Homeದಲಿತ್ ಫೈಲ್ಸ್ಉತ್ತರ ಪ್ರದೇಶ| ಎಫ್‌ಐಆರ್ ದಾಖಲಿಸಲು ದಲಿತ ಮಹಿಳೆಗೆ ಸಹಾಯ; ತಾಯಿ-ಮಗಳ ಮೇಲೆ ಹಲ್ಲೆ

ಉತ್ತರ ಪ್ರದೇಶ| ಎಫ್‌ಐಆರ್ ದಾಖಲಿಸಲು ದಲಿತ ಮಹಿಳೆಗೆ ಸಹಾಯ; ತಾಯಿ-ಮಗಳ ಮೇಲೆ ಹಲ್ಲೆ

- Advertisement -
- Advertisement -

ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಜಗತ್‌ಪುರ ಪ್ರದೇಶದಲ್ಲಿ, ಮಹಿಳೆಯೊಬ್ಬರು ಹಾಗೂ ಅವರ 12 ವರ್ಷದ ಮಗಳ ಮೇಲೆ ಬುಧವಾರ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಗ್ರಾಮದ ಪ್ರಧಾನ್ ಹಾಗೂ ಆತನ ಇಬ್ಬರು ಪುತ್ರರ ವಿರುದ್ಧ ದಲಿತ ಮಹಿಳೆಯೊಬ್ಬರು ಮತ್ತು ಅವರ ಸಂಬಂಧಿಕರು ಹಲ್ಲೆ ಆರೋಪದ ಮೇರೆಗೆ ಎಫ್‌ಐಆರ್ ದಾಖಲಿಸಲು ಈ ಮಹಿಳೆಯ ಕುಟುಂಬವು ಸಹಾಯ ಮಾಡಿದ ಮರುದಿನವೇ ಈ ಘಟನೆ ನಡೆದಿದೆ.

ರುದ್ಧಿಮಾ ಸಿಂಗ್ ಎಂಬ ಮಹಿಳೆ ತನ್ನ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಪ್ರಧಾನ್‌ನ ಪುತ್ರರು ಹಾಗೂ ಅವರ ಸಹಚರರು ಕಾರನ್ನು ತಡೆದು, ಇಟ್ಟಿಗೆ ಮತ್ತು ಕಲ್ಲುಗಳಿಂದ ಕಾರಿನ ಕಿಟಕಿಗಳನ್ನು ಜಖಮ್‌ಗೊಳಿಸಿ, ಬಾಲಕಿಯನ್ನು ಹೊರಗೆಳೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ದಾಳಿಕೋರರಲ್ಲಿ ಒಬ್ಬರು ತನ್ನ ಕುತ್ತಿಗೆಯನ್ನು ಹಿಡಿದು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದೂ ಅವರು ದೂರಿದ್ದಾರೆ.

ದಲಿತರ ಬೆಂಬಲಕ್ಕೆ ನಿಂತಿದ್ದಕ್ಕೆ ಬೆದರಿಕೆ

ಬುಧವಾರ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ರಿತೇಶ್ ಮಿಶ್ರಾ, ಸತ್ಯಂ ಮಿಶ್ರಾ ಮತ್ತು ಶಿವಮ್ ಮಿಶ್ರಾ ಎಂಬ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲದೆ, ಗುರುತಿಸಲಾಗದ 4-5 ಜನರ ವಿರುದ್ಧವೂ ಹೆಸರಿಸಲಾಗಿದ್ದು, ಅವರ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಮತ್ತು ದೂರುದಾರರ ಕುಟುಂಬದ ಮಾಹಿತಿಯ ಪ್ರಕಾರ, ರಿತೇಶ್ ಮತ್ತು ಸತ್ಯಂ ಅವರು ಗ್ರಾಮ ಪ್ರಧಾನ್ ರಮೇಶ್ ಮಿಶ್ರಾ ಅವರ ಪುತ್ರರಾಗಿದ್ದಾರೆ. ಮಂಗಳವಾರ ದಲಿತ ಮಹಿಳೆ ಮತ್ತು ಅವರ ಕುಟುಂಬದ ಮೇಲೆ ನಡೆದ ದಾಳಿಗೆ ಸಂಬಂಧಿಸಿದ ಎಫ್‌ಐಆರ್‌ನಲ್ಲೂ ಪ್ರಧಾನ್ ಹಾಗೂ ಅವರ ಇಬ್ಬರು ಪುತ್ರರು ಬೇಕಾಗಿದ್ದರು.

ಬುಧವಾರ ಹಲ್ಲೆಗೊಳಗಾದ ಮಹಿಳೆಯ ಪತಿ ಕುನ್ವರ್ ಮೋಹಿತ್ ಸಿಂಗ್, ದಲಿತ ಕುಟುಂಬವು ಪೊಲೀಸರನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸಲು ತಮ್ಮ ಕುಟುಂಬವು ಸಹಾಯ ಮಾಡಿತ್ತು ಎಂದು ಆರೋಪಿಸಿದ್ದಾರೆ. ತಮ್ಮನ್ನು ಬೆದರಿಸುವ ಉದ್ದೇಶದಿಂದಲೇ ತಮ್ಮ ಪತ್ನಿ ಮತ್ತು ಮಗಳ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಅವರು ದೂರಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮಾನತು ರದ್ದುಗೊಳಿಸಿದ ಕೇರಳ ಹೈಕೋರ್ಟ್; 22 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಕಾಲಡಿ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು

ಕೇರಳದ ಕಾಲಡಿಯಲ್ಲಿರುವ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ 16 ವಿದ್ಯಾರ್ಥಿಗಳ ಅಮಾನತು ಆದೇಶವನ್ನು ಕೇರಳ ಹೈಕೋರ್ಟ್ ಸೋಮವಾರ (ನ.23) ರದ್ದುಗೊಳಿಸಿದೆ. ನ್ಯಾಯಾಲಯದ ಈ ತೀರ್ಪಿನ ಬೆನ್ನಲ್ಲೇ, ಕಳೆದ 22 ದಿನಗಳಿಂದ ಉಪವಾಸ ಸತ್ಯಾಗ್ರಹ...

ಜಪಾನ್‌ನ ಮೊತೊಮಚಿ ಟೊಯೊಟೊ ಘಟಕಕ್ಕೆ ಸಿಎಂ ಭೇಟಿ; ಬೆಂಗಳೂರಿನಿಂದ ಹೊರಗೆ ಆರ್ಥಿಕ ಅವಕಾಶ ವಿಸ್ತರಿಸುವ ಗುರಿ

"ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಆಕರ್ಷಸಿ, ಬೆಂಗಳೂರಿನಿಂದ ಹೊರಗೂ ಕೈಗಾರಿಕಾ ಬೆಳವಣಿಗೆಗೆ ಬದ್ಧವಾಗಿದ್ದೇವೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ರಾಜ್ಯ ಸರ್ಕಾರದ ಹೂಡಿಕೆ ಆಕರ್ಷಣೆ ಅಭಿಯಾನದ ಭಾಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳ SIR: ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋದವರ ಮೇಲ್ಮನವಿಗಳಿಗೆ ಮೊದಲ ಆದ್ಯತೆ; ಸೇರ್ಪಡೆ ವಿರುದ್ಧದ ಅರ್ಜಿ ಮುಂದೂಡಲು ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR — Special Intensive Revision) ಪ್ರಕ್ರಿಯೆಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟಿರುವ (deleted) ನಾಗರಿಕರು ಸಲ್ಲಿಸಿರುವ ಮೇಲ್ಮನವಿಗಳಿಗೆ ಮೊದಲ...

ಗೋಧ್ರಾ ರೈಲು ದಹನ ಪ್ರಕರಣ : ಅಪರಾಧಿಯ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್

2002ರ ಗೋಧ್ರಾ ರೈಲು ದಹನ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಇರ್ಫಾನ್ ಸಿರಾಜ್ ಪಾಡಾ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ (ನ.23) ಅಮಾನತುಗೊಳಿಸಿದ್ದು, ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಜಾಮೀನು ಮಂಜೂರು...

ನೇಪಾಳದ ಪುನರ್‌ನಿರ್ಮಾಣಕ್ಕೆ ಭಾರತದಿಂದ ₹15,000 ಕೋಟಿ ನೆರವು; ‘ಉಭಯ ದೇಶಗಳ ಸಂಬಂಧ ಹಿಮಾಲಯದಷ್ಟೇ ದೃಢವಾಗಿವೆ’ ಎಂದ ಪ್ರಧಾನಿ ಬಲೇಂದ್ರ ಶಾ

ನೇಪಾಳ: ಪ್ರವಾಹದಿಂದ ತೀವ್ರ ಹಾನಿಗೊಳಗಾಗಿರುವ ನೇಪಾಳದ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಭಾರತ ಸುಮಾರು 15,000 ಕೋಟಿ ರೂಪಾಯಿಗಳ ನೆರವು ಪ್ಯಾಕೇಜ್ ಘೋಷಿಸಿದೆ. ಸೋಮವಾರ ನೇಪಾಳದ ಪ್ರಧಾನಿ ಬಲೇಂದ್ರ ಶಾ ಅವರೊಂದಿಗಿನ ಜಂಟಿ...

ಧ್ರುವ್ ರಾಠೀ ವಿರುದ್ಧ ದೆಹಲಿ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿ

2018ರ ಮಾನನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ, ಯೂಟ್ಯೂಬರ್ ಧ್ರುವ್ ರಾಠೀ ವಿರುದ್ಧ ದೆಹಲಿ ನ್ಯಾಯಾಲಯವೊಂದು ಸೋಮವಾರ (ನ.23) ಜಾಮೀನು ರಹಿತ ವಾರಂಟ್ ಹೊರಡಿಸಿದೆ. ರಾಠೀ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವೊಂದಕ್ಕೆ ಸಂಬಂಧಿಸಿದಂತೆ, ವಿಕಾಸ್...

ಡಿಲಿಮಿಟೇಶನ್ ಮಸೂದೆ ಬೆಂಬಲಿಸಲು ಸಂಸದರಿಗೆ ಬಿಜೆಪಿಯಿಂದ ತಲಾ 150 ಕೋಟಿ ರೂ. ಆಫರ್ : ಸಂಜಯ್ ರಾವುತ್ ಗಂಭೀರ ಆರೋಪ

ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಮಸೂದೆಗೆ ಬೆಂಬಲ ಪಡೆಯುವ ಸಲುವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸಂಸದರಿಗೆ ತಲಾ 150 ಕೋಟಿ ರೂಪಾಯಿ ಆಫರ್ ಮಾಡುತ್ತಿದೆ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ)...

ಮಧ್ಯಪ್ರದೇಶ| ದೇವಸ್ಥಾನ ಪ್ರವೇಶಿಸದಂತೆ ತಡೆದ ಸವರ್ಣೀಯರು; ಎಸ್‌ಪಿ ಕಚೇರಿ ಮುಂದೆ ದಲಿತ ಮಹಿಳೆಯರಿಂದ ಪ್ರತಿಭಟನೆ

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ರಿಚ್ಛಾರಾ ಗ್ರಾಮದ ದಲಿತ ಮಹಿಳೆಯರು, ತಮ್ಮ ಜಾತಿಯ ಕಾರಣಕ್ಕೆ ಹೊಸದಾಗಿ ನಿರ್ಮಿಸಲಾದ ಶಿವ ದೇವಾಲಯ ಪ್ರವೇಶಿಸಲು ಮತ್ತು ಶಿವಲಿಂಗಕ್ಕೆ ನೀರು ಅರ್ಪಿಸಲು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಗುರುವಾರ ಕುಟುಂಬದ ಸದಸ್ಯರು...

ಎಸ್‌ಐಆರ್‌ ರದ್ದಾದರೆ ಸಿಇಸಿ ಗ್ಯಾನೇಶ್ ಕುಮಾರ್ ಜೈಲಿಗೆ: ಪ್ರಶಾಂತ್ ಭೂಷಣ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದರೆ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಜೈಲು ಸೇರಬೇಕು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಭಾನುವಾರ...

ಬಿಸ್ಲೆರಿ ವಿರುದ್ಧ FSSAI ಕ್ರಮ ಕೈಗೊಂಡಿದ್ದೇಕೆ? ಕುಡಿಯುವ ನೀರಿನಲ್ಲಿ ಪತ್ತೆಯಾದ ಕ್ಯಾನ್ಸರ್ ಕಾರಕ ಯಾವುದು?

ಲಕ್ಷಾಂತರ ಭಾರತೀಯರಿಗೆ ಬಿಸ್ಲೆರಿ (Bisleri) ನೀರಿನ ಬಾಟಲಿಯನ್ನು ಖರೀದಿಸುವುದು ಬಹುತೇಕ ಸಹಜ ಅಭ್ಯಾಸವಾಗಿದೆ. ರೈಲ್ವೆ, ವಿಮಾನ ನಿಲ್ದಾಣಗಳು, ರೆಸ್ಟೋರೆಂಟ್‌ಗಳು ಮತ್ತು ನೆರೆಹೊರೆಯ ಅಂಗಡಿಗಳಲ್ಲಿ ಈ ಚಿರಪರಿಚಿತ ಲೇಬಲ್ ಸುರಕ್ಷಿತ ಕುಡಿಯುವ ನೀರಿಗೆ ಪರ್ಯಾಯ...