Homeಮುಖಪುಟಎಲೆಕ್ಷನ್ ಮುಗಿಯೋ ಮುಂಚೆನೇ ಸೋಲೊಪ್ಪಿಕೊಂಡ್ರ ಉಮೇಶ್ ಜಾಧವ್?

ಎಲೆಕ್ಷನ್ ಮುಗಿಯೋ ಮುಂಚೆನೇ ಸೋಲೊಪ್ಪಿಕೊಂಡ್ರ ಉಮೇಶ್ ಜಾಧವ್?

- Advertisement -
- Advertisement -

ಯಾಕೋ ನಮಗ ಇನ್ನು ಸೆಟ್ ಆಗ್ತಿಲ್ಲ, ಇಡೀ ಪಾರ್ಟಿನೆ ಸೆಟ್ ಆಗ್ತಿಲ್ಲ. ಗೋವಿಂದ ಕಾರಜೋಳರವರೇ ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಕೇಳಿಕೊಳ್ಳುತ್ತೇನೆ, ನೀವೆ ನನ್ನ ಗೆಲ್ಲಿಸಬೇಕು. ತುಂಬಿದ ವೇದಿಕೆಯಲ್ಲಿ ಈ ರೀತಿಯ ಮಾತುಗಳನ್ನು ಹೇಳುವ ಮೂಲಕ ಎಲೆಕ್ಷನ್ ಮುಗಿಯೋ ಮುಂಚೆನೇ ಸೋಲೊಪ್ಪಿಕೊಂಡ್ರ ಉಮೇಶ್ ಜಾಧವ್? ಎನ್ನುವ ಪ್ರಶ್ನೆ ಕಲಬುರಗಿ ಮಾತ್ರವಲ್ಲದೇ ಇಡೀ ರಾಜ್ಯದ್ಯಂತ ಹರಿದಾಡುತ್ತಿದೆ.

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆ ತಟ್ಟಿದ್ದ ಮಾಜಿ ಶಾಸಕ ಉಮೇಶ್ ಜಾಧವ್ ಈಗ ವಿಲ ವಿಲ ಅಂತ ಒದ್ದಾಡುತ್ತಿದ್ದಾರೆ. ಕಾಂಗ್ರೆಸ್‍ನಿಂದಲೇ ಶಾಸಕರಾಗಿ ಕೊನೆಗೆ, ಸಂಸದನಾಗವು ಉದ್ದೇಶದಿಂದಲೇ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಉಮೇಶ್ ಜಾಧವ್ ಈಗ ಕಂಡ ಕಂಡವರ ಕಾಲಿಡುತ್ತೇನೆ ದಯವಿಟ್ಟು ಗೆಲ್ಲಿಸಿ ಎಂದು ಬೇಡಿಕೊಳ್ಳಬೇಕಾದ ಪರಿಸ್ಥಿತಿ ತಲುಪಿದ್ದಾರೆ.

“ಇದು ಡು ಆರ್ ಡೈ ಆದ, ನಂದು ಲಾಸ್ಟ್ ಚಾನ್ಸ್ ಅದ, ನಮಗೆ ನೀವು ಕೈಬಿಡಬಾರದು ಈ ಯುದ್ದದಲ್ಲಿ ಗೆಲ್ಲಿಸಬೇಕೆಂದು ನಾನು ಕೈ ಜೋಡಿಸಿ ವಿನಂತಿ ಮಾಡ್ತೀನಿ” ಯಾಕೋ ನಮಗ ಇನ್ನು ಸೆಟ್ ಆಗ್ತಿಲ್ಲ, ಇಡೀ ಪಾರ್ಟಿನೆ ಸೆಟ್ ಆಗ್ತಿಲ್ಲ. ಗೋವಿಂದ ಕಾರಜೋಳರವರೇ ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಕೇಳಿಕೊಳ್ಳುತ್ತೇನೆ. ನೀವೆ ನನ್ನ ಗೆಲ್ಲಿಸಬೇಕು ಎಂದು ಕಲಬುರಗಿಯಲ್ಲಿ ಏರ್ಪಡಿಸಿದ್ದ ಎಸ್ಸಿ ಸಮಾವೇಶದ ಬಹಿರಂಗ ಭಾಷಣದಲ್ಲಿ ಉಮೇಶ್ ಜಾಧವ್ ಹೇಳುವ ವಿಡಿಯೋ ವೈರಲ್ ಆಗಿದ್ದು ಇಲ್ಲಿ ಬಿಜೆಪಿ ಕಥೆ ಮುಗಿದ ಹಾಗೆನೇ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಉಮೇಶ್ ಜಾಧವ್ ಮಾತಾಡಿರುವ ವಿಡಿಯೋ ನೋಡಿ

ಕಲಬುರಗಿಯಲ್ಲಿ ಉಮೇಶ್ ಜಾಧವ್ ಪರದಾಟ. ಚುನಾವಣೆಗೂ ಮುನ್ನವೇ ಸೋಲಿನ ಭಯ…

Save Constitution Karnataka ಸಂವಿಧಾನ ಉಳಿವಿಗಾಗಿ ಕರ್ನಾಟಕ यांनी वर पोस्ट केले शनिवार, २० एप्रिल, २०१९

ಇವರ ಈ ಹೇಳಿಕೆಯಿಂದಾಗಿ ಖರ್ಗೆಯವರ ಭದ್ರಕೋಟೆಯಲ್ಲಿ ಕೇಸರಿ ಬಾವುಟ ಹಾರಿಸುವ ಬಿಜೆಪಿಯ ಕನಸು ಭಗ್ನಗೊಂಡಿದೆ. ಚುನಾವಣೆ ಇನ್ನು ಮೂರು ದಿನ ಇರುವಾಗ ಈ ರೀತಿ ಅಸಹಾಯಕರಂತೆ ಕೈ ಚೆಲ್ಲಿ ಮಾತಾಡುವುದು ಪಕ್ಷಕ್ಕೆ ಡ್ಯಾಮೇಜ್ ಎನ್ನುವ ಮಾತುಗಳು ಎಲ್ಲೆಡೆ ಹರಿದಾಡುತ್ತಿವೆ. ಹಾಗೇ ನೋಡಿದರೆ ಇದರಿಂದ ಖರ್ಗೆಯವರ ಗೆಲುವು ಮತ್ತಷ್ಟು ಸುಲಭ ಎಂದು ವಿಶ್ಲೇಷಿಸಲಾಗುತ್ತಿದೆ.


ಇದ್ದ ಶಾಸಕ ಸ್ಥಾನವನ್ನು ಬಿಟ್ಟು, ರಾಜೀನಾಮೆ ಅಂಗೀಕಾರ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದ ಉಮೇಶ್ ಜಾಧವ್‍ರವರ ಕಥೆ ಶೋಚನೀಯವಾಗಿದೆ. ಗೆದ್ದೆ ಬಿಡುವ ಹುಮ್ಮಸ್ಸಿನಿಂದ ಸ್ಪರ್ಧಿಸಿದ್ದ ಅವರೀಗ ಸೋಲಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಒಂದು ವೇಳೆ ಸೋತೆಬಿಟ್ಟರಂತೂ ಶಾಸಕ ಸ್ಥಾನವೂ ಇಲ್ಲ, ಅತ್ತ ಕಾಂಗ್ರೆಸ್ ಕೂಡ ಇಲ್ಲ, ಬಿಜೆಪಿ ಸೆಟ್ ಆಗ್ತಿಲ್ಲ ಅಂತ ಕೊರಗುವ ಸ್ಥಿತಿಗೆ ತಲುಪಲಿದ್ದಾರೆ. ಏನಾಗುತ್ತೆ ಅಂತ ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...