ.

ಇದನ್ನೂ ಓದಿ: FLASHBACK| ಪರೇಶ್ ಮೇಸ್ತಾ ಸಾವಾದಾಗ ಬಿಜೆಪಿ ನಾಯಕರು ವರ್ತಿಸಿದ್ದು‌ ಹೀಗೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...