HomeಅಂಕಣಗಳುKarnataka against SIR‘ವೋಟ್ ಚೋರಿ ಆಗುತ್ತಿದೆ ಎಂಬುದಕ್ಕೆ ಮೂರು ಸಾಕ್ಷಿಗಳಿವೆ; ಮೋದಿ-ಶಾ ಉತ್ತರಿಸಲಿ’: ಬೆಂಗಳೂರಿನಲ್ಲಿ ಧ್ರುವ್ ರಾಠೀ ಆಗ್ರಹ 

‘ವೋಟ್ ಚೋರಿ ಆಗುತ್ತಿದೆ ಎಂಬುದಕ್ಕೆ ಮೂರು ಸಾಕ್ಷಿಗಳಿವೆ; ಮೋದಿ-ಶಾ ಉತ್ತರಿಸಲಿ’: ಬೆಂಗಳೂರಿನಲ್ಲಿ ಧ್ರುವ್ ರಾಠೀ ಆಗ್ರಹ 

- Advertisement -
- Advertisement -

ಬೆಂಗಳೂರು: “ವೋಟ್ ಚೋರಿ ಆಗುತ್ತಿದೆ ಎನ್ನುವುದಕ್ಕೆ ನಾನು ಮೂರು ಸಾಕ್ಷಿಗಳನ್ನು ನೀಡುತ್ತೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಉತ್ತರಿಸಬೇಕು” ಎಂದು ಜರ್ಮನಿಯಲ್ಲಿ ವಾಸವಿರುವ ಖ್ಯಾತ ಭಾರತೀಯ ಯೂಟ್ಯೂಬರ್, ವೀಡಿಯೊ ನಿರ್ಮಾಪಕ ಹಾಗೂ ರಾಜಕೀಯ ವಿಶ್ಲೇಷಕ ಧ್ರುವ್ ರಾಠಿ ಹೇಳಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ಟೋಬರ್ 8ರಂದು ನಡೆದ ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ತಮ್ಮ ಮೊದಲ ಪ್ರತಿಭಟನೆ ಎಂದು ಹೇಳಿದರು. “ನಿನ್ನೆ ನಾನು ಇಲ್ಲಿ ಸರ್ಕಾರ ಬದಲಿಸಲು ಬಂದಿದ್ದೇನೆ ಎಂದು ಹೇಳಲಾಗಿತ್ತು. ಆದರೆ ನಾನು ಸರ್ಕಾರ ಬದಲಿಸಲು ಬಂದಿಲ್ಲ. ನನಗೆ ಎಲಾನ್ ಮಸ್ಕ್ ಅಥವಾ ಸೊರೊಸ್ ಯಾವುದೇ ಹಣ ನೀಡಿಲ್ಲ” ಎಂದು ಸ್ಪಷ್ಟಪಡಿಸಿದರು.

“ಇದು ಎಲ್ಲ ನಾಗರಿಕರ ಮೇಲೂ ಪರಿಣಾಮ ಬೀರುವ ವಿಚಾರ. ಬಿಜೆಪಿ ಮತದಾರರಿಗೂ ನಾನು ಹೇಳುತ್ತೇನೆ, ಈ ಹೋರಾಟವನ್ನು ಬೆಂಬಲಿಸಿ” ಎಂದು ಧ್ರುವ್ ರಾಠಿ ಮನವಿ ಮಾಡಿದರು.

ವೋಟ್ ಚೋರಿಗೆ ಸಾಕ್ಷಿಯಾಗಿ ಪಶ್ಚಿಮ ಬಂಗಾಳದಲ್ಲಿ ಸುಮಾರು 70 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಅವರು ಮೊದಲು ಮತದಾರರ ಪಟ್ಟಿಯಲ್ಲಿದ್ದರೂ ಚುನಾವಣಾ ಸಂದರ್ಭದಲ್ಲಿ ಪಟ್ಟಿಯಲ್ಲಿ ಇರಲಿಲ್ಲ, ಚುನಾವಣೆಯ ಬಳಿಕ ಮತ್ತೆ ಪಟ್ಟಿಯಲ್ಲಿ ಕಾಣಿಸಿಕೊಂಡರು ಎಂದು ಅವರು ಹೇಳಿದರು. ಬಿಹಾರದಲ್ಲಿ 75 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಈ ಕುರಿತು ಗ್ಯಾನೇಶ್ ಕುಮಾರ್ ಅವರು ಸುಪ್ರೀಂ ಕೋರ್ಟ್ ಕೇಳುವವರೆಗೆ ವಿವರ ನೀಡಿರಲಿಲ್ಲ ಎಂದು ಆರೋಪಿಸಿದರು. 

ಅಲ್ಲದೆ, ಸುಮಾರು 14 ಲಕ್ಷ ಜನರ ಹೆಸರುಗಳನ್ನು ಸೇರಿಸಲಾಗಿದ್ದು, ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ಯಾರನ್ನು ಸೇರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ ಎಂದು ಹೇಳಿದರು. ಗೋವಾದಲ್ಲಿಯೂ 100 ಜನರ ಹೆಸರುಗಳನ್ನು ಸೇರಿಸಲು ಎಆರ್‌ಒಗೆ ಸಾಧ್ಯವಾಗಲಿಲ್ಲ ಎಂದು ಅವರು ಉಲ್ಲೇಖಿಸಿದರು.

“ಎಲ್ಲವನ್ನೂ ತಮಗೆ ಬಂದಂತೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ ರಾಠಿ, SIR ವಿರುದ್ಧ ಜಿಲ್ಲೆ ಜಿಲ್ಲೆಗೆ ತೆರಳಿ ಕೆಲಸ ಮಾಡುತ್ತಿರುವ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸಿದರು. “ಇದು ಯಾವುದೇ ಪಕ್ಷದಿಂದ ಬಂದ ಹೋರಾಟವಲ್ಲ. ನಾನು ಒಬ್ಬ ಸಾಮಾನ್ಯ ನಾಗರಿಕನಾಗಿ ಮಾತನಾಡುತ್ತಿದ್ದೇನೆ” ಎಂದರು.

ಗ್ಯಾನೇಶ್ ಕುಮಾರ್ ಅವರನ್ನು ಉಳಿಸಲು ಪ್ರಯತ್ನಿಸುವವರ ವಿರುದ್ಧವೂ ಅವರು ತೀವ್ರ ವಾಗ್ದಾಳಿ ನಡೆಸಿ, “ಇಲ್ಲಿ ಬಂದವರಿಗಿಂತ ದೊಡ್ಡ ದೇಶಭಕ್ತರು ಯಾರೂ ಇಲ್ಲ” ಎಂದರು. ‘ವೋಟ್ ಚೋರ್, ಗದ್ದಿ ಛೋಡ್’ ಹಾಗೂ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳೊಂದಿಗೆ ಅವರು ತಮ್ಮ ಮಾತು ಮುಗಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪ್ರಜೆಗಳನ್ನು ಕೊಲ್ಲಲು ಸಾಧ್ಯವಿಲ್ಲ, ಅದಕ್ಕಾಗಿಯೇ ವೋಟುಗಳನ್ನು ತೆಗೆದಿದ್ದಾರೆ’: ಚುನಾವಣಾ ಆಯೋಗದ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ 

ಬೆಂಗಳೂರು: “ಆದಿವಾಸಿಗಳು, ಬಡವರು ಮತ್ತು ಮುಸ್ಲಿಮರ ವೋಟುಗಳನ್ನು ತೆಗೆದಿದ್ದಾರೆ. ಪ್ರಜೆಗಳನ್ನು ಕೊಲ್ಲುವುದಕ್ಕೆ ಸಾಧ್ಯವಿಲ್ಲ, ಅದಕ್ಕೇ ಅವರ ವೋಟುಗಳನ್ನು ತೆಗೆದಿದ್ದಾರೆ” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ...

‘ಮತದಾನದ ಹಕ್ಕು ಉಳಿದರೆ ಮಾತ್ರ ದೇಶ ಉಳಿಯುತ್ತದೆ’: ಬೆಂಗಳೂರಿನಲ್ಲಿ SIR ವಿರುದ್ಧ ಅಭಿಜಿತ್ ದೀಪ್ಕೆ ವಾಗ್ದಾಳಿ

ಬೆಂಗಳೂರು: “ದೇಶ ಉಳಿಯುವುದು ವೋಟ್ ಉಳಿದರೆ ಮಾತ್ರ. ಮತ ಹೋದರೆ ಎಲ್ಲವನ್ನೂ ಮರೆತಂತೆ ಆಗುತ್ತದೆ. ನಮ್ಮ ಹೋರಾಟ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗಷ್ಟೇ ಅಲ್ಲ, SIR ಪ್ರಕ್ರಿಯೆಯನ್ನೇ ರದ್ದುಪಡಿಸುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು...

ಎಸ್ಐಆರ್ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶಕ್ಕೆ ಚಾಲನೆ 

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ಟೋಬರ್ 8ರಂದು ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶ ನಡೆಯಿತು. ಚುನಾವಣಾ ಆಯೋಗದ ಮುಖ್ಯ...

ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಿದರೂ ಹೋರಾಟ ನಿಲ್ಲದು: ಸಿಇಸಿ ವಿರುದ್ಧ ದೀರ್ಘ ಆಂದೋಲನದ ಎಚ್ಚರಿಕೆ; ಅ.10ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಿದರೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿ ಸಂಘಟನೆಗಳು ಹಾಗೂ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಘೋಷಿಸಿವೆ. ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ...

ರಾಹುಲ್ ಗಾಂಧಿ ಚಿಕನ್ ರೋಲ್ ತಿಂದರೂ ಕಷ್ಟ ಈ ಬಲಪಂಥೀಯರಿಗೆ

ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀನು ತಿಂದು ಧರ್ಮಸ್ಥಳದ ದೇವಸ್ಥಾನ ಪ್ರವೇಶ ಮಾಡಿದ್ದರು ಎಂಬುದನ್ನು ವಿವಾದವಾಗಿ ಮಾಡಿದ್ದ ಇದೇ ಬಲಪಂಥೀಯರು, ಗೋದಿ ಮೀಡಿಯಾಗಳು, ಈಗ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ  ಚಿಕನ್ ರೋಲ್...

10 ತಿಂಗಳಲ್ಲಿ 125 ‘ಮ್ಯಾನುಯಲ್ ಸ್ಕ್ಯಾವೆಂಜರ್’ಗಳ ಸಾವು; ಕಳವಳ ಹುಟ್ಟಿಸಿದ ವರದಿ

ದಲಿತರು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವ 'ದಲಿತ್ ಆದಿವಾಸಿ ಶಕ್ತಿ ಅಧಿಕಾರ್ ಮಂಚ್' (ಡಿಎಎಸ್‌ಎಎಂ) ಸಂಸ್ಥೆಯ ಪ್ರಕಾರ, ಈ ವರ್ಷದ ಜನವರಿಯಿಂದ ಅಕ್ಟೋಬರ್ ನಡುವೆ ಭಾರತದಾದ್ಯಂತ ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ಗೆ (ಕೈಯಿಂದ ಮಲಹೊರುವ ಅಥವಾ...

ಗ್ಯಾನೇಶ್‌ ವಿರುದ್ಧ ಪ್ರತಿಭಟನೆಗೆ ಅವಕಾಶ ನಿರಾಕರಣೆ; ‘ನಮಗೆ ಅನುಮತಿ ನೀಡಲು ದೆಹಲಿ ಪೊಲೀಸ್ ಯಾರು’ ಎಂದ ಸಿಜೆಪಿ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಹಾಗೂ ವಕ್ತಾರ ಸೌರವ್ ದಾಸ್...

ಸುಳ್ಳು ಹೇಳಿ 1054 ಮುಸ್ಲಿಮರ ವೋಟ್ ಡಿಲೀಟ್‌ಗೆ ಯತ್ನಿಸಿದ ಶಾಸಕ ಯತ್ನಾಳ್ : ನಕಲಿ ದಾಖಲೆ ಸಲ್ಲಿಕೆ, ಅಧಿಕಾರಿಗಳೂ ಭಾಗಿಯಾಗಿರುವ ಆರೋಪ!

ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಕಲಿ ದಾಖಲೆ ಸೃಷ್ಟಿಸಿ 1054 ಮಂದಿ ಜೀವಂತವಿರುವ ಮುಸ್ಲಿಂ ಮತದಾರರ ಹೆಸರುಗಳನ್ನು 'ಮರಣ' ಹೊಂದಿದ್ದಾರೆ ಎಂದು ಸುಳ್ಳು...

ಗುಜರಾತ್: ವಿವಾಹೇತರ ಸಂಬಂಧ ಆರೋಪ: ‘ಶುದ್ಧೀಕರಣ’ದ ಹೆಸರಿನಲ್ಲಿ ಮಹಿಳೆ ಮೇಲೆ ಹಲ್ಲೆ, ಸಾಮೂಹಿಕ ಅತ್ಯಾಚಾರ; ಇಬ್ಬರು ಮಹಿಳೆಯರು ಸೇರಿ 9 ಜನರ ಬಂಧನ

ಅಹಮದಾಬಾದ್: ಗುಜರಾತ್‌ನಲ್ಲಿ ಮಹಿಳೆಯೊಬ್ಬರ ಮೇಲೆ ‘ಶುದ್ಧೀಕರಣ’ದ ಹೆಸರಿನಲ್ಲಿ ನಡೆದಿರುವ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಹೊರಿಸಿ ಮಹಿಳೆಯನ್ನು ಅವಮಾನಿಸಿ, ಕಟ್ಟಿಹಾಕಿ ಲೈಂಗಿಕ ದೌರ್ಜನ್ಯಕ್ಕೆ...

ಚುನಾವಣಾ ಆಯುಕ್ತರ ಆಯ್ಕೆ ವಿವಾದ: ಪರಿಶೀಲಿಸುವುದಾಗಿ ತಿಳಿಸಿದ ಸಿಜೆಐ ಸೂರ್ಯಕಾಂತ್

ಮುಖ್ಯ ಚುನಾವಣಾ ಆಯುಕ್ತ (CEC) ಹಾಗೂ ಚುನಾವಣಾ ಆಯುಕ್ತರ (EC) ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ 2023ರ ವಿವಾದಾತ್ಮಕ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣವನ್ನು ವಿಸ್ತೃತ...