Homeಮುಖಪುಟಗೊಂದಲಕಾರಿ ವೇದ ಗಣಿತ ತರಬೇತಿಯ ನೆಪ: ದಲಿತರಿಗಾಗಿ ಮೀಸಲಿಟ್ಟ SCSP, TSPಯ 60 ಕೋಟಿ ರೂ...

ಗೊಂದಲಕಾರಿ ವೇದ ಗಣಿತ ತರಬೇತಿಯ ನೆಪ: ದಲಿತರಿಗಾಗಿ ಮೀಸಲಿಟ್ಟ SCSP, TSPಯ 60 ಕೋಟಿ ರೂ ಬಳಕೆ

ಈ ತರಬೇತಿಯು ಶಿಕ್ಷಣದ ದೃಷ್ಟಿಯಿಂದ ಅತ್ಯಂತ ಅವೈಜ್ಞಾನಿಕ, ಮಕ್ಕಳ ತಿಳುವಳಿಕೆಯ ಬೆಳವಣಿಗೆಗೆ ಅತ್ಯಂತ ಹಾನಿಕರವಾದುದು - ಪ್ರಜ್ವಲ್ ಶಾಸ್ತ್ರಿ

- Advertisement -
- Advertisement -

ರಾಜ್ಯದಲ್ಲಿ ದಲಿತರಿಗಾಗಿ ಮೀಸಲಿಟ್ಟ SCSP, TSP ಹಣವನ್ನು ಬಳಸಿ, ಪ್ರತಿ ಗ್ರಾಮ ಪಂಚಾಯ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ 25 ಮಕ್ಕಳಿಗೆ ವೇದ ಗಣಿತ ತರಬೇತಿ ನೀಡುವ ಯೋಜನೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಏನಿದು ಯೋಜನೆ, ಇದಕ್ಕೆ ಹಣ ಎಲ್ಲಿಂದ ಬರುತ್ತಿದೆ, ಇದು ನಿಜಕ್ಕೂ ಮಕ್ಕಳಿಗೆ ಅಗತ್ಯವಿದೆಯೇ ಎಂದು ಹುಡುಕುತ್ತಾ ಹೋದರೆ ಇದರ ಹಿಂದೆ ಕೋಟ್ಯಾಂತರ ರೂಗಳ ಬಹುದೊಡ್ಡ ಹಗರಣವಿರುವುದು ಬೆಳಕಿಗೆ ಬಂದಿದೆ.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಜನವರಿ 06, 2022ರಂದು ಪತ್ರ ಬರೆದಿದ್ದರು. ಅದರಲ್ಲಿ “ಗ್ರಾಮ ಪಂಚಾಯ್ತಿಗಳಲ್ಲಿ ದಲಿತರಿಗಾಗಿ ಮೀಸಲಾದ ಶೇ.25ರ SCSP TSP ಅನುದಾನವನ್ನು 5 ರಿಂದ 8ನೇ ತರಗತಿವರೆಗಿನ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ವೇದಗಣಿತ ಕಲಿಸುವ ಯೋಜನೆಗಾಗಿ ಬಳಸಿಕೊಳ್ಳಬಹುದು” ಎಂದು ಸೂಚಿಸಲಾಗಿತ್ತು. ಅದರಂತೆ ಈ ತರಬೇತಿ ನೀಡುವ ಟೆಂಡರ್‌ ಅನ್ನು ಹಿರಿಯೂರಿನ ಎವಿಎಂ ಎಂಬ ಸಂಸ್ಥೆಗೆ ನೀಡಲಾಗಿದೆ. ಅದಕ್ಕಾಗಿ ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಗಳು ಒಂದು ಲಕ್ಷ ರೂಗಳನ್ನು ಈ ಸಂಸ್ಥೆಗೆ ಚೆಕ್ ಮೂಲಕ ನೀಡಬೇಕು ಸೂಚಿಸಲಾಗಿದೆ.

ಈ ಎವಿಎಂ ಸಂಸ್ಥೆಯು ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಈ ತರಬೇತಿಯನ್ನು ಜಾರಿಗೊಳಿಸಲು ಮಧ್ಯವರ್ತಿಗಳಿಗೆ ಸಬ್‌ ಟೆಂಡರ್ ನೀಡುತ್ತಿದೆ. ಈ ಮಧ್ಯವರ್ತಿಗಳು ಪ್ರತಿ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿಗಳ ಜೊತೆ ಸಮನ್ವಯ ಸಾಧಿಸಿ ಈ ತರಬೇತಿ ಯೋಜನೆ ಜಾರಿಯಾಗುವಂತೆ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ. ಅಂದರೆ ಪ್ರತಿ ಗ್ರಾಮ ಪಂಚಾಯ್ತಿಗಳು ಎವಿಎಂ ಹೆಸರಿಗೆ ಒಂದು ಲಕ್ಷ ರೂಗಳ ಚೆಕ್ ಹಾಕುವಂತೆ ಆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳ ಪಿಡಿಓಗಳನ್ನು ಮನವೊಲಿಸುವುದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವುದು, ತರಬೇತಿಯ ವರದಿಗಳನ್ನು ಸಲ್ಲಿಸುವ ಕೆಲಸ ಅವರದಾಗಿದೆ. ಅದಕ್ಕೆ ಪ್ರತಿಯಾಗಿ ಮಧ್ಯವರ್ತಿಗಳು ಎವಿಎಂ ಅಕಾಡೆಮಿಯಿಂದ ಇಂತಿಷ್ಟು ಹಣ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ವೇದಗಣಿತ ತರಬೇತಿಗೆ ತಲಾ ಒಂದು ಲಕ್ಷ ನೀಡುತ್ತಿರುವ ಗ್ರಾಮ ಪಂಚಾಯ್ತಿಗಳು: ದಲಿತರಿಗಾಗಿ ಮೀಸಲಾದ SCSP TSP ಹಣ ದುರ್ಬಳಕೆ

ತರಬೇತಿಗೆ ಸರ್ಕಾರಿ ಶಿಕ್ಷಕರ ಬಳಕೆ

ಮಕ್ಕಳಿಗೆ ವೇದ ಗಣಿತ ಹೇಳಿಕೊಡಲು ಸರ್ಕಾರಿ ಶಾಲೆಗಳ ಗಣಿತ ಶಿಕ್ಷಕರನ್ನೇ ಬಳಸಿಕೊಳ್ಳಲಾಗುತ್ತಿದೆ. ತಾಲ್ಲೂಕು ಮಟ್ಟದಲ್ಲಿ ಗಣಿತ ಶಿಕ್ಷಕರನ್ನು ಸೇರಿಸಿ ಅವರಿಗೆ ವೇದ ಗಣಿತದ ತರಬೇತಿ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಆ ಶಿಕ್ಷಕರು ಪ್ರತಿ ಶನಿವಾರ ಮತ್ತು ಭಾನುವಾರ ಶಾಲೆ ಮುಗಿದ ನಂತರ ಎರಡು ಗಂಟೆಗಳ ಕಾಲ 16 ವಾರ ದಲಿತ ಮಕ್ಕಳಿಗೆ ವೇದಗಣಿತ ಪಾಠ ಮಾಡುತ್ತಾರೆ. ತರಬೇತಿಗೆ ಒಳಪಡುವ ಪ್ರತಿ ವಿದ್ಯಾರ್ಥಿಗೂ ಒಂದು ಟೀಶರ್ಟ್, ಕಲಿಕಾ ನೋಟ್ಸ್‌ಗಳನ್ನು ಒದಗಿಸಲಾಗುತ್ತದೆ. ಆ ಶಿಕ್ಷಕರಿಗೆ ಸರ್ಕಾರಿ ಸಂಬಳದ ಜೊತೆಗೆ ತಲಾ 5,000 ರೂಗಳ ಟಿಎ ಮತ್ತು ಡಿಎ ನೀಡಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 6,068 ಗ್ರಾಮ ಪಂಚಾಯ್ತಿಗಳಿದ್ದು ಸುಮಾರು 60 ಕೋಟಿ ರೂಗಳಷ್ಟು ದಲಿತರಿಗಾಗಿ ಮೀಸಲಿಟ್ಟಿದ್ದ SCSP TSP ಅನುದಾನವನ್ನು ಈ ವೇದಗಣಿತ ಕಲಿಕೆಗೆ ಬಳಸಿಕೊಳ್ಳುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಗ್ರಾಮೀಣಾಭಿವೃದ್ದಿ ಇಲಾಖೆಯು ಶಿಕ್ಷಣ ಇಲಾಖೆಯಲ್ಲಿ ತಲೆ ಹಾಕುತ್ತಿರುವುದೇಕೆ ಎಂಬ ಪ್ರಶ್ನೆ ಎದ್ದಿದೆ. ಒಂದಷ್ಟು ಪುಸ್ತಕ, ಒಂದು ಟೀ ಶರ್ಟ್ ನೀಡುವುದಕ್ಕೆ 60 ಕೋಟಿ ರೂ ಹಣ ಖರ್ಚಾಗುವುದಿಲ್ಲ. ಹಣ ಲೂಟಿ ಹೊಡೆಯಲೆಂದೇ ಈ ಯೋಜನೆ ಸೃಷ್ಟಿಸಲಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಇನ್ನೊಂದೆಡೆ ಈಗಾಗಲೇ ಶಾಲೆಗಳಲ್ಲಿ ಗಣಿತ ಕಲಿಸುತ್ತಿರುವಾಗ ವೈಜ್ಞಾನಿಕವಲ್ಲದ, ಗೊಂದಲ ಮೂಡಿಸುವ ಈ ವೇದ ಗಣಿತ ತರಬೇತಿ ಬೇಡ ಎಂದು ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಿಕ್ಷಣದ ದೃಷ್ಟಿಯಿಂದ ಅತ್ಯಂತ ಅವೈಜ್ಞಾನಿಕ ಯೋಜನೆ: ಪ್ರಜ್ವಲ್ ಶಾಸ್ತ್ರಿ

ಬೆಂಗಳೂರಿನ ಖಗೋಳ ಭೌತಶಾಸ್ತಜ್ಞರಾದ ಪ್ರಜ್ವಲ್ ಶಾಸ್ತ್ರಿಯವರು ನಾನುಗೌರಿ.ಕಾಂ ಜೊತೆ ಮಾತನಾಡಿ, ಈ ವೇದ ಗಣಿತ ತರಬೇತಿಯು “ಶಿಕ್ಷಣದ ದೃಷ್ಟಿಯಿಂದ ಅತ್ಯಂತ ಅವೈಜ್ಞಾನಿಕ, ಮಕ್ಕಳ ತಿಳುವಳಿಕೆಯ ಬೆಳವಣಿಗೆಗೆ ಅತ್ಯಂತ ಹಾನಿಕರ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ವೈದಿಕ ಗಣಿತ ಎಂಬ ಪುಸ್ತಕವು ಪ್ರಕಟವಾದಾಗ, ಗಣಿತ, ಸಂಸ್ಕೃತ, ಮತ್ತು ಇತಿಹಾಸ, ಇವೆಲ್ಲವನ್ನು ಬಲ್ಲ ತಜ್ಙರಾದ ಕೃಪಾಶಂಕರ್‌ ಶುಕ್ಲಾ, ಶ್ರೀಕೃಷ್ಣ ದಾನಿ, ಬಾಲಚಂದ್ರ ರಾವ್ ಮತ್ತಿತರರು, ಆ ಪುಸ್ತಕದಲ್ಲಿರುವ ಹೇಳಿಕೆಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ, ಪ್ರಾಥಮಿಕ ಶಾಲೆಗಳಲ್ಲಿ ಹಲವೊಂದು ವಾಡಿಕೆಯಲ್ಲಿರುವಂತಹ ಲೆಕ್ಕದ ಸರಳ ಸೂತ್ರಗಳು ಇವೆ ವಿನಃ, ಅದು ವೈದಿಕ ಕಾಲಘಟ್ಟದ್ದೇ ಅಲ್ಲ, ಹಾಗೂ ವಿಶೇಷ ಗಣಿತವು ಯಾವುದೂ ಅದರಲ್ಲಿ ಇಲ್ಲವೆಂದು ತಮ್ಮ ವಿಶ್ಲೇಷಣೆಗಳನ್ನು ಸ್ಪಷ್ಟವಾಗಿ ಬರೆದು ಪ್ರಕಟಿಸಿದ್ದಾರೆ. ಹಾಗಿರುವಾಗ, ಸದ್ಯದ ಆದೇಶಗಳು ಗ್ರಾಮಪಂಚಾಯತಿನ ಹಣದ ದುರುಪಯೋಗ ಮಾತ್ರವಲ್ಲ, ಶಿಕ್ಷಣದ ದೃಷ್ಟಿಯಿಂದ ಅತ್ಯಂತ ಅವೈಜ್ಞಾನಿಕ, ಮಕ್ಕಳ ತಿಳುವಳಿಕೆಯ ಬೆಳವಣಿಗೆಗೆ ಅತ್ಯಂತ ಹಾನಿಕರ, ಹಾಗೂ ದಮನಿತರ ಒಳಿತಿಗೆ ಮೀಸಲಾಗಿರುವ ಧನದಿಂದ ದಲಿತ ಮಕ್ಕಳನ್ನು ವಂಚಿತಗೊಳಿಸುವಂತಹ ಪ್ರಕ್ರಿಯೆಗಳಾಗಿವೆ. ಇಂದಿನ ಶಿಕ್ಷಣದಲ್ಲಿ ನಿಜವಾದ ಅಗತ್ಯವೇನೆಂದರೆ, ಶತಮಾನಗಳ ಕಾಲ ಪ್ರಚಲಿತವಾಗಿದ್ದ ದಲಿತರ ತುಳಿತದ ಬಗ್ಗೆ, ಎಲ್ಲರ, ಹಾಗೂ ವಿಶೇಷವಾಗಿ ದಲಿತರಲ್ಲದವರ ತಿಳುವಳಿಕೆಯನ್ನು ಹೆಚ್ಚಿಸಬೇಕೇ ಹೊರತು ದಲಿತ ಮಕ್ಕಳನ್ನು ವಂಚಿತಗೊಳಿಸುವುದಲ್ಲ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಯೋಜನೆ ಹಿಂಪಡೆಯದಿದ್ದರೆ ಹೋರಾಟ- ಎನ್ ವೆಂಕಟೇಶ್

ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕರಾದ ಎನ್.ವೆಂಕಟೇಶ್‌ರವರು ಮಾತನಾಡಿ, “ಇಂದು ನಮ್ಮ ಮಕ್ಕಳಿಗೆ ಬದುಕು ಕಟ್ಟಿಕೊಳ್ಳುವ ಆಧುನಿಕ ಶಿಕ್ಷಣ ಬೇಕಾಗಿದೆ. ಆದರೆ ಸರ್ಕಾರ ವೇದ ಗಣಿತ ಕಲಿಸಲು ಹೊರಟಿದೆ. ಹಲವಾರು ಶಿಕ್ಷಣ ತಜ್ಞರು ವೇದ ಗಣಿತ ಎಂಬುದು ಗಣತವೇ ಅಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಹ ಹಳೆಯ ಮತ್ತು ಸತ್ತಿರುವ ವಿಷಯದ ತರಬೇತಿ ನಮ್ಮ ಮಕ್ಕಳಿಗೆ ಬೇಕಾಗಿಲ್ಲ. ಅದು ವೈಜ್ಞಾನಿಕವಾದ ಸಮಾಜ ನಿರ್ಮಾಣ ಮಾಡುವ ಆಶಯಕ್ಕೆ ಅಡ್ಡಿಪಡಿಸುತ್ತದೆ. ಹಾಗಾಗಿ ಈ ಯೋಜನೆಯನ್ನು ಕೂಡಲೇ ತಡೆಯಬೇಕು, ಇಲ್ಲವಾದಲ್ಲಿ ಹೋರಾಟಕ್ಕಿಳಿಯಬೇಕಾಗುತ್ತದೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವೇದಗಣಿತ ಎಂಬುದೇ ಇಲ್ಲ: ಈ ಕುರಿತು ತಜ್ಞರು ಹೇಳುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದಲಿತರು ಉದ್ದಾರ ವಾಗಬಾರದೆಂದು ದಲಿತ ಮಕ್ಕಳ ದಾರಿ ತಪ್ಪಿಸಿ ಭವಿಷ್ಯವನ್ನು ಎಳೆವಯಸಲ್ಲೆ ಹಿಚುಕಿ ಹಾಕುವ ಹುನ್ನಾರವೇ ವೇದಗಣಿತದ ಉದ್ದೇಶ ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಒಳ್ಳೆ ವಿದ್ಯಾಭ್ಯಾಸಕೊಟ್ಟು ಮಕ್ಕಳನ್ನು ಮೇಲೆಕ್ಕೆ ಯಾಕೆ ತರುವುದಿಲ್ಲ ???

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...