Homeಮುಖಪುಟಅಧಿಕಾರದ ಮದ ನಡೆಯುವುದಿಲ್ಲ ಎಂಬ ಸಂದೇಶ ರವಾನಿಸುವುದಕ್ಕಾಗಿ ಈ ಹೋರಾಟ: ಬಡಗಲಪುರ ನಾಗೇಂದ್ರ

ಅಧಿಕಾರದ ಮದ ನಡೆಯುವುದಿಲ್ಲ ಎಂಬ ಸಂದೇಶ ರವಾನಿಸುವುದಕ್ಕಾಗಿ ಈ ಹೋರಾಟ: ಬಡಗಲಪುರ ನಾಗೇಂದ್ರ

- Advertisement -
- Advertisement -

‘ನಮ್ಮ ರಾಜ್ಯದಲ್ಲಿ ಯಾರೊಬ್ಬರ ಅಧಿಕಾರದ ಮದವೂ ನಡೆಯುವುದಿಲ್ಲ ಎಂಬ ಸಂದೇಶವನ್ನು ಇಡೀ ರಾಜ್ಯಕ್ಕೆ ರವಾನಿಸುವ ನಿಟ್ಟಿನಲ್ಲಿ ಈ ಹೋರಾಟ ರೂಪಿಸಲಾಗಿದೆ’ ಎಂದು ರೈತ ಸಂಘಟನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜ್ವಲ್‌ ಲೈಂಗಿಕ ಹಗರಣ ಖಂಡಿಸಿ ನಡೆದ ‘ಹೋರಾಟದ ನಡಿಗೆ, ಹಾಸನದ ಕಡೆಗೆ..’ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಒಂದು ವೇಳೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಗೆದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮಗೆ ಅಧಿಕಾರ ಹೊಂದಲು ಅವಕಾಶವಿಲ್ಲವೆಂದು ತಿಳಿಸಲು ನಾವು ಹಾಸನದ ಮಹಿಳೆಯರೊಂದಿಗೆ ಮತ್ತೊಮ್ಮೆ ಹೋರಾಟ ಮಾಡೋಣ” ಎಂದು ಕರೆ ನೀಡಿದರು.

ಹಿರಿಯ ಡಿಎಸ್‌ಎಸ್‌ ಮುಖಂಡರಾದ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಮಾಜಿ ಪ್ರಧಾನಿಗಳೇ ನಿಮ್ಮ ಮೊಮ್ಮಗನ ಬಗ್ಗೆ ಮಾತನಾಡುವಾಗ ಕನಿಷ್ಟ ಕ್ಷಮೆ ಕೇಳುವ ವಿವೇಚನೆ ಇರಲಿಲ್ಲ ನಿಮಗೆ. ನಿಮ್ಮ ಹೇಳಿಕೆಗಳು ಖಂಡನೀಯ. ಕಾನೂನಿನ ವ್ಯವಸ್ಥೆಯಲ್ಲಿ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಕುಮಾರಸ್ವಾಮಿ ಹೇಳಿಕೆ ಕೊಡುತ್ತಿದ್ದಾರೆ. ಅಧಿಕಾರದ ದುರುಪಯೋಗ ಮಾಡಿಕೊಂಡು ಅತ್ಯಾಚಾರಗೈದ ನಿಮ್ಮ ಮೊಮ್ಮಗನನ್ನು ಕ್ಷಮಿಸಬಾರದು. ನೀವು ಇಡೀ ರಾಜ್ಯದ ಜನರ ಕ್ಷಮೆ ಕೇಳಬೇಕು. ದೇವೇಗೌಡರು ರಾಜಕೀಯ ನಿವೃತ್ತಿ ಪಡೆಯಬೇಕು. ಅವರ ಕುಟುಂಬಸ್ಥರ ರಾಜಕೀಯ ಅಂತ್ಯವಾಗಬೇಕು. ನಿಮ್ಮ ಅಧಿಕಾರ ದುರುಪಯೋಗದ ಕೆಲಸಗಳು ಸಾಕು” ಎಂದರು.

ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮಾತನಾಡಿ, “ಮಾನಗೆಟ್ಟ ರಾಜಕಾರಣದ ವಿರುದ್ಧ ಈ ಹೋರಾಟ ಸತ್ಯದ ಕನ್ನಡಿ ಹಿಡಿಯುತ್ತಿದೆ. ಪ್ರಜ್ವಲ್ ರೇವಣ್ಣನಿಗೆ ಮರ್ಯಾದೆ ಇದ್ದಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಕೊಡಬೇಕಿತ್ತು. ನಾಡಿನ ಜನರ ಕ್ಷಮೆ ಕೇಳಬೇಕಿತ್ತು. ಜನರ ಸಮ್ಮುಖದಲ್ಲಿ ನ್ಯಾಯ ಕೊಡಿಸಬೇಕಿತ್ತು. ನಿಮ್ಮ ಸಮರ್ಥನೆ ಖಂಡನೀಯ. ಇದು ನಿಮಗೆ ಯಾವುದೇ ಗೌರವ ತರುವುದಿಲ್ಲ. ಆತನನ್ನು ಕುಟುಂಬದಿಂದ ಹೊರಗೆ ಹಾಕದೆ ಇರುವುದಕ್ಕೆ ನಮಗೆ ಬೇಸರ ಇದೆ” ಎಂದರು.

“ಪ್ರಜ್ವಲ್ ವಿರುದ್ಧ ಹಾಕಿರುವ ಎಫ್‌ಐಆರ್‌ಗಳು ಸ್ಟೇಷನ್ ಬೇಲ್‌ನಿಂದಲೆ ಹೊರಬರುವಷ್ಟು ಸರಳವಾಗಿವೆ. ಎಸ್‌ಐಟಿ ಒಂದು ತಿಂಗಳ ಬಳಿಕ ಪ್ರಜ್ವಲ್ ಅವರ ಹಾಸಿಗೆ, ದಿಂಬು ವಶಪಡಿಸಿಕೊಂಡಿದೆ. ದಯವಿಟ್ಟು ಅದರಲ್ಲಿ ಒಂದು ಕೂದಲು ಇರದಂತೆ ನೋಡಿಕೊಳ್ಳಿ” ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.

ವಿಡಿಯೋ ಹಂಚಿಕೆ ನಿಲ್ಲಿಸಿ

“ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು. ಹಾದಿ ಬೀದಿಯಲ್ಲಿ ಚೆಲ್ಲಾಡುತ್ತಿರುವ ವೀಡಿಯೊಗಳನ್ನು ನಿಲ್ಲಿಸಬೇಕು. ವಿಡಿಯೋ ಹಂಚಿಕೆಯನ್ನು ನಿಲ್ಲಿಸದಿದ್ದರೆ ಸರ್ಕಾರದ ಮೇಲಿನ ವಿಶ್ವಾಸ ಹೋಗಲಿದೆ. ಈ ಹತ್ಯಾಕಾಂಡಕ್ಕೆ ತಾರ್ಕಿಕ ಅಂತ್ಯ ಹಾಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ರೂಪಿಸಲಾಗುವುದು” ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ; ಇಲ್ಲಿ ನಡೆದಿರುವುದು ಲೈಂಗಿಕ ಹಗರಣವಲ್ಲ.. ವಿಕೃತ ಲೈಂಗಿಕ ಹತ್ಯಾಕಾಂಡ: ರೂಪ ಹಾಸನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕುವೈತ್‌ ಅಗ್ನಿ ದುರಂತ: 45 ಭಾರತೀಯರ ಮೃತದೇಹಗಳು ಇಂದು ಕೇರಳಕ್ಕೆ ಆಗಮನ

0
ಎರಡು ದಿನಗಳ ಹಿಂದೆ ಗಲ್ಫ್ ದೇಶದಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಸಾವನ್ನಪ್ಪಿದ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಿಶೇಷ ವಾಯುಪಡೆಯ ವಿಮಾನವು ಕುವೈತ್‌ನಿಂದ ಟೇಕಾಫ್ ಆಗಿದೆ. ವಿಮಾನವು ಕೇರಳದ ಕೊಚ್ಚಿಯಲ್ಲಿ ಬೆಳಿಗ್ಗೆ 11...