Homeಕರೋನಾ ತಲ್ಲಣಮೇ 16ರಿಂದ ಶೂನ್ಯ ಕೊರೊನಾ ಪ್ರಕರಣಗಳು: ನೀತಿ ಆಯೋಗವನ್ನು ಟ್ರೋಲ್‌ ಮಾಡಿದ ರಾಹುಲ್ ಗಾಂಧಿ

ಮೇ 16ರಿಂದ ಶೂನ್ಯ ಕೊರೊನಾ ಪ್ರಕರಣಗಳು: ನೀತಿ ಆಯೋಗವನ್ನು ಟ್ರೋಲ್‌ ಮಾಡಿದ ರಾಹುಲ್ ಗಾಂಧಿ

- Advertisement -
- Advertisement -

ನೀತಿ ಆಯೋಗದಲ್ಲಿನ ಬುದ್ದಿವಂತರು ಇದನ್ನು ಸಾಧಿಸಿದ್ದಾರೆ. ನಾಳೆ ಮೇ 16 ರಿಂದ ಯಾವುದೇ ಹೊಸ ಕೊರೊನಾ ಪ್ರಕರಣಗಳಿರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ನೀತಿ ಆಯೋಗವನ್ನು ಕುಟುಕಿದ್ದಾರೆ.

ಈ ಹಿಂದೆ ನೀತಿ ಆಯೋಗದ ಸದಸ್ಯರಾದ ವಿ.ಕೆ. ಪೌಲ್ ಪ್ರಕಟಿಸಿದ್ದ ಭಾರತದಲ್ಲಿ ಕೊರೊನಾ ಬೆಳವಣಿಗೆಯ ರೇಖಾ ಚಿತ್ರವನ್ನು ರಾಹುಲ್ ಗಾಂಧಿ ಇಂದು ಟ್ವಟ್ಟರಿನಲ್ಲಿ ಪ್ರಕಟಿಸಿ ಕುಟುಕಿದ್ದಾರೆ. ಅದರಲ್ಲಿ ಮೇ 16 ರ ರಂದು ಭಾರತದಲ್ಲಿ ಶೂನ್ಯ ಕೊರೊನಾ ಪ್ರಕರಣ ದಾಖಲಾಗುತ್ತದೆ ಎಂದು ಪೌಲ್‌ ಹೇಳಿದ್ದರು.

“ನೀತಿ ಆಯೋಗದಲ್ಲಿನ ಬುದ್ದಿವಂತರು ಇದನ್ನು ಸಾಧಿಸಿದ್ದಾರೆ. ಕೇಂದ್ರ ಸರ್ಕಾರ ಘೋಷಿಸಿದ್ದ ರಾಷ್ಟ್ರವ್ಯಾಪಿ ಲಾಕ್ ಡೌನ್ ನ ಕಾರ್ಯತಂತ್ರವನ್ನು ತೋರಿಸುವ ಅವರ ರೇಖಾ ಚಿತ್ರವನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ. ನಾಳೆ ಮೇ 16 ರಿಂದ ಯಾವುದೇ ಹೊಸ ಕೊರೊನಾ ಪ್ರಕರಣಗಳಿರುವುದಿಲ್ಲ” ಎಂದು ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ನೀತಿ ಆಯೋಗ ಎಪ್ರಿಲ್ 24 ರಂದು, ಕೊರೊನಾ ಸಂಬಂಧಪಟ್ಟ ಉನ್ನತ ಸಮೀತಿಯ ಅಧ್ಯಕ್ಷ ಹಾಗೂ ನೀತಿ ಆಯೋಗದ ಸಧಸ್ಯರು ಕೂಡಾ ಆಗಿರುವ ವಿ.ಕೆ. ಪೌಲ್ ಅವರು, “ಮೇ 16 ರ ಹೊತ್ತಿಗೆ ಭಾರತದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿಯುತ್ತದೆ” ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ರೇಖಾ ಚಿತ್ರವನ್ನು ಕೂಡಾ ಬಿಡುಗಡೆ ಮಾಡಲಾಗಿತ್ತು.

ಭಾರತದಲ್ಲಿ ಪ್ರಸ್ತುತ 81 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 2,469 ಸಾವುಗಳಾಗಿದೆ. ನಿನ್ನೆಯೆಂದ ಇವತ್ತಿಗೆ 3,900 ಕ್ಕಿಂತಲೂ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗಿದೆ. ಅಲ್ಲದೆ ಕಳೆದ ದಿನದಿಂದ ಕನಿಷ್ಠ 100 ಜನರು ಸೋಂಕಿನ ಕಾರಣಕ್ಕೆ ಸಾವಿಗೀಡಾಗಿದ್ದಾರೆ.

ಪ್ರಸ್ತುತ ಕೊರೊನಾ ಭಾದಿತರ ಪಟ್ಟಿಯಲ್ಲಿ ಭಾರತ 12 ನೇ ಸ್ಥಾನದಲ್ಲಿದ್ದು, ಕೊರೊನಾ ಪತ್ತೆಯಾದ ಚೀನಾ 11 ನೇ ಸ್ಥಾನದಲ್ಲಿದ್ದು ಭಾರತಕ್ಕಿಂತ ಕೇವಲ 1 ಸಾವಿರ ಅಂತರಲ್ಲಿದೆ.

ನೀತಿ ಆಯೋಗ ಹೇಳಿದ್ದೇನು ವಿಡಿಯೋ ನೋಡಿ


ಓದಿ: ಸಸ್ಯಹಾರಿಗಳಿಗೆ ಕೊರೊನಾ ಬರುವುದಿಲ್ಲ ಎಂಬುದು ನಿಜವೇ?; ಫ್ಯಾಕ್ಟ್ ಚೆಕ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...