Homeಮುಖಪುಟಮೋದಿ ಚಿತ್ರವಿರುವ ಸೆಲ್ಫಿ ಪಾಯಿಂಟ್‌: ಡಿಸೈನ್‌ ಹಿಂಪಡೆದ UGC

ಮೋದಿ ಚಿತ್ರವಿರುವ ಸೆಲ್ಫಿ ಪಾಯಿಂಟ್‌: ಡಿಸೈನ್‌ ಹಿಂಪಡೆದ UGC

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಹಿನ್ನೆಲೆಗೆ ಇರುವಂತೆ ಸೆಲ್ಫಿ ಪಾಯಿಂಟ್‌ಗಳನ್ನು ರಚಿಸುವಂತೆ ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ನಿರ್ದೇಶನ ನೀಡಿತ್ತು. ಇದೀಗ ವ್ಯಾಪಕ ವಿರೋಧದ ಬೆನ್ನಲ್ಲೇ ಯುಜಿಸಿ ಸೂಚಿಸಿದ ಡಿಸೈನ್‌ಗಳನ್ನು ವಾಪಾಸ್ಸು ಪಡೆಯಲಾಗಿದೆ.

ಯುಜಿಸಿ ನಿರ್ದೇಶನವನ್ನು ಆರಾಧಾನ ಸಂಸ್ಕೃತಿ ಎಂದು ಹಲವರು ಹೇಳಿದರೆ,  2024ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮೋದಿಯ ಪ್ರಚಾರ ತಂತ್ರ ಇದು ಎಂದು ಕೆಲವರು ಟೀಕಿಸಿದ್ದರು. ಸೆಲ್ಫಿ ಪಾಯಿಂಟ್‌ಗಳ ಸ್ಥಾಪನೆ ಕುರಿತ ನಿರ್ದೇಶನ ಜಾರಿಯಲ್ಲಿರುವಾಗ ನಿರ್ದೇಶನಗಳಲ್ಲಿ ಡಿಸೈನ್‌ಗಳನ್ನು ಏಕೆ ಹಿಂತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಯುಜಿಸಿ ಸ್ಪಷ್ಟಪಡಿಸಿಲ್ಲ.

ಯುಜಿಸಿಯ ಹಿಂದಿನ ನಿರ್ದೇಶನವು ಪ್ರತಿ ಸೆಲ್ಫಿ ಪಾಯಿಂಟ್‌ಗಳನ್ನು ಕ್ಯಾಂಪಸ್‌ನ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಬೇಕು ಮತ್ತು 3ಡಿ ಲೇಔಟ್ ಹೊಂದಿರಬೇಕು ಎಂದು ಹೇಳಿದೆ. ಇದು ಶಿಕ್ಷಣದ ಅಂತರಾಷ್ಟ್ರೀಕರಣ, ವೈವಿಧ್ಯತೆಯಲ್ಲಿ ಏಕತೆ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್, ಭಾರತೀಯ ಜ್ಞಾನ ವ್ಯವಸ್ಥೆ, ಬಹುಭಾಷಾತೆ ಮತ್ತು ಸಂಶೋಧನೆ ವಿಷಯಗಳನ್ನು ಶಿಫಾರಸು ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹಲವಾರು ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳಿಗೆ ತಮಗೆ ಸಂಬಂಧವಿಲ್ಲದ ವ್ಯಕ್ತಿನಿಷ್ಠೆ ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಅವರು ಈ ಕುರಿತು ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಪತ್ರ ಕಳುಹಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಯುವಕರ ಶಕ್ತಿ ಮತ್ತು ಉತ್ಸಾಹವನ್ನು ಬಳಸಿಕೊಳ್ಳಲು ಒಂದು ಅನನ್ಯ ಅವಕಾಶ ಎಂದು ಹೇಳಿದ್ದರು.

ನಿಮ್ಮ ಸಂಸ್ಥೆಯೊಳಗೆ ಸೆಲ್ಫಿ ಪಾಯಿಂಟ್ ಸ್ಥಾಪಿಸುವ ಮೂಲಕ ನಮ್ಮ ದೇಶವು ಮಾಡಿದ ಅದ್ಭುತ ಪ್ರಗತಿಯನ್ನು ನಾವು ಆಚರಿಸೋಣ ಮತ್ತು ಪ್ರಸಾರ ಮಾಡೋಣ. ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳ ಬಗ್ಗೆ ವಿಶೇಷವಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ಹೊಸ ಉಪಕ್ರಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದು ಸೆಲ್ಫಿ ಪಾಯಿಂಟ್‌ನ ಉದ್ದೇಶವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿತ್ತು.

ಇದರ ಬೆನ್ನಲ್ಲೇ ಯಾವುದೇ ಶಿಕ್ಷಣ ಸಂಸ್ಥೆಗಳು ಸರ್ಕಾರದ ಕಾರ್ಯಸೂಚಿಯನ್ನು ಉತ್ತೇಜಿಸುವಲ್ಲಿ ಹಿಂದೆಂದೂ ತೊಡಗಿಸಿಕೊಂಡಿಲ್ಲ ಎಂದು  ಯುಜಿಸಿ ಮಾಜಿ ಕಾರ್ಯದರ್ಶಿಯೊಬ್ಬರು ಪತ್ರಿಕೆಗೆ ತಿಳಿಸಿದ್ದರು. ದುರದೃಷ್ಟವಶಾತ್ ಜಗದೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪ್ರಸ್ತುತ ಯುಜಿಸಿ ಸರ್ಕಾರಕ್ಕಾಗಿ ಬಹಿರಂಗವಾಗಿ ಪ್ರಚಾರ ಮಾಡುತ್ತಿದೆ. ಇದು ಯುಜಿಸಿಯ ಕೆಲಸವಲ್ಲ. ಎಲ್ಲಾ ಸರ್ಕಾರಿ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳು ನಿಷ್ಪಕ್ಷಪಾತವಾಗಿರಬೇಕು ಎಂದು ನಿರೀಕ್ಷಿಸಲಾಗಿದೆ. ಆದರೆ ಯುಜಿಸಿ ಕ್ರಮೇಣ ಆಡಳಿತ ಪಕ್ಷದ ಒಂದು ವಿಭಾಗವಾಗುತ್ತಿದೆ. ಯುಜಿಸಿಯಲ್ಲಿ ಈ ಮೊದಲು ಒಮ್ಮತದಿಂದ ನಿರ್ಧಾರವನ್ನು ಕೈಗೊಳ್ಳಲಾಗುತ್ತಿತ್ತು. ಇದರೆ ಈಗ ಏಕಮುಖ ಸಂವಹನವಾಗಿದೆ ಮತ್ತು ಬೇರೆ ಯಾರಿಗೂ ಮಾತನಾಡಲು ಅವಕಾಶವಿಲ್ಲದಂತಿದೆ ಎಂದು ಮಾಜಿ ಯುಜಿಸಿ ಕಾರ್ಯದರ್ಶಿಯೋರ್ವರು ಹೇಳಿರುವ ಬಗ್ಗೆ ಟೆಲಿಗ್ರಾಫ್‌ ವರದಿ ಮಾಡಿದೆ.

ದೆಹಲಿ ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯೆ ಮಾಯಾ ಜಾನ್ ಅವರು ಟೆಲಿಗ್ರಾಫ್‌ಗೆ ಈ ಕುರಿತು ಪ್ರತಿಕ್ರಿಯಿಸಿದ್ದು, ನಾವು ವಿಮರ್ಶಾತ್ಮಕವಾಗಿ ತೊಡಗಿಸಿಕೊಳ್ಳಬೇಕು, ಆಡಳಿತವನ್ನು ಮೌಲ್ಯೀಕರಿಸಬಾರದು. ಯುಜಿಸಿಯ ಪತ್ರವನ್ನು ಅದರ ಅಧಿಕಾರದ ಉಲ್ಲಂಘನೆ ಎಂದು ನಾವು ನೋಡುತ್ತೇವೆ. ಇದು ಅನಗತ್ಯ ರಾಜಕೀಯ ಹಸ್ತಕ್ಷೇಪ. ವಿಶ್ವವಿದ್ಯಾನಿಲಯಗಳು ಸ್ವಾಯತ್ತ ಸ್ಥಳವಾಗಿದೆ. ಅವುಗಳನ್ನು ಸ್ವಾಯತ್ತವಾಗಿರಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: 3 ರಾಜ್ಯಗಳಲ್ಲಿ ಒಂದೇ ಒಂದು ಖಾತೆ ತೆರೆಯದ ಎಎಪಿ: ನೋಟಾಗಿಂತಲೂ ಅಲ್ಪ ಮತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದ್ವೇಷ’ ಬಿತ್ತುವ ಮೂರನೇ ಅನಿಮೇಟೆಡ್ ವೀಡಿಯೊವನ್ನು ಹಂಚಿಕೊಂಡ ಬಿಜೆಪಿ: ಮೌನವಹಿಸಿರುವ ಚು. ಆಯೋಗ

0
ಲೋಕಸಭೆಯ ಹೊಸ್ತಿಲಲ್ಲಿ ಬಿಜೆಪಿ ಮೀಸಲಾತಿ ಬಗ್ಗೆ ಮುಸ್ಲಿಮರು ಮತ್ತು ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡು ದ್ವೇಷ ಬಿತ್ತುವ ಮೂರನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಚು.ಅಯೋಗ ಮಾತ್ರ  ಮೌನವಾಗಿರುವುದು ಕಂಡು ಬಂದಿದೆ. ಕರ್ನಾಟಕ ಬಿಜೆಪಿ, ಮೀಸಲಾತಿ...