Homeಮುಖಪುಟಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗುತ್ತದೆಂದು ಸಂಭ್ರಮಿಸುವವರಿಗೆ ಆರ್‌ಬಿಐ ಮಾಜಿ ಗವರ್ನರ್ ಎಚ್ಚರಿಕೆ

ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗುತ್ತದೆಂದು ಸಂಭ್ರಮಿಸುವವರಿಗೆ ಆರ್‌ಬಿಐ ಮಾಜಿ ಗವರ್ನರ್ ಎಚ್ಚರಿಕೆ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುವಂತೆ 2029ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳವಣಿಗೆಯಾಗುತ್ತದೆ ಎಂಬುವುದು ಸಂಭ್ರಮಿಸುವ ವಿಚಾರವಲ್ಲ ಎಂದು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಡಿ ಸುಬ್ಬರಾವ್ ಎಚ್ಚರಿಕೆ ನೀಡಿದ್ದಾರೆ.

ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ಡಿ ಸುಬ್ಬರಾವ್ ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ಆದಾಗ್ಯೂ, ಭಾರತದ ಅಪಾರ ಜನಸಂಖ್ಯೆಯು ಅದರ ಆರ್ಥಿಕ ಗಾತ್ರಕ್ಕೆ ಕೊಡುಗೆ ನೀಡುವುದರಿಂದ, ಈ ಮೈಲಿಗಲ್ಲನ್ನು ಮುಟ್ಟಿದರೂ ದೇಶವು ಬಡತನದಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಸುಬ್ಬರಾವ್ ಒತ್ತಿ ಹೇಳಿದರು.

ಭಾರತವು ಜಾಗತಿಕವಾಗಿ ಐದನೇ-ಅತಿದೊಡ್ಡ ಆರ್ಥಿಕತೆಯಾಗಿದೆ. GDP 4 ಟ್ರಿಲಿಯನ್ಇದೆ. ಆದರೆ ಕಡಿಮೆ ತಲಾ ಆದಾಯ ಕಡಿಮೆ ಅಂದರೆ 2,600 ಇದ್ದು, ಅಂತರಾಷ್ಟ್ರೀಯವಾಗಿ 139ನೇ ಸ್ಥಾನದಲ್ಲಿದೆ. ಇದಲ್ಲದೆ ಬ್ರಿಕ್ಸ್ ಮತ್ತು ಜಿ-20 ಸದಸ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಕಡಿಮೆ ಶ್ರೀಮಂತ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ.

ನನ್ನ ದೃಷ್ಟಿಯಲ್ಲಿ, ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತದೆ ಎನ್ನುವುದು ಅಸಾಧ್ಯವಲ್ಲ, ಆದರೆ ಇದನ್ನು ಆಚರಣೆ ಮಾಡಬಾರದು. ಏಕೆಂದರೆ ನಾವು 1.40 ಶತಕೋಟಿ ಜನರಿರುವುದರಿಂದ ನಾವು ದೊಡ್ಡ ಆರ್ಥಿಕತೆಯಾಗಿದ್ದೇವೆ ಮತ್ತು ಜನರು ಉತ್ಪಾದನೆಯ ಭಾಗವಾಗಿದ್ದಾರೆ. ಆದ್ದರಿಂದ ನಾವು ದೊಡ್ಡ ಆರ್ಥಿಕತೆ ಏಕೆಂದರೆ ನಮ್ಮಲ್ಲಿ ಜನರಿದ್ದಾರೆ, ಆದರೆ ನಮ್ಮ ದೇಶ ಬಡ ದೇಶವಾಗಿದೆ ಎಂದು ಸುಬ್ಬರಾವ್ ಹೇಳಿದ್ದಾರೆ.

ಸುಬ್ಬರಾವ್ ಅವರು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಪ್ರಯೋಜನಗಳ ಸಮಾನ ವಿತರಣೆಯ ಅಗತ್ಯವನ್ನು ಒತ್ತಿ ಹೇಳಿದರು. ಹೆಚ್ಚುವರಿಯಾಗಿ, 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಅವರು ನೆನಪಿಸಿಕೊಂಡಿದ್ದಾರೆ, ಈ ಗುರಿಯನ್ನು ಸಾಧಿಸಲು ಕಾನೂನಿನ ನಿಯಮ, ಹೊಣೆಗಾರಿಕೆ ಮತ್ತು ಸ್ವತಂತ್ರ ಸಂಸ್ಥೆಗಳ ಅಗತ್ಯತೆಗಳನ್ನು ಒತ್ತಿ ಹೇಳಿದ್ದಾರೆ.

ಇದನ್ನು ಓದಿ: ಕೇಂದ್ರಿಯ ವಿವಿ ಹಾಸ್ಟೆಲ್‌ಗೆ ‘ಸ್ವಾತಂತ್ರ ಹೋರಾಟಗಾರ್ತಿ’ಯ ಹೆಸರು ಕೈಬಿಟ್ಟು ‘ಆರೆಸ್ಸೆಸ್‌ ನಾಯಕಿ’ಯ ಹೆಸರು ನಾಮಕರಣ

 

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...