Homeಮುಖಪುಟಕಾಯಕ ತತ್ವವೇ ಸಮಾನತೆಯ ತತ್ವ ಅದನ್ನು ಆಚರಿಸೋಣ

ಕಾಯಕ ತತ್ವವೇ ಸಮಾನತೆಯ ತತ್ವ ಅದನ್ನು ಆಚರಿಸೋಣ

- Advertisement -
- Advertisement -

ರೈತಾಪಿ ಜನರು, ಕಾಯಕ ಜೀವಿಗಳು, ಮಹಿಳೆಯರು ಮತ್ತು ಕೆಳವರ್ಗದ ಜನರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ವಗದ ಜನರಿಗಾಗಿ ತಮ್ಮ ಬದುಕಿನ ಎಲ್ಲ ಸುಖಭೋಗಗಳು ಅವರಿಗೆ ಧಾರೆಯರೆದು ಕೃತಜ್ಞರಾಗಿರುವ ಭಾವನೆ ಇತಿಹಾಸದ ಪುಟಗಳಲ್ಲಿ ನಾವು ನೋಡಬಹುದಾಗಿದೆ. ಕಾಯಕ ಯೋಗಿಯಾಗಿ ಕಾಯಕವಂತು ಮಾಡಲ್ಲಿಲ್ಲಾ ಆದರೆ ಎಲ್ಲಾ ಸೌಲಭ್ಯಗಳು ಮೆಲ್ಜಾತಿಯ ಜನರಿಗೆ ಮೀಸಲಾಗಿದ್ದವು.

ಎಂಟು ಶತಮಾನಗಳ ಹಿಂದೆ ಭಾರತದಲ್ಲಿ ವೈದಿಕಶಾಹಿ ಅತ್ಯಂತ ಪ್ರಬಲ ಶಾಲಿಯಾಗಿದ್ದ ಕಾಲವದು. ಚತುರ್ವಣಗಳನ್ನು ಮಾಡಿಕೊಂಡು, ಈ ನಾಲ್ಕೂ ವರ್ಣದಿಂದ ಹೊರಗಿರುವವರನ್ನು ಅಸ್ಪೃಶ್ಯರೆಂದು ಕರೆದು, ಅವರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದ ಕಾಲವದು. ಅಂದು ಇಲ್ಲಿ ಅನೇಕ ಮೂಢನಂಬಿಕೆಗಳು, ಗೊಡ್ಡು ಸಂಪ್ರದಾಯಗಳು, ಬಹುದೇವತೋಪಾಸನೆ, ಸ್ತ್ರೀಶೋಷಣೆ ಅನ್ಯಾಯಗಳಂತಹ ಅನೇಕ ಸಂಪ್ರದಾಯಗಳು ರುದ್ರ ತಾಂಡವಾಡುತ್ತಿದ್ದ ಕಾಲವದು – ಕಾಲವಾಗಿತ್ತು. ದೀನ, ದಲಿತರ ಶೋಷಣೆಯಂತೂ ಹೇಳತೀರದು, ಅತಿರೇಕದ ವರ್ತನೆಯಾಗಿತ್ತು. ಸ್ತ್ರೀಯನ್ನು ಕೇವಲ ಭೋಗದ ಗೊಂಬೆಯನ್ನಾಗಿ ಮಾಡಿಕೊಂಡು, ಅವಳಿಗೆ ಯಾವುದೇ ಧರ್ಮ ಸಂಸ್ಕಾರವಿಲ್ಲದೆ ನೋಡಿಕೊಳ್ಳುತ್ತಿದ್ದರು. ವಿಧವೆಯಾದವರನ್ನು ಅಮಾನುಷವಾಗಿ ಹಿಂಸಿಸುತ್ತಿದ್ದ ಕಾಲವದು.

ಬಡವರು, ಶೋಷಿತರು, ನೊಂದವರು, ಸ್ತ್ರೀಯರು ಒಕ್ಕೂರಲಿನಿಂದ ತಮ್ಮನ್ನುದ್ಧರಿಸುವ ಮಹಾಪುರುಷನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಕಾಲದಲ್ಲಿ, ನೊಂದವರ ನಂದಾ ದೀಪವಾಗಿ,ಬಡವರ ಭಾಗ್ಯದ ಸಂಜೀವಿನಿಯಾಗಿ, ನಿರ್ಗತಿಕರ ಬಂಧುವಾಗಿ, ಶೋಷಿತರ ದ್ವನಿಯಾಗಿ, ಸ್ತ್ರೀಕುಲೋದ್ಧಾರಕರಾಗಿ, ಮಾನವತೆಯ ಸಾಕಾರ ಮೂರ್ತಿಯಾಗಿ, ದಿವ್ಯ ಜ್ಯೋತಿಯಾಗಿ,ಕಾಯಕ ತತ್ತ್ವದ ಕ್ರಾಂತಿ ಪುರುಷ ರಾಗಿ ಈ ನಾಡಿನಲ್ಲಿ ಜನ್ಮತಾಳಿದವರು ಬಸವಣ್ಣನವರು. ಪ್ರಯುಕ್ತ ಕಾಯಕ ವರ್ಗದ ಜನರಿಗೆ ಸರಿಯಾದ ಗೌರವ ನೀಡದೇ ಇರುವ ಕಾಲದಲ್ಲಿ ಕಾಯಕದ ಸಮಾನತೆಯ ಬಗೆ ಅಂದಿನ ಜನರಿಗೆ ಸಂಪೂರ್ಣ ಸರಿಯಾದ ತಿಳುವಳಿಕೆ ಕೊಡುವ – ನೀಡುವ ಮೂಲಕ ಕಾಯಕದ ಶ್ರೇಷ್ಠತೆಯ ಪ್ರಜ್ಞೆಯನ್ನು ಪ್ರತಿಯೊಬ್ಬ ಶರಣರ ಹೃನ್ಮಮಂದಿರದಲ್ಲಿ ತುಂಬಿದರು. ತರುವಾಯ ಕಾಯಕದ ಗೌರವ ಮತ್ತು ಮೌಲ್ಯಗಳನ್ನು ಸಮಸ್ತ ಶರಣ ಸಂಕುಲಕ್ಕೆ ತಿಳಿ ಹೇಳುವ ಕಾರ್ಯ ನಿರ್ವಹಿಸಿದರು, ಈ ಮೂಲಕ ಕಾಯಕ ವರ್ಗದ ಶರಣರನ್ನು ಒಟ್ಟು ಗೊಡಿಸುವ ಕಾರ್ಯದೊಂದಿಗೆ ಕಲ್ಯಾಣ ಕಾಯಕ ಕ್ರಾಂತಿಗೆ ಕಾರಣಿಭೊತರಾದರು ನಮ್ಮ ಅಣ್ಣ ಬಸವಣ್ಣನವರು.

ಕಾಯಕ ತತ್ವ:

ಕಾಯಕ ಮಾನವನ ಬದುಕಿನ ಬಹು ದೊಡ್ಡ ಅಂಗ,ಈ ಅಂಗದಿಂದಲೇ ನಮ್ಮ ಬದುಕು, ಬದುಕಿಗಾಗಿ ಕಾಯಕ ಮಾಡಲೇಬೇಕು,ಅಂದಾಗಲೇ ಮನುಷ್ಯನ ಬಾಳಿಗೊಂದು ಸುಂದರ ಅರ್ಥ ಬರುತ್ತದೆ. ಆದ್ದರಿಂದ ಮನುಷ್ಯ ತನ್ನ ಜೀವನ ನಿರ್ವಹಣೆಗಾಗಿ ಅವಲಂಬಿಸಿರುವ ವೃತ್ತಿಯೇ ಕಾಯಕ,ಅದರಲ್ಲಿ ಮೇಲುಕೀಳೆಂಬುದಿಲ್ಲ. ಕಾಯಕ ಮಾಡದವರು ಊಟ ಮಾಡಲು ಯೋಗ್ಯರಲ್ಲ. ವೈಚಾರಿಕತೆಯ ಧರ್ಮದೃಷ್ಟಿಯಿಂದ ನ್ಯಾಯವಾದ ರೀತಿಯಲ್ಲಿ ತಮ್ಮ ಕಾಯಕವನ್ನು ಮಾಡಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಹಾಗಾಗಿ ಪ್ರತಿಯೊಬ್ಬ ಮಾನವರೂ ಉದ್ಯೋಗಶೀಲನಾಗಬೇಕು. ತನಗೆ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಆವಶ್ಯಕವಾದ ಪ್ರತಿಯೊಂದು ಕೆಲಸವನ್ನೂ ಪ್ರತಿಯೊಬ್ಬರೂ ನಿಸ್ವಾರ್ಥ ಸೇವಾ ಮನೋಭಾವದಿಂದ ಹಂಚಿಕೊಂಡು ಭಕ್ತಿ, ಭಾವ, ಶ್ರದ್ಧೆಯಿಂದ ಮಾಡಬೇಕು. ಮಾಡಿದಾಗಲೇ ಮನಸ್ಸಿಗೊಂದು ನೆಮ್ಮದಿಯ ನಿಟ್ಟುಸಿರು.

ಈ ಹಿನ್ನೆಲೆಯಲ್ಲಿ 12ನೇ ಶತಮಾನದ ಬಸವಾದಿ ಪ್ರಮಥರು ಅಂದು ಕೈಗೊಂಡ ಹಲವಾರು ಸಮಾಜ ಮುಖಿ ಸೇವೆಗಳ ಕಾರ್ಯಗಳು, ಕಾಯಕ ತತ್ವದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅವರ ಕೊಡುಗೆ ಅಪಾರವಾದುದು. ಇವರಲ್ಲಿ ಅಗ್ರಗಣ್ಯ ನಾಯಕನೆಂದರೆ ಬಸವಣ್ಣನವರು. ಹಾಗಾಗಿ ಕಾಯಕ ತತ್ವದ ಪ್ರಮುಖ ರೂವಾರಿ, ಸಮಾನತೆಯ ಯುಗ ಪುರುಷ, ಭಕ್ತಿ ಬಂಢಾರಿ ಬಸವಣ್ಣನವರು ಕೈಗೊಂಡ ಕಾಯಕ ಧ್ಯೇಯದ ಕ್ರಾಂತಿಕಾರಿ ವಿಚಾರಗಳ ಹೆಜ್ಜೆಗಳು ಇಂದಿನ ಕಾರ್ಮಿಕ ಸಮಾಜಕ್ಕೆ ಅತ್ಯಗತ್ಯವಾಗಿವೆ.ಆದಕಾರಣ ಅವರ ಕಾಯಕ ತತ್ವವನ್ನು ನಾವೆಲ್ಲರೂ ಇಂದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ.ಕೇವಲ ತೋರಿಕೆಗಾಗಿ ಮಾಡದೇ, ಆತ್ಮತೃಪ್ತಿಗಾಗಿ ಮಾಡುವುದು ಲೇಸು ಹಾಗೂ ಕುಟುಂಬ ವರ್ಗಕ್ಕೂ, ನಾಡಿಗೂ, ದೇಶಕ್ಕೂ ಒಳ್ಳೆಯದು ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ, ನಮ್ಮೆಲ್ಲರ ಭವಿಷ್ಯ ಉಜ್ವಲವಾಗುತ್ತದೆ.

ಕಾಯಕ ನಿಷ್ಠೆ:

ದುಡಿದುಣ್ಣುವುದು ಮನುಷ್ಯ ಸಹಜ ಧರ್ಮ. ಆಹಾರ ದಕ್ಕಿಸಿಕೊಂಡ ಮಾತ್ರಕ್ಕೆ ಮನುಷ್ಯನ ಜವಾಬ್ದಾರಿ ಮುಗಿಯುವುದಿಲ್ಲ. ದುಡಿಮೆ ಮನುಷ್ಯನಿಗೆ ಸ್ವಾಭಿಮಾನವನ್ನೂ ಆತ್ಮವಿಶ್ವಾಸವನ್ನೂ ಜವಾಬ್ದಾರಿಯನ್ನೂ ಗಳಿಕೆ ಹಂಚಿಕೊಳ್ಳುವ ದಾಸೋಹ (ಸೇವಾ ಕಾರ್ಯಗಳು)ನಡೆಸುವ ಅವಕಾಶವನ್ನೂ ನೀಡುತ್ತದೆ. ಕಾಯಕನಿಷ್ಠೆ ಬದುಕನ್ನು ಸಮತೋಲನದಲ್ಲಿ ಇರಿಸುತ್ತದೆ. ಕಾಯಕದಲ್ಲಿ ತೊಡಗಿದವರು ತಪ್ಪು ಕಾರ್ಯಗಳನ್ನು ಮಾಡುವ ಪ್ರಮೇಯವೇ ಬರುವುದಿಲ್ಲ! ಹಾಗೆಂದೇ ಬಸವಣ್ಣನವರು ಕಾಯಕ ಪರಂಪರಕ್ಕೆ ಇನ್ನಿಲ್ಲದ ಮಹತ್ವ ನೀಡಿದರು. ಕಾಯಕ ಒಂದು ಅದ್ಭುತ ಪ್ರಕ್ರಿಯೆ. ನಮ್ಮ ನಮ್ಮ ಕೆಲಸವನ್ನು ನಾವು ಕಾಯಾ ವಾಚಾ ಭಕ್ತಿ, ಭಾವ,
ನಿಸ್ವಾರ್ಥ ಮನಸ್ಸಿನಿಂದ ಮಾಡಬೇಕು. ನಮ್ಮ ದೇಹದ ಪ್ರತಿ ಕಣವನ್ನೂ ನಾವು ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಒಂದೊಳ್ಳೆ ಸಿಹಿ ತಿನಿಸನ್ನು ನಾವು ತಿನ್ನುವಾಗ ನಮ್ಮ ಇಡೀ ದೇಹದ ಅಸ್ತಿತ್ವವೇ ಅದರ ಆಸ್ವಾದನೆಯಲ್ಲಿ ತೊಡಗಿಸಿಕೊಳ್ಳುತ್ತೇವೇ ಹಾಗೆ ನಮ್ಮ ಕೆಲಸದಲ್ಲೂ ತೊಡಗಿಸಿಕೊಳ್ಳಬೇಕು. ಆಗ ಸಹಜವಾಗಿ ನಮ್ಮ ಕೆಲಸದ ಮೇಲೆ ನಮಗೆ ಅಭಿಮಾನ, ಪ್ರೀತಿ ಮೂಡುವುದು. ಸತ್ಯ, ಶುದ್ಧ ಕಾಯಕದ ಮೂಲಕ ಜೀವನ ನಡೆಸುವ ಕುರಿತಂತೆ ಬಸವಣ್ಣನವರು ಸೇರಿದಂತೆ ಅನೇಕ ಶಿವಶರಣರು ಜನಸಾಮಾನ್ಯರಿಗೆ ಕರೆ ಕೊಟ್ಟಿದ್ದಾರೆ.

ಇದಲ್ಲದೆ ವಚನಗಳು ಬರೆಯುವ ಮೂಲಕ ಪರಿಣಾಮಕಾರಿಯಾಗಿ ಸಮಾಜವನ್ನು ತಿದ್ದುವ ಕಾರ್ಯ ಸಹ ಮಾಡಿದ್ದಾರೆ. ಅವರ ಕಾಯಕ ನಿಷ್ಠೆಯ ವಚನಗಳು ಇಂದಿನ ಸಮಾಜಕ್ಕೆ ಅತಿ ಹೆಚ್ಚು ಪ್ರಸ್ತುತವಾಗಿವೆ. ಅವರು ನೀಡಿರುವ ಸಂದೇಶಗಳನ್ನು ನಾವೆಲ್ಲರೂ ಪಾಲಿಸಿದ್ದಲ್ಲಿ ಅತ್ಯುತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಆದಕಾರಣ ನಮ್ಮ ಅಹಂಕಾರ ತೇಜಿಸಿ, ಮುಕ್ತ ನಿರ್ಮಲವಾದ ಮನಸ್ಸಿನಿಂದ ಕಾಯಕ ಮಾಡಲು ಆತ್ಮಸಾಕ್ಷಿಯಾಗಿ ಮುಂದಾಗೋಣ,ಮುಂದಾಗುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ಸಿಗುವಂತೆ ನೋಡಿಕೋಳ್ಳೋಣ. ಗೌರವ ಸೀಗಬೇಕು, ಸಮೃದ್ಧಿ ಜೀವನವನ್ನು ಅವರು ಈ ಸಮಾಜದಲ್ಲಿ ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಬಾಳಬೇಕು. ಅಂದಾಗಲೇ ಬಸವಣ್ಣನವರ ಕಾಯಕ ನಿಷ್ಯಯ ವೈಚಾರಿಕ ವಿಚಾರಗಳಿಗೆ ನಾವೆಲ್ಲರೂ ಬೆಲೆ ನೀಡಿದಂತಾಗುತ್ತದೆ.

ಆಶಯ ಮಾತು:

ಸ್ವಾರ್ಥ ಹೀನ ಮನುಷ್ಯರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದುವ ಮೂಲಕ ಹೊರಗಡೆ ಬನ್ನಿ, ಬರಬೇಕು. ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಕಾಯಕ ಮಾಡಿ, ಮಾಡಬೇಕು. ಮಾಡುವ ಮೂಲಕ ಸರ್ವರಲ್ಲಿಯೊ ಕಾಯಕ ಪ್ರಜ್ಞೆಯ ಸ್ವೊರ್ತಿ ಮೂಡಿಸುವ ಕೆಲಸ ಆಗಬೇಕು.ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ಪ್ರತಿಯೊಬ್ಬರು ಸ್ವಾಭಿಮಾನ – ಅಭಿಮಾನದಿಂದ, ಸ್ವಚ್ಚಂದವಾಗಿ, ನೆಮ್ಮದಿಯಿಂದ ಈ ದೇಶ ಹಾಗೂ ಈ ಸಮಾಜದಲ್ಲಿ ಬದುಕುವಂತಾಗಬೇಕೆಂಬುವುದೇ 12ನೇ ಶತಮಾನದ ಎಲ್ಲಾ ಶಿವಶರಣರ ಮಾಹಾದಾಶಯವಾಗಿದೆ. ಆದ್ದರಿಂದ ಕಾಯಕ ಸಮಾನತೆ ತತ್ವವನ್ನು ನಮ್ಮೆಲ್ಲರ ಅಃತಕರಣದ ಆತ್ಮಕ್ಕೆ ಜಾಗೃತಿ ಮೂಡಿಸಿರುವ ಬಸವಾದಿ ಪ್ರಮಥರನ್ನು ಈ ದಿನ ಸ್ಮರಿಸಬೇಕಾದ ಅಗತ್ಯವಿದೆ ಜೊತೆಗೆ ಕಾಲಘಟ್ಟದಲ್ಲಿ ಅನೇಕ ಶರಣರು ಕಾಯಕ ಲೋಕಕ್ಕೆ ಅನೇಕ ವಚನಗಳನ್ನು ನೀಡಿದ್ದಾರೆ,ಇಂದು ನಾವೆಲ್ಲರೂ ಅವರನ್ನು ನನೆಯುವ ಕೆಲಸ ಮಾಡಬೇಕಾಗಿದೆ.

ಇತಿಹಾಸದ ಪುಟಗಳಲ್ಲಿ ಅನೇಕ ಶರಣರು ಕಾಯಕ ಸಮಾನತೆಗಾಗಿ ತಮ್ಮ ಬದುಕಿನ ಜೀವನವನ್ನು ನಮ್ಮಗಾಗಿ ಧಾರೆಯೆರೆದಿದ್ದಾರೆ ಜೊತೆಗೆ ಬದಲಾವಣೆಗಾಗಿ ಶ್ರಮಿಸಿದ್ದಾರೆ ಎನ್ನುವುದು ನಾವ್ಯಾರು ಮರೆಯಬಾರದು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕಾಗಿದೆ. ನಡೆಯುವ ಮೂಲಕ ಸರ್ವರಿಗೂ ಕಾಯಕ ಸ್ನೇಹಿತರಾಗೋಣ, ಲೋಕಕ್ಕೆ ಮಾದರಿಯಾಗೋಣ.


ಇದನ್ನೂ ಓದಿ: 12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...