Homeಚಳವಳಿಏಕಾಏಕಿ ಒಕ್ಕಲೆಬ್ಬಿಸುವಿಕೆ: ಮನೆ ಕಳೆದುಕೊಂಡು ದಾರಿ ಕಾಣದೆ ಪರಿತಪಿಸುತ್ತಿರುವ 86 ಕುಟುಂಬಗಳು

ಏಕಾಏಕಿ ಒಕ್ಕಲೆಬ್ಬಿಸುವಿಕೆ: ಮನೆ ಕಳೆದುಕೊಂಡು ದಾರಿ ಕಾಣದೆ ಪರಿತಪಿಸುತ್ತಿರುವ 86 ಕುಟುಂಬಗಳು

- Advertisement -
- Advertisement -

ಸ್ಲಂ ಬೋರ್ಡ್ ಅಧಿಕಾರಿಗಳಿಂದ ಎತ್ತಂಗಡಿಗೆ ಒಳಗಾಗಿರುವ ಬೆಂಗಳೂರಿನ ಸಿ.ವಿ ರಾಮನ್‌ನಗರ ವಿಧಾನಸಭಾ ಕ್ಷೇತ್ರದ ನ್ಯೂ ತಿಪ್ಪಸಂದ್ರ ವಾರ್ಡ್‌ನ ಕೃಷ್ಣಪ್ಪ ಗಾರ್ಡನ್‌ ಸ್ಲಂನ 86 ಕುಟುಂಬಗಳು ಮನೆ ಕಳೆದುಕೊಂಡು ದಾರಿ ಕಾಣದೆ ಪರಿತಪಿಸುತ್ತಿದ್ದಾರೆ. ಇಂದು ತಮ್ಮನ್ನು ಒಕ್ಕಲೆಬ್ಬಿಸಿದ ಬೆಂಗಳೂರಿನ ಸ್ಲಂ ಬೋರ್ಡ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಯಾವುದೇ ಪರ್ಯಾಯ ಪುನರ್ವಸತಿ ವ್ಯವಸ್ಥೆ ಮಾಡದೆ ಏಕಾಏಕಿ ಒಕ್ಕಲೆಬ್ಬಿಸಿರುವುದರಿಂದ ಕಂಗಲಾಗಿರುವ ಈ ಜನರು, ಸ್ಲಂ ಬೋರ್ಡ್ ಅಧ್ಯಕ್ಷರು ಬಂದು ಪುನರ್ವಸತಿ ವ್ಯವಸ್ಥೆ ಕಲ್ಪಿಸುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಹಲವಾರು ವರ್ಷಗಳಿಂದ ಕೃಷ್ಣಪ್ಪ ಗಾರ್ಡನ್‌ನಲ್ಲಿ ವಾಸವಿದ್ದ 86 ಕುಟುಂಬಗಳ 300 ಕ್ಕೂ ಹೆಚ್ಚು ಜನರನ್ನು ಒಕ್ಕಲೆಬ್ಬಿಸಲಾಗಿದೆ. ತಮ್ಮ ಮನೆಗಳನ್ನು ಉಳಿಸಿಕೊಳ್ಳಲು ಮುಂದಾದ ಬಡಜನರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ, ಕಾಲಿನಿಂದ ಒದ್ದು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಜನರಿಗಾಗಿಯೇ ಮಾರತ್ತಹಳ್ಳಿಯಲ್ಲಿ 313 ಮನೆಗಳನ್ನು ಸ್ಲಂ ಬೋರ್ಡ್ ನಿರ್ಮಿಸಿದೆ. ಅವುಗಳನ್ನು 303 ಮನೆಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಆದರೆ ಅಧಿಕಾರಿಗಳು ಲಂಚ ಕೊಟ್ಟವರಿಗೆ, ಹಣ ಕೊಟ್ಟವರಿಗೆ ಎರಡೆರಡು ಮನೆ ನೀಡಿದ್ದಾರೆ. ಈ 86 ಕುಟುಂಬಗಳ ಬಡಜನರನ್ನು ನಿರ್ಲಕ್ಷಿಸಲಾಗಿದೆ. ಅವರಿಗೆ ಪುನರ್ವಸತಿ ಕಲ್ಪಿಸದೆ ನಿನ್ನೆ ಏಕಾಏಕಿ ಬೀದಿಪಾಲು ಮಾಡಲಾಗಿದೆ. ಮನೆ ಇಲ್ಲದ ಈ ಜನ ನಿನ್ನೆ ಸ್ನೇಹಿತರೊಬ್ಬರ ಕಚೇರಿಯಲ್ಲಿ ಮಲಗಿ ಇಂದು ಪ್ರತಿಭಟನೆಗೆ ಬಂದಿದ್ದಾರೆ ಎಂದು ಕರ್ನಾಟಕ ಜನಾಂದೋಲನ ಸಂಘಟನೆಯ ಅಧ್ಯಕ್ಷರಾದ ಕೆ.ಮರಿಯಪ್ಪನವರು ತಿಳಿಸಿದ್ದಾರೆ.

ನಾನುಗೌರಿ.ಕಾಂ ನೊಂದಿಗೆ ಮಾತನಾಡಿದ ಅವರು, “ಈ ಜನರು ಅದೇ ಸ್ಥಳದ ವಿಳಾಸ ನೀಡಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ರೇ‍ಷನ್ ಕಾರ್ಡ್ ಪಡೆದಿದ್ದಾರೆ. ಈಗ ಅವರನ್ನು ಒಕ್ಕಲೆಬ್ಬಿಸಿರುವುದರಿಂದ ಮುಂದೇನು ಮಾಡಬೇಕೆಂದು ತೋಚದೆ ಕುಳಿತಿದ್ದಾರೆ. ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸ್ಲಂ ಬೋರ್ಡ್ ಅಧ್ಯಕ್ಷರು ಇತ್ತ ಸುಳಿದಿಲ್ಲ. ಸರ್ಕಾರ ಈ ಬಡವರನ್ನು ನಿರ್ಲಕ್ಷ್ಯ ಮಾಡದೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು” ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಬೀದಿಗೆ ಬಿದ್ದ ಬಡವರ ಬದುಕು: ಪುನರ್ವಸತಿಯಿಲ್ಲದೆ 86 ಕುಟುಂಬಗಳ ಒಕ್ಕಲೆಬ್ಬಿಸಿದ ಅಧಿಕಾರಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...