Homeಮುಖಪುಟಉತ್ತರ ಪ್ರದೇಶ: 2004ರ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ 18 ಪೊಲೀಸರ ವಿರುದ್ಧ FIR ದಾಖಲು

ಉತ್ತರ ಪ್ರದೇಶ: 2004ರ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ 18 ಪೊಲೀಸರ ವಿರುದ್ಧ FIR ದಾಖಲು

- Advertisement -
- Advertisement -

ಸುಮಾರು 18 ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿದ್ದ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 18 ಮಂದಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಶಹಜಹಾನ್‌ಪುರದ ನ್ಯಾಯಾಲಯವು ಇಂದು (ಫೆ.20) ಪೊಲೀಸರಿಗೆ ನಿರ್ದೇಶನ ನೀಡಿದೆ.

ಶಹಜಹಾನ್‌ಪುರದ ನ್ಯಾಯಾಲಯದ ಆದೇಶದ ಮೇರೆಗೆ ಜಲಾಲಾಬಾದ್‌ನಲ್ಲಿ 18 ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್.ಆನಂದ್ ತಿಳಿಸಿದ್ದಾರೆ.

2004ರ ಅಕ್ಟೋಬರ್ 3ರಂದು ಜಲಾಲಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಚಚುಪುರದ ಇಬ್ಬರು ಗ್ರಾಮಸ್ಥರಾದ ಪ್ರಹ್ಲಾದ್ ಮತ್ತು ಧನಪಾಲ್ ಅವರು ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಪೊಲೀಸರು ಇಬ್ಬರನ್ನೂ ಗುಂಡಿಕ್ಕಿ ಕೊಂದದು, ಅವರ ಮೃತದೇಹಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಸಂತ್ರಸ್ತರ ಪರ ವಕೀಲ ಎಜಾಜ್ ಹಸನ್ ಖಾನ್ ತಿಳಿಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧ ಚಲೋ: ಮೊಳಗಿದ ‘ಭೀಮ ಸಾಗರ’ದ ಆಗ್ರಹ

ಮೃತ ಪ್ರಹ್ಲಾದ್ ಅವರ ಸಹೋದರ ರಾಮ್ ಕೀರ್ತಿ ವಿವಿಧ ಆಯೋಗಗಳು ಮತ್ತು ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದರು. ಆದರೆ ಯಾವುದೇ ವಿಚಾರಣೆ ನಡೆಯದ ಕಾರಣ, ನವೆಂಬರ್ 24, 2012 ರಂದು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ಆದರೆ, ಸಾಕಷ್ಟು ಸಮಯ ಕಳೆದು ಹೋಗಿದೆ, ಅಂತಿಮ ವರದಿಯನ್ನುಸಲ್ಲಿಸಲಾಗಿದೆ ಎಂದು ಹೇಳಿ ಮುಖ್ಯ ಮ್ಯಾಜಿಸ್ಟ್ರೇಟ್ ಮೇಲ್ಮನವಿ ತಿರಸ್ಕರಿಸಿದ್ದರು. ಇದರ ನಂತರ, ಅವರು ಜಿಲ್ಲಾ ನ್ಯಾಯಾಧೀಶ ಸೌರಭ್ ದ್ವಿವೇದಿ ಅವರ ನ್ಯಾಯಾಲಯದಲ್ಲಿ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಜನವರಿ 28 ರಂದು ಸಿಜೆಎಂ 18 ಪೊಲೀಸರ ವಿರುದ್ಧ ಐಪಿಸಿಯ ಸೆಕ್ಷನ್ 302/34 ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ ಎಂದು ವಕೀಲ ಎಜಾಜ್ ಹಸನ್ ಖಾನ್ ಹೇಳಿದರು.

ಸುಶೀಲ್ ಕುಮಾರ್ (ಅಂದಿನ ಎಸ್ಪಿ), ಮಾತಾ ಪ್ರಸಾದ್ (ಅಂದಿನ ಹೆಚ್ಚುವರಿ ಎಸ್ಪಿ), ಮುಮ್ಮು ಲಾಲ್ (ಅಂದಿನ ಸಿಒ ತಿಲ್ಹಾರ್), ಜೈಕರನ್ ಸಿಂಗ್ ಭದೌರಿಯಾ (ಅಂದಿನ ಸಿಒ ಜಲಾಲಾಬಾದ್) ಆರ್.ಕೆ.ಸಿಂಗ್ (ಅಂದಿನ ಎಸ್ಪಿ) ಆರ್.ಕೆ.ಸಿಂಗ್ ಸೇರಿದಂತೆ 18 ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶನಗಳನ್ನು ನೀಡಲಾಗಿದೆ.

ಈ ನಕಲಿ ಎನ್‌ಕೌಂಟರ್‌ ಘಟನೆ ನಡೆದಾಗ ಕಲ್ಲು, ನಜ್ಜು ಮತ್ತು ನರೇಶ್ ಧಿಮಾರ್‌ನಂತಹ ಡಕಾಯಿತರು ಶಹಜಹಾನ್‌ಪುರದ ಜಲಾಲಾಬಾದ್ ತೆಹಸಿಲ್‌ನಲ್ಲಿ ಸಕ್ರಿಯರಾಗಿದ್ದರು.


ಇದನ್ನೂ ಓದಿ: ಜಮ್ಮು ಕಾಶ್ಮೀರ: ಹೈದರ್‌ಪೋರಾ ಎನ್‌ಕೌಂಟರ್‌ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...