ಸುದ್ದಿ ಮೇಲಿನ ನಂಬಿಕೆ - 46 ದೇಶಗಳಲ್ಲಿ ಭಾರತ 31 ನೇ ಸ್ಥಾನದಲ್ಲಿದೆ! | Naanu gauri
PC: Indian Television

ಸುದ್ದಿಗಳ ಮೇಲಿನ ನಂಬಿಕೆ ಜಾಗತಿಕವಾಗಿ ಸರಾಸರಿ ಬೆಳೆದಿದೆ ಎಂದು 2021 ರ ಡಿಜಿಟಲ್ ನ್ಯೂಸ್ ವರದಿಯ ಭಾಗವಾಗಿ 46 ದೇಶಗಳಲ್ಲಿ ನಡೆಸಿದ ಸಮೀಕ್ಷೆ ತಿಳಿಸಿದೆ. ಆದರೆ ಈ ಪಟ್ಟಿಯಲ್ಲಿ ಭಾರತ 31 ನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ. ರಾಯಿಟರ್ಸ್ ಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ಜರ್ನಲಿಸಂ ಮತ್ತು ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ ಸಹಯೋಗದೊಂದಿಗೆ ಈ ಸಮೀಕ್ಷಯನ್ನು ನಡೆಸಿತ್ತು.

ವಿವಿಧ ದೇಶಗಳಲ್ಲಿ ಸುದ್ದಿಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮಾಡಲಾಗಿರುವ 46 ದೇಶಗಳ ಮಾಧ್ಯಮ ಮಾರುಕಟ್ಟೆಯ ಆನ್‌ಲೈನ್ ಸಮೀಕ್ಷೆಯನ್ನು ಇದು ಆಧರಿಸಿದೆ. ಈ ವರ್ಷದ ವರದಿಯು ಸುದ್ದಿಯಲ್ಲಿನ ನಂಬಿಕೆ, ಸುದ್ದಿ ಪ್ರಕಾಶಕರ ಮೇಲೆ ಸಾಂಕ್ರಾಮಿಕ ಪ್ರೇರಿತ ಆರ್ಥಿಕ ಒತ್ತಡ, ತಪ್ಪು ಮಾಹಿತಿ ಮತ್ತು ಕೊರೊನಾ ಹಾಗೂ ಸಾರ್ವಜನಿಕರಲ್ಲಿ ಡಿಜಿಟಲ್ ಸುದ್ದಿ ಬಳಕೆಯ ಇತರ ಅಂಶಗಳನ್ನು ಕೇಂದ್ರೀಕರಿಸಿದೆ.

ಭಾರತವು ಪ್ರಬಲ ಮೊಬೈಲ್ ಕೇಂದ್ರಿತ ಮಾಧ್ಯಮ ಮಾರುಕಟ್ಟೆಗಳಲ್ಲಿ ಒಂದಾಗಿದೆ. ದೇಶದ 73% ರಷ್ಟು ಜನರು ಸ್ಮಾರ್ಟ್‌ಫೋನ್‌ಗಳ ಮೂಲಕ ಸುದ್ದಿಗಳನ್ನು ನೋಡುತ್ತಾರೆ ಎಂದು ಸಮೀಕ್ಷೆಯು ಹೇಳಿದೆ. ಒಟ್ಟಾರೆಯಾಗಿ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ 82% ಜನರ ಸುದ್ದಿ ಮೂಲ ಆನ್‌ಲೈನ್ ಆಗಿದೆ, ಇದರಲ್ಲಿ ಸಾಮಾಜಿಕ ಜಾಲತಾಣದಲೇ 63% ಸಾಮಾಜಿಕ ಮಾಧ್ಯಮಗಳ ಮೂಲಕವೆ ಸುದ್ದಿಯನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ‘ಗಾಂಪರ ಗುರು’, ರಾಜ್ಯ ಬಿಜೆಪಿ ಗಾಂಪರ ಗುಂಪು!: ಕಾಂಗ್ರೆಸ್ ಲೇವಡಿ

ವಾಟ್ಸಾಪ್ ಮತ್ತು ಯೂಟ್ಯೂಬ್‌ ಉನ್ನತ ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರ್ಮ್‌ಗಳಾಗಿದ್ದು, ಈ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಅತಿರೇಕದ ತಪ್ಪು ಮಾಹಿತಿ ಸಿಗುತ್ತಿದೆ ಎಂಬ ಕಳವಳಗಳ ನಡುವೆಯು 53% ಜನರು ತಮ್ಮ ಸುದ್ದಿಯನ್ನು ಪಡೆಯುತ್ತಾರೆ ಸಮೀಕ್ಷೆ ಹೇಳಿದೆ.

46 ದೇಶಗಳ ಒಟ್ಟು ಮಾದರಿಗಳಲ್ಲಿ 44% ಜನರು ಹೆಚ್ಚಿನ ಸಮಯ ಸುದ್ದಿಯನ್ನು ನಂಬುತ್ತಾರೆ. ಆದರೆ ಭಾರತದಲ್ಲಿ 38% ಜನರು ಒಟ್ಟಾರೆ ಸುದ್ದಿಯನ್ನು ನಂಬಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಫಿನ್‌‌ಲ್ಯಾಂಡ್‌‌ನ 65% ರಷ್ಟು ಜನರು ಸುದ್ದಿಗಳನ್ನು ನಂಬುತ್ತಾರೆ ಎಂದು ತಿಳಿದು ಬಂದಿದ್ದು, ಈ ಮೂಲಕ ಇದು ಮೊದಲ ಸ್ಥಾನದಲ್ಲಿ ಇದೆ. ಆದರೆ ಅಮೆರಿಕಾ ಅತ್ಯಂತ ಕಡಿಮೆ ಮಟ್ಟದ ನಂಬಿಕೆಯನ್ನು ಹೊಂದಿದೆ. ಅಮೆರಿಕಾದಲ್ಲಿ ಕೇವಲ 29% ಜನರು ಸುದ್ದಿಗಳನ್ನು ನಂಬುತ್ತಾರೆ.

ಭಾರತದಲ್ಲಿ ಸಮೀಕ್ಷೆಗೆ ಪ್ರತಿಕ್ರಿಯಿಸಿದವರು ಮುಖ್ಯವಾಗಿ ಇಂಗ್ಲಿಷ್ ಮಾತನಾಡುವವರು, ಆನ್‌ಲೈನ್ ಸುದ್ದಿ ಬಳಕೆದಾರರು, ಹೆಚ್ಚು ಶ್ರೀಮಂತರು, ಕಿರಿಯರು, ವಿದ್ಯಾವಂತರು ಮತ್ತು ನಗರದಲ್ಲಿ ವಾಸಿಸುವವರಾಗಿದ್ದಾರೆ. ಇವರು ದೇಶದ ಮಾಧ್ಯಮ ಮಾರುಕಟ್ಟೆಯ ಒಂದು ಸಣ್ಣ ಭಾಗವನ್ನಷ್ಟೇ ಪ್ರತಿನಿಧಿಸುತ್ತಾರೆ. ಈ ಸಂಶೋಧನೆಗಳನ್ನು ರಾಷ್ಟ್ರವನ್ನು ಪ್ರತಿನಿಧಿಸುವಂತೆ ಪರಿಗಣಿಸಬಾರರದು ಎಂದು ಸಮೀಕ್ಷೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಸಂಸದೆ ನವನೀತ್ ಕೌರ್‌ ಜಾತಿ ಪ್ರಮಾಣ ಪತ್ರ ರದ್ದತಿಗೆ ಸುಪ್ರೀಂ ಕೋರ್ಟ್ ತಡೆ

LEAVE A REPLY

Please enter your comment!
Please enter your name here