Homeಮುಖಪುಟ'ತನ್ನ ಸರ್ಕಾರದ ಪದಚ್ಯುತಿ ಹಿಂದೆ ಯುಎಸ್ ಸಂಚು..'; ಶೇಖ್ ಹಸೀನಾ ಆರೋಪ

‘ತನ್ನ ಸರ್ಕಾರದ ಪದಚ್ಯುತಿ ಹಿಂದೆ ಯುಎಸ್ ಸಂಚು..’; ಶೇಖ್ ಹಸೀನಾ ಆರೋಪ

- Advertisement -
- Advertisement -

ತನ್ನ ಸರ್ಕಾರವನ್ನು ಪದಚ್ಯುತಗೊಳಿಸಿದ ಹಿಂದೆ ಅಮೆರಿಕದ ಪಾತ್ರವಿದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ. “ತನ್ನನ್ನು ಅಧಿಕಾರದಿಂದ ಕೆಳಗಿಳಿಸಲು ದೊಡ್ಡ ಷಡ್ಯಂತ್ರ ರೂಪಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, “ಸೇಂಟ್ ಮಾರ್ಟಿನ್ ದ್ವೀಪವನ್ನು ನೀಡಲು ನಿರಾಕರಿಸಿದ ಕಾರಣ ಯುಎಸ್ ತನ್ನನ್ನು ಅಧಿಕಾರದಿಂದ ತೆಗೆದುಹಾಕಲು ಯೋಜಿಸಿದೆ. ಈ ದ್ವೀಪವನ್ನು ಪಡೆಯುವುದು ಬಂಗಾಳಕೊಲ್ಲಿಯ ಮೇಲೆ ಅಮೇರಿಕಾ ಪ್ರಭಾವವನ್ನು ಪಡೆಯಲು ಸಹಾಯ ಮಾಡಬಹುದು ಎಂಬ ಕಾರಣಕ್ಕೆ” ಎಂದು ಹಸೀನಾ ಹೇಳಿದ್ದಾರೆ.

ಮೃತ ದೇಹಗಳನ್ನು ನೋಡಲು ಇಷ್ಟವಿಲ್ಲದ ಕಾರಣಕ್ಕೆ ರಾಜೀನಾಮೆ

“ನಾನು ರಾಜೀನಾಮೆ ನೀಡಿದ್ದೇನೆ, ಆದ್ದರಿಂದ ನಾನು ಮೃತ ದೇಹಗಳ ಮೆರವಣಿಗೆಯನ್ನು ನೋಡಬೇಕಾಗಿಲ್ಲ. ಅವರು ವಿದ್ಯಾರ್ಥಿಗಳ ಮೃತ ದೇಹಗಳ ಮೇಲೆ ಅಧಿಕಾರಕ್ಕೆ ಬರಲು ಬಯಸಿದ್ದರು. ಆದರೆ, ನಾನು ಅದಕ್ಕೆ ಅವಕಾಶ ನೀಡಲಿಲ್ಲ, ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಸೇಂಟ್ ಮಾರ್ಟಿನ್ ದ್ವೀಪದ ಸಾರ್ವಭೌಮತ್ವವನ್ನು ಬಿಟ್ಟುಕೊಟ್ಟಿದ್ದರೆ ಮತ್ತು ಬಂಗಾಳಕೊಲ್ಲಿಯ ಮೇಲೆ ಅಮೆರಿಕದ ಹಿಡಿತಕ್ಕೆ ಅವಕಾಶ ನೀಡಿದ್ದರೆ ನಾನು ಅಧಿಕಾರದಲ್ಲಿ ಉಳಿಯಬಹುದಿತ್ತು” ಏಂದಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ನಾನು ದೇಶದಲ್ಲಿಯೇ ಉಳಿದಿದ್ದರೆ, ಹೆಚ್ಚು ಜೀವಗಳನ್ನು ಕಳೆದುಕೊಳ್ಳಬಹುದಿತ್ತು, ಹೆಚ್ಚು ಸಂಪನ್ಮೂಲಗಳು ನಾಶವಾಗುತ್ತಿದ್ದವು. ನಾನು ನಿರ್ಗಮಿಸಲು ಅತ್ಯಂತ ಕಷ್ಟಕರವಾದ ನಿರ್ಧಾರವನ್ನು ಮಾಡಿದ್ದೇನೆ. ನೀವು ನನ್ನನ್ನು ಆರಿಸಿದ್ದರಿಂದ ನಾನು ನಿಮ್ಮ ನಾಯಕಿಯಾಗಿದ್ದೇನೆ, ನೀವೇ ನನ್ನ ಶಕ್ತಿ” ಎಂದು ಹಸೀನಾ ಹೇಳಿದ್ದಾರೆ.

ತನ್ನ ಪಕ್ಷದ ನಾಯಕರ ಹತ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಸೀನಾ, “ಹಲವು ನಾಯಕರನ್ನು ಕೊಲ್ಲಲಾಗಿದೆ, ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ಅವರ ಮನೆಗಳನ್ನು ವಿಧ್ವಂಸಕತೆ, ಬೆಂಕಿಗೆ ಒಳಪಡಿಸಲಾಗಿದೆ ಎಂಬ ಸುದ್ದಿ ಬಂದಾಗ ನನ್ನ ಹೃದಯಕ್ಕೆ ಆಘಾತವಾಗಿದೆ ಸರ್ವಶಕ್ತ ಅಲ್ಲಾನ ಕೃಪೆಯೊಂದಿಗೆ ಶೀಘ್ರದಲ್ಲೇ ನಾನು ಹಿಂತಿರುಗುತ್ತೇನೆ.  ಅವಾಮಿ ಲೀಗ್ ಮತ್ತೆ ಮತ್ತೆ ಎದ್ದು ನಿಂತಿದೆ. ನನ್ನ ದೊಡ್ಡ ತಂದೆ ಶ್ರಮಿಸಿದ ಬಾಂಗ್ಲಾದೇಶದ ಭವಿಷ್ಯಕ್ಕಾಗಿ ನಾನು ಶಾಶ್ವತವಾಗಿ ಪ್ರಾರ್ಥಿಸುತ್ತೇನೆ. ನನ್ನ ತಂದೆ ಮತ್ತು ಕುಟುಂಬವು ತಮ್ಮ ಪ್ರಾಣವನ್ನು ನೀಡಿದ ದೇಶ” ಎಂದಿದ್ದಾರೆ.

“ವಿದ್ಯಾರ್ಥಿಗಳನ್ನು ಎಂದಿಗೂ ರಜಾಕಾರ್ ಎಂದು ಕರೆಯಲಿಲ್ಲ, ಹೇಳಿಕೆಯನ್ನು ತಿರುಚಲಾಗಿದೆ” ಎಂದು ಹಸೀನಾ ಸ್ಪಷ್ಟನೆ ನೀಡಿದ್ದಾರೆ.

ಕೋಟಾ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅವರನ್ನು ಪ್ರಚೋದಿಸಲು ತಮ್ಮ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಹೇಳಿದರು.

“ನಾನು ಬಾಂಗ್ಲಾದೇಶದ ಯುವ ವಿದ್ಯಾರ್ಥಿಗಳಿಗೆ ಪುನರಾವರ್ತಿಸಲು ಬಯಸುತ್ತೇನೆ. ನಾನು ನಿಮ್ಮನ್ನು ರಜಾಕರೆಂದು ಎಂದೂ ಕರೆದಿಲ್ಲ. ಬದಲಿಗೆ ನಿಮ್ಮನ್ನು ಪ್ರಚೋದಿಸಲು ನನ್ನ ಮಾತುಗಳನ್ನು ತಿರುಚಲಾಗಿದೆ. ಆ ದಿನದ ಸಂಪೂರ್ಣ ವೀಡಿಯೋವನ್ನು ವೀಕ್ಷಿಸಲು ವಿನಂತಿಸುತ್ತೇನೆ. ಪಿತೂರಿಗಾರರು ಮುಗ್ಧತೆಯ ಲಾಭವನ್ನು ಪಡೆದುಕೊಂಡಿದ್ದಾರೆ ಮತ್ತು ರಾಷ್ಟ್ರವನ್ನು ಅಸ್ಥಿರಗೊಳಿಸಲು ನಿಮ್ಮನ್ನು ಬಳಸಿಕೊಂಡಿದ್ದಾರೆ” ಎಂದು ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ; ವಯನಾಡ್‌ ಭೂಕುಸಿತ | ನಾಪತ್ತೆಯಾದವರಿಗಾಗಿ ಹುಡುಕಾಟ ಪುನರಾರಂಭ; ಬದುಕುಳಿದವರಿಂದ ನೆರವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...