ನಿಮ್ಮ ಹೋರಾಟಕ್ಕೆ ಇಡೀ ದೇಶವು ತಮ್ಮೊಂದಿಗಿದೆ: ಆಯಿಶೆ ಘೋಷ್‌ ಭೇಟಿಯಾದ ಪಿಣರಾಯ್‌

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜನವರಿ ಇಂದು ಜೆಎನ್‌ಯುಎಸ್‌ಯು ಅಧ್ಯಕ್ಷೆ ಆಯಿಷೆ ಘೋಷ್ ಅವರನ್ನು ಭೇಟಿಯಾದರು. ಜೆಎನ್‌ಯು ಶುಲ್ಕ ಹೆಚ್ಚಳ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ನಿಮ್ಮ ಹೋರಾಟಕ್ಕೆ ಇಡೀ ದೇಶವು ತಮ್ಮೊಂದಿಗಿದೆ ಎಂದು ಹೇಳಿದರು.

“ಇಡೀ ದೇಶವು ನ್ಯಾಯಕ್ಕಾಗಿನ ತಮ್ಮ ಹೋರಾಟದಲ್ಲಿ ಜೆಎನ್‌ಯುಎಸ್‌ಯು ಜೊತೆಗಿದೆ. ನಿಮ್ಮ ಪ್ರತಿಭಟನೆಯ ಬಗ್ಗೆ ಮತ್ತು ನ್ಯಾಯಕ್ಕಾಗಿ ಹೋರಾಟದಲ್ಲಿ ನಿಮಗೆ ಏನಾಗಿದೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ ”ಎಂದು ವಿಜಯನ್ ಘೋಷ್‌ಗೆ ತಿಳಿಸಿದರು.

ಇದಕ್ಕೂ ಮುನ್ನ ಶುಕ್ರವಾರ, ಜೆಎನ್‌ಯು ಹಿಂಸಾಚಾರ ಪ್ರಕರಣದ ಬಗ್ಗೆ ದೆಹಲಿ ಪೊಲೀಸರು “ಕಳಪೆ” ತನಿಖೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು ಮತ್ತು ನಗರ ಪೊಲೀಸ್ ಮುಖ್ಯಸ್ಥ ಮತ್ತು ವಿಶ್ವವಿದ್ಯಾಲಯದ ಉಪಕುಲಪತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿತ್ತು.

ಜೆಎನ್‌ಯುಎಸ್‌ಯು ಅಧ್ಯಕ್ಷ ಆಯಿಷೆ ಘೋಷ್ ಅವರು ಇಂದು ಶನಿವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ, ದೇಶದ ನೈಜ ಪ್ರಜಾಪ್ರಭುತ್ವ ಉಳಿಸುವ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

“ಕಾಮ್ರೇಡ್ ಪಿಣರಾಯ್ ಅವರು ಇಲ್ಲಿನ ಹೋರಾಟವನ್ನು ಬೆಂಬಲಿಸುವುದಾಗಿ ಹೇಳಿದರು. ನಮ್ಮ ಮೇಲಿನ ದಾಳಿಯ ಸಮಯದಲ್ಲಿ ನಮ್ಮೊಂದಿಗೆ ನಿಂತ ಕೇರಳದ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಘೋಷ್ ಹೇಳಿದರು.

ವಿಜಯನ್ ಅವರು ನವದೆಹಲಿಯಲ್ಲಿರುವ ಕೇರಳ ಭವನದಲ್ಲಿ ಘೋಷ್ ಅವರನ್ನು ಭೇಟಿಯಾದರು, ಅವರ ಪ್ರತಿಭಟನೆಗೆ ಐಕಮತ್ಯವನ್ನು ವ್ಯಕ್ತಪಡಿಸಿದರು ಮತ್ತು ಸುಧನ್ವ ದೇಶಪಾಂಡೆ ಅವರ ‘ಹಲ್ಲಾ ಬೋಲ್: ದಿ ಡೆತ್ ಅಂಡ್ ಲೈಫ್ ಆಫ್ ಸಫ್ದಾರ್ ಹಶ್ಮಿ’ ಪುಸ್ತಕವನ್ನೂ ಉಡುಗೊರೆಯಾಗಿ ನೀಡಿದರು.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

1 COMMENT

  1. ಜೆ.ಎನ್.ಯು.ವಿದ್ಯಾರ್ಥಿಗಳ ಹೋರಾಟಕ್ಕೆ ಈ ದೇಶದ ನಾಯಕರು ಸ್ಪಂದಿಸುತ್ತಿರುವುದು ಸ್ವಾಗತಾರ್ಹ.

LEAVE A REPLY

Please enter your comment!
Please enter your name here