| ನಾನುಗೌರಿ ಡೆಸ್ಕ್ |

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ರವರು ಎಂ.ಎಂ ಖಾನ್ ಮತ್ತು ತನ್ಜಿಲ್ ಅಹ್ಮದ್ ಎಂಬುವವರ ಕುಟುಂಬಕ್ಕೆ 1 ಕೋಟಿ ಪರಿಹಾರ ಹಣ ನೀಡಿದ್ದಾರೆ. ಆದರೆ ಕಳೆದ ವರ್ಷ ಕೊಲೆಯಾದ ಅಂಕಿತ್ ಸಕ್ಸೇನಾ ಕುಟುಂಬಕ್ಕೆ ಏನು ಸಿಕ್ಕಿಲ್ಲ. ಅರವಿಂದ್ ಕೇಜ್ರಿವಾಲ್ ರವರೇ, ನಿಮ್ಮಿಂದ ಪರಿಹಾರ ಪಡೆಯಲು ಅಂಕಿತ್ ಸಕ್ಸೇನಾರವರ ಕುಟುಂಬ ತಮ್ಮ ಹೆಸರನ್ನು ಖಾನ್ ಅಥವಾ ಅಹ್ಮದ್ ಎಂದು ಬದಲಿಸಿಕೊಳ್ಳಬೇಕೆ? ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಮೇಜರ್ ಸುರೇಂದ್ರ ಪೂನಿಯಾರವರು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರಸಿದ್ದ ಜಾಲತಾಣಿಗ ಧೃವ್ ರಾಠೀ ಕೊಟ್ಟ ಉತ್ತರವೇನು ಗೊತ್ತೆ?

ಅಂಕಲ್, ನಿಮಗೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲವೇ? ಫೇಕ್ ನ್ಯೂಸ್‍ಗಳನ್ನು ಹರಡುವ ಮೂಲಕ ಜನರನ್ನು ಕೋಮುವಾದಿಕರಣಗೊಳಿಸುವುದು ಮತ್ತು ಹಿಂದೂ ಮುಸ್ಲಿಂ ಹೆಸರಿನಲ್ಲಿ ಜನರನ್ನು ಒಡೆಯುವುದು ಮಾತ್ರವೇ ನಿಮ್ಮ ಜೀವನದ ಉದ್ದೇಶವೆಂದು ಕಾಣುತ್ತಿದೆ.

ಈ ಕೆಳಗಿನ ಹೆಸರುಗಳು ಖಾನ್ ಅಥವಾ ಅಹ್ಮದ್ ಎಂದು ಇವೆಯೇ?
ಆನಂದ್ ಕುಮಾರ್ – ಒಂದು ಕೋಟಿ
ಮನರಾಮ್ – ಒಂದು ಕೋಟಿ
ರಾಮ್ ಕಾನ್ವಾರ್ ಮೀನಾ – 50 ಲಕ್ಷ
ವಿನೋದ್ ಕುಮಾರ್ – ಒಂದು ಕೋಟಿ
ನರೋತ್ತಮ್ ದಾಸ್ – ಒಂದು ಕೋಟಿ

ಎಂದು ರಿಪ್ಲೈ ಮಾಡುವ ಮೂಲಕ ಮುಖಕ್ಕೆ ಹೊಡೆದಂತೆ ತಿರುಗೇಟು ನೀಡಿದ್ದಾರೆ. ಅಲ್ಲದೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ರವರು ಜಾತಿ/ಧರ್ಮದ ಬೇಧಭಾವವಿಲ್ಲದೇ ಪರಿಹಾರ ವಿತರಿಸಿರುವ ದಾಖಲೆಯನ್ನು ಅಂಟಿಸಿದ್ದಾರೆ.

ಇದರ ಜೊತೆಗೆ ಅಶೋಕ್ ಅಗರ್ ವಾಲ್ ಎಂಬುವವರು ‘ಈ ಮನುಷ್ಯ “ಮೇಜರ್” ಪದವಿಯನ್ನು ದುರುಪಯೋಗ ಮಾಡಿಕೊಂಡು ಜನರನ್ನು ಕೋಮು ದ್ವೇಷ ಮೂಡಿಸುತ್ತಿದ್ದಾರೆ. ಇಂತಹವರಿಂದ ಆ ಪದವಿಗೆ ಅಗೌರವ ಉಂಟಾಗಲಿದ್ದು ಅದನ್ನು ಹಿಂಪಡೆಯಬೇಕೆಂದು’ ಒತ್ತಾಯಿಸಿದ್ದಾರೆ.

ವಿಕಾಸ್ ಎಂಬುವವರು ಸಹ “ತಮ್ಮ ಕಣ್ಣಿಗೆ ಹಾಕಿಕೊಂಡಿರುವ ಧರ್ಮದ ಕನ್ನಡಕವನ್ನು ತೆಗೆದುನೋಡಿ. ಅರವಿಂದ್ ಕೇಜ್ರಿವಾಲ್‍ರವರ ಸರ್ಕಾರ ಜಾತಿಧರ್ಮದ ಹೊರತಾಗಿ ಎಲ್ಲರಿಗೂ ಸಿಗಬೇಕಾದ ಪರಿಹಾರವನ್ನು ನೀಡಿದೆ ಎಂದು ಡಿಎನ್‍ಎ ಪತ್ರಿಕೆಯ ವರದಿಯನ್ನು ಲಗತ್ತಿಸಿದ್ದಾರೆ. ಅದರಂತೆ ಹುತಾತ್ಮರಾದ 14 ಸೈನಿಕರ/ಪೊಲೀಸರ ಕುಟುಂಬಕ್ಕೂ ತಲಾ ಒಂದು ಕೋಟಿ ರೂಗಳನ್ನು ಪರಿಹಾರವಾಗಿ ದೆಹಲಿಯ ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರ ನೀಡಿದೆ.

LEAVE A REPLY

Please enter your comment!
Please enter your name here