Homeಮುಖಪುಟಇದುವರೆಗೂ ಬಿಜೆಪಿ ಖಾತೆ ತೆರೆಯಲಾಗದ ಕ್ಷೇತ್ರಗಳಿವು: ಕಾರಣವೇನು?

ಇದುವರೆಗೂ ಬಿಜೆಪಿ ಖಾತೆ ತೆರೆಯಲಾಗದ ಕ್ಷೇತ್ರಗಳಿವು: ಕಾರಣವೇನು?

53 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಒಮ್ಮೆ ಮಾತ್ರ ಖಾತೆ ತೆರೆದಿದೆ. ಒಮ್ಮೆಯೂ ಗೆಲ್ಲಲಾಗದ ಕ್ಷೇತ್ರಗಳೂ ಸಾಕಷ್ಟಿವೆ.

- Advertisement -
- Advertisement -

ಬಿಜೆಪಿ ಪಕ್ಷವು ಪ್ರಪಂಚದ ಅತ್ಯಂತ ದೊಡ್ಡ ಪಕ್ಷ ಎಂದು ಹೇಳಿಕೊಂಡಿದೆ. 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಆದರೂ ದಕ್ಷಿಣದ ರಾಜ್ಯಗಳಲ್ಲಿ ಅದು ಪೂರ್ಣ ಬಹುಮತದಿಂದ ಗೆದ್ದು ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಗೋವಾ ಮತ್ತು ಕರ್ನಾಟಕದಲ್ಲಿ ಅಲ್ಪ ಸ್ವಲ್ಪ ಅಧಿಕಾರ ನಡೆಸಿದರೂ ಕೂಡ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅದು ಅಧಿಕಾರದ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಿಲ್ಲ. ಏಕೆಂದರೆ ದಕ್ಷಿಣದ ಜನ ಅಷ್ಟು ಸುಲಭಕ್ಕೆ ಬಿಜೆಪಿಯ ರಾಷ್ಟ್ರೀಯತೆ ಮತ್ತು ಹಿಂದುತ್ವ ಸಿದ್ದಾಂತಗಳನ್ನು ಒಪ್ಪುವುದಿಲ್ಲ ಎಂಬುದು ಸಾಬೀತಾಗಿದೆ.

ಇನ್ನೂ ಕರ್ನಾಟಕದಲ್ಲಿ ಬಿಜೆಪಿ 1983ರಲ್ಲಿ 18 ಸೀಟು ಗೆದ್ದು ಜನತಾಪಕ್ಷಕ್ಕೆ ಬೆಂಬಲ ನೀಡಿತ್ತು. ಆದರೆ ಅದು ಪದೇ ಪದೇ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿ 1985ರಲ್ಲಿ ಸರ್ಕಾರ ವಿಸರ್ಜಿಸಿ ಮತ್ತೆ ಚುನಾವಣೆ ಎದುರಿಸಿ ಸ್ವತಂತ್ರವಾಗಿ ಜನತಾಪಕ್ಷ ಅಧಿಕಾರ ಹಿಡಿದಿತ್ತು. ಆ ನಂತರ 2004ರಲ್ಲಿ 79 ಸ್ಥಾನ ಗೆದ್ದರೂ ಪ್ರತಿಪಕ್ಷದಲ್ಲಿ ಕೂರಬೇಕಾಗಿತ್ತು. 2006ರಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸುವ ಮೂಲಕ ಅಧಿಕಾರದಲ್ಲಿತ್ತು. ಆದರೆ ಕುಮಾರಸ್ವಾಮಿಯವರು ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರಿಸದೇ ಸರ್ಕಾರ ವಿಸರ್ಜಿಸಿದರು. ಇದರಿಂದ ಯಡಿಯೂರಪ್ಪನವರ ಮೇಲಿನ ಅನುಕಂಪದಿಂದ 2008ರಲ್ಲಿ ಬಿಜೆಪಿ 110 ಸ್ಥಾನ ಗೆದ್ದಿತ್ತು. ಆದರೂ ಬಹುಮತಕ್ಕೆ 03 ಸೀಟುಗಳ ಕೊರತೆಯಿತ್ತು. ಆಗ ಯಡಿಯೂರಪ್ಪನವರು ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು.

ಇನ್ನು 2013ರಲ್ಲಿ ಬಿಜೆಪಿ 40 ಸ್ಥಾನಗಳಿಗೆ ಕುಸಿದಿತ್ತು. 2018ರಲ್ಲಿ 104 ಸ್ಥಾನ ಗೆದ್ದರೂ ಸರಳ ಬಹುಮತ ಸಿಗದೇ ವಿರೋಧ ಪಕ್ಷವಾಗಿತ್ತು. ಆದರೆ 2019ರಲ್ಲಿ ಮತ್ತೆ ಆಪರೇ‍ಷನ್ ಕಮಲ ನಡೆಸಿ ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದಿದೆ. ಇಷ್ಟೆಲ್ಲ ಆದರೂ ಬಿಜೆಪಿ ಕರ್ನಾಟಕ ಸುಮಾರು 44 ಕ್ಷೇತ್ರಗಳಲ್ಲಿ ಒಮ್ಮೆಯೂ ಗೆದ್ದು ಖಾತೆ ತೆರೆಯಲು ಸಾಧ್ಯವಾಗಿಲ್ಲ. ಅಲ್ಲದೆ 53 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಒಮ್ಮೆ ಮಾತ್ರ ಖಾತೆ ತೆರೆದಿದೆ. ಅಂತಹ ಕ್ಷೇತ್ರಗಳ ಪಟ್ಟಿ ಇಲ್ಲಿದೆ.

ಒಮ್ಮೆಯೂ ಗೆಲ್ಲಲಾಗದ ಕ್ಷೇತ್ರಗಳು

  1. ಮಂಡ್ಯ
  2. ಮದ್ದೂರು
  3. ಮೇಲುಕೋಟೆ
  4. ಶ್ರೀರಂಗಪಟ್ಟಣ
  5. ನಾಗಮಂಗಲ
  6. ಮಳವಳ್ಳಿ
  7. ಕುಣಿಗಲ್
  8. ಗುಬ್ಬಿ
  9. ಮಧುಗಿರಿ
  10. ಕೊರಟಗೆರೆ
  11. ಪಾವಗಡ
  12. ಚಿಂತಾಮಣಿ
  13. ಶಿಡ್ಲಘಟ್ಟ
  14. ಬಾಗೇಪಲ್ಲಿ
  15. ಗೌರಿಬಿದನೂರು
  16. ಮುಳಬಾಗಿಲು
  17. ಶ್ರೀನಿವಾಸಪುರ
  18. ಕೋಲಾರ
  19. ದೇವನಹಳ್ಳಿ
  20. ಹೆಚ್.ಡಿ ಕೋಟೆ
  21. ಹನೂರು
  22. ವರುಣ
  23. ಚಾಮುಂಡೇಶ್ವರಿ
  24. ಹೊಳೆನರಸೀಪುರ
  25. ಶ್ರವಣಬೆಳಗೊಳ
  26. ಅಫ್ಜಲಪುರ
  27. ಗುರುಮಠಕಲ್
  28. ಬೀದರ್ ದಕ್ಷಿಣ
  29. ಹಳಿಯಾಳ
  30. ದಾವಣಗೆರೆ ದಕ್ಷಿಣ
  31. ಶಹಾಪುರ
  32. ಮಾನ್ವಿ
  33. ಸಿಂಧನೂರು
  34. ಯಮಕನಮರಡಿ
  35. ಸಂಡೂರು
  36. ಭದ್ರಾವತಿ
  37. ಬ್ಯಾಟರಾಯಪುರ
  38. ಪುಲಿಕೇಶಿನಗರ
  39. ವಿಜಯನಗರ
  40. ಸರ್ವಜ್ಞನಗರ
  41. ಬಿಟಿಎಂ ಲೇಔಟ್
  42. ಗಾಂಧಿನಗರ
  43. ರಾಮನಗರ
  44. ಕನಕಪುರ

ಇಷ್ಟು ಕ್ಷೇತ್ರಗಳಲ್ಲಿ ಒಮ್ಮೆಯೂ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇವುಗಳಲ್ಲಿ ಬಹುತೇಕ ಹಳೇ ಮೈಸೂರು ಪ್ರಾಂತ್ಯದ ಕ್ಷೇತ್ರಗಳಾಗಿವೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಇದೆ ಹೊರತು ಬಿಜೆಪಿಗೆ ಮೂರನೇ ಸ್ಥಾನ. ಬಿಜೆಪಿಗೆ ಲಿಂಗಾಯತ ಸಮುದಾಯ ಕೆಲವೊಮ್ಮೆ ಹೆಚ್ಚಿನ ಬೆಂಬಲ ನೀಡಿದೆ. ಆದರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಲಿಂಗಾಯತರ ಪ್ರಾಬಲ್ಯವಿಲ್ಲ. ಅದು ಕೂಡ ಬಿಜೆಪಿ ಸೋಲಿಗೆ ಒಂದು ಕಾರಣವಾಗಿದೆ.

ಬಿಜೆಪಿ ಒಮ್ಮೆ ಮಾತ್ರ ಗೆಲುವು ಕಂಡ ಕ್ಷೇತ್ರಗಳಿವು

  1. ಕೆ.ಆರ್ ಪೇಟೆ (2019 ಉಪ)
  2. ನರಸಿಂಹರಾಜ (1994)
  3. ಚನ್ನಪಟ್ಟಣ (2011 ಉಪ)
  4. ಮಾಗಡಿ (1994)
  5. ಶಾಂತಿನಗರ (2004)
  6. ಚಾಮರಾಜ ಪೇಟೆ (1994)
  7. ಮಹಾಲಕ್ಷ್ಮೀ ಲೇಔಟ್ (2019 ಉಪ)
  8. ಗೋವಿಂದರಾಜನಗರ (2018)
  9. ಅರಕಲಗೂಡು (1999)
  10. ಅರಸೀಕೆರೆ (2004)
  11. ಬೇಲೂರು (1999)
  12. ಗದಗ (2008)
  13. ಮುದ್ದೇಬಿಹಾಳ (2018)
  14. ಬಬಲೇಶ್ವರ (1999)
  15. ನಾಗಠಾಣ (2008)
  16. ಇಂಡಿ (2008)
  17. ಯಾದಗಿರಿ (2018)
  18. ಲಿಂಗಸಗೂರು (2008)
  19. ಬೆಳಗಾವಿ ಉತ್ತರ (2018)
  20. ಗೋಕಾಕ್ (2019 ಉಪ)
  21. ಆಳಂದ (2018)
  22. ಹುಮ್ನಾಬಾದ್ (1999)
  23. ಚಿಂಚೋಳ್ಳಿ (2008)
  24. ಕಂಪ್ಲಿ (2008)
  25. ಹಡಗಲಿ (2008)
  26. ಹಗರಿಬೊಮ್ಮನಹಳ್ಳಿ (2008)
  27. ಕುಂದಗೋಳ (2008)
  28. ಹರಿಹರ (2008)
  29. ಮೂಡಬಿದರೆ (2018)
  30. ಮಂಗಳೂರು ನಗರ (1994)
  31. ಶಿರಾ (2020 ಉಪಚುನಾವಣೆ)
  32. ಮೊಳಕಾಲ್ಮೂರು (2018)
  33. ಹಿರಿಯೂರು (2018)
  34. ಹೊಸದುರ್ಗ (2018)
  35. ಚಿಕ್ಕೋಡಿ (2004)
  36. ಕುಡಚಿ (2018)
  37. ಚಿಕ್ಕಬಳ್ಳಾಪುರ (2019 ಉಪ)
  38. ನೆಲಮಂಗಲ (2008)
  39. ಹೊಸಕೋಟೆ (2008)
  40. ದೊಡ್ಡಬಳ್ಳಾಪುರ (1999)
  41. ಚಾಮರಾಜನಗರ (1999)
  42. ನಂಜನಗೂಡು (2018)
  43. ಕೊಳ್ಳೇಗಾಲ (2009 ಉಪ)
  44. ಟಿ.ನರಸೀಪುರ (1999)
  45. ಗುಂಡ್ಲುಪೇಟೆ (2018)
  46. ಬಂಗಾರಪೇಟೆ (2011 ಉಪ)
  47. ಕೊಪ್ಪಳ (2011 ಉಪ)
  48. ಮಸ್ಕಿ (2008)
  49. ಪಿರಿಯಾಪಟ್ಟಣ (1999)
  50. ಚಿತ್ತಾಪುರ (2008)
  51. ಜೇವರ್ಗಿ (2008)
  52. ಕಲಬುರಗಿ ಉತ್ತರ (2004)
  53. ಖಾನಪುರ (2008)

ಈ 53 ಕ್ಷೇತ್ರಗಳಲ್ಲಿ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಆಪರೇಷನ್ ಕಮಲ ಕಾರಣಕ್ಕಾಗಿ ನಡೆದ ಚುನಾವಣೆಗಳೇ ಹೆಚ್ಚಾಗಿವೆ. ಇನ್ನು 2008ರಲ್ಲಿ ಯಡಿಯೂರಪ್ಪನವರಿಗೆ ಸಿಎಂ ಸ್ಥಾನ ಕೊಡದೇ ಮೋಸ ಮಾಡಲಾಯಿತು ಎಂಬ ಅನುಕಂಪದಿಂದ ಬಹಳಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬಂದಿತ್ತು.

ಇದನ್ನೂ ಓದಿ: ಮುಸ್ಲಿಮರಿಗೆ ಒಂದೂ ಟಿಕೆಟ್ ನೀಡದ ಬಿಜೆಪಿ: ಜೆಡಿಎಸ್‌ನ 22, ಕಾಂಗ್ರೆಸ್ 15 ಅಭ್ಯರ್ಥಿಗಳ ವಿವರ ಇಲ್ಲಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...

ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯ ಜೊತೆಯಲ್ಲೆ ಸುಪ್ರೀಂ ಕೋರ್ಟ್‌ಗೆ ಹೋಗಲು ಕರ್ನಾಟಕ ಸಜ್ಜು

ಕೇಂದ್ರ ಸರ್ಕಾರದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಕಾಯ್ದೆಯ ಹಲವು ನಿಯಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ...

ಉತ್ತರ ಪ್ರದೇಶ: ಮದುವೆ ರಿಸೆಪ್ಷನ್‌ನಲ್ಲಿ ಗೋಮಾಂಸ ಬಡಿಸಿದ ಆರೋಪ; ವರನ ತಂದೆ ಸೇರಿ ಏಳು ಮಂದಿ ಬಂಧನ, ಮಂಟಪ ಸೀಲ್

ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದಲ್ಲಿ ನಡೆದ ಮದುವೆ ಆರತಕ್ಷತೆ (ವಲೀಮಾ) ಸಮಾರಂಭವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಾರಂಭದಲ್ಲಿ ಅತಿಥಿಗಳಿಗೆ ಗೋಮಾಂಸವನ್ನು ಬೇಯಿಸಿ ಬಡಿಸಲಾಗಿದೆ ಎಂಬ...

ರಾಮ ಮಂದಿರ ದೇಣಿಗೆ ವಿವಾದ: ಎಫ್‌ಐಆರ್ ದಾಖಲಿಸಿ ತ್ವರಿತ ನ್ಯಾಯಾಲಯದ ವಿಚಾರಣೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ರಾಮ ದೇಣಿಗೆ ವಿವಾದ ದುರುಪಯೋಗ ಕುರಿತು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ಕೂಡಲೇ, ಬಲಪಂಥೀಯ ಹಿಂದುತ್ವ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದೆ. ವಿಎಚ್‌ಪಿ ಅಂತರರಾಷ್ಟ್ರೀಯ...

ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ: ವಿದೇಶಾಂಗ ಸಚಿವಾಲಯ

ಪಾಸ್‌ಪೋರ್ಟ್ ಒಂದು ಪ್ರಯಾಣದ ದಾಖಲೆಯಾಗಿದೆಯೇ ಹೊರತು, ಪೌರತ್ವದ ದಾಖಲೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕಾರಿಗಳು ಬುಧವಾರ (ಜೂನ್ 24) ತಿಳಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಪೌರತ್ವವನ್ನು ಖಚಿತವಾಗಿ ಸಾಬೀತುಪಡಿಸುವ...

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...