Homeಮುಖಪುಟಟಿಎಂಸಿ ಚುನಾವಣಾ ಪ್ರಣಾಳಿಕೆ: ಸಿಎಎ, ಎನ್‌ಆರ್‌ಸಿ ರದ್ದು; ಏಕರೂಪ ನಾಗರಿಕ ಸಂಹಿತೆ ಜಾರಿ ಇಲ್ಲ

ಟಿಎಂಸಿ ಚುನಾವಣಾ ಪ್ರಣಾಳಿಕೆ: ಸಿಎಎ, ಎನ್‌ಆರ್‌ಸಿ ರದ್ದು; ಏಕರೂಪ ನಾಗರಿಕ ಸಂಹಿತೆ ಜಾರಿ ಇಲ್ಲ

- Advertisement -
- Advertisement -

ಮೊದಲ ಹಂತದ ಚುನಾವಣೆ ಪ್ರಾರಂಭವಾಗುವ ಎರಡು ದಿನಗಳ ಮೊದಲು ತೃಣಮೂಲ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದೆ. ಕೂಚ್‌ಬೆಹರ್, ಅಲಿಪುರ್‌ದುವಾರ್ ಮತ್ತು ಜಲ್ಪೈಗುರಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

ಟಿಎಂಸಿ ಘೋಷಿಸಲಾದ 10 ಭರವಸೆಗಳಲ್ಲಿ ಪಕ್ಷದ ಸಂಚಾಲಕಿ ಮಮತಾ ಬ್ಯಾನರ್ಜಿಯವರು ಬಂಗಾಳದಲ್ಲಿ ಯಾವುದೇ ಪೌರತ್ವ (ತಿದ್ದುಪಡಿ) ಕಾಯಿದೆ, ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಇರುವುದಿಲ್ಲ ಎಂಬ ಪುನರಾವರ್ತಿತ ಭರವಸೆಯನ್ನು ಒಳಗೊಂಡಿತ್ತು.

ಇಂಡಿಯಾ ಬಣದ ಭಾಗವಾಗಿ ಕೇಂದ್ರದಲ್ಲಿ ತೃಣಮೂಲ ಸರ್ಕಾರ ರಚನೆಯಾದ ನಂತರ ಭರವಸೆಗಳನ್ನು ಈಡೇರಿಸಲಾಗುವುದು ಎಂದು ತೃಣಮೂಲ ನಾಯಕರು ಹೇಳಿದ್ದಾರೆ. ರಾಜ್ಯದಲ್ಲಿ ಯಾವುದೇ ಮೈತ್ರಿ ಇಲ್ಲದಿದ್ದರೂ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ತೃಣಮೂಲ ಬೆಂಬಲವನ್ನು ಪ್ರತಿಪಾದಿಸಿದರು.

ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ಪೆಟ್ರೋಲಿಯಂ ಉತ್ಪನ್ನಗಳಿಗೆ ಬೆಲೆ ಸ್ಥಿರೀಕರಣ ನಿಧಿ. 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವೀಧರ ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಅಪ್ರೆಂಟಿಸ್‌ಶಿಪ್. ಸಿಎಎ ರದ್ದುಗೊಳಿಸಲಾಗುವುದು, ಎನ್‌ಆರ್‌ಸಿ ನಿಲ್ಲಿಸಲಾಗುವುದು. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇರುವುದಿಲ್ಲ. ದೇಶದಾದ್ಯಂತ ಹೆಣ್ಣು ಮಕ್ಕಳಿಗೆ ಕನ್ಯಾಶ್ರೀಯಂತಹ ಕಲ್ಯಾಣ ಯೋಜನೆಗಳುಗಳನ್ನು ಜಾರಿ ಮಾಡುವುದಾಗಿ ಭರವಸೆ ನೀಡಲಾಗಿದೆ.

ಚುನಾವಣಾ ಪ್ರಣಾಳಿಕೆ ಬಿಡುಗಡೆಯಾದಾಗ, ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ನಾಲ್ಕು ಟಿಎಂಸಿ ಅಭ್ಯರ್ಥಿಗಳು ಸ್ಪರ್ಧಿಸಲಿರುವುದರಿಂದ ಮಮತಾ ಬ್ಯಾನರ್ಜಿ ಪ್ರಚಾರಕ್ಕೆ ತೆರಳಿದ್ದಾರೆ. ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “ಬಿಜೆಪಿ ದೇಶವನ್ನು ಬಂಧನ ಶಿಬಿರ ಮಾಡಿದೆ; ಇಂಡಿಯಾ ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದರೆ, ಸಿಎಎ ಮತ್ತು ಎನ್‌ಆರ್‌ಸಿಯನ್ನು ರದ್ದುಗೊಳಿಸಲಾಗುವುದು” ಎಂದು ಹೇಳಿದರು.

“ಬಿಜೆಪಿಯವರು ಇಡೀ ದೇಶವನ್ನು ಬಂಧನ ಶಿಬಿರವನ್ನಾಗಿ ಮಾಡಿದ್ದಾರೆ… ನನ್ನ ಜೀವನದಲ್ಲಿ ಇಂತಹ ಅಪಾಯಕಾರಿ ಚುನಾವಣೆಯನ್ನು ನಾನು ನೋಡಿಲ್ಲ. ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಮತ್ತು ಚುನಾವಣೆ ಇರುವುದಿಲ್ಲ” ಎಂದು ಮಮತಾ ಹೇಳಿದರು.

ಇದನ್ನೂ ಓದಿ; ‘ಯಾವ ಆಧಾರದಲ್ಲಿ 400 ಸೀಟು ಎಂದು ಹೇಳುತ್ತಿದ್ದಾರೆ.. ಅವರು ಜ್ಯೋತಿಷಿಗಳೇ..?’; ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...