ಬಹು ನಿರೀಕ್ಷಿತ “ಸೈರಾ ನರಸಿಂಹರೆಡ್ಡಿ” ಬಿಡುಗಡೆ : ಸಿನಿ ಪ್ರಿಯರ ಮನ ಗೆಲ್ಲುತ್ತಾ ಸೈರಾ?

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ತೆಲುಗಿನ ಸೈರಾ ನರಸಿಂಹ ರೆಡ್ಡಿ ಚಿತ್ರ ಪಂಚಭಾಷೆಗಳಲ್ಲಿ ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಟ್ರೇಲರ್ ಮೂಲಕ ಸಾಕಷ್ಟು ಸೆನ್ಸೇಷನ್ ಸೃಷ್ಟಿಸಿದ್ದ ಸೈರಾ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಸಿನಿ ಪ್ರಿಯರ ಕಾತುರಕ್ಕೆ ಕೊನೆಬಿದ್ದಿದೆ.

ಯಾರು ಈ ಸೈರಾ ನರಸಿಂಹರೆಡ್ಡಿ?
ಪ್ರಥಮ ಸ್ವಾತಂತ್ರ ಹೋರಾಟಕ್ಕೂ ಮುಂಚಿನ ಕಾಲ.. ಈಸ್ಟ್ ಇಂಡಿಯಾ ಕಂಪನಿಯ ದುರಾಡಳಿತದಿಂದ ಭಾರತೀಯ ಜನರು ಕಂಗಾಲಾಗಿದ್ದಾರೆ. ಆಗ ಬ್ರಿಟಿಷರು ರೈತವಾರಿ ಪದ್ಧತಿಯನ್ನು ಜಾರಿಗೆ ತರುತ್ತಾರೆ. ಈ ದುಬಾರಿ ತೆರಿಗೆ ಪದ್ಧತಿಯಿಂದ ಈಗಾಗಲೇ ಗಾಯಗೊಂಡಿದ್ದ ರೈತ ಸಮುದಾಯದ ಮೇಲೆ ಉಪ್ಪು ಸವರಿದಂತಾಗುತ್ತದೆ. ಸುಮಾರು ೫ ಸಾವಿರಕ್ಕೂ ಹೆಚ್ಚು ಜನರ ಈ ನೀತಿಯ ವಿರುದ್ಧ ದಂಗೆಯೇಳುತ್ತಾರೆ.. ಆ ದಂಗೆಗೆ ನೇತೃತ್ವ ಕೊಟ್ಟವರು ಉಯ್ಯಲವಾಡ ನರಸಿಂಹರೆಡ್ಡಿ…

ಆಂಧ್ರಪ್ರದೇಶದ ರಾಯಲಸೀಮಾ ಪ್ರಾಂತ್ಯದ ಕರ್ನೂಲ್ ಜಿಲ್ಲೆಯ ರಾಜನಾಗಿದ್ದ ಈ ಉಯ್ಯಲವಾಡ ನರಸಿಂಹರೆಡ್ಡಿಯವರು ಬ್ರಿಟಿಷರ ವಿರುದ್ಧ ನಡೆಸಿ ಫೆಬ್ರವರಿ ೨೨, ೧೮೪೭ರಲ್ಲಿ ಹತರಾದವರು. ಅವರ ಹೋರಾಟದ ಜೀವನವೇ ಸೈರಾ ನರಸಿಂಹರೆಡ್ಡಿ ಸಿನಿಮಾವಾಗಿ ಮೂಡಿಬಂದಿದೆ.

ಮೆಗಾಸ್ಟಾರ್ ಚಿರಂಜೀವಿ ನಾಯಕನಟನಾಗಿ ಅಭಿನಯಿಸಿರುವ ಈ ಸಿನಿಮಾವನ್ನು ಅವರ ಮಗ ರಾಮ್ ಚರಣ್ ನಿರ್ಮಾಣ ಮಾಡಿದ್ದು ಸುರೇಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿರುವ, ನಯನತಾರ ನಾಯಕನಟಿಯಾಗಿರುವ ಈ ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್, ತಮಿಳಿನ ವಿಜಯ್ ಸೇಥುಪತಿ, ತಮನ್ನಾ, ಜಗಪತಿ ಬಾಬು ಸಹ ಅಭಿನಯಿಸಿದ್ದು ಅಮಿತಾಬ್ ಬಚ್ಚನ್ ರವರು ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ..

ಮೇಕಿಂಗ್ ನಿಂದಲೇ ಸದ್ದು ಮಾಡಿರುವ ಸೈರಾ, 270 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಕನ್ನಡದಲ್ಲಿಯೂ ಡಬ್ ಆಗಿರುವ ಕಾರಣದಿಂದ ಕನ್ನಡಾಭಿಮಾನಿಗಳು ಸಹ ಕನ್ನಡದಲ್ಲೇ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here